ಕೆಲವು ಪ್ರವಾಸಿ ಸ್ಥಳಗಳಿಗೆ ಋತುಮಾನಕ್ಕನುಗುಣವಾಗಿ ಭೇಟಿ ನೀಡುವುದರಿಂದ ನಿಮಗೇ ಹೆಚ್ಚು ಲಾಭ. ಈಗ ಮಳೆಗಾಲದ ಸೀಸನ್ ಆಗಿರುವುದರಿಂದ ಈ ಸೀಸನ್ ನಲ್ಲಿ ಹೊರಗಡೆ ಪ್ರಯಾಣ ಮಾಡುವುದು ಒಂದು ರೀತಿ ಮಜಾ. ಇನ್ನು ಈ ಸೀಸನ್‌ನಲ್ಲಿ ಹನಿಮೂನ್ ಪ್ಲಾನ್ ಮಾಡುತ್ತಿರುವ ಜೋಡಿಗಳು, ಸಾಹಸಿ ಪ್ರಿಯರು, ಪ್ರಕೃತಿ ಪ್ರೇಮಿಗಳು ನೀವಾಗಿದ್ದರೆ ಕೂರ್ಗ್‌ಗೆ ಹೋಗುವುದು ಖಂಡಿತವಾಗಿಯೂ ಒಳ್ಳೆಯದು. ಏಕೆಂದರೆ ಮಳೆಗಾಲದಲ್ಲಿ ಕೊಡಗು ಅಥವಾ ಕೂರ್ಗ್ ನಿಮಗೆ ಸಾಕಷ್ಟು ಉಲ್ಲಾಸ, ಉತ್ಸಾಹ ನೀಡುತ್ತದೆ.
ಕೊಡಗು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ. ನೀವು ವರ್ಷದ ಯಾವುದೇ ಸಮಯದಲ್ಲಿ ಕೊಡಗಿಗೆ ಭೇಟಿ ನೀಡಬಹುದು. ಆದರೆ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದರಿಂದ ಹಚ್ಚ ಹಸಿರಿನ ಜೊತೆಗೆ ಸುಂದರವಾದ ಚಿಕ್ಕ ಚಿಕ್ಕ ಜಲಪಾತಗಳನ್ನು ಕಣ್ತುಂಬಿಕೊಳ್ಳಬಹುದು. ಆದರೆ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವಾಗ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಾಗಾಗಿ ಇಂದು ಈ ಲೇಖನದಲ್ಲಿ ನಾವು ಕೂರ್ಗ್‌ಗೆ ಭೇಟಿ ನೀಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳ ಬಗ್ಗೆ ಹೇಳುತ್ತಿದ್ದೇವೆ.

ಹವಾಮಾನದ ಬಗ್ಗೆ ಎಚ್ಚರವಿರಲಿ
ಮಳೆಗಾಲದ ಸಮಯದಲ್ಲಿ ಕೊಡಗಿಗೆ ಭೇಟಿ ನೀಡುವುದು ಖಂಡಿತವಾಗಿಯೂ ಒಳ್ಳೆಯದು. ಕೊಡಗಿನ ಹವಾಮಾನವು ಯಾವಾಗಲೂ ಆಹ್ಲಾದಕರವಾಗಿರುತ್ತದೆ. ಮಳೆಗಾಲದಲ್ಲಿ ಇಲ್ಲಿನ ಹಸಿರು ಇನ್ನಷ್ಟು ಹೆಚ್ಚುತ್ತದೆ, ಇದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೇಸಿಗೆಯ ಋತುವಿನಲ್ಲಿಯೂ ಇಲ್ಲಿ ಉಷ್ಣತೆಯು ಹೆಚ್ಚಿರುವುದಿಲ್ಲ, ಇದು ವರ್ಷವಿಡೀ ಪ್ರವಾಸೋದ್ಯಮಕ್ಕೆ ಸೂಕ್ತವಾದ ಸ್ಥಳವಾಗಿದೆ. ಆದರೆ ಮನೆಯಿಂದ ಹೊರಡುವ ಮೊದಲು ಇಂಟರ್ನೆಟ್ ಸಹಾಯದಿಂದ ಹವಾಮಾನದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ. ಏಕೆಂದರೆ ಮಳೆಗಾಲದಲ್ಲಿ ಮಡಿಕೇರಿಯಲ್ಲಿ ಭಾರೀ ಮಳೆಯಾಗುತ್ತದೆ, ಇದರಿಂದಾಗಿ ರಸ್ತೆಗಳನ್ನು ಕ್ಲೋಸ್ ಮಾಡಬಹುದು ಅಥವಾ ನೀವು ಇತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಬೆಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಮ್ಮ ಪ್ರವಾಸವನ್ನು ಯೋಜಿಸುವ ಮೊದಲು ಹವಾಮಾನದ ಅಪ್‌ಡೇಟ್ಸ್ ತಿಳಿಯುವುದನ್ನು ಮರೆಯದಿರಿ.

