ಮೊಗಲ್ ರಾಜರು ನಮ್ಮ ದೇಶದ ಕಾಲಿಟ್ಟಾಗ ಅನೇಕ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದರು. ಹೆಸರುವಾಸಿಯಾಗಿದ್ದ ಅನೇಕ ಸ್ಮಾರಕಗಳನ್ನು ಅವಶೇಷಗಳು ಉಳಿಯದ ರೀತಿಯಲ್ಲಿ ನಾಶ ಮಾಡಿದರು. ಹಿಂದೂ ಸಂಸ್ಕøತಿಯನ್ನು ಬೆಳಸಿ, ಅಭಿವೃದ್ಧಿಗೊಳಿಸಿದವರಲ್ಲಿ ಅಕ್ಬರ್ ಆದರೆ, ನಾಶ ಮಾಡುವುದರಲ್ಲಿ ಔರಂಗ ಜೇಬ್. ಹೌದು ಆತನ ಕಣ್ಣು ಬೀಳದ ದೇವಾಲಯವಿಲ್ಲ, ಧ್ವಂಸವಾಗದ
ಚರಿತ್ರೆ ಇಲ್ಲ. ಆದರೆ ಆ ದೇವಾಲಯ ಬಿಟ್ಟು.....
ಔರಂಗಜೇಬ್ ಎಲ್ಲಾ ದೇವಾಲಯವನ್ನು ನಾಶ ಮಾಡಿದಂತೆ ಮಹಾರಾಷ್ಟ್ರದಲ್ಲಿರುವ ಕೈಲಾಸ ದೇವಾಲಯವನ್ನು ಕೂಡ ನಾಶ ಮಾಡಲು ಮುಂದಾದನು. ಆದರೆ ಕಿಂಚಿತ್ತು ಕೂಡ ನಾಶ ಮಾಡಲು ಅವನಿಗೆ ಸಾಧ್ಯವಾಗಲಿಲ್ಲ. ಆ ಹಿಂದೂ ದೇವಾಲಯವು ಔರಂಗಜೇಬ್‍ಗೆ ಸವಾಲಾಗಿತ್ತು. ಅಷ್ಟಕ್ಕೂ ಆ ದೇವಾಲಯವನ್ನು ಅವನು ನಾಶ ಮಾಡದೇ ಇರುವುದಕ್ಕೆ ಒಂದು ಪ್ರಮುಖವಾದ ಕಾರಣವಿದೆ. ಔರಂಗಜೇನ್‍ನೇ ಅಲ್ಲ ಯಾರೇ ಆಗಲಿ ಆ ದೇವಾಲಯವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಇಲ್ಲಿದೆ....

1.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಎಲ್ಲೋರಾ ಗ್ರಾಮವು ಮಹಾರಾಷ್ಟ್ರದಲ್ಲಿನ ಔರಂಗಬಾದ್‍ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಇದೆ. ಸುಂದರವಾದ ಸ್ಮಾರಕದ ಗುಹೆಗಳಿಗೆ ಇದು ಪ್ರಸಿದ್ಧಿಯನ್ನು ಪಡೆದಿದೆ. ಎಲ್ಲೋರ ಗುಹೆಗಳು ವಿಶ್ವ ಪರಂಪರೆಯ ಸಂಪತ್ತು ಆಗಿ ಗುರುತಿಸಲ್ಪಟ್ಟಿದೆ. ಎಲ್ಲೋರ ಭಾರತೀಯ ರಮಣೀಯ ಶಿಲ್ಪಗಳನ್ನು ಪ್ರತಿಬಿಂಬಿಸುತ್ತದೆ.

