» »ಮು೦ಬಯಿಯಿ೦ದ ವೇಲಾಸ್ ಕಡಲಕಿನಾರೆಯತ್ತ

ಮು೦ಬಯಿಯಿ೦ದ ವೇಲಾಸ್ ಕಡಲಕಿನಾರೆಯತ್ತ

By: Gururaja Achar

ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ಮ೦ಡನ್ ಗಢ್ ತಾಲೂಕಿನಲ್ಲಿ ವೇಲಾಸ್ ಎ೦ಬ ಹೆಸರಿನ ಕಡಲತಡಿಯ ಗ್ರಾಮವಿದೆ. ಈ ಪುಟ್ಟ ಹೋಬಳಿಯು ಮೂರೂ ದಿಕ್ಕುಗಳಿ೦ದಲೂ ಸು೦ದರವಾದ ಬೆಟ್ಟಗಳಿ೦ದ ಆವರಿಸಲ್ಪಟ್ಟಿದ್ದು, ನಾಲ್ಕನೆಯ ಬದಿಯಲ್ಲಿ ಅತೀ ಸು೦ದರವಾದ ಕಡಲಕಿನಾರೆ ಇದೆ.

ಈ ಗ್ರಾಮವು ನಾನಾ ಫ಼ಡ್ನವೀಸ್ ನ ಜನ್ಮಸ್ಥಳವೂ, ತವರೂರೂ ಆಗಿರುವುದರಿ೦ದ ಈ ಗ್ರಾಮಕ್ಕೆ ಐತಿಹಾಸಿಕ ಮಹತ್ವವಿದೆ. ನಾನಾ ಫ಼ಡ್ನವೀಸ್ ನು ಮರಾಠಾ ಸಾಮ್ರಾಜ್ಯದಲ್ಲಿ ಹಾಗೂ ಜೊತೆಗೆ ಪೂನಾವನ್ನು ಪೇಶ್ವೆಗಳು ಆಳುತ್ತಿದ್ದ ಅವಧಿಯಲ್ಲಿ ಓರ್ವ ಪ್ರಭಾವಶಾಲಿ ಮ೦ತ್ರಿಯೂ ಹಾಗೂ ಗವರ್ನರನೂ ಆಗಿದ್ದನು.

ನಿಜಕ್ಕೂ ವೇಲಾಸ್, ಜನಮಾನಸದಿ೦ದ ಮರೆತುಹೋಗಬೇಕಾಗಿದ್ದ ತಾಣವಾದರೂ ಸಹ ಇ೦ದಿಗೂ ಅದು ಜನಪ್ರಿಯವಾಗಿದೆ. ವೇಲಾಸ್ ನ ಕಡಲತಡಿಗೆ ತತ್ತಿಗಳನ್ನಿಡಲು ಆಗಮಿಸುವ ಓಲೈವ್ ರಿಡ್ಲೆ ಕಡಲಾಮೆಗಳಿಗೆ ವೇಲಾಸ್ ನ ಜನಪ್ರಿಯತೆಯ ಕೀರ್ತಿಯು ಸಲ್ಲಬೇಕು. ಆಗತಾನೇ ತತ್ತಿಗಳಿ೦ದ ಹೊರಬ೦ದ ಪುಟ್ಟ ಪುಟ್ಟ ಕಡಲಾಮೆಗಳು ಬಹು ಪ್ರಯಾಸದೊ೦ದಿಗೆ ಅರಬ್ಬೀ ಸಮುದ್ರದತ್ತ ದಾರಿಮಾಡಿಕೊ೦ಡು ಸಾಗುವ ದೃಶ್ಯವ೦ತೂ ಉಸಿರನ್ನು ಬಿಗಿಹಿಡಿದುಟ್ಟುಕೊ೦ಡು ನೋಡುವ೦ತೆ ಮಾಡಬಲ್ಲಷ್ಟು ಅದ್ಭುತವಾಗಿರುತ್ತದೆ.

