Search
  • Follow NativePlanet
Share
» »ವಿಶ್ವ ಪ್ರವಾಸೋದ್ಯಮ ದಿನ 2024ರ ಥೀಮ್‌ಗೆ ಸೂಕ್ತವಾಗಿವೆ ಈ 3 ತಾಣಗಳು..ಶಾಂತಿ ಅರಸುವವರು ಒಮ್ಮೆ ಇಲ್ಲಿಗೆ ಬನ್ನಿ

ವಿಶ್ವ ಪ್ರವಾಸೋದ್ಯಮ ದಿನ 2024ರ ಥೀಮ್‌ಗೆ ಸೂಕ್ತವಾಗಿವೆ ಈ 3 ತಾಣಗಳು..ಶಾಂತಿ ಅರಸುವವರು ಒಮ್ಮೆ ಇಲ್ಲಿಗೆ ಬನ್ನಿ

ವಿಶ್ವ ಪ್ರವಾಸೋದ್ಯಮ ದಿನ 2024: ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಸೆಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) 1980 ರಲ್ಲಿ ಪ್ರಾರಂಭವಾಯಿತು. ಇಲ್ಲಿಂದ ಈ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಜನರಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಪ್ರಪಂಚದ ಸುಸ್ಥಿರ ಅಭಿವೃದ್ಧಿಗೆ ಪ್ರವಾಸೋದ್ಯಮ ಬಹಳ ಮುಖ್ಯ ಎಂದು ಹೇಳಲಾಗುತ್ತದೆ.

ಇದು ಹೊಸ ಸಮಾಜವನ್ನು ನೋಡುವ ಮತ್ತು ಹೊಸ ಸ್ಥಳಗಳಿಗೆ ಭೇಟಿ ನೀಡುವುದು ಮಾತ್ರವಲ್ಲದೆ, ಸಾಮಾನ್ಯ ಜನರು ತಮ್ಮ ವ್ಯಾಪಾರ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಅವಕಾಶವೂ ಆಗಿದೆ. ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನದ ಥೀಮ್ 'ಪ್ರವಾಸೋದ್ಯಮ ಮತ್ತು ಶಾಂತಿ'. ಭಾರತದ ಕೆಲವು ಸ್ಥಳಗಳು ಸಹ ವಿಶ್ವ ಪ್ರವಾಸೋದ್ಯಮ ದಿನದ ಥೀಮ್‌ಗೆ ಹೊಂದಿಕೆಯಾಗುತ್ತವೆ. ಅಷ್ಟೇ ಅಲ್ಲ, ದೇಶದ ಮೂಲೆ ಮೂಲೆಯಿಂದಲೂ ಜನರು ಇಲ್ಲಿಗೆ ಬರುತ್ತಾರೆ. ಬನ್ನಿ ಹಾಗಾದರೆ ಆ ಸ್ಥಳಗಳ ಬಗ್ಗೆ ತಿಳಿಯೋಣ...

himachal pradesh

ಚಲಾಲ್, ಹಿಮಾಚಲ ಪ್ರದೇಶ

ಈ ಬಾರಿ ನೀವು 'ಮಿನಿ ಇಸ್ರೇಲ್' ಎಂದು ಕರೆಯಲ್ಪಡುವ ಹಿಮಾಚಲ ಪ್ರದೇಶದ ಚಲಾಲ್‌ಗೆ ಭೇಟಿ ನೀಡಲೇಬೇಕು. ಗ್ರಾಮವು ತುಂಬಾ ಸುಂದರವಾಗಿದೆ. ವಿಶ್ವದಾದ್ಯಂತ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಇದು ಕಸೋಲ್ ಬಳಿ ಇದೆ. ಈ ಹಳ್ಳಿಯ ನೈಸರ್ಗಿಕ ಸೌಂದರ್ಯವು ಕಸೋಲ್‌ಗಿಂತ ಹೆಚ್ಚು ಆಕರ್ಷಕವಾಗಿದೆ. ಇಲ್ಲಿನ ಸುಂದರವಾದ ಕಣಿವೆಗಳು ಮತ್ತು ಕಾಡುಗಳಲ್ಲಿ ನೀವು ಟ್ರೆಕ್ಕಿಂಗ್ ಮತ್ತು ನೇಚರ್‌ ವಾಕಿಂಗ್‌ ಮಾಡಬಹುದು. ನೀವು ಉತ್ತಮ ರೀಲ್ಸ್‌ ಕೂಡ ತೆಗೆದುಕೊಳ್ಳಬಹುದು. ಹಾಗೆಯೇ ಹಸಿರಿನ ನಡುವೆ ಶಾಂತಿಯುತವಾಗಿ ಗಂಟೆಗಳ ಕಾಲ ಕಳೆಯಬಹುದು. ಅದೇನೇ ಇರಲಿ, ಈ ಜಾಗ ಚಾರಣಿಗರ ಸ್ವರ್ಗ. ಇಲ್ಲಿರುವ ದೇವದಾರು ಮರಗಳು ನಿಮ್ಮ ಹೃದಯವನ್ನು ಕದಿಯುತ್ತವೆ. ಕಸೋಲ್ ಯುವಕರ ನೆಚ್ಚಿನ ಪ್ರವಾಸಿ ಸ್ಥಳವಾಗಿದೆ, ಇದರಿಂದಾಗಿ ಇಲ್ಲಿ ಸಾಕಷ್ಟು ಜನಸಂದಣಿ ಇರುತ್ತದೆ. ಈ ಸ್ಥಳದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಇದರಿಂದಾಗಿ ಇಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣವಿದೆ. ಚಲಾಲ್ ಸಮುದ್ರ ಮಟ್ಟದಿಂದ 5 ಸಾವಿರ ಅಡಿ ಎತ್ತರದಲ್ಲಿದೆ. ಅಂದಹಾಗೆ ಈ ಸ್ಥಳವು ಪಾರ್ವತಿ ಕಣಿವೆಯಲ್ಲಿದೆ.

