Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಸಾಲಿಗ್ರಾಮ – ನರಸಿಂಹ ದೇವಸ್ಥಾನ

ಸಾಲಿಗ್ರಾಮ – ನರಸಿಂಹ ದೇವಸ್ಥಾನ, ಉಡುಪಿ

0

ಸಾಲಿಗ್ರಾಮವು ಉಡುಪಿಯ ಜಿಲ್ಲೆಯಲ್ಲಿ ಎನ್‌ಎಚ್17ರಲ್ಲಿದೆ. ಗುರು ನರಸಿಂಹರಿಗೆ ಇಲ್ಲಿ ಹಲವು ದೇವಸ್ಥಾನಗಳಿವೆ. ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸವನ್ನು ಇಲ್ಲಿನ ದೇವಾಲಯಗಳು ಹೊಂದಿವೆ ಎಂದು ಹೇಳಲಾಗುತ್ತದೆ. ನಾರದ ಮಹರ್ಷಿಗಳು ಇಲ್ಲಿ ಗುರು ನರಸಿಂಹನ ಮೂರ್ತಿಯನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಆ ನಂತರದಲ್ಲಿ ಇದಕ್ಕೆ ದೇಗುಲದ ರೂಪವನ್ನು ನೀಡಲಾಗಿದೆ. ಇಲ್ಲಿ ಪ್ರತಿವರ್ಷ ನಡೆಯುವ ಕಾರು ಹಬ್ಬವು ತುಂಬಾ ಜನಪ್ರಿಯವಾಗಿದ್ದು, ರಾಜ್ಯವೂ ಸೇರಿದಂತೆ, ನೆರೆ ರಾಜ್ಯಗಳಿಂದಲೂ ಕೂಡಾ ಹಲವು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.ಈ ಪ್ರದೇಶವು ಉಡುಪಿ ಮತ್ತು ಕುಂದಾಪುರದ ಮಧ್ಯದಲ್ಲಿದೆ. ಉಡುಪಿಯಿಂದ ಉತ್ತರದಲ್ಲಿ ೨೧ ಕಿ.ಮೀ ದೂರದಲ್ಲಿದ್ದು, ಮಂಗಳೂರಿನಿಂದ ೮೧ ಕಿ.ಮೀ ದೂರದಲ್ಲಿದೆ. ಅಲ್ಲಿಗೆ ನೀವು ಸುಲಭವಾಗಿ ಎನ್‌ಎಚ್‌೧೭ರ ಮೂಲಕ ಸಾಗಬಹುದು. ಬಸ್‌ ಸೇವೆಯು ಲಭ್ಯವಿದ್ದು, ಬೆಂಗಳೂರಿನಿಂದ ಸಾಲಿಗ್ರಾಮಕ್ಕೆ ನೇರವಾದ ಸಂಪರ್ಕ ಕೂಡಾ ಇದೆ. ನೀವು ಅಲ್ಲಿಗೆ ತಲುಪಿದ ಮೇಲೆ, ಸ್ಥಳಕ್ಕೆ ತಲುಪಲು ಸಾಕಷ್ಟು ಆಟೋಗಳು ಮತ್ತು ಟ್ಯಾಕ್ಸಿಗಳು ಲಭ್ಯವಿದೆ. ಹಲವು ರೀತಿಯ ವಸತಿ ಸೌಲಭ್ಯಗಳು ಮಂಗಳೂರು ಮತ್ತು ಉಡುಪಿಯಲ್ಲಿ ಪ್ರವಾಸಿಗರಿಗೆ ಲಭ್ಯವಿದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat