ಶಕ್ತಿ ದೇವಾಲಯವು ಒಂದು ಜನಪ್ರಿಯ ನಂಬಿಕೆ ತಾಣ. ವಿಶ್ವನಾಥ ದೇವಾಲಯದ ಸಮೀಪವೇ ಇದು ಇದೆ. ಇದು ಇಲ್ಲಿನ ತ್ರಿಶೂಲದಿಂದ ಜನಪ್ರಿಯವಾಗಿದೆ. ಆರು ಮೀಟರ್ ಎತ್ತರದ ತ್ರಿಶೂಲ ಗಮನ ಸೆಳೆಯುತ್ತದೆ. ಇದರ ತಳದ ಸುತ್ತಳತೆಯು ಅಂದಾಜು 90 ಸೆಂ.ಮೀ. ನಂಬಿಕೆಗಳ ಪ್ರಕಾರ, ತ್ರಿಶೂಲದ ಮೇಲ್ಭಾಗ ಹಾಗೂ ಕೆಳಭಾಗ ಕಬ್ಬಿಣ, ತಾಮ್ರದಿಂದ ನಿರ್ಮಿಸಲಾಗಿದೆ.
ಐತಿಹಾಸಿಕ ಕಥೆಗಳ ಪ್ರಕಾರ, ಈ ತ್ರಿಶೂಲವನ್ನು ಹಿಂದು ದೇವತೆ ದುರ್ಗಾ ಮಾತೆ ರಾಕ್ಷಸರನ್ನು ಕೊಲ್ಲಲು ಬಳಸಿದ್ದಳಂತೆ. ಇಲ್ಲಿಗೆ ಸಮೀಪ ಇರುವ ಇತರೆ ಪ್ರಮುಖ ದೇಗುಲಗಳೆಂದರೆ ಮಾರ್ಖಂಡೇಯ ಋಷಿ ದೇವಾಲಯ, ಸಾಕ್ಷಿ ಗೋಪಾಲ ದೇಗುಲ, ಕುತೇತಿದೇವಿ ದೇವಾಲಯ, ಗಣೇಶ ಮಂದಿರ, ಗೋಪೇಶ್ವರ ಮಹಾದೇವ ದೇವಾಲಯ ಹಾಗೂ ಕೋಟೇಶ್ವರ ಮಹಾದೇವ ದೇವಾಲಯ.


Click it and Unblock the Notifications