Search
  • Follow NativePlanet
Share
» »ಬೆಂಗಳೂರಿನಲ್ಲಿದೆ ಟಿಪ್ಪುವಿನ ಅರಮನೆ

ಬೆಂಗಳೂರಿನಲ್ಲಿದೆ ಟಿಪ್ಪುವಿನ ಅರಮನೆ

ಮೈಸೂರು ಆಡಳಿತಗಾರ ಟಿಪ್ಪು ಸುಲ್ತಾನ್ ದಕ್ಷ ಆಡಳಿತಕಾರ, ನಿಪುಣ, ರಾಜತಾಂತ್ರಿಕನಾಗಿದ್ದವನು. ಈತ ತನ್ನ ರಾಜ್ಯಭಾರದ ಅವಧಿಯಲ್ಲಿ ಹಲವಾರು ಕೋಟೆಗಳು, ಅರಮನೆಗಳನ್ನು ನಿರ್ಮಿಸಿದ್ದಾನೆ. ಹಾಗೇಯೆ ಬೇಸಿಗೆಯಲ್ಲಿ ಹಿತವಾಗಿರಲು ಒಂದು ಅದ್ಬುತವಾದ ಅರಮನೆಯ

ಟಿಪ್ಪು ಸುಲ್ತಾನ್ ಒಬ್ಬ ದಕ್ಷ ಆಡಳಿತಕಾರ, ನಿಪುಣ, ರಾಜತಾಂತ್ರಿಕನಾಗಿದ್ದವನು. ಈತ ತನ್ನ ರಾಜ್ಯಭಾರದ ಅವಧಿಯಲ್ಲಿ ಹಲವಾರು ಕೋಟೆಗಳು, ಅರಮನೆಗಳನ್ನು ನಿರ್ಮಿಸಿದ್ದಾನೆ. ಹಾಗೇಯೆ ಬೇಸಿಗೆಯಲ್ಲಿ ಹಿತವಾಗಿರಲು ಒಂದು ಅದ್ಬುತವಾದ ಅರಮನೆಯನ್ನು ಟಿಪ್ಪು ಸುಲ್ತಾನ್ ನಿರ್ಮಿಸಿದ್ದಾನೆ. ಆ ಸುಂದರವಾದ ಅರಮನೆ ಬೆಂಗಳೂರಿನ ಚಾಮರಾಜ ನಗರದಲ್ಲಿದೆ. ಬೆಂಗಳೂರಿನಲ್ಲಿದ್ದು ಕೆಲವೇ ಕೆಲವು ಪ್ರವಾಸಿ ತಾಣಗಳಿಗೆ ನೀವು ಭೇಟಿ ನೀಡಿರುತ್ತಿರಾ ಏಕೆಂದರೆ ನಿಮಗೆ ನಿರ್ದಿಷ್ಟವಾದ ಮಾಹಿತಿ ಇಲ್ಲದೆ ಇರುವುದೇ ಇದಕ್ಕೆ ಕಾರಣವಿರಬಹುದು ಅಥವಾ ಸಮಯದ ಅಭಾವವಿರಬಹುದು.

ಟಿಪ್ಪುವಿನ ಬೇಸಿಗೆ ಅರಮನೆ

PC: Akshatha Vinayak

ವಾರಾಂತ್ಯದಲ್ಲಾದರೂ ಒಮ್ಮೆ ಬೆಂಗಳೂರಿನಲ್ಲಿರುವ ಬೇಸಿಗೆ ಅರಮನೆಗೆ ಒಮ್ಮೆ ಭೇಟಿ ನೀಡಿ. ಪ್ರಸ್ತುತ ಲೇಖನದಲ್ಲಿ ಟಿಪ್ಪು ಸುಲ್ತಾನನು ನಿರ್ಮಿಸಿರುವ ಬೇಸಿಗೆ ಅರಮನೆಯ ಬಗ್ಗೆ ತಿಳಿಯೋಣ.

