ಸಮುದ್ರ ಮಟ್ಟದಿಂದ 3024 ಮೀ. ಎತ್ತರದಲ್ಲಿರುವ ದೋದಿತಾಲ್ ಒಂದು ಸುಂದರ ಶುದ್ಧ ನೀರಿನ ಕೆರೆ. ಈ ಕೆರೆಯ ಸುತ್ತಮುತ್ತಲಿನ ಪ್ರದೇಶವು ಹಚ್ಚ ಹಸಿರಿನಿಂದ ಕೂಡಿದ್ದು ನೋಡಲು ಮನಮೋಹಕವಾಗಿದೆ. ಈ ಕೆರೆಯು ತನ್ನಲ್ಲಿರುವ ಹಿಮಾಲಯನ್ ಟ್ರೌಟ್ ಮೀನುಗಳಿಗೆ ಹೆಸರುವಾಸಿಯಾಗಿದ್ದು, ಉತ್ತರಕಾಶಿಯಿಂದ ಚಾರಣದ ಮೂಲಕ ಇಲ್ಲಿ ತಲುಪಬಹುದಾಗಿದೆ.
ಈ ಕೆರೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವುದು ಒಂದು ಸುಮಧುರವಾದ ಅನುಭವ. ಆದರೆ ಮೀನು ಹಿಡಿಯಲು ಉತ್ತರಕಾಶಿಯ ವಿಭಾಗೀಯ ಅರಣ್ಯಾಧಿಕಾರಿಯಿಂದ ಅನುಮತಿ ಪಡೆಯಬೇಕೆಂಬುದು ಗಮನದಲ್ಲಿಡಬೇಕಾದ ಸಂಗತಿ. ಪ್ರವಾಸಿಗರು ಅಂಗೋಡಾದ ಮೂಲಕವೂ ಸಹ 16 ಕಿ.ಮೀ ದೂರವನ್ನು ಟ್ರೆಕ್ಕಿಂಗ್ ಮಾಡುತ್ತ ಇಲ್ಲಿ ತಲುಪಬಹುದು. ಇನ್ನೂ ಉತ್ಸಾಹವಿದ್ದರೆ, ಈ ಪ್ರದೇಶದಿಂದ ಯಮುನೋತ್ರಿ ಮತ್ತು ಹನುಮಾನ್ ಚಟ್ಟಿ ಸ್ಥಳಗಳನ್ನೂ ಸಹ ಚಾರಣದ ಮುಖಾಂತರ ಹೋಗಬಹುದಾಗಿದೆ.


Click it and Unblock the Notifications