Search
  • Follow NativePlanet
Share
» »ನೀವು ನೋಡಿರದ ಗೋವಾದ ಅತಿ ಅದ್ಭುತ ಸ್ಥಳಗಳಿವು…

ನೀವು ನೋಡಿರದ ಗೋವಾದ ಅತಿ ಅದ್ಭುತ ಸ್ಥಳಗಳಿವು…

ಗೋವಾ ಹೆಸರು ಕೇಳಿದಾಗ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ಬರುವುದು ಸುಂದರವಾದ ಕಡಲತೀರಗಳು, ಉತ್ಸಾಹಭರಿತ ಪಾರ್ಟಿಗಳು ಮತ್ತು ಅತಿ ಹೆಚ್ಚು ಭೇಟಿ ನೀಡುವ ಬಾಲಿವುಡ್ ಪ್ರಸಿದ್ಧ ಕೋಟೆಗಳು. ಆದರೆ ಗೋವಾದಲ್ಲಿ ಬಹುತೇಕರು ಅನ್ವೇಷಿಸದ ಸ್ಥಳಗಳಿದ್ದು, ಅವು ಪ್ರವಾಸಿಗರ ಬರುವಿಕೆಯನ್ನು ಕಾಯುತ್ತಿವೆ. ಕಿಕ್ಕಿರಿದ ಕಡಲ ತೀರಗಳಿಂದ ತಪ್ಪಿಸಿಕೊಳ್ಳಬೇಕೆಂದರೆ, ನಿಜವಾದ ಗೋವಾವನ್ನು ಅನ್ವೇಷಿಸಲು ಬಯಸಿದರೆ, ಒಮ್ಮೆಯಾದರೂ ನೋಡಲೇಬೇಕಾದ ಕೆಲವು ಸ್ಥಳಗಳಿವೆ.

ಆದರೆ ನೀವು ಮಾತ್ರ ಎಲ್ಲಿ ಉಳಿಯಬೇಕು ಎಂಬುದನ್ನು ಮರೆತುಬಿಡಿ. ಬದಲಿಗೆ, ಸ್ಥಳೀಯರ ಸಹಾಯದಿಂದ ಗೋವಾವನ್ನು ಅನ್ವೇಷಿಸಿ. ಪೂರ್ವಿಕರ ಪೋರ್ಚುಗೀಸ್ ಮನೆಯಲ್ಲಿ ಗೋವಾದ ಕುಟುಂಬದೊಂದಿಗೆ ವಾಸಿಸಿ, ಸ್ಥಳೀಯ ಊಟವನ್ನು ಸವಿಯಿರಿ. ಗುಪ್ತ ಸ್ಥಳದಲ್ಲಿರುವ ಹಳ್ಳಿಗಳನ್ನು ಅನ್ವೇಷಿಸಿ. ಎಂದೂ ಕೇಳಿರದ, ತಿಳಿಯದ ಗೋವಾವನ್ನು ನೀವು ನೋಡಿ. ಅಂದಹಾಗೆ ಗೋವಾದಲ್ಲಿ ನೀವು ಊಹಿಸಲು ಸಾಧ್ಯವಾಗದ, ನೋಡಿರದ ಕೆಲವು ಸ್ಥಳಗಳ ಮತ್ತು ಪ್ರವಾಸಿ ಚಟುವಟಿಕೆಗಳ ಮಾಹಿತಿ ಇಲ್ಲಿದೆ ನೋಡಿ...