ಯಾವ ಬಟ್ಟೆಗಳು ಸೂಕ್ತ?
ಮಳೆಗಾಲದಲ್ಲಿ ಕೂರ್ಗ್‌ಗೆ ಭೇಟಿ ನೀಡಲು ನೀವು ನಿರ್ಧರಿಸಿದ್ದರೆ, ನಿಮ್ಮ ಬಟ್ಟೆಗಳನ್ನು ಪ್ಯಾಕಿಂಗ್ ಮಾಡುವಾಗ ವಿಶೇಷ ಗಮನ ನೀಡಬೇಕು. ಹಗುರವಾದ ರೇನ್‌ಕೋಟ್ ಅಥವಾ ಪೊಂಚೊ, ವಾಟರ್ ಪ್ರೂಫ್ ಬೂಟುಗಳು ಮತ್ತು ಬಹಳ ಬೇಗ ಒಣಗುವ ಬಟ್ಟೆಗಳನ್ನು ಪ್ಯಾಕ್ ಮಾಡುವುದು ಉತ್ತಮ. ಇದಲ್ಲದೆ, ಮಳೆಗಾಲದಲ್ಲಿ ಮರೆಯದೆ ಛತ್ರಿಗಳನ್ನು ತೆಗೆದುಕೊಂಡು ಹೋಗುವುದು ತುಂಬಾ ಉಪಯುಕ್ತವಾಗಿದೆ.
ಏನೆಲ್ಲಾ ನೋಡಬಹುದು?
ಕೂರ್ಗ್‌ನಲ್ಲಿ ನೋಡುವುದು ಬಹಳಷ್ಟು ಇದೆ, ಆದರೆ ನೀವು ಟ್ರೆಕ್ಕಿಂಗ್ ಇತ್ಯಾದಿಗಳನ್ನು ಇಷ್ಟಪಡುತ್ತಿದ್ದರೆ ಮಳೆಗಾಲದಲ್ಲಿ ಅಲ್ಲಿಗೆ ಹೋಗುವುದು ಸೂಕ್ತವಲ್ಲ. ಮಳೆಗಾಲದಲ್ಲಿ ಭಾರೀ ಮಳೆಯ ಕಾರಣ, ಟ್ರೆಕ್ಕಿಂಗ್‌ನಂತಹ ಹೊರಾಂಗಣ ಚಟುವಟಿಕೆಗಳನ್ನು ಕೈಗೊಳ್ಳುವುದು ಸುರಕ್ಷಿತವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ನಿಮ್ಮ ಕೂರ್ಗ್ ಪ್ರವಾಸವನ್ನು ಸೀಸನ್‌ಗೆ ಅನುಗುಣವಾಗಿ ಯೋಜಿಸಿದರೆ ಉತ್ತಮ. ಆಗ ಕಾಫಿ ತೋಟಗಳಿಗೆ ಭೇಟಿ ನೀಡುವುದು, ಜಲಪಾತಗಳನ್ನು ನೋಡುವುದು, ವಸ್ತುಸಂಗ್ರಹಾಲಯಗಳಿಗೆ ಭೇಟಿ ಕೊಡುವುದು ಮತ್ತು ಸ್ಥಳೀಯ ಮಾರುಕಟ್ಟೆಗಳತ್ತ ಹೋಗುವುದಕ್ಕೆ ನೀವು ಹೆಚ್ಚು ಗಮನಹರಿಸಬಹುದು.

