Search
  • Follow NativePlanet
Share
» »ಬಿಳಿ ಹುಲಿ ನೋಡ್ಬೇಕಾ... ಹಾಗಾದ್ರೆ ಇಲ್ಲಿಗೆ ಹೋಗಿ

ಬಿಳಿ ಹುಲಿ ನೋಡ್ಬೇಕಾ... ಹಾಗಾದ್ರೆ ಇಲ್ಲಿಗೆ ಹೋಗಿ

By Manjula Balaraj Tantry

ಬಿಳಿ ಹುಲಿ ಕೂಡಾ ಪ್ರಕೃತಿಯ ಅದ್ಬುತಗಳಲ್ಲೊಂದಾಗಿದ್ದು ಖಂಡಿತವಾಗಿಯೂ ಪ್ರಶಂಸನೀಯವಾದುದಾಗಿದೆ. ಬ್ಲೀಚ್ ಮಾಡಲಾದ ಹುಲಿಯೆಂದೂ ಕೂಡಾ ಇದನ್ನು ಕರೆಯಲಾಗುತ್ತದೆ. ಈ ಹುಲಿಯು ಬಿಳಿಯ ರೋಮಗಳನ್ನು ಹೊಂದಿದೆ ಮತ್ತು ಕೆಂಪು ಮತ್ತು ಕಿತ್ತಳೆಬಣ್ಣ ಮಿಶ್ರಿರ ರೋಮಗಳನ್ನು ಹೊಂದಿರುವ ಹುಲಿಗಳಿಗಿಂತ ಇವು ಹೆಚ್ಚು ಸುಂದರವಾಗಿ ಸೌಮ್ಯವಾಗಿ ಕಾಣುತ್ತವೆ.

ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ.

ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ.

PC- Chi King

ನಿಸ್ಸಂದೇಹವಾಗಿಯೂ , ಸುಂದರ್ ಬನ್ಸ್ ಜಗತ್ತಿನ ಒಂದು ಅತ್ಯಂತ ಶ್ರೀಮಂತ ಪ್ರದೇಶವೆನಿಸಿದೆ ಮತ್ತು ಇದು ಜಗತ್ತಿನ ನೈಸರ್ಗಿಕ ಅಚ್ಚರಿ ಎಂದೂ ಕೂಡ ಕರೆಯಲಾಗುತ್ತದೆ. ಮ್ಯಾಂಗ್ರೋವ್ ಕಾಡುಗಳಿಂದ ಆವೃತವಾದ ದೊಡ್ಡ ಕರಾವಳಿ ಪ್ರದೇಶವಾಗಿದ ಸುಂದರ್ ಬನ್ಸ್ ತನ್ನಲ್ಲಿ ಬಿಳಿ ಹುಲಿಗಳ ಸೌಂದರ್ಯವನ್ನು ಹೊಂದದೇ ಇರಲು ಅಸಾಧ್ಯವೇ ಸರಿ. ಸುಂದರ್ ಬನ್ಸ್ ನ ಅನ್ವೇಷಣೆಯ ಬಗ್ಗೆ ಓದೋಣ. ಈ ರಾಷ್ಟ್ರೀಯ ಉದ್ಯಾನವನವು ಹುಲಿಗಳ ಸಂರಕ್ಷಿತ ಉದ್ಯಾನವನವಾಗಿದ್ದು ಇದು ಅನೇಕ ಬಂಗಾಳಿ ಹುಲಿಗಳಿಗೆ ನೆಲೆಯಾಗಿದೆ. ಈ ದಟ್ಟವಾದ ಕಾಡಿನಲ್ಲಿ ಬಿಳಿ ಹುಲಿಗಳೂ ಕೂಡಾ ಕಂಡುಬರುತ್ತವೆ. ಆದುದರಿಂದ ಇದು ಪಶ್ಚಿಮ ಬಂಗಾಳದಲ್ಲಿ ಅಪರೂಪದ ನೈಸರ್ಗಿಕ ಸೌಂದರ್ಯವನ್ನು ಕಾಣಬಹುದಾದ ಸೂಕ್ತ ಸ್ಥಳವಾಗಿದೆ.