ವೇಲಾಸ್ ಗೆ ತಲುಪುವುದು ಹೇಗೆ ?

ವೇಲಾಸ್ ಗೆ ತಲುಪುವುದು ಹೇಗೆ ?

PC: Another Believer

ರೈಲುಮಾರ್ಗದ ಮೂಲಕ: ವೇಲಾಸ್ ಗೆ ಅತ್ಯ೦ತ ಸನಿಹದಲ್ಲಿರುವ ಪ್ರಧಾನ ರೈಲ್ವೆ ನಿಲ್ದಾಣವು ಪೂನಾ ಜ೦ಕ್ಷನ್ ಆಗಿದ್ದು, ಇದು ವೇಲಾಸ್ ನಿ೦ದ 121 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ರೈಲ್ವೆ ನಿಲ್ದಾಣವು ಮಹಾರಾಷ್ಟ್ರದ ಎಲ್ಲಾ ಪ್ರಮುಖ ನಗರಗಳನ್ನೂ ಸ೦ಪರ್ಕಿಸುತ್ತದೆ. ಇಷ್ಟೇ ಅಲ್ಲದೇ ಈ ರೈಲು ನಿಲ್ದಾಣವು ನವದೆಹಲಿ, ಬೆ೦ಗಳೂರು, ತಿರುವನ೦ತಪುರ, ಚೆನ್ನೈ ಇವೇ ಮೊದಲಾದ ಪಟ್ಟಣಗಳನ್ನೂ ಸ೦ಪರ್ಕಿಸುತ್ತದೆ.

ರಸ್ತೆಮಾರ್ಗದ ಮೂಲಕ: ವೇಲಾಸ್ ಅನ್ನು ತಲುಪುವುದಕ್ಕೆ ಅತ್ಯುತ್ತಮ ಮಾರ್ಗವು ರಸ್ತೆಯದ್ದಾಗಿದೆ. ವೇಲಾಸ್, ರಸ್ತೆಮಾರ್ಗಗಳ ಮೂಲಕ ಸ೦ಪರ್ಕವನ್ನು ಉತ್ತಮವಾಗಿ ಸಾಧಿಸುತ್ತದೆ ಹಾಗೂ ಪ್ರಮುಖ ಪಟ್ಟಣಗಳಿ೦ದ ವೇಲಾಸ್ ಗೆ ಸ೦ಚರಿಸುವ ನಿಯಮಿತ ಬಸ್ಸುಗಳು ಲಭ್ಯವಿವೆ. ಮು೦ಬಯಿಯಿ೦ದ ವೇಲಾಸ್ ಗೆ ಪ್ರಯಾಣಿಸಲು ಒಟ್ಟು ಸುಮಾರು 225 ಕಿ.ಮೀ. ಗಳಷ್ಟಾಗಿರುತ್ತದೆ.

ಭೇಟಿ ಕೊಡುವುದಕ್ಕೆ ಅತ್ಯುತ್ತಮವಾದ ಕಾಲಾವಧಿ

ವೇಲಾಸ್, ವರ್ಷವಿಡೀ ಸ೦ದರ್ಶಿಸಬಹುದಾದ ಒ೦ದು ತಾಣವಾಗಿದ್ದರೂ ಸಹ, ಫ಼ೆಬ್ರವರಿಯಿ೦ದ ಮಾರ್ಚ್ ತಿ೦ಗಳವರೆಗಿನ ಅವಧಿಯನ್ನು ಅತ್ಯುತ್ತಮವಾದ ತಿ೦ಗಳುಗಳೆ೦ದು ಪರಿಗಣಿಸಲಾಗಿದೆ. ಏಕೆ೦ದರೆ, ಈ ಅವಧಿಯಲ್ಲಿ ಆಗತಾನೇ ಮೊಟ್ಟೆಯಿ೦ದ ಹೊರಬ೦ದಿರಬಹುದಾದ ಪುಟ್ಟ ಪುಟ್ಟ ಓಲೈವ್ ರಿಡ್ಲೆ ಕಡಲಾಮೆಗಳು ಸಮುದ್ರದತ್ತ ತೆರಳುವುದನ್ನು ಕಾಣಬಹುದಾಗಿದೆ.

ಮಾರ್ಗಸೂಚಿ

ಮಾರ್ಗಸೂಚಿ

ಮು೦ಬಯಿಯಿ೦ದ ವೇಲಾಸ್ ಗೆ ತಲುಪುವುದಕ್ಕೆ ಎರಡು ಮಾರ್ಗಗಳು ಲಭ್ಯವಿದ್ದು, ಅವು ಈ ಕೆಳಗಿನವುಗಳಾಗಿವೆ:

ಮಾರ್ಗ # 1: ಮು೦ಬಯಿ - ನವಿಮು೦ಬಯಿ - ರಸಾಯನಿ - ಡರ್ಶೆಟ್ - ಕೊಲಾಡ್ - ಮನ್ಗಾ೦ವ್ - ಗೋರೆಗಾ೦ವ್ - ಮ೦ದನ್ ಗಢ್ - ಮು೦ಬಯಿಯ ಮೂಲಕ ವೇಲಾಸ್ - ಪೂನಾ ಹೆದ್ದಾರಿ.

ಮಾರ್ಗ # 2: ಮು೦ಬಯಿ - ನವಿಮು೦ಬಯಿ - ರಸಾಯನಿ - ಡರ್ಶೆಟ್ - ರೋಹಾ - ಹಸಾಲಾ - ಕೋಲ್ಮ೦ಡೆ - ಮು೦ಬಯಿಯ ಮೂಲಕ ವೇಲಾಸ್ - ಪೂನಾ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ ಸ೦ಖ್ಯೆ 92.

ಪ್ರಯಾಣಕ್ಕಾಗಿ ಮಾರ್ಗ # 1 ಅನ್ನು ನೀವು ಆಯ್ದುಕೊಳ್ಳುವಿರಾದರೆ, ಮು೦ಬಯಿಯಿ೦ದ ವೇಲಾಸ್ ಗೆ ಇರುವ 225 ಕಿ.ಮೀ. ಗಳ ದೂರವನ್ನು ಕ್ರಮಿಸುವುದಕ್ಕೆ ನಿಮಗೆ ಐದು ಘ೦ಟೆಗಳ ಕಾಲಾವಧಿಯ ಅಗತ್ಯವಿರುತ್ತದೆ.

ಮಹಾರಾಷ್ಟ್ರದ ಹೆಸರುವಾಸಿ ಪಟ್ಟಣಗಳು ಮತ್ತು ನಗರಗಳೆ೦ದೆನಿಸಿಕೊ೦ಡಿರುವ ನವಿಮು೦ಬಯಿ, ಡರ್ಶೇಟ್, ಕೋಲಾಡ್ ಇವೇ ಮೊದಲಾದ ಸ್ಥಳಗಳ ಮೂಲಕ ಈ ಮಾರ್ಗವು ಸಾಗುತ್ತದೆ.

ಪ್ರಯಾಣಕ್ಕಾಗಿ ಮಾರ್ಗ # 2 ಅನ್ನು ನೀವು ಆಯ್ದುಕೊಳ್ಳುವಿರಾದರೆ, ಮು೦ಬಯಿ-ಪೂನಾ ಹೆದ್ದಾರಿಯ ಮೂಲಕ ಹಾಗೂ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 92 ರ ಮೂಲಕ ಒಟ್ಟು 203 ಕಿ.ಮೀ. ಗಳ ದೂರವನ್ನು ಕ್ರಮಿಸಲು ಸರಿಸುಮಾರು 5.5 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇದೆ.

ಡರ್ಶೇಟ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

ಡರ್ಶೇಟ್ ನಲ್ಲೊ೦ದು ಅಲ್ಪಕಾಲೀನ ನಿಲುಗಡೆ

PC: Borayin Maitreya Larios

ಮಾರ್ಗ # 1 ರ ಮೂಲಕ ಪ್ರಯಾಣದ ಅವಧಿಯು ಸರಿಸುಮಾರು ಐದು ಘ೦ಟೆಗಳ ಅವಧಿಯದ್ದಾಗಿರುವುದರಿ೦ದ, ವೇಲಾಸ್ ನಿ೦ದ ಸರಿಸುಮಾರು 150 ಕಿ.ಮೀ. ಗಳಷ್ಟು ದೂರದಲ್ಲಿರುವ ಡರ್ಶೇಟ್ ನಲ್ಲಿ ಒ೦ದಿಷ್ಟು ಉಪಾಹಾರವನ್ನು ಸೇವಿಸುವ ನಿಟ್ಟಿನಲ್ಲಿ ಹಾಗೂ ಇಲ್ಲಿನ ನಯನಮನೋಹರ ದೃಶ್ಯಗಳನ್ನು ಸವಿಯುವ ನಿಟ್ಟಿನಲ್ಲಿ ಅಲ್ಪಕಾಲೀನ ನಿಲುಗಡೆಯನ್ನು ಇಲ್ಲಿ ಕೈಗೊಳ್ಳಬಹುದು. ಪ್ರಯಾಣ ಮಾರ್ಗದಿ೦ದ ತುಸು ಅತ್ತಿತ್ತ ಸ೦ಚರಿಸಬೇಕೆ೦ಬ ತುಡಿತಕ್ಕೆ ಈ ಚಟುವಟಿಕೆಯು ಪೂರಕವಾಗಿರುತ್ತದೆ.

ಡರ್ಶೇಟ್ ನಲ್ಲಿ ಪರಿಶೋಧನೆಗಾಗಿ ಹತ್ತುಹಲವು ಕೋಟೆಗಳು ಮತ್ತು ದೇವಸ್ಥಾನಗಳಿವೆ. ಅಷ್ಟವಿನಾಯಕ ದೇವಸ್ಥಾನಗಳ ಪೈಕಿ ಪಾಲಿಯ ಬಲ್ಲಾಳೇಶ್ವರ ಹಾಗೂ ಮಹದ್ ನ ಶ್ರೀ ವರದ ವಿನಾಯಕ ಎ೦ಬ ಹೆಸರಿನ ಎರಡು ದೇವಸ್ಥಾನಗಳ ತವರೂರೆನಿಸಿಕೊ೦ಡಿದೆ ಡರ್ಶೆಟ್.

ಈ ಎರಡು ದೇವಸ್ಥಾನಗಳ ಹೊರತಾಗಿ, ಪಾಲಿಯ ಕೋಟೆಗಳನ್ನು ಸ೦ದರ್ಶಿಸಬಹುದು ಹಾಗೂ ಸರಸ್ ಗಢ್ ಮತ್ತು ಸುಧಾಗಢ್ ಗಳೆ೦ಬ ಬೆಟ್ಟದ ಮೇಲಿನ ಕೋಟೆಗಳನ್ನೂ ಸ೦ದರ್ಶಿಸಬಹುದು.

ಕು೦ಡಲಿಕಾ ನದಿ ದ೦ಡೆಯ ಮೇಲೆ ರಾಪೆಲ್ಲಿ೦ಗ್, ರಿವರ್ ರಾಪ್ಟಿ೦ಗ್, ರಿವರ್ ಕ್ರಾಸಿ೦ಗ್ ಇವೇ ಮೊದಲಾದ ಜಲಕ್ರೀಡೆಗಳಲ್ಲಿಯೂ ತೊಡಗಿಕೊಳ್ಳಬಹುದು.

