ಕುಂದಾ ನಗರಿ ಎಂದೇ ಕರೆಯಲ್ಪಡುವ ಬೆಳಗಾವಿಯು ಕರ್ನಾಟಕದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನಿಂದ ಸುಮಾರು 506 ಕಿ.ಮೀ ದೂರದಲ್ಲಿದೆ. ಇದು ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಪ್ರಾಕೃತಿಕವಾಗಿ ಬಹಳ ಪ್ರಸಿದ್ಧವಾಗಿದೆ.

ಸ್ಮಾರಕಗಳು
ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಸ್ಮಾರಕಗಳು ಇಲ್ಲಿ ಕಾಣಸಿಗುತ್ತವೆ. ಬೆಳಗಾವಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಆಗಿದೆ. ಬೆಳಗಾಂ ಅನೇಕ ರಾಜವಂಶರಿಂದ ಆಳಲ್ಪಟ್ಟಿದೆ ಅದರಲ್ಲಿ ಯಾದವ ರಾಜವಂಶ, ಖಿಲ್ಜಿ, ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನ, ಆದಿಲ್ ಶಾಹಿ ರಾಜವಂಶಜರೂ ಸೇರಿದ್ದಾರೆ.

ಪ್ರವಾಸಿ ತಾಣ
PC:Manjunath Doddamani Gajendragad
ಪ್ರವಾಸದ ದೃಷ್ಠಿಯಲ್ಲಿ ಇದೊಂದು ಉತ್ತಮ ತಾಣವಾಗಿದ್ದು, ಇಲ್ಲಿ ನೀವು ಅನೇಕ ತಾಣಗಳನ್ನು ಸುತ್ತಾಡಬಹುದು. ಬೆಳಗಾವಿಯಲ್ಲಿರುವ ಸುತ್ತಾಡಲು ಯೋಗ್ಯವಾದ ತಾಣಗಳು ಯಾವುವು ಎನ್ನುವುದರ ಬಗ್ಗೆ ನಾವು ತಿಳಿಸಿಕೊಡಲಿದ್ದೇವೆ.

ಬೆಳಗಾವಿ ಕೋಟೆ
1204 ಕ್ರಿ.ಶ.ದಲ್ಲಿ ರಟ ರಾಜವಂಶದ ಮಿತ್ರರಾಷ್ಟ್ರವಾದ ಬಿಚಿ ರಾಜ ಎಂದು ಕರೆಯಲ್ಪಡುವ ಜಯ ರಾಯರಿಂದಬೆಳಗಾವಿ ಕೋಟೆಯನ್ನು ನಿರ್ಮಿಸಲಾಯಿತು. ಉತ್ತಮ ಕೋಟೆಗಳು ಮತ್ತು ದೊಡ್ಡ ಕಂದಕದಿಂದ ಕಟ್ಟಲ್ಪಟ್ಟ ಈ ಕೋಟೆಯು ಆದಿಲ್ ಶಾಹಿ ರಾಜವಂಶಕ್ಕೆ ಸಂಬಂಧಿಸಿದ ಹಲವಾರು ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳುಳ್ಳ ಶ್ರೀಮಂತ ಇತಿಹಾಸವನ್ನು ಹೊಂದಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿಮಹಾತ್ಮ ಗಾಂಧಿಯವರನ್ನು ಬ್ರಿಟಿಷರು ಈ ಕೋಟೆಯಲ್ಲಿ ಬಂಧಿಸಲ್ಪಟ್ಟಿದ್ದರು.

ಗೋಕಾಕ್ ಜಲಪಾತ
PC:Shishirmk
ಗೋಕಾಕ್ ಜಲಪಾತವುಅಮೇರಿಕ ದೇಶದನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ. ಈ ಜಲಪಾತವು ೧೮೦ ಅಡಿ ಎತ್ತರದಿಂದ ಧುಮ್ಮುಕ್ಕುತ್ತದೆ. ಇಲ್ಲಿಗೆ ಮಳೆಗಾಲದಲ್ಲಿ ಭೇಟಿ ನೀಡುವುದು ಸೂಕ್ತವಾಗಿದೆ. ವಿದ್ಯುತ್ತನ್ನು ಮೊದಲ ಬಾರಿಗೆ ಉತ್ಪಾದಿಸಿದ್ದು ಇಲ್ಲೇ ಎನ್ನಲಾಗುತ್ತದೆ.

