ತಿರುಚ್ಚಿ ನಗರದಿಂದ 9 ಕೀ.ಮಿ ದೂರದಲ್ಲಿ ವಯಲ್ಲೂರ್ ಮುರುಗನ್ ದೇವಸ್ಥಾನವನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನವು ಮುರುಗನ್ ದೇವರಿಗೆ ಮೀಸಲಾಗಿದೆ. ಸುಮಾರು ಹನ್ನೆರಡು ನೂರು ವರ್ಷಗಳ ಹಿಂದೆ ಚೋಳ ವಂಶದ ಆಡಳಿತದ ಅವಧಿಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, ಇದಕ್ಕೆ ಅನೇಕ ಹೆಸರುಗಳಿವೆ. ಆದಿ ವಯಲ್ಲೂರು,ವನ್ನಿ ವಯಲ್ಲೂರು ಮತ್ತು ಅಗ್ನಿಶ್ವರಂ ಎಂಬ ಮುಂತಾದ ಹೆಸರುಗಳು ಈ ದೇವಸ್ಥಾನಕ್ಕೆ ಇದೆ.
ದೇವಸ್ಥಾನದ ಆವರಣದಲ್ಲಿ ಪೂಜ್ಯ ಗಣಪತಿ, ವಲ್ಲಿ ಮತ್ತು ದೈವನೈ , ನಟರಾಜ, ಶಿವ ಹೀಗೆ ಹಲವಾರು ದೇವರಿಗೆ ಮೀಸಲಾಗಿರುವ ದೇವಾಲಯಗಳು ಇವೆ.ನಟರಾಜ ದೇವಸ್ಥಾನ ವಿಗ್ರಹದ ಒಂದು ವಿಶೇಷತೆ ಏನೆಂದರೆ ಈ ವಿಗ್ರಹದ ಎರಡು ಪಾದಗಳು ನೆಲದ ಮೇಲೆ ಇವೆ. ಈ ವಿಗ್ರಹಗಳಿಗೆ ಗೌರವಾರ್ಥವಾಗಿ ಹಬ್ಬವನ್ನು ಆಚರಿಸಲಾಗುತ್ತದೆ.


Click it and Unblock the Notifications