ಮುಕುಂದ್ ಪುರ್ ವನ್ಯಜೀವಿ ಧಾಮ

ಮುಕುಂದ್ ಪುರ್ ವನ್ಯಜೀವಿ ಧಾಮ

PC-Guety

ಸುಮಾರು 25 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿರುವ ಇದು ಮಧ್ಯ ಪ್ರದೇಶದ ರೇವಾದಿಂದ ಸುಮಾರು 20 ಕಿಮೀ ದೂರದಲ್ಲಿದೆ. ಮುಕುಂದ್ ಪುರ್ ವನ್ಯಜೀವಿಧಾಮವು ಜಗತ್ತಿನ ಮೊದಲ ಬಿಳಿ ಹುಲಿ ಸಂರಕ್ಷಿತ ವನ್ಯ ಜೀವಿ ಧಾಮವಾಗಿದ್ದು ಇದು ಬಿಳಿ ಹುಲಿಗಳ ಸಂತಾನದ ಸಂರಕ್ಷಣೆಗೆಂದೇ ವಿಶೇಷವಾಗಿ ರಚನೆಯಾದ ವನ್ಯಜೀವಿಧಾಮವಾಗಿದೆ. ಮಧ್ಯ ಪ್ರದೇಶವು 10 ವಿಷಯಗಳಲ್ಲಿ ಪ್ರಸಿದ್ದವಾಗಿದೆ. 1951ರಲ್ಲಿ ರೇವಾದ ಮಹಾರಾಜ ಮಾರ್ತಾಂಡ್ ಸಿಂಗ್ ಅವರು ಮುಕುಂದ್ ಪುರ್ ಪ್ರದೇಶದಲ್ಲಿ ಮೊದಲ ಬಾರಿಗೆ ಬಿಳಿ ಹುಲಿಯನ್ನು ಸೆರೆಹಿಡಿದರು ಎಂದು ಹೇಳಲಾಗುತ್ತದೆ. ಆದರೆ ಕೆಲವು ದಶಕಗಳಿಂದ ಇಲ್ಲಿ ಅಥವಾ ಇದರ ಸುತ್ತಮುತ್ತ ಯಾವುದೇ ಬಿಳಿ ಹುಲಿಗಳನ್ನು ಪತ್ತೆ ಹಚ್ಚಿಲ್ಲವಾದರೂ ಇಲ್ಲಿಯ ಸ್ಥಳೀಯರು ಇನ್ನೂ ಇದು ಅನೇಕ ಬಿಳಿ ಹುಲಿಗಳ ನೆಲೆಯೆಂದೇ ನಂಬುತ್ತಾರೆ.

ಬಂಧಾವ್ ಘರ್ ರಾಷ್ಟ್ರೀಯ ಉದ್ಯಾನವನ

ಬಂಧಾವ್ ಘರ್ ರಾಷ್ಟ್ರೀಯ ಉದ್ಯಾನವನ

PC- Florian.Arnd

ಮಧ್ಯಪ್ರದೇಶದಲ್ಲಿರುವ ಬಂಧಾವ್ ಘರ್ ರಾಷ್ಟ್ರೀಯ ಉದ್ಯಾನವನವು ಇನ್ನೊಂದು ಸಂರಕ್ಷಿತ ಪ್ರದೇಶವಾಗಿದ್ದು ಇದರ ರಚನೆಯಾದಾಗಿನಿಂದಲೂ ಅನೇಕ ತಳಿಯ ಹುಲಿಗಳಿಗೆ ನೆಲೆಯಾಗಿದೆ. ಈ ಅರಣ್ಯವನ್ನು ಭಾರತದಲ್ಲಿಯ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಸ್ಥಳವೆಂದು ಕರೆಯಲಾಗುತ್ತದೆ ಆದುದರಿಂದ ಹುಲಿಗಳ ವಿಕ್ಷಣೆಗೆ ಜಂಗಲ್ ಸಫಾರಿ ಮಾಡಲು ನೋಡುತ್ತಿರುವಿರಾದಲ್ಲಿ ಮಧ್ಯಪ್ರದೇಶದಲ್ಲಿರುವ ಈ ಸ್ಥಳವು ಖಚಿತವಾಗಿಯೂ ಒಂದು ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಇನ್ನಿತರ ವೈವಿಧ್ಯಮಯ ವನ್ಯಜೀವಿಗಳನ್ನು ಕಾಣುವುದಲ್ಲದೆ ಬಿಳಿಹುಲಿಗಳ ಸೌಂದರ್ಯತೆಯನ್ನೂ ಕೂಡ ನೋಡಬಹುದಾಗಿದೆ.