ಪಂಚಲಿಗೇಶ್ವರ ದೇವಸ್ಥಾನ
PC: Manjunath Doddamani Gajendragad
ಯಡೂರ್ ಕೃಷ್ಣ ನದಿಯ ಪಕ್ಕದಲ್ಲಿದೆ, ಇಲ್ಲಿ ಪ್ರಸಿದ್ಧ ವೀರಭದ್ರ ದೇವಸ್ಥಾನವಿದೆ. ಅನೇಕ ಭಕ್ತರು ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬೆಳಗಾವಿ ಜಿಲ್ಲೆಯ ಅತ್ಯಂತ ಹಳೆಯ ಗ್ರಾಮಗಳಲ್ಲಿ ಹೂಲಿ ಕೂಡ ಒಂದು. ಹಳ್ಳಿಯಲ್ಲಿ ಅನೇಕ ಚಾಲುಕ್ಯ ದೇವಾಲಯಗಳಿವೆ ಮತ್ತು ಪಂಚಲಿಗೇಶ್ವರ ದೇವಸ್ಥಾನ ಬಹಳ ಪ್ರಸಿದ್ಧವಾಗಿದೆ.

ಕಮಲಾ ಬಸದಿ
PC: Manjunath Doddamani Gajendragad
ಕಮಲಾ ಬಸದಿಯು ಬೆಳಗಾವಿಯಲ್ಲಿರುವ ಒಂದು ಪ್ರಾಚೀನ ಹಾಗೂ ಧಾರ್ಮಿಕ ಸ್ಥಳವಾಗಿದೆ. ಚಾಲುಕ್ಯ ಶೈಲಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ಕಪ್ಪು ಕಲ್ಲಿನಿಂದ ರಚಿಸಲಾದ ನೇಮಿನಾಥನ ಮೂರ್ತಿ ಇದೆ. ಧಾರ್ಮೀಕತೆಯ ಜೊತೆಗೆ ಈ ಮಂದಿರವು ವಾಸ್ತುಕಲೆಗೂ ಪ್ರಸಿದ್ಧಿ ಹೊಂದಿದೆ. ನೀವು ಕಲೆಯ ಪ್ರೇಮಿಗಳಾಗಿದ್ದರೆ ಇಲ್ಲಿಗೆ ಹೋಗಲೇ ಬೇಕು.

ಜಂಬೋಟಿ ಹಿಲ್ಸ್
ಬೆಳಗಾವಿಯಲ್ಲಿ ನೀವು ಜಂಬೋಟಿ ಹಿಲ್ಸ್ ಹಾಗೂ ಫಾಲ್ಸ್‌ನ್ನು ನೋಡಬಹುದು. ಜಂಬೊಟಿ ಫಾಲ್ಸ್ ಬೆಳಗಾವಿಗೆ 20 ಕಿಲೋಮೀಟರ್ ನೈಋತ್ಯ ಮತ್ತು ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಪುರದ ಪಶ್ಚಿಮಕ್ಕೆ 18 ಕಿಲೋಮೀಟರ್ ದೂರದಲ್ಲಿದೆ.
ಈ ಸ್ಥಳವು ಪ್ರಕೃತಿ ಪ್ರೇಮಿಗಳಿಗೆ ಬಹಳ ಇಷ್ಟವಾಗುತ್ತದೆ. ಸಾಹಸಪ್ರೀಯರಿಗೆ ಹಾಗೂ ಫೋಟೋಗ್ರಫಿ ಅಭ್ಯಾಸ ಇರುವವರಿಗೂ ಇಷ್ಟವಾಗುತ್ತದೆ.


Click it and Unblock the Notifications

