ಮೊರ್ಜಿಮ್ ಬೀಚ್‌ ತೀರ ಮತ್ತು ಆಲಿವ್ ರಿಡ್ಲಿ ಆಮೆಗಳು

ಮೊರ್ಜಿಮ್ ಬೀಚ್‌ ತೀರ ಮತ್ತು ಆಲಿವ್ ರಿಡ್ಲಿ ಆಮೆಗಳು

ಸಮುದ್ರ ಆಮೆಗಳು ಮೊಟ್ಟೆ ಇಡುವುದನ್ನು ಮತ್ತು ಚಿಕ್ಕ ಮರಿಗಳು ಸಮುದ್ರಕ್ಕೆ ಹೋಗುವುದನ್ನು ನೀವು ಎಂದಾದರೂ ನೋಡಿದ್ದೀರಾ?. ಆದರೆ ಪ್ರತಿ ವರ್ಷ ನವೆಂಬರ್‌ನಿಂದ ಏಪ್ರಿಲ್‌ವರೆಗೆ, ಆಲಿವ್ ರಿಡ್ಲಿ ಆಮೆಗಳು ಗೂಡುಕಟ್ಟಲು ಗೋವಾದ ಕಡಲತೀರಗಳಿಗೆ ಹೋಗುತ್ತವೆ. ನಂತರ ಆಮೆಗಳು ನೂರಾರು ಮೊಟ್ಟೆಗಳನ್ನು ಇಡುತ್ತವೆ. ಸುಮಾರು 2 ತಿಂಗಳ ಕಾವು ಅವಧಿ ಮುಗಿದ ನಂತರ, ಚಿಕ್ಕ ಆಮೆಗಳು ತಮ್ಮ ಮನೆಯಾದ ಸಮುದ್ರಕ್ಕೆ ಹಿಂತಿರುಗುತ್ತವೆ. ಇದು ನೋಡಲು ಬಹಳ ಸುಂದರವಾದ ದೃಶ್ಯವಾಗಿದೆ. ಈ ಸಮಯದಲ್ಲಿ ತೀರಕ್ಕೆ ಭೇಟಿ ನೀಡುವಾಗ ಬಹಳ ಜಾಗರೂಕರಾಗಿರಬೇಕು. ಈ ಸಣ್ಣ ಆಮೆಗಳನ್ನು ರಕ್ಷಿಸಲು ಸ್ಥಳೀಯ ಜನರು ಎಕೊ ಹಟ್ ರಚಿಸಿರುತ್ತಾರೆ.

ಆದ್ದರಿಂದ ಸ್ಥಳೀಯ ಸ್ವಯಂಸೇವಕರನ್ನು ಸಂಪರ್ಕಿಸಿ ಮತ್ತು ಆಮೆಗಳು ತಮ್ಮ ಕುಟುಂಬಗಳನ್ನು ಹೇಗೆ ವಿಸ್ತರಿಸುತ್ತವೆ ಎಂಬುದನ್ನು ನೋಡಿ. ಚಿಕ್ಕ ಆಮೆಗಳು ಸಮುದ್ರದ ಕಡೆಗೆ ಮರಿ ಹೆಜ್ಜೆಗಳನ್ನು ಇಡುವುದನ್ನು ನೋಡಿದರೆ ನಿಮಗೆ ಮನ ಕರಗಬಹುದು. ಈ ಅನುಭವಕ್ಕಾಗಿ ನೀವು ಮೊರ್ಜಿಮ್ ಬೀಚ್‌ಗೆ ಭೇಟಿ ನೀಡಬಹುದು.

ಸ್ಟೈಸಿ ಪ್ಲಾಂಟೇಶನ್’ಗೆ ಪ್ರವಾಸಕ್ಕೆ ಹೋಗಿ

ಸ್ಟೈಸಿ ಪ್ಲಾಂಟೇಶನ್’ಗೆ ಪ್ರವಾಸಕ್ಕೆ ಹೋಗಿ

ಮಸಾಲೆ ಇಲ್ಲದೆ ಭಾರತೀಯರ ಮನೆಗಳಲ್ಲಿ ಅಡುಗೆಗಳು ತಯಾರಾಗುವುದಿಲ್ಲ. ಮಸಾಲೆ ಸುವಾಸನೆಯಿಲ್ಲದೆ ಯಾವುದೇ ಭಾರತೀಯರ ಭಕ್ಷ್ಯವು ಅಪೂರ್ಣವಾಗಿರುತ್ತದೆ. ಇನ್ನು ಗೋವಾದ ಮಸಾಲೆ ತೋಟಗಳು ಹೆಚ್ಚಿನ ಜನರು ಅನ್ವೇಷಿಸದ ಜಾಗಗಳಾಗಿವೆ. ಇಲ್ಲಿ ಕಾಳುಮೆಣಸು, ಏಲಕ್ಕಿ, ಜಾಯಿಕಾಯಿ, ಲವಂಗ ಹೀಗೆ ಇನ್ನೂ ಹೆಚ್ಚಿನ ಮಸಾಲೆ ತೋಟಗಳನ್ನು ಕಾಣಬಹುದಾಗಿದೆ.

