Search
  • Follow NativePlanet
Share
» »ಒಂದು ಅಸಮಾನ್ಯ ಪ್ರವಾಸದ ಅನುಭವ ಪಡೆಯಲು ಕೊಡಗಿನ ಈ ಆಫ್ಬೀಟ್ ತಾಣಗಳಿಗೆ ಭೇಟಿ ನೀಡಿ

ಒಂದು ಅಸಮಾನ್ಯ ಪ್ರವಾಸದ ಅನುಭವ ಪಡೆಯಲು ಕೊಡಗಿನ ಈ ಆಫ್ಬೀಟ್ ತಾಣಗಳಿಗೆ ಭೇಟಿ ನೀಡಿ

ಕಾಫಿ ತೋಟದ ಅಸಮಾನ್ಯ ತಾಣಗಳ ನಡುವೆ ಅಡ್ಡಾಡುತ್ತಾ ಕೂರ್ಗ್ ನಲ್ಲಿಯ ಕೆಲವು ಅಸಮಾನ್ಯ ಅನುಭವವನ್ನು ಪಡೆಯಿರಿ. ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ನೆಲೆಸಿರುವ ಗಿರಿಧಾಮಗಳ ನಗರ ಹಾಗೂ ವಾರಾಂತ್ಯಗಳ ರಜಾದಿನಗಳನ್ನು ಪಡೆಯಬಯಸುವ ಪ್ರಯಾಣಿಕರು ಮತ್ತು ಪ್ರವಾಸಿಗರಿಂದ ದಿನನಿತ್ಯವೂ ಭೇಟಿ ಕೊಡಲ್ಪಡುವ ಸುಂದರ ನಗರವಾದ ಕೊಡಗಿನ ಕೆಲವು ಸ್ಥಳಗಳ ಅನ್ವೇಷಣೆ ಮಾಡಿ ಮತ್ತು ಈ ಪಟ್ಟಣದ ಬಗ್ಗೆ ಆಳವಾಗಿ ಅಧ್ಯಯನ ಮಾಡಿ.

 ದುಬಾರೆ ಎಲಿಫೆಂಟ್ ಕ್ಯಾಂಪ್

ದುಬಾರೆ ಎಲಿಫೆಂಟ್ ಕ್ಯಾಂಪ್

ದುಬಾರೆ ಎಲಿಫೆಂಟ್ ಕ್ಯಾಂಪ್ ಆನೆಗಳ ತವರೂರಾಗಿದೆ ಮತ್ತು ನೀವು ಕೆಲವು ಮರಿ ಆನೆಗಳಿಗೆ ಸ್ನಾನ ಮಾಡಿ ಮತ್ತು ಅತ್ಯಲ್ಪ ಶುಲ್ಕದಲ್ಲಿ ಅವುಗಳಿಗೆ ಆಹಾರ ನೀಡುವ ಮೂಲಕ ನಿಮ್ಮ ದಿನವನ್ನು ಕಳೆಯಲು ಬಯಸಿದರೆ, ನೀವು ಈ ಶಿಬಿರಕ್ಕೆ ಭೇಟಿ ನೀಡಬೇಕು. ದುಬಾರೆ ಎಲಿಫೆಂಟ್ ಕ್ಯಾಂಪ್ ಸುಂದರವಾದ ಹಸಿರು ಗುಡ್ಡಗಾಡು ಪ್ರದೇಶಗಳು ಮತ್ತು ಹಚ್ಚ ಹಸಿರಿನ ಆಳವಾದ ಕಣಿವೆಗಳು ಮತ್ತು ವಿಸ್ತಾರವಾದ ಹುಲ್ಲುಗಾವಲುಗಳನ್ನು ಹೊಂದಿದ್ದು, ಇದು ಹಲವಾರು ಆನೆಗಳು ಮತ್ತು ಅವುಗಳ ಮರಿಗಳಿಗೆ ನೆಲೆಯಾಗಿದೆ. ಕೂರ್ಗ್ ನಲ್ಲಿರುವ ಈ ಶಿಬಿರವು ರಜೆಯ ಸಮಯದಲ್ಲಿ ಏನಾದರೂ ಮಾಡಲು ಬಯಸುತ್ತಿರುವ ಪ್ರಯಾಣಿಕರಿಗೆ ಖಂಡಿತವಾಗಿಯೂ ಒಂದು ಪ್ರಮುಖ ತಾಣವಾಗಿದೆ.