ನೀಲಗಿರಿ ಬೆಟ್ಟಗಳು

ನೀಲಗಿರಿ ಬೆಟ್ಟಗಳು

PC-FlickrLickr

ಪಶ್ಚಿಮ ಘಟ್ಟಗಳ ಒಂದು ಮಹತ್ವಪೂರ್ಣ ಭಾಗವೆನಿಸಿರುವ ನೀಲಗಿರಿ ಬೆಟ್ಟ ಗಳ ಪ್ರದೇಶಾವು ಖಂಡಿತವಾಗಿಯೂ ವೈವಿಧ್ಯಮಯ ವಾದ ಹಾಗೂ ವಿವಿಧ ರೀತಿಯ ವನ್ಯಜೀವಿಗಳನ್ನು ಒಳಗೊಂಡ ಭಾರತದ ಒಂದು ಶ್ರೀಮಂತ ಪ್ರದೇಶವೆನಿಸಿದೆ. ಇಲ್ಲಿ ಹರಡಿರುವ ಗಡಿಗಳಲ್ಲಿ ಬಿಳಿ ಹುಲಿ ಪತ್ತೆ ಹಚ್ಚಿದ ವಿಷಯವು ನೀಲಗಿರಿಯ ಸೌಂದರ್ಯತೆಯನ್ನು ಇನ್ನೂ ಹೆಚ್ಚಿಸಿವೆ. ಪಶ್ಚಿಮ ಘಟ್ಟಗಳಲ್ಲಿ ಭೇಟಿ ನೀಡಲು ನಂಬಲಸಾಧ್ಯವಾದ ಸ್ಥಳವಾದ ನೀಲಗಿರಿ ಬೆಟ್ಟಗಳಲ್ಲಿ ಬಿಳಿ ಹುಲಿಗಳ ಸೌಂದರ್ಯವನ್ನು ಸೆರೆಹಿಡಿಯಲು ಸುಲಭವಾದ ಕೆಲಸವಲ್ಲವಾದರೂ, ಇಲ್ಲಿ ಎಲ್ಲಾ ರೀತಿಯ ಸಸ್ಯವರ್ಗ ಮತ್ತು ವನ್ಯಜೀವಿಗಳ ಸಮೃದ್ಧತೆಯಿಂದಾಗಿ ಇದು ಇನ್ನೂ ಭೇಟಿ ನೀಡಬಹುದಾದ ಸ್ಥಳವಾಗಿದೆ. ಹೀಗೆ ಭೇಟಿ ಕೊಡುವಾಗ ನೀವೇನಾದರೂ ಅದೃಷ್ಟವಂತರಾಗಿದ್ದಲ್ಲಿ ಇಲ್ಲಿ ಬಿಳಿಹುಲಿಯನ್ನು ಕೂಡಾ ಕಾಣಬಹುದಾಗಿದೆ.

ಕಾಝೀ ರಂಗ ರಾಷ್ಟ್ರೀಯ ಉದ್ಯಾನವನ

ಕಾಝೀ ರಂಗ ರಾಷ್ಟ್ರೀಯ ಉದ್ಯಾನವನ

PC-ConservatorsCenter

ಸುಂದರ ರಾಜ್ಯವಾದ ಅಸ್ಸಾಂ ನಲ್ಲಿ ನೆಲೆಸಿರುವ ಕಾಝೀರಂಗ ಉದ್ಯಾನವನವು ಒಂಟಿ ಕೊಂಬಿನ ಖಡ್ಗಮೃಗಗಳನ್ನು ಸಂರಕ್ಷಿಸುವುದಕ್ಕೆ ಮತ್ತು ಅವುಗಳ ಸಂಖ್ಯೆಯಲ್ಲಿ ಅಭಿವೃದ್ದಿ ಪಡಿಸುವುದಕ್ಕೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿ ಕೆಲವರಿಗೆ ಗೊತ್ತಿಲ್ಲದೆ ಇರುವ ವಿಷಯವೇನೆಂದರೆ ಇದು ಅನೇಕ ತಳಿಯ ಹುಲಿಗಳನ್ನು ಸಂರಕ್ಷಿತ ಕೇಂದ್ರವಾಗಿದೆ ಮತ್ತು ಅವುಗಳನ್ನು ಭೇಟೆಯಾಡುವುದನ್ನು ನಿಷೇಧಿಸುತ್ತಾ ಅವುಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡುತ್ತಿದೆ. ಈ ರಾಷ್ಟ್ರೀಯ ಉದ್ಯಾನವನದಲ್ಲಿ ವಾಸಿಸುವ ಈ ಅಪರೂಪದ ಜಾತಿಗಳಲ್ಲಿ ಬಿಳಿ ಹುಲಿ ಒಂದಾಗಿದೆ. ಆದರೂ ಕಾಝೀರಂಗದಲ್ಲಿ ಬಿಳಿ ಹುಲಿಗಳ ಅಸ್ತಿತ್ವವು ಇನ್ನೂ ನಿಗೂಢವಾಗಿದೆ. ಇಲ್ಲಿಯ ಸ್ಥಳೀಯರ ಹೇಳಿಕೆಯ ಪ್ರಕಾರ ಉದ್ಯಾನವನದಲ್ಲಿ ಅಥವಾ ಸುತ್ತಮುತ್ತಲಿನಲ್ಲಿ ಬಿಳಿ ಹುಲಿಗಳನ್ನು ಪತ್ತೆ ಹಚ್ಚಿರುವುದು ಅತೀ ವಿರಳವೆಂಬುದಾಗಿ ಹೇಳಲಾಗುತ್ತದೆ. ಆದುದರಿಂದ ಅಸ್ಸಾಂ ನಲ್ಲಿ ಬಿಳಿ ಹುಲಿಯನ್ನು ನೋಡಬೇಕಾದಲ್ಲಿ ಕಾಝೀರಂಗ ರಾಷ್ಟ್ರೀಯ ಉದ್ಯಾನವನವು ನಿಮಗೆ ಒಂದು ಏಕೈಕ ಮತ್ತು ಉತ್ತಮವಾದ ಆಯ್ಕೆಯಾಗಿದೆ.

More News

Read more about: india national park
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+