ಪ್ಲಾಂಟೇಶನ್ ಪ್ರವಾಸದಲ್ಲಿ, ಸ್ಥಳೀಯ ಮಸಾಲೆಗಳೊಂದಿಗೆ ತಯಾರಾದ ಸಾಂಪ್ರದಾಯಿಕ ಊಟವನ್ನು ನಿಮಗೆ ನೀಡಲಾಗುವುದು. ಈ ಮಸಾಲೆಗಳ ಸುವಾಸನೆ ಕೇಳಿದವರು ಗೋವಾವನ್ನು ಬಿಡಲು ಬಯಸುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಗೋವಾಗೆ ಭೇಟಿ ನೀಡುತ್ತಿದ್ದರೆ ದಟ್ಟವಾದ ಬಿಸಿಲಿನಲ್ಲಿ ಹಚ್ಚ ಹಸಿರಿನ ಮಸಾಲೆ ತೋಟದ ಸುತ್ತಲೂ ಸುತ್ತಾಡಲು ಸಮಯ ತೆಗೆದುಕೊಳ್ಳಿ.

ಡಾ. ಸಲೀಂ ಅಲಿ ಪಕ್ಷಿಧಾಮವನ್ನು ಅನ್ವೇಷಿಸಿ

ಡಾ. ಸಲೀಂ ಅಲಿ ಪಕ್ಷಿಧಾಮವನ್ನು ಅನ್ವೇಷಿಸಿ

ಗೋವಾದ ಸೌಂದರ್ಯವು ಮರಳಿನ ತೀರದಲ್ಲಿ ಮಾತ್ರ ಇಲ್ಲ. ಹಿನ್ನೀರು, ಸರೋವರಗಳು ಮತ್ತು ನದಿಗಳೊಂದಿಗೆ ಪ್ರಕೃತಿ ಪ್ರಿಯರಿಗೆ ಇಷ್ಟವಾಗುವ ಹಳ್ಳಿಗಳಲ್ಲೂ ಇದೆ. ಹಚ್ಚ ಹಸಿರಿನ ನಡುವೆ ಇರುವ ಈ ನಿಶ್ಯಬ್ದ ಜಲಮೂಲಗಳು ಪಕ್ಷಿಗಳಿಗೆ ಪರಿಪೂರ್ಣ ನೆಲೆಯಾಗಿದೆ. ಗೋವಾದಲ್ಲಿ ಇಲ್ಲಿಯವರೆಗೆ 400 ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಕಾಣಬಹುದು. ಮಾಂಡೋವಿ ನದಿಯ ಬಳಿ ಡಾ.

ಸಲೀಂ ಅಲಿ ಪಕ್ಷಿಧಾಮ ಎಂಬ ಸುಂದರ ಪಕ್ಷಿಧಾಮವಿದೆ. ಇಲ್ಲಿನ ಅಭಯಾರಣ್ಯದಲ್ಲಿ ವರ್ಣರಂಜಿತ ಮಿಂಚುಳ್ಳಿಗಳು, ಮಧುರವಾದ ಥ್ರಷ್‌ಗಳು, ಮರಕುಟಿಗಗಳು, ಸ್ಯಾಂಡ್‌ಪೈಪರ್‌ಗಳು, ಟರ್ನ್‌ಗಳು, ಹೆರಾನ್‌ಗಳು ಸೇರಿದಂತೆ 100 ಜಾತಿಯ ಪಕ್ಷಿಗಳನ್ನು ನೀವು ನೋಡಬಹುದು. ಅಭಯಾರಣ್ಯವನ್ನು ನೋಡಲು ಉತ್ತಮ ಮಾರ್ಗವೆಂದರೆ ಮಾಂಡೋವಿ ನದಿ ಮೂಲಕ ದೋಣಿಯಲ್ಲಿ ಇಲ್ಲಿಗೆ ತಲುಪುವುದು. ಪಕ್ಷಿಗಳು ಹೆಚ್ಚು ಸಕ್ರಿಯವಾಗಿರುವಾಗ ಸಂದರ್ಭ ಅಂದರೆ ಮುಂಜಾನೆ ಅಥವಾ ಸಂಜೆ.

ದೂಧಸಾಗರ ಜಲಪಾತಕ್ಕೆ ಚಾರಣ

ದೂಧಸಾಗರ ಜಲಪಾತಕ್ಕೆ ಚಾರಣ

ಗೋವಾದ ಈ ಸುಂದರವಾದ ಜಲಪಾತವು ಭಾರತದ ಅತಿ ಎತ್ತರದ ಮತ್ತು ನಾಲ್ಕು ಹಂತದ ಜಲಪಾತಗಳಲ್ಲಿ ಒಂದಾಗಿದೆ. ದೂಧಸಾಗರ ಎಂದರೆ 'ಕ್ಷೀರಸಾಗರ'. ಜಲಪಾತ ವಿಶೇಷವಾಗಿ ಮಾನ್ಸೂನ್ ಸಮಯದಲ್ಲಿ ವೀಕ್ಷಿಸಲು ಚೆನ್ನಾಗಿರುತ್ತದೆ. ದೂಧ್‌ಸಾಗರ್ ಜಲಪಾತದ ನೈಜ ಸೌಂದರ್ಯವನ್ನು ಆನಂದಿಸಲು ಒಂದು ಉತ್ತಮ ಮಾರ್ಗವೆಂದರೆ ಜಲಪಾತಕ್ಕೆ ಕಿರು ಚಾರಣ ಮಾಡುವುದು.

ಟ್ರೆಕ್ಕಿಂಗ್ ಮಾಡುವಾಗ, ನೀವು ಹಚ್ಚ ಹಸಿರಿನ ಮಂಜಿನಿಂದ ಆವೃತವಾಗಿರುವ ಕಾಡಿನ ಮೂಲಕ ಹಾದು ಹೋಗಬಹುದು. ನೀವು ಈ ಸಾಹಸಕ್ಕೆ ಸಿದ್ಧರಿಲ್ಲ ಎಂದರೆ ಸ್ಥಳೀಯ ರೈಲುಗಳ ಮೂಲಕ ಜಲಪಾತ ಅನ್ವೇಷಿಸಬಹುದು. ಜಲಪಾತವು ರೈಲು ಮಾರ್ಗದ ಕೆಳಗೆ ಹರಿಯುವುದನ್ನು ನೋಡುವುದೇ ಚೆಂದ.

ಗೋವಾದ ಸ್ಯಾನ್ ಥೋಮ್ ಮ್ಯೂಸಿಯಂ

ಗೋವಾದ ಸ್ಯಾನ್ ಥೋಮ್ ಮ್ಯೂಸಿಯಂ

ಗೋವಾದ ವರ್ಕಾದಲ್ಲಿರುವ ಸ್ಯಾಮ್ ಥೋಮ್ ಮ್ಯೂಸಿಯಂ ಖಂಡಿತವಾಗಿ ನಿಮ್ಮ ಪ್ರವಾಸದ ಪಟ್ಟಿಯಲ್ಲಿರಬೇಕು. ಈ ವಸ್ತುಸಂಗ್ರಹಾಲಯದಲ್ಲಿ ನೀವು ಬಲ್ಬ್‌ಗಳಿಂದ ಸ್ಮಾರ್ಟ್‌ಫೋನ್‌ಗಳವರೆಗಿನ ತಾಂತ್ರಿಕ ಕ್ರಾಂತಿಯ ಪ್ರಯಾಣವನ್ನು ನೋಡಬಹುದು. ಇಲ್ಲಿ ಹಳೆಯ ಕ್ಯಾಮೆರಾಗಳು, ಟೈಪ್ ರೈಟರ್‌ಗಳು, ಗ್ರಾಮಫೋನ್‌ಗಳು, ಗಡಿಯಾರಗಳು ಮತ್ತು ಕಪ್ಪು ಮತ್ತು ಬಿಳಿ ಪ್ರೊಜೆಕ್ಟರ್‌ಗಳು, ಗ್ರ್ಯಾಂಡ್ ಪಿಯಾನೋ (1888 ರಿಂದ ಮತ್ತು ಇನ್ನೂ ಕಾರ್ಯನಿರ್ವಹಿಸುತ್ತಿರುವ ಸ್ಥಿತಿಯಲ್ಲಿ), ಥಾಮಸ್ ಎಡಿಸನ್‌ನಿಂದ ಗ್ರಾಮಫೋನ್ ರೆಕಾರ್ಡ್ ಪ್ಲೇಯರ್.

