ರತ್ನಗಿರಿಯು ಉದಯಗಿರಿಯಿಂದ 73 ಕಿಮೀ ದೂರದಲ್ಲಿದೆ. ಈ ಸ್ಥಳವು ನಗರದ ಸದ್ದುಗದ್ದಲಗಳಿಂದ ದೂರವಿರುವುದರಿಂದಲೇ ಬೌದ್ಧ ಸಂನ್ಯಾಸಿಗಳು ಧ್ಯಾನಕ್ಕಾಗಿ ಆರಿಸಿಕೊಂಡಿರಬೇಕು. ಇದು ಬ್ರಾಹ್ಮಿನಿ ಅಥವ ಬಿರುಪ ನದಿ ಕಣಿವೆಯಲ್ಲಿದ್ದು, ಹಲವು ಸ್ತೂಪಗಳನ್ನು ಮತ್ತು ಬೌದ್ಧ ಮಠಗಳನ್ನು ಹೊಂದಿದೆ.
ವಕ್ರರೇಖೆ ಆಕಾರದ ಗೋಪುರ ಹೊಂದಿರುವ ವಿಶಿಷ್ಟ ದೇವಾಲಯವೊಂದು ಇಲ್ಲಿದೆ. ಉತ್ಖನನದ ಸಂದರ್ಭದಲ್ಲಿ ಸಿಕ್ಕಿರುವ ಹಲವು ಕಂಚು ಮತ್ತು ತಾಮ್ರದ ಬುದ್ಧನ ಪ್ರತಿಮೆಗಳನ್ನು ಉಳಿದ ವಸ್ತುಗಳೊಂದಿಗೆ ರತ್ನಗಿರಿಯ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಇವುಗಳೊಂದಿಗೆ ಹಿಂದೂ ದೇವಿಯರ ವಿಗ್ರಹಗಳನ್ನು ಕೂಡ ಸಂಗ್ರಹಾಲಯದಲ್ಲಿ ಕಾಣಬಹುದು. ಈ ಸಂಗ್ರಹಾಲಯವು ವರ್ಷಪೂರ್ತಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ತೆರೆದಿರುತ್ತದೆ. ಬೌದ್ಧ ಪ್ರವಾಸಿಗಳು ಮತ್ತು ಇತರರು ಬೌದ್ಧ ಧರ್ಮದ ಪವಿತ್ರತೆಯನ್ನು ಅನುಭವಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.


Click it and Unblock the Notifications