2.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಅತ್ಯಂತ ಅದ್ಭುತವಾಗಿರುವ ಈ ಗುಹೆಗಳಲ್ಲಿ ಹಿಂದೂ, ಬೌದ್ಧ, ಜೈನ ದೇವಾಲಯಗಳು ಮತ್ತು ಸನ್ಯಾಸ ಆಶ್ರಮಗಳನ್ನು ಕಾಣಬಹುದಾಗಿದೆ. ಈ ಗುಹೆಗಳನ್ನು 5 ನೇ ಶತಮಾನದಿಂದ 10 ನೇ ಶತಮಾನದ ಮಧ್ಯೆ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗಿದೆ. ಮೊದಲ 12 ಗುಹೆಗಳು ಬೌದ್ಧ ಧರ್ಮಕ್ಕೆ ಸೇರಿದ್ದಾಗಿದೆ. ಇವುಗಳ ನಿರ್ಮಾಣ ಕಾಲ ಸುಮಾರು ಕ್ರಿ.ಪೂ 600 ನಿಂದ 800 ಮಧ್ಯೆ ಕಾಲದಲ್ಲಿ.

3.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
13 ನೇ ಗುಹೆಯಿಂದ ಹಿಡಿದು 29 ಗುಹೆಗಳ ವರೆಗೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ದೇವತೆಗಳು, ಅವರ ಪೌರಾಣಿಕ ಕಥೆಗಳು ಬಿಂಬಿಸುವ ಅದ್ಭುತ ಕೆತ್ತನಾ ಚಿತ್ರಗಳನ್ನು ಕಾಣಬಹುದಾಗಿದೆ. 30 ರಿಂದ 34 ಗುಹೆಗಳವರೆಗೆ ಇರುವ ಗುಹೆಗಳೆಲ್ಲಾ ಜೈನ ಮತಕ್ಕೆ ಸಂಬಂಧಿಸಿದ್ದಾಗಿದೆ.

4.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಅದಕ್ಕಿಂತ ದೊಡ್ಡ ವಿಷಯವೆನೆಂದರೆ? ಒಂದು ಪರ್ವತದ ಮೇಲಿನಿಂದ ಕೆಳಗೆ ಕೆತ್ತನೆ ಮಾಡುತ್ತಾ ಒಂದು ಅದ್ಭುತವಾದ ದೇವಾಲಯದ ಸಮುದಾಯವನ್ನು ಆವಿಷ್ಕಾರಿಸಿದ್ದಾರೆ. ಆ ದೇವಾಲಯದಲ್ಲಿ ಅಣು ಅಣುವಿನಲ್ಲಿಯೂ ಭಾರತೀಯ ಶಿಲ್ಪಕಲಾ ನೈಪುಣ್ಯವು ಉಕ್ಕುತ್ತಿರುವುದನ್ನು ಕಾಣಬಹುದು.

5.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಕಂಗೊಳಿಸುವ ಶಿಲ್ಪಗಳು, ಎಂದಿಗೂ ಅದ್ಭುತವಾದ ದೃಶ್ಯಗಳಿಂದ ಪ್ರವಾಸಿಗರನ್ನು ಸೊರೆಗೊಳಿಸುವ ವೈಭವ. ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಾಣ ಮಾಡಿದ ಈ ಅದ್ಭುತವಾದ ದೇವಾಲಯವನ್ನು ವೀಕ್ಷಿಸಿದ ವಿದೇಶಿ ಶಿಲ್ಪಗಳ ಇಂಜನಿಯರಿಂಗ್ ಮೇಧಾವಿಗಳಿಗೂ ಕೂಡ ಸಾವಿರ
ವರ್ಷಗಳ ಹಿಂದೆ ಇಂದಿನ ಭಾರತೀಯ ಶಿಲ್ಪಕಲೆಗಳನ್ನು ನೋಡಿ ನಂಬಲಾಗದೇ ಚಕಿತರಾದರು.

