Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚ್ಚಿ » ಹವಾಮಾನ

ತಿರುಚ್ಚಿ ಹವಾಮಾನ

ತಿರುಚ್ಚಿ ನಗರಕ್ಕೆ ಭೇಟಿ ನೀಡಲು ಇರುವ ಅತ್ಯಂತ ಉತ್ತಮ ಸಮಯ ಎಂದರೆ ಚಳಿಗಾಲ. ಅಕ್ಟೋಬರ್ ನಿಂದ ಫೆಬ್ರುವರಿಯವರೆಗೂ ಇಲ್ಲಿ ಆಹ್ಲಾದಕರವಾದ ಚಳಿಗಾಲ ಇರುತ್ತದೆ. ಈ ತಿಂಗಳುಗಳಲ್ಲಿ ತಿರುಚ್ಚಿ ನಗರದ ವಾತಾವರಣವು ಆಹ್ಲಾದಕರವೂ, ಹಿತಕರವೂ ಆಗಿರುತ್ತದೆ. ಚಳಿಗಾಲದಲ್ಲಿ ಆಚರಿಸಲಾಗುವ ಜಲ್ಲಿಕಟ್ಟು ಎಂಬ ಕ್ರೀಡಾ ಉತ್ಸವವು ಈ ಸ್ಥಳದ ಪ್ರಮುಖ ಆಕರ್ಷಣೆಯಾಗಿದೆ.

ಬೇಸಿಗೆಗಾಲ

ತಿರುಚ್ಚಿ ನಗರದಲ್ಲಿ ಬೇಸಿಗೆ ಕಾಲವು ತುಂಬಾ ಶುಷ್ಕತೆ ಮತ್ತು ಉಷ್ಣತೆಯಿಂದ ಕೂಡಿರುತ್ತದೆ. ವಿಶೇಷವಾಗಿ ಬೆಳಗಿನ ಸಮಯದಲ್ಲಿ ಹೆಚ್ಚಾಗಿರುತ್ತದೆ. ಇನ್ನು ಸಾಯಂಕಾಲವಾದಂತೆ ಆಗ್ನೇಯ ಮಾರುತಗಳ ಕಾರಣದಿಂದಾಗಿ ಸ್ವಲ್ಪ ತಂಪಾದ ವಾತಾವರಣ ಉಂಟಾಗುತ್ತದೆ. ಇಲ್ಲಿ ಮಾರ್ಚ್ ನಿಂದ ಜೂನ್ ವರೆಗೆ ಬೇಸಿಗೆಯ ಕಾಲ ಎಂದು ಹೇಳಲಾಗುತ್ತದೆ. 30 ಡಿಗ್ರಿ ಸೆಲ್ಶಿಯಸ್ ನಿಂದ 40 ಡಿಗ್ರಿ ಸೆಲ್ಶಿಯಸ್ ನವರೆಗೂ ಇಲ್ಲಿ ತಾಪಮಾನ ಇರುತ್ತದೆ. ಈ ಕಾಲದಲ್ಲಿ ತುಂಬಾ ಶುಷ್ಕತೆ ಮತ್ತು ಉಷ್ಣತೆಯಿರುವ ಕಾರಣದಿಂದ ತಿರುಚ್ಚಿ ನಗರಕ್ಕೆ ಭೇಟಿ ನೀಡಲು ಇದು ಯೋಗ್ಯ ಸಮಯ ಅಲ್ಲ.

ಮಳೆಗಾಲ

ತಿರುಚ್ಚಿ ನಗರದಲ್ಲಿ ಜುಲೈನಿಂದ ಅಕ್ಟೋಬರ ನವರೆಗೂ ಮಳೆಗಾಲ ಇರುತ್ತದೆ. ಈ ಕಾಲದಲ್ಲಿ ಇಲ್ಲಿ ಮಧ್ಯಮದಿಂದ ಭಾರಿ ಪ್ರಮಾಣದವರೆಗೂ ಮಳೆ ಆಗುತ್ತದೆ. ಈ ಮಳೆಯ ಪರಿಣಾಮವಾಗಿ ತಂಪಾದ ವಾತಾವರಣ ಉಂಟಾಗುತ್ತದೆ. ಇದು ತುಂಬಾ ಆಹ್ಲಾದಕರವಾಗಿರುತ್ತದೆ. ಈ ಋತುವಿನಲ್ಲಿ ಹವಾಮಾನವು ಆರ್ದ್ರ ಆಗುತ್ತದೆ.

ಚಳಿಗಾಲ

ತಿರುಚ್ಚಿ ನಗರದಲ್ಲಿ ಚಳಿಗಾಲವು ತುಂಬಾ ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಇಲ್ಲಿನ ತಾಪಮಾನವು 19 ಡಿಗ್ರಿ ಸೆಲ್ಶಿಯಸ್ ನಿಂದ 25 ಡಿಗ್ರಿ ಸೆಲ್ಶಿಯಸ್ ನವರೆಗೂ ಒಲಾಡುತ್ತಿರುತ್ತದೆ. ನವಂಬರ್ ನಿಂದ ಫೆಬ್ರುವರಿಯವರೆಗೂ ತಿರುಚ್ಚಿ ನಗರದಲ್ಲಿ ಚಳಿಗಾಲ ಇರುವುದು. ತಿರುಚ್ಚಿ ನಗರಕ್ಕೆ ಭೇಟಿ ನೀಡಲು ಚಳಿಗಾಲವು ಅತಿ ಉತ್ತಮವಾದ ಸಮಯ ಆಗಿರುತ್ತದೆ.