ಈ ಅರಮನೆಯನ್ನು ಹೈದರಾಲಿಯ ಕಾಲದಲ್ಲಿ 1791 ರಲ್ಲಿ ನಿರ್ಮಾಣ ಪ್ರಾರಂಭವಾಯಿತು. ಈ ಅರಮನೆಯನ್ನು ತೇಗದ ಮರದಿಂದ ಅದ್ಭುತವಾಗಿ ಕಟ್ಟಲಾಗಿದೆ. ಈ ಅರಮನೆಯ ವಾಸ್ತುಶಿಲ್ಪ ಶೈಲಿಯು ಇಸ್ಲಾಮಿಕ್ ಶೈಲಿಯಲ್ಲಿದ್ದು ಹಲವಾರು ಸ್ತಂಭಗಳಿಂದ ಅತ್ಯಂತ ಮನೋಹರವಾಗಿ ನಿರ್ಮಿಸಲಾಗಿದೆ. ಈ ಅರಮನೆಯಲ್ಲಿ ಟಿಪ್ಪು ಸುಲ್ತಾನನ ದರ್ಬಾರ್ ಕೂಡ ಇದೆ. ಈ ಸುಂದರವಾದ ಅರಮನೆಯ ಮುಂದೆ ಹಸಿರಿನಿಂದ ಕೂಡಿರುವ ಉದ್ಯಾನವನವಿದೆ. ಅರಮನೆಯ ಮುಂಭಾಗವನ್ನು ತೋಟಗಾರಿಕೆ ಇಲಾಖೆಯು ನಿರ್ವಹಿಸುತ್ತಿದೆ. ಹಾಗೇಯೆ ಟಿಪ್ಪು ಸುಲ್ತಾನನ ಹಲವಾರು ಚಾರಿತ್ರಿಕ ಇತಿಹಾಸವನ್ನು ಬಿಂಬಿಸುವ ಕಲಾಚಿತ್ರಗಳಿವೆ.

ಉದ್ಯಾನವನ

PC: Akshatha Vinayak

ಬೇಸಿಗೆ ಅರಮನೆಯ ಬಳಿ ಶ್ರೀ ವೆಂಕಟರಮಣನ ದೇವಾಲಯ ಕೂಡ ಇದೆ. ಅರಮನೆ ನೋಡಲು ಒಂದು ಅಂತಸ್ತಿನ ಹಾಗೆ ಕಂಡರೂ ಒಳಗೆ ಹೊಕ್ಕರೆ ಅದು ಎರಡು ಅಂತಸ್ತಿನದ್ದಾಗಿದೆ. ಇಲ್ಲಿನ ಸ್ತಂಭಗಳ ನಡುವೆ ಇಂಡೋ-ಇಸ್ಲಾಮಿಕ್ ಶೈಲಿಯ ಅರ್ಧವರ್ತುಲಗಳ ಕಮಾನುಗಳನ್ನು ಕಾಣಬಹುದು. ಸುಮಾರು 160 ಸ್ತಂಭಗಳಿದ್ದು, ಕಂದು ಹಾಗೂ ಹಳದಿ ಬಣ್ಣದ ಲೇಪನದಿಂದ ಸುಂದರಗೊಳಿಸಲಾಗಿದೆ. ಇಂತಹ ಸುಂದರವಾದ ಅರಮನೆ ಒಮ್ಮೆ ನೋಡಲೇಬೇಕು ಅಲ್ಲವೇ?

ಟಿಪ್ಪುವಿನ ಅರಮನೆ

PC: Brunda Nagaraj

ಪ್ರವೇಶ ಶುಲ್ಕ
ಟಿಪ್ಪುವಿನ ಬೇಸಿಗೆ ಅರಮನೆಯ ಒಳಗೆ ಪ್ರವೇಶ ಶುಲ್ಕವಾಗಿ 15 ರೂ ಪಾವತಿಸಬೇಕಾಗುತ್ತದೆ.

ಪ್ರವೇಶ ಸಮಯ
ಪ್ರವಾಸಿಗರಿಗೆ ಈ ಸುಂದರವಾದ ಬೇಸಿಗೆ ಅರಮನೆಯ ವೀಕ್ಷಣೆಗಾಗಿ ಕರ್ನಾಟಕ ಸರ್ಕಾರವು ಬೆಳಿಗ್ಗೆ 8;30 ರಿಂದ ಸಂಜೆ 5;30 ರವರೆಗೆ ಅನುಮತಿ ನೀಡಿದೆ.

 ಟಿಪ್ಪುವಿನ ಅರಮನೆ

PC: Akshatha Vinayak

ಬೇಸಿಗೆ ಅರಮನೆಯ ಇರುವುದೆಲ್ಲಿ?
ಈ ಅರಮನೆ ಇರುವುದು ಮಹಾನಗರಿ ಬೆಂಗಳೂರಿನ ಚಾಮರಾಜನಗರದ ಅಲ್‍ಬರ್ಟ ವಿಕ್ಟೋರಿಯಾ ರಸ್ತೆಯಲ್ಲಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+