Search
  • Follow NativePlanet
Share
» »ವಾರಾಣಸಿ ಘಾಟ್‌ಗಳು ಜಲಾವೃತ: ಗಂಗಾ ಆರತಿ ಸ್ಥಳಾಂತರ, ದೋಣಿ ಸಂಚಾರ ಸ್ಥಗಿತ - ಪ್ರವಾಸಿಗರಿಗೆ ತುರ್ತು ಎಚ್ಚರಿಕೆ!

ವಾರಾಣಸಿ ಘಾಟ್‌ಗಳು ಜಲಾವೃತ: ಗಂಗಾ ಆರತಿ ಸ್ಥಳಾಂತರ, ದೋಣಿ ಸಂಚಾರ ಸ್ಥಗಿತ - ಪ್ರವಾಸಿಗರಿಗೆ ತುರ್ತು ಎಚ್ಚರಿಕೆ!

ಗಂಗಾ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವಾರಾಣಸಿಯ ಘಾಟ್‌ಗಳು ಇಂದು (ಆಗಸ್ಟ್ 30) ಮತ್ತೆ ಜಲಾವೃತಗೊಂಡಿವೆ. ಪರಿಸ್ಥಿತಿ ಗಂಭೀರವಾಗಿರುವ ಕಾರಣ ಅಧಿಕಾರಿಗಳು ಮುಂದಿನ ಆದೇಶದವರೆಗೆ ದೋಣಿ ಸಂಚಾರವನ್ನು ಪೂರ್ಣವಾಗಿ ಸ್ಥಗಿತಗೊಳಿಸಿದ್ದಾರೆ. ಇತ್ತ ದಶಾಶ್ವಮೇಧ ಘಾಟ್‌ನಲ್ಲಿ ನೀರು ಹೆಚ್ಚಾಗಿರುವುದರಿಂದ, ಪ್ರಸಿದ್ಧ ಸಂಜೆಯ ಗಂಗಾ ಆರತಿಯನ್ನು ಮೇಲ್ಭಾಗದ ಮೆಟ್ಟಿಲುಗಳಿಗೆ ಸ್ಥಳಾಂತರಿಸಲಾಗಿದೆ. ಮಣಿಕರ್ಣಿಕಾ ಮತ್ತು ಲಲಿತಾ ಘಾಟ್‌ಗಳ ಸಂಪರ್ಕ ರಸ್ತೆಗಳು ಹಾಗೂ ಮೇಲ್ಭಾಗದ ಮೆಟ್ಟಿಲುಗಳು ಭಾಗಶಃ ನೀರಿನಲ್ಲಿ ಮುಳುಗಿದ್ದು, ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮುಳುಗಡೆಯಾಗಿರುವ ಘಾಟ್‌ಗಳ ಬಳಿ ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಪಡೆಗಳು ತೀವ್ರ ನಿಗಾ ವಹಿಸಿದ್ದು, ಸುರಕ್ಷತೆಯ ದೃಷ್ಟಿಯಿಂದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆಗಸ್ಟ್ ಮಧ್ಯಭಾಗದಿಂದಲೂ ನೀರಿನ ಹರಿವು ಹೆಚ್ಚಾಗುತ್ತಿದ್ದು, ಮೂಲ ಆರತಿ ವೇದಿಕೆ ಮುಳುಗಡೆಯಾದ ಕಾರಣ ಆಯೋಜಕರು ಕಟ್ಟಡಗಳ ಛಾವಣಿ ಅಥವಾ ಎತ್ತರದ ತಾತ್ಕಾಲಿಕ ವೇದಿಕೆಗಳಲ್ಲೇ ಪೂಜೆ ನೆರವೇರಿಸುತ್ತಿದ್ದಾರೆ. ಹೀಗಾಗಿ, ಪ್ರವಾಸಿಗರಿಗೆ ಕುಳಿತುಕೊಳ್ಳುವ ಆಸನಗಳ ಸಂಖ್ಯೆ ಕಡಿಮೆಯಾಗಿದ್ದು, ದೋಣಿಗಳಲ್ಲಿ ಕುಳಿತು ಆರತಿ ವೀಕ್ಷಿಸುವ ಅವಕಾಶವೂ ಇರುವುದಿಲ್ಲ. ಈ ಅವಧಿಯಲ್ಲಿ ಆರತಿ ಪೂಜೆಗಳು ಸಹ ತುಸು ಸರಳ ಹಾಗೂ ಅಲ್ಪಾವಧಿಯಲ್ಲಿ ಮುಗಿಯಲಿವೆ.

Varanasi Ghats Flooded: Ganga Aarti Shifted & Boat Services Suspended - Travel Alert 2026