6.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಟೆಕ್ನಾಲಜಿ ಸಾಕಷ್ಟು ಬೆಳೆದಿದೆ. ಆಧುನಿಕ ಟೆಕ್ನಾಲಜಿದಿಂದ ಅಸಾಧ್ಯವಾದುದು ಏನು ಇಲ್ಲ ಎಂದು ಅಂದುಕೊಳ್ಳುತ್ತಿರುತ್ತೇವೆ. ಆದರೆ ಪ್ರಪಂಚದಲ್ಲಿ ಮಾನವನ ಮೇಧಸ್ಸಿಗೆ ತಿಳಿಯದ ಹಲವಾರು ಅಧ್ಭುತಗಳು ಇವೆ. ಆ ಕಾಲದಲ್ಲಿ ಅವುಗಳು ಹೇಗೆ ಸಾಧ್ಯವಾದುವು ಎಂಬುದು ಇಂದಿಗೂ ಬಗೆಹರಿಸಲಾಗದ ರಹಸ್ಯವಾಗಿಯೇ ಉಳಿದುಬಿಟ್ಟಿದೆ.ಯಾವುದೇ ದೇವಾಲಯವನ್ನು ಸಾಮಾನ್ಯವಾಗಿ ನೆಲದಿಂದ ಬುನಾದಿ ಪ್ರಾರಂಭಿಸುತ್ತಾರೆ. ಆದರೆ ಈ ದೇವಾಲಯವನ್ನು ಮಾತ್ರ ಶಿಖರದಿಂದಾಗಿ ಪ್ರಾರಂಭಿಸಿದ್ದಾರೆ.

7.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಕಲ್ಲನ್ನು ಕತ್ತರಿಸಲು ಪ್ರಸ್ತುತವಿರುವ ಅತ್ಯಾಧುನಿಕ ಸಾಂಕೇತಿಕ ಪರಿಕರಗಳು ಯಾವುವು ಆಗ ಇರಲ್ಲಿಲ್ಲ. ಭಾರಿ ಗಾತ್ರದ ಬಂಡೆಗಳನ್ನು ಎತ್ತಲೂ ಕ್ರೇನುಗಳು ಕೂಡ ಆ ಸಮಯದಲ್ಲಿ ಇರಲಿಲ್ಲ. ಅಂತಹ ದಿನಗಳಲ್ಲಿ ಒಂದು ಪರ್ವತವನ್ನು ಇಷ್ಟು ಅದ್ಭುತವಾಗಿ ಕೆತ್ತನೆ ಮಾಡುವುದು ಒಂದು ಮಾಯೆ ಎಂದೇ ಭಾವಿಸಬಹುದು.

8.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಮೇಲಿನಿಂದ ನೋಡಿದರೆ ಇದು ಒಂದು ಎಕ್ಸ್ ಸಿಂಬಲ್ ಆಗಿ ಕಾಣಿಸುತ್ತದೆ. ಇದು ಕೈಲಾಸ ಪರ್ವತಕ್ಕೆ ಪ್ರತೀಕವಾಗಿ ಭಾವಿಸುತ್ತಾರೆ. ಇಲ್ಲಿ ಪರಮಶಿವನ ದೇವಾಲಯವನ್ನು ಒಂದೇ ಕಲ್ಲಿನಲ್ಲಿಯೇ ಕೆತ್ತನೆ ಮಾಡಿರುವುದು ಸೊಜಿಗದಂತೆ ಕಾಣುತ್ತದೆ.

9.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ನಿರ್ಮಾಣ ಹೇಗೆ ಮಾಡುತ್ತಿದ್ದರೆಂದರೆ ಮೊದಲು ಬೆಟ್ಟಗಳಿಂದ ಯಾವ ಭಾಗವನ್ನು ಯಾವ ಆಕಾರದಲ್ಲಿ ವಿನ್ಯಾಸಗೊಳಿಸಬೇಕು ಎಂದು ಗುರುತಿಸುತ್ತಿದ್ದರು. ಆ ನಂತರ ಪ್ರಾರಂಭ ಮಾಡುತ್ತಿದ್ದರು. ಮೊದಲ ಶಿಖರದ ಭಾಗದಿಂದ ವಿನ್ಯಾಸಗೊಳಿಸುತ್ತ ಕೆಳ ಭಾಗಕ್ಕೆ ಬರುತ್ತಿದ್ದರಂತೆ.

