ನಚಿಕೇತ ತಾಲ್ ಒಂದು ಸುಂದರ ಕೆರೆ. ಉತ್ತರಕಾಶಿಯಿಂದ 32 ಕಿ.ಮೀ. ದೂರದಲ್ಲಿದೆ. ಈ ಕೆರೆಯ ಸುತ್ತಲೂ ಓಕ್, ಪೈನ್, ರೋಡೋಡೇಂಡ್ರನ್ ಮರಗಳು ಬೆಳೆದು ನಿಂತಿವೆ. ಅಲ್ಲದೆ, ಇವು ಈ ತಾಣದ ಸೌಂದರ್ಯವನ್ನು ಸಾಕಷ್ಟು ಹೆಚ್ಚಿಸಿವೆ. ಈ ಕೆರೆಯನ್ನು ನಚಿಕೇತ ನಿರ್ಮಿಸಿದ ಎಂದು ನಂಬಲಾಗುತ್ತದೆ. ಈತ ಋಷಿ ಉದ್ದಾಲಕರ ಪುತ್ರ.
ಪ್ರವಾಸಿಗರು ಉತ್ತರಕಾಶಿಯಿಂದ 29 ಕಿ.ಮೀ. ದೂರದಲ್ಲಿರುವ ಚತುರಂಗಿ ಕಾಲಾಗೆ ತಲುಪಿ ಅಲ್ಲಿಂದ ಈ ಕೆರೆಗೆ ಕನಿಷ್ಠ ಮೂರು ಕಿ.ಮೀ. ಟ್ರೆಕ್ಕಿಂಗ್ ಮಾಡಲೇಬೇಕು. ನಚಿಕೇತ ತಾಲ್ ಬಳಿ ಯಾವುದೇ ವಸತಿ ಸೌಲಭ್ಯ ಇಲ್ಲ ಎನ್ನುವುದನ್ನು ಪ್ರವಾಸಿಗರು ಗಮನದಲ್ಲಿಡಬೇಕಾದ ಸಂಗತಿ. ಪ್ರವಾಸಿಗರಿಗೆ ಚತುರಂಗಿ ಕಾಲಾ ಅಥವಾ ಉತ್ತರಕಾಶಿಯಲ್ಲಿ ವಾಸಕ್ಕೆ ಅವಕಾಶ ಇದೆ.


Click it and Unblock the Notifications