ಚಿರಾಪುಂಜಿ, ಮೇಘಾಲಯ

ಮಳೆಯ ನಂತರದ ಮಣ್ಣಿನ ಸುವಾಸನೆಯ ಆಸ್ವಾದ ನಿಮಗೆ ಇಷ್ಟವೆಂದರೆ ಚಿರಾಪುಂಜಿಗೆ ಭೇಟಿ ನೀಡಲೇಬೇಕು. ಸೊಹ್ರಾ ಎಂದೂ ಕರೆಯಲ್ಪಡುವ ಚಿರಾಪುಂಜಿಯು ಈಶಾನ್ಯ ಭಾರತದ ರಾಜ್ಯವಾದ ಮೇಘಾಲಯದಲ್ಲಿರುವ ಎತ್ತರದ ನಗರವಾಗಿದೆ. ಇದು ರಬ್ಬರ್ ಮರಗಳಿಂದ ಮಾಡಿದ ಲೀವಿಂಗ್‌ ರೂಟ್ ಸೇತುವೆಗೂ ಹೆಸರುವಾಸಿಯಾಗಿದೆ. ಮೇಘಾಲಯ ರಾಜ್ಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ಚಿರಾಪುಂಜಿಯನ್ನು ಭೂಮಿಯ ಮೇಲಿನ ಅತ್ಯಂತ ಆರ್ದ್ರ ಸ್ಥಳವೆಂದು ಕರೆಯಲಾಗುತ್ತದೆ. ಇದು ಜುಲೈ ಮತ್ತು ಆಗಸ್ಟ್‌ನ ಮಾನ್ಸೂನ್ ತಿಂಗಳುಗಳಲ್ಲಿ ಹೆಚ್ಚು ಮಳೆ ಪಡೆಯುವ ಮೂಲಕ ವಿಶ್ವ ದಾಖಲೆಯನ್ನು ಹೊಂದಿದೆ. ಚಿರಾಪುಂಜಿ ಸುತ್ತಮುತ್ತಲಿನ ಕಣಿವೆಗಳಿಂದ 600 ಮೀಟರ್ ಎತ್ತರದ ಪ್ರಸ್ಥಭೂಮಿಯಲ್ಲಿದೆ. ಇಲ್ಲಿ ಹೆಚ್ಚಾಗಿ ರಾತ್ರಿಯಲ್ಲಿ ಮಳೆಯಾಗುತ್ತದೆ. ‌ ಚಿರಾಪುಂಜಿಯು ತನ್ನ ಹಚ್ಚಹಸಿರು, ದಟ್ಟವಾದ ಕಾಡುಗಳು ಮತ್ತು ಮಳೆಯಿಂದಾಗಿ ಸದಾ ಹರಿಯುವ ಜಲಪಾತಗಳಿಗಾಗಿ ಹೆಚ್ಚು ಜನಪ್ರಿಯವಾಗಿದೆ. ಇವೆಲ್ಲಾ ಅಂಶಗಳು ನಿಮ್ಮ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಸಾರನಾಥ್, ಯುಪಿ

ಸಾರನಾಥ್‌ ವಿಶ್ವದ ಪ್ರಮುಖ ಬೌದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಬೌದ್ಧರಿಗೆ ವಿಶೇಷವಾಗಿ ಮಹತ್ವದ್ದಾಗಿದೆ. ಏಕೆಂದರೆ ಜ್ಞಾನೋದಯವನ್ನು ಪಡೆದ ನಂತರ ಇದು ಭಗವಾನ್ ಬುದ್ಧನ ಮೊದಲ ಧರ್ಮೋಪದೇಶದ ಸ್ಥಳವಾಗಿದೆ. ನಿಮಗೆ ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿಯಿಲ್ಲದಿದ್ದರೂ ಸಹ ನೀವು ಇಲ್ಲಿ ಆಂತರಿಕ ಶಾಂತಿಯನ್ನು ಅನುಭವಿಸುವಿರಿ. ಸಾರನಾಥ್‌ ಪ್ರಯಾಣದ ನಂತರ ನೀವು ಸಂಪೂರ್ಣವಾಗಿ ತೃಪ್ತಿ ಮತ್ತು ಉಲ್ಲಾಸವನ್ನು ಅನುಭವಿಸುವಿರಿ. ಈ ಪ್ರಾಚೀನ ನಗರವು ಅಶೋಕ ಚಕ್ರವರ್ತಿಯ ಆಳ್ವಿಕೆಯಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಇಲ್ಲಿರುವ ಜನಪ್ರಿಯ ತಾಣಗಳೆಂದರೆ ಧಮೇಖ್ ಸ್ತೂಪ, ಅಶೋಕ ಸ್ತಂಭ, ಮೂಲಗಂಧ ಕುಟಿ ವಿಹಾರ್ ದೇವಾಲಯ, ಚೌಖಂಡಿ ಸ್ತೂಪ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+