ಮಂಡಲ್ ಪಟ್ಟಿ

ಮಂಡಲ್ ಪಟ್ಟಿ

ನೀವು ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸುರಿನ ಕಣಿವೆಗಳು ಮತ್ತು ಹುಲ್ಲುಗಾವಲು ಪ್ರದೇಶಗಳನ್ನು ಕಾಣಬಹುದಾದ ಕೂರ್ಗ್ ನ ಮಂಡಲ್ ಪಟ್ಟಿಯು ಅತ್ಯಂತ ಎತ್ತರದ ಪ್ರದೇಶದಲ್ಲಿ ನೆಲೆಸಿದ್ದು, ಸುತ್ತ ಮುತ್ತಲಿನ ಕಲ್ಮಶರಹಿತ ವಾತಾವರಣದ ಜೊತೆಗೆ ರಮಣೀಯ ಹಾಗೂ ಅದ್ಬುತ ನೋಟಗಳ ಜೊತೆಗೆ ಅಹ್ಲಾದಕರ ಗಾಳಿಯು ಶಾಂತತೆಯಅನುಭವವನ್ನು ನೀಡುತ್ತಾ ನಿಮ್ಮನ್ನು ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆ. ಕೂರ್ಗ್ ನಲ್ಲಿರುವ ಮಂಡಲಪಟ್ಟಿಯು ಒಂದು ಸುಂದರ ವ್ಯೂ ಪಾಯಿಂಟ್ ಆಗಿದ್ದು, ಇದನ್ನು ಜೀಪ್ ಗಳಿಂದ ಮಾತ್ರ ತಲುಪಬಹುದಾಗಿದೆ.

ಗೋಲ್ಡನ್ ಟೆಂಪಲ್ (ಟಿಬೇಟಿಯನ್ನರ ಮಠ)

ಗೋಲ್ಡನ್ ಟೆಂಪಲ್ (ಟಿಬೇಟಿಯನ್ನರ ಮಠ)

ಸ್ಥಳೀಯವಾಗಿ ಗೋಲ್ಡನ್ ಟೆಂಪಲ್ ಎಂದು ಕರೆಯಲ್ಪಡುವ ಕೂರ್ಗ್‌ನಲ್ಲಿರುವ ಟಿಬೆಟಿಯನ್ ಮಠವು ಟಿಬೇಟಿಯನ್ನರ ಶ್ರೀಮಂತ ಸಂಪ್ರದಾಯ ಮತ್ತು ಇತ್ಯಿಹಾಸವನ್ನು ಬಿಂಬಿಸುತ್ತದೆ. ಮತ್ತು ಇದು ಜನಪ್ರಿಯ ಪ್ರವಾಸಿಧಾಮವಾಗಿದೆ. ಈ ಮಠವು ಮುಖ್ಯದೇವಾಲಯದ ಪ್ರದೇಶ, ಆಶ್ರಮದ ಅಂಚಿನಲ್ಲಿ ಒಂದು ಶಾಲೆ ಮತ್ತು ಕೆಲವು ಸ್ಮರಣಿಕೆಗಳ ಅಂಗಡಿಗಳನ್ನು ಕಾಣಬಹುದಾಗಿದೆ. ಈ ಮಠದ ಸಂಕೀರ್ಣದ ಗೋಡೆಗಳು ವಿಸ್ತಾರವಾಗಿ ಅಲಂಕಾರಗೊಂಡಿದ್ದು, ಅಸಾಧಾರಣ ಕಲಾಕೃತಿಯೊಂದಿಗೆ ಅಂದವಾದ ಚಿನ್ನದ ವಿಗ್ರಹಗಳು ನೋಡಲು ಸುಂದರವಾದ ದೃಶ್ಯವಾಗಿದೆ.

ಶಾಪಿಂಗ್

ಶಾಪಿಂಗ್

ಕೂರ್ಗ್‌ಗೆ ಭೇಟಿ ಕೊಟ್ಟು ಗ್ಯಾಸ್ಟ್ರೊನೊಮಿಕ್ ಸ್ಪ್ಲರ್ಜ್‌ನಲ್ಲಿ ಪಾಲ್ಗೊಳ್ಳದೇ ಇರಲು ಸಾಧ್ಯವೇ ಇಲ್ಲ. ಕೂರ್ಗ್ ಮಡಿಕೇರಿ ತನ್ನ ಕೈಯಿಂದ ತಯಾರಿಸಿದ ಎಲ್ಲಾ ವಿಧದ ಚಾಕೊಲೇಟ್‌ಗಳಿಗೆ ಜನಪ್ರಿಯವಾಗಿದೆ, ಮೆಣಸು, ಏಲಕ್ಕಿ, ದಾಲ್ಚಿನ್ನಿ ಮತ್ತು ಇನ್ನಿತರ ಮಸಾಲೆಗಳು, ಚಹಾ ಮತ್ತು ಕಾಫಿ, ಇವುಗಳ ಮಾರುಕಟ್ಟೆಗೆ ಭೇಟಿ ಕೊಡದೇ ಕೂರ್ಗ್‌ಗೆ ಯಾವುದೇ ಪ್ರವಾಸವು ಪೂರ್ಣಗೊಳ್ಳುವುದಿಲ್ಲ. ಸ್ಥಳೀಯ ಉತ್ಪನ್ನವಾಗಿರುವ ಅಲ್ಲಿಯ ರುಚಿಕರವಾದ ಆಲ್ಕೋಹಾಲ್ ಮುಕ್ತವಾದ ಹಣ್ಣಿನ ವೈನ್ ಅನ್ನು ಸವಿಯದೇ ಇರಬೇಡಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+