ಗಂಗಾ ಆರತಿ ಮತ್ತು ಕಾಶಿ ವಿಶ್ವನಾಥನ ದರ್ಶನ

ದಶಾಶ್ವಮೇಧ ಘಾಟ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ಗಂಗಾ ಸೇವಾ ನಿಧಿ, "ಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಆರತಿ ಮಾಡಿಕೊಡುವ ಮೂಲ ವೇದಿಕೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ," ಎಂದು ಸ್ಪಷ್ಟಪಡಿಸಿದೆ. ಹೀಗಾಗಿ ಆರತಿ ಕಣ್ತುಂಬಿಕೊಳ್ಳಲು ಬಯಸುವ ಭಕ್ತರು ಬೇಗನೆ ಆಗಮಿಸಿ, ನಿಗದಿಪಡಿಸಿದ ಬ್ಯಾರಿಕೇಡ್‌ಗಳ ಹಿಂಭಾಗದಲ್ಲೇ ನಿಲ್ಲುವುದು ಒಳಿತು. ಆಯೋಜಕರು 10 ರಿಂದ 15 ಅಡಿ ಎತ್ತರದ ಸ್ಥಳಕ್ಕೆ ತೆರಳಿ ಆರತಿ ನೆರವೇರಿಸಲಿದ್ದಾರೆ. ಇನ್ನು ಕಾಶಿ ವಿಶ್ವನಾಥ ಧಾಮದ ವಿಶೇಷ ದರ್ಶನ ಟಿಕೆಟ್ ದರ 300 ರೂ. ಇರಲಿದ್ದು, ಪ್ರವಾಹದ ಹಿನ್ನೆಲೆಯಲ್ಲಿ 'ಗಂಗಾ ದ್ವಾರ'ದ ಮೂಲಕ ದೇವಾಲಯ ಪ್ರವೇಶಿಸುವುದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ವಾರಾಣಸಿ ಘಾಟ್‌ಗಳಲ್ಲಿ ಪ್ರಯಾಣ ಮತ್ತು ಸುರಕ್ಷತಾ ಮಾರ್ಗದರ್ಶಿ

ಘಾಟ್‌ಗಳ ಪಕ್ಕದಲ್ಲಿರುವ ನೀರು ತುಂಬಿದ ಕಿರಿದಾದ ರಸ್ತೆಗಳಲ್ಲಿ ಸಂಚರಿಸುವುದನ್ನು ತಪ್ಪಿಸಿ. ಗಾಡೋಲಿಯಾವರೆಗೆ ಇ-ರಿಕ್ಷಾ ಅಥವಾ ಆಟೋದಲ್ಲಿ ತಲುಪಿ, ಅಲ್ಲಿಂದ ನೀರಿನ ಮಟ್ಟಕ್ಕಿಂತ ಎತ್ತರದಲ್ಲಿರುವ ಪಾದಚಾರಿ ಮಾರ್ಗದ ಮೂಲಕ ಧಾಮದತ್ತ ತೆರಳುವುದು ಸುರಕ್ಷಿತ. ಉಳಿದುಕೊಳ್ಳಲು ಕಾಂಟ್ (Cantt) ಅಥವಾ ಸಿಗ್ರಾ (Sigra) ದಂತಹ ಎತ್ತರದ ಪ್ರದೇಶಗಳಲ್ಲಿರುವ ಹೋಟೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಸಣ್ಣದೊಂದು ಮಳೆ ಮತ್ತು ಪ್ರವಾಹ ತುರ್ತು ಕಿಟ್‌ ಇಟ್ಟುಕೊಳ್ಳಿ ಹಾಗೂ ಜನಸಂದಣಿ ಇರುವ ಜಲಾವೃತ ಪ್ರದೇಶಕ್ಕೆ ತೆರಳುವ ಮುನ್ನ ಬೆಲೆಬಾಳುವ ವಸ್ತುಗಳನ್ನು ಲಾಕರ್‌ನಲ್ಲಿ ಭದ್ರವಾಗಿಡಿ.

ಬೆಳಗಿನ 'ಸುಬಹ್-ಎ-ಬನಾರಸ್' ಕಾರ್ಯಕ್ರಮ ನಡೆಯುವ ಅಸ್ಸಿ ಘಾಟ್‌ನ ಮೆಟ್ಟಿಲುಗಳು ಮುಳುಗಡೆಯಾಗಿರುವುದರಿಂದ ಸ್ಥಳಾಂತರಗೊಳಿಸಲಾಗಿದೆ. ಆಯೋಜಕರು ಪ್ರಸ್ತುತ ಈ ಕಾರ್ಯಕ್ರಮವನ್ನು ನ್ಯೂ ಅಸ್ಸಿಗೆ ಶೇಪ್ ಮಾಡಿದ್ದಾರೆ ಅಥವಾ ನೀರು ಅತಿಯಾಗಿದ್ದಾಗ ರದ್ದುಗೊಳಿಸುತ್ತಿದ್ದಾರೆ. ಆದ್ದರಿಂದ ಮುಂಜಾನೆ ತೆರಳುವ ಮುನ್ನವೇ ಮಾಹಿತಿ ಖಚಿತಪಡಿಸಿಕೊಳ್ಳಿ. ನದಿ ತೀರದ ವೀಕ್ಷಣೆ ಸಾಧ್ಯವಾಗದಿದ್ದರೆ ಕಾಶಿ ಕಾರಿಡಾರ್ ದರ್ಶನ, ಕರಕುಶಲ ಕಲಾಕೇಂದ್ರಗಳು ಅಥವಾ ಮ್ಯೂಸಿಯಂಗಳಿಗೆ ಭೇಟಿ ನೀಡಿ. ಬುಕ್ ಮಾಡಿದ ದೋಣಿ ಪ್ರಯಾಣ ರದ್ದಾಗಿದ್ದರೆ, ಸೇವೆ ಮತ್ತೆ ಆರಂಭವಾದಾಗ ಅದನ್ನು ಬಳಸಿಕೊಳ್ಳಲು ಆಪರೇಟರ್‌ಗಳ ಬಳಿ ಕ್ರೆಡಿಟ್ ಬ್ಯಾಲೆನ್ಸ್ ನೀಡುವಂತೆ ಕೋರಬಹುದು.

More News

Read more about: ganga aarti
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+