10.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
ಎಲ್ಲೋರ ಗುಹೆಗಳಲ್ಲಿ ಮೊದಲ ಗುಹೆ ಅತ್ಯಂತ ಪ್ರಾಚೀನವಾದುದು. ಎರಡನೇ ಗುಹೆಯು ಶಿಲ್ಪಕಲೆಯನ್ನು ಹೊಂದಿರುವ ಅದ್ಭುತವಾದ ವೈಭವವನ್ನು ಹೊಂದಿದೆ. ಇದನ್ನು ಬುದ್ಧನಿಗೆ ಸಂಬಂಧಿಸಿದ ವಿವಿಧ ಮೂರ್ತಿಗಳು, ಬೋಧಿಸತ್ವವಿರುವ ಮೂರ್ತಿಗಳನ್ನು ಣಬಹುದಾಗಿದೆ.

11.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಈ ಸುಂದರವಾದ ಗುಹೆಗಳನ್ನು ಯಾರು ನಿರ್ಮಾಣ ಮಾಡಿದರು ಎಂಬುದು ಇಂದಿಗೂ ತಿಳಿಯದ ವಿಷಯವೇ ಆಗಿದೆ. ಇಲ್ಲಿ ಸುಮಾರು 40 ಅಡಿ ಆಳದಲ್ಲಿರುವ ಒಂದು ಸುರಂಗವು ಕೂಡ ಇದೆ. ಬಲಭಾಗದಿಂದ ತಿರುಗಿದರೆ ಭೂಗರ್ಭಗುಡಿಯ ಒಳಗೆ ದಾರಿ ಇದೆ. ಆದರೆ ಈ ಮಾರ್ಗವು ಕ್ರಮವಾಗಿ ಅದಕ್ಕೆ ಇರುವ ಅಗಲ ಒಂದು ಚಿಕ್ಕ ಮನುಷ್ಯ ಕೂಡ ಹೋಗಲು ಸಾಧ್ಯವಾಗದೇ ಇರುವುದರಿಂದ ಅದರಲ್ಲಿ ಏನಿರಬಹುದು ಎಂಬ ವಿಷಯ ಇಂದಿಗೂ ಯಾರಿಗೂ ತಿಳಿದಿಲ್ಲ.

12.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
PC:YOUTUBE
ಪ್ರಪಂಚದಲ್ಲಿನ ಏಕ ಶಿಲದ ಮೇಲೆ ನಿರ್ಮಾಣ ಮಾಡಿರುವ ಅತ್ಯಂತ ದೊಡ್ಡದಾದ ಶಿವಾಲಯವೆಂದರೆ ಕೈಲಾಸ ದೇವಾಲಯ. ಇದನ್ನು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಿರಬಹುದು ಎಂದು ಭಾವಿಸುತ್ತಾರೆ. ಈ ದೇವಾಲಯದ ಸೃಷ್ಟಿ ಅತ್ಯದ್ಭುತವಾದುದು. ಮೇಲಿನಿಂದ ಕೆಳಗಿನವರೆಗೆ ಅಪೂರ್ವವಾದ ಕೆತ್ತನೆಯಿಂದ ಕಂಗೊಳಿಸುತ್ತಿರುವ ಈ ಗುಹೆಗಳನ್ನು ಕಾಣಲು ದೇಶದ ಮೂಲೆ ಮೂಲೆಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಭೇಟಿ ನೀಡುತ್ತಾರೆ. ಈ ದೇವಾಲಯವು ಅಂದಿನ ಶಿಲ್ಪಕಲಾ ನೈಪುಣ್ಯ ನಮ್ಮ ಮುಂದೆ ನಿರ್ದಶನವಾಗಿ ನಿಂತಿದೆ.