ಹಳೆಯ ಗಡಿಯಾರಗಳು, ಚಾಕುಕತ್ತರಿಗಳು, ಹೊಲಿಗೆ ಯಂತ್ರಗಳು, ಕಂಟೈನರ್‌ಗಳನ್ನು ಸಹ ಕಾಣಬಹುದು. ಈ ಕಲಾಕೃತಿಗಳು ಗೋವಾದ ಜೀವನಶೈಲಿಯ ಮೇಲೆ ಪೋರ್ಚುಗೀಸ್ ಮತ್ತು ಬ್ರಿಟಿಷ್ ಪ್ರಭಾವವನ್ನು ಪ್ರದರ್ಶಿಸುತ್ತವೆ. ನೀವು ಬೀಚ್ ನೋಡಿ ವಿರಾಮ ತೆಗೆದುಕೊಂಡ ಮೇಲೆ ಸ್ಯಾನ್ ಥೋಮ್ ಮ್ಯೂಸಿಯಂಗೆ ಭೇಟಿ ಕೊಡಬಹುದು.

ಯಶ್ ಶೂಟಿಂಗ್ ಹಬ್‌

ಯಶ್ ಶೂಟಿಂಗ್ ಹಬ್‌

ಗೋವಾ ಕೂಡ ಶೂಟಿಂಗ್ ಹಬ್ ಅನ್ನು ಹೊಂದಿದೆ. ಯಶ್ ಶೂಟಿಂಗ್ ಹಬ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶೂಟರ್‌ಗಳ ಕೌಶಲ್ಯವನ್ನು ನೀವು ಗುರುತಿಸಬಹುದು. ಈ ಸ್ಥಳದಲ್ಲಿ ಏರ್ ರೈಫಲ್‌ಗಳು, ಏರ್ ಪಿಸ್ತೂಲ್‌ಗಳು, ಎಲೆಕ್ಟ್ರಾನಿಕ್ ಟಾರ್ಗೆಟ್ ರನ್ನರ್‌ಗಳು, ಪೈಪ್‌ಸೈಡ್ ಏರ್ ರೈಫಲ್‌ಗಳನ್ನು ಒಲಂಪಿಕ್ಸ್‌ನಲ್ಲಿ ಬಳಸಲಾಗುತ್ತದೆ. ಈ ಸ್ಥಳಗಳ ಹೊರತಾಗಿ, ನೀವು ಅನ್ವೇಷಿಸಲು ಗೋವಾದಲ್ಲಿ ಅನೇಕ ಸ್ಥಳಗಳು, ಪ್ರವಾಸಿ ಚಟುವವಟಿಕೆಗಳಿವೆ. ಹಿನ್ನೀರು, ದ್ವೀಪ, ಗುಹೆಗಳು, ಕಯಾಕಿಂಗ್, ವನ್ಯಜೀವಿ ಅಭಯಾರಣ್ಯಗಳು, ಪ್ರತಿ ಪ್ರಕೃತಿ ಪ್ರಿಯರಿಗೆ ಶ್ರೀಮಂತ ಅನುಭವಗಳನ್ನು ನೀಡುತ್ತದೆ.

ಬೇಕಾದರೆ ನೀವು ಗೋವಾದ ಗ್ರಾಮಾಂತರ ಪ್ರದೇಶಗಳಲ್ಲಿ ನಿಧಾನವಾಗಿ ಚಾಲನೆ ಮಾಡಿ. ದ್ವೀಪ ಜೀವನ ಮತ್ತು ಗೋವಾದ ಹಳೆಯ ಪಟ್ಟಣಗಳನ್ನು ಅನ್ವೇಷಿಸಿ. ನೀವು ಹಳ್ಳಿಗಳಲ್ಲಿ ಒಂದು ದಿನ ಅಥವಾ ಎರಡು ದಿನಗಳನ್ನು ಕಳೆಯಬಹುದು. ಇಲ್ಲಿ ನೀವು ಗೋವಾ ಕಡಲತೀರಗಳಿಗಿಂತ ಹೆಚ್ಚಿನ ಆನಂದ ಆನಂದಿಸಬಹುದು. ಮತ್ತೇಕೆ ತಡ, ನಿಮ್ಮ ಬ್ಯಾಗ್ ಪ್ಯಾಕ್ ಮಾಡಿ, ಗೋವಾವನ್ನು ಅನ್ವೇಷಿಸಲು ಪ್ಲ್ಯಾನ್ ಮಾಡಿ. ನಂತರ ನೀವೇ ಹೇಳುವಿರಿ ಗೋವಾದಲ್ಲಿ ನಿಮ್ಮ ನೆಚ್ಚಿನ ಸ್ಥಳ ಯಾವುದೆಂದು...

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+