ಸ್ಥಳೀಯ ಚಾಲಕರನ್ನು ನೇಮಿಸಿಕೊಳ್ಳಿ..
ಮಳೆಗಾಲದಲ್ಲಿ ಕೂರ್ಗ್‌ಗೆ ಭೇಟಿ ನೀಡುವಾಗ ನೀವು ಯಾವುದೇ ಸಮಸ್ಯೆ ಬರಬಾರದೆಂದು ಬಯಸಿದರೆ, ನೀವು ಸ್ಥಳೀಯ ಚಾಲಕರನ್ನು ನೇಮಿಸಿಕೊಳ್ಳಬೇಕು. ವಾಸ್ತವವಾಗಿ, ಮಳೆಗಾಲದಲ್ಲಿ, ಕೂರ್ಗ್ ರಸ್ತೆಗಳು ಜಾರಬಹುದು, ಇದರಿಂದ ಚಾಲನೆಗೆ ಸಾಕಷ್ಟು ಅಪಾಯಕಾರಿಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ಸ್ಥಳೀಯ ಚಾಲಕನ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಅವರು ಅಲ್ಲಿನ ಪ್ರದೇಶ ಮತ್ತು ರಸ್ತೆ ಪರಿಸ್ಥಿತಿಗಳ ಬಗ್ಗೆ ತಿಳಿದಿರುತ್ತಾರೆ.
ಪ್ರಮುಖ ವಸ್ತುಗಳನ್ನು ಮರೆಯದಿರಿ
ನೀವು ಮಳೆಗಾಲದಲ್ಲಿ ಕೂರ್ಗ್‌ಗೆ ಭೇಟಿ ನೀಡಲಿರುವುದರಿಂದ ಕೆಲವು ಪ್ರಮುಖ ವಸ್ತುಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು. ಮಳೆಯ ಸಾಧನಗಳ ಹೊರತಾಗಿ, ಕೀಟ ನಿವಾರಕ, ಸನ್‌ಸ್ಕ್ರೀನ್ ಮತ್ತು ಪ್ರಥಮ ಚಿಕಿತ್ಸಾ ಕಿಟ್ ಅನ್ನು ಒಯ್ಯಲು ಮರೆಯಬೇಡಿ. ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಮೋಡ ಕವಿದ ದಿನಗಳಲ್ಲೂ ಬಿಸಿಲು ತೀವ್ರವಾಗಿರುತ್ತದೆ. ಆದ್ದರಿಂದ, ನಿಮ್ಮ ಪ್ರವಾಸದ ಸಮಯದಲ್ಲಿ ನಿಮಗೆ ಈ ಎಲ್ಲಾ ಪರಿಕರಗಳು ಬೇಕಾಗಬಹುದು.

ತಲುಪುವುದು ಹೇಗೆ?
ಸಾಹಸ ಪ್ರಿಯರಿಗೆ ಮಳೆಗಾಲ ಅತ್ಯುತ್ತಮ ಸಮಯವಾಗಿದೆ. ವರ್ಷದ ಈ ಸಮಯದಲ್ಲಿ ವಿಮಾನ ಟಿಕೆಟ್‌ಗಳು, ವಸತಿ, ಆಹಾರ ಮತ್ತು ಪ್ರವೇಶ ಟಿಕೆಟ್‌ಗಳು ಅಗ್ಗವಾಗಿರುತ್ತವೆ. ಕೂರ್ಗ್‌ಗೆ ಹತ್ತಿರದ ವಿಮಾನ ನಿಲ್ದಾಣಗಳು ಮಂಗಳೂರು ಮತ್ತು ಬೆಂಗಳೂರು. ಈ ನಗರಗಳಿಂದ ಕೂರ್ಗ್‌ಗೆ ಟ್ಯಾಕ್ಸಿ ಮತ್ತು ಬಸ್ ಸೇವೆಗಳು ಲಭ್ಯವಿದೆ. ಆದರೆ ರಸ್ತೆಯ ಮೂಲಕ ಕೂರ್ಗ್‌ಗೆ ಪ್ರಯಾಣವು ವಿಶೇಷವಾಗಿ ಸುಂದರವಾಗಿರುತ್ತದೆ, ಏಕೆಂದರೆ ನೀವು ದಾರಿಯಲ್ಲಿ ಅದ್ಭುತವಾದ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ಕೊಡಗಿನ ಸೌಂದರ್ಯ ಮತ್ತು ಪ್ರಶಾಂತತೆ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಅಷ್ಟೇ ಏಕೆ ನಿಮ್ಮ ಭೇಟಿಯನ್ನು ನೀವು ಯಾವಾಗಲೂ ನೆನಪಿಸಿಕೊಳ್ಳುತ್ತೀರಿ. ನೀವು ನಿಸರ್ಗ ಪ್ರೇಮಿಯಾಗಿರಲಿ ಅಥವಾ ಸಾಹಸ ಪ್ರಿಯರಾಗಿರಲಿ, ಕೂರ್ಗ್ ಎಲ್ಲರಿಗೂ ವಿಶೇಷವೇ.


Click it and Unblock the Notifications

