13.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ..
PC:YOUTUBE
4 ಲಕ್ಷ ಕ್ವಿಂಟಾಲ್ ಟನ್ನುಗಳ ಕಲ್ಲಿನಿಂದ ವಿನ್ಯಾಸ ಮಾಡಿ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಇಂದಿನ ಟೆಕ್ನಾಲಜಿಯ ಪ್ರಕಾರ ಇಂಥಹ ದೇವಾಲಯವನ್ನು ನಿರ್ಮಾಣ ಮಾಡಬೇಕಾದರೆ ಸುಮಾರು 100 ವರ್ಷಗಳಿಗಿಂತ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.

14.ಔರಂಗಜೇಬನಿಗೆ ಸವಾಲು ಹಾಕಿದ ಹಿಂದೂ ದೇವಾಲಯ...
ಔರಂಗಜೇಬ್ ಆನೇಕ ಹಿಂದೂ ದೇವಾಲಯವನ್ನು ನಾಶ ಮಾಡಿದನು. ಆ ಕ್ರಮವಾಗಿ ಈ ದೇವಾಲಯವನ್ನು ಕೂಡ ನಾಶ ಮಾಡಲು 1000 ಮಂದಿ ಸೈನಿಕರನ್ನು ಕಳುಹಿಸಿದನು. ಅವರು ಯಾವುದೇ ವಿಶ್ರಾಂತಿ ಇಲ್ಲದೇ ಸತತ 3 ವರ್ಷಗಳ ಕಾಲ ಎಷ್ಟು ಪ್ರಯತ್ನ ಪಟ್ಟರು ಕೆಲವು ಶಿಲ್ಪಗಳನ್ನು ಮಾತ್ರ ನಾಶ ಮಾಡಲು ಸಾಧ್ಯವಾಯಿತೇ ಹೊರತು ದೇವಾಲಯವನ್ನು ಮಾತ್ರ ಏನು ಮಾಡಲು ಸಾಧ್ಯವಾಗಲಿಲ್ಲವಂತೆ.

15.ಉತ್ತಮ ಕಾಲಾವಧಿ
PC:YOUTUBE
ಈ ಸುಂದರವಾದ ಗುಹೆಗಳಿಗೆ ಭೇಟಿ ನೀಡಲು ಉತ್ತಮವಾದ ಕಾಲಾವಧಿ ಎಂದರೆ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ. ಆದರೆ ಮಕ್ಕಳಿಗೆ ರಜಾ ದಿನಗಳ ಕಾರಣವಾಗಿ ಮೇ ಹಾಗು ಜೂನ್ ತಿಂಗಳ ಕಾಲಾವಧಿಯಲ್ಲಿ ಅಧಿಕವಾಗಿ ಪ್ರವಾಸಿಗರು ಭೇಟಿ ನೀಡುತ್ತಾರೆ.

15.ಹೇಗೆ ಸಾಗಬೇಕು?
PC:YOUTUBE
ರೈಲ್ವೆ ಮಾರ್ಗದ ಮೂಲಕ ಎಂದರೆ ಔರಂಗಬಾದ್‍ಗೆ ತಲುಪಿದ ನಂತರ ಅಲ್ಲಿಂದ ಬಸ್ಸು, ಕಾರು, ಟ್ಯಾಕ್ಸಿಯ ಮೂಲಕ ಎಲ್ಲೋರ ಗುಹೆಯನ್ನು ಸೇರಿಕೊಳ್ಳಬಹುದಾಗಿದೆ. ಬೆಂಗಳೂರಿನಿಂದ ಎಲ್ಲೋರ ಗುಹೆಗೆ ತಲುಪಲು ಸುಮಾರು 17 ಗಂಟೆಗಳ ಕಾಲ ಧೀಘವಾದ ಪ್ರಯಾಣವನ್ನು ಮಾಡಬೇಕಾಗಿರುತ್ತದೆ.


Click it and Unblock the Notifications
