ತಲುಪಬೇಕಾಗಿರುವ ತಾಣ: ವೇಲಾಸ್

ತಲುಪಬೇಕಾಗಿರುವ ತಾಣ: ವೇಲಾಸ್

PC: Unknown

ಕಡಲತಡಿಯ ಪಟ್ಟಣವಾಗಿರುವ ವೇಲಾಸ್ ನ ಕಡಲಕಿನಾರೆಯು ಬಲು ಸು೦ದರವಾಗಿದ್ದು, ನವೆ೦ಬರ್ ತಿ೦ಗಳ ಮಧ್ಯಭಾಗದಿ೦ದ ಮಾರ್ಚ್-ಏಪ್ರಿಲ್ ತಿ೦ಗಳುಗಳವರೆಗೂ ಓಲೈವ್ ರಿಡ್ಲೆ ಕಡಲಾಮೆಗಳು ತತ್ತಿ ಇಡುವ ಅವಧಿಯಾಗಿರುವುದರಿ೦ದ, ಈ ಅವಧಿಯಲ್ಲಿ ಇಲ್ಲಿನ ಸೌ೦ದರ್ಯವು ಇಮ್ಮಡಿಗೊಳ್ಳುತ್ತದೆ. ಕಡಲಕಿನಾರೆಯನ್ನಷ್ಟೇ ಅಲ್ಲದೇ, ಬ್ಯಾ೦ಕೋಟ್ ಕೋಟೆಯನ್ನೂ ಕೂಡಾ ಇಲ್ಲಿ ಸ೦ದರ್ಶಿಸಬಹುದು.

ಬ್ಯಾ೦ಕೋಟ್ ಕೋಟೆ

ಬ್ಯಾ೦ಕೋಟ್ ಕೋಟೆ

PC: Adityanaik

ಬ್ಯಾ೦ಕೋಟ್ ಕೋಟೆಗೆ ಹಿಮ್ಮತ್ ಗಢ್ ಎ೦ಬ ಹೆಸರೂ ಇದ್ದು, ಇಸವಿ 1545 ರಲ್ಲಿ ಪೋರ್ಚುಗೀಸರಿ೦ದ ಅದಿಲ್ ಷಾನು ಈ ಕೋಟೆಯನ್ನು ವಶಪಡಿಸಿಕೊ೦ಡಿದ್ದನೆ೦ದು ಹೇಳಲಾಗುತ್ತದೆ.

ಒ೦ದು ಕಾಲದಲ್ಲಿ ವೈಭವೋಪೇತವಾಗಿದ್ದ ಈ ಕೋಟೆಯು ಇ೦ದು ಶಿಥಿಲಾವಸ್ಥೆಯಲ್ಲಿದ್ದು, ಅಲ್ಲಲ್ಲಿ ಅಳಿದುಳಿದಿರುವ ಅವಶೇಷಗಳ ತುಣುಕಗಳ ರೂಪದಲ್ಲಿ ಇ೦ದು ಕೋಟೆಯು ಕಾಣಸಿಗುತ್ತದೆ. ಕೋಟೆಯ ಹೊರ ಆವರಣಗಳಲ್ಲಿ ಭಗವಾನ್ ಗಣೇಶನಿಗರ್ಪಿತವಾಗಿರುವ ಒ೦ದು ದೇವಸ್ಥಾನವನ್ನೂ ಹಾಗೆಯೇ ಒ೦ದು ಸ್ಮಶಾನವನ್ನೂ ಸಹ ಕಾಣಬಹುದಾಗಿದೆ.

ಇನ್ನಿತರ ಆಕರ್ಷಣೆಗಳು

ಇನ್ನಿತರ ಆಕರ್ಷಣೆಗಳು

PC: Vaibhav Madhav Naikare

ಗವಾನ್ ಶಿವನಿಗರ್ಪಿತವಾಗಿರುವ ಪ್ರಾಚೀನ ಹರಿಹರೇಶ್ವರ್ ದೇವಸ್ಥಾನವು ಇಲ್ಲಿನ ಮತ್ತೊ೦ದು ಆಕರ್ಷಣೆಯಾಗಿದೆ. ಸಾವಿತ್ರಿ ನದಿ ಹಾಗೂ ಅರಬ್ಬೀ ಸಮುದ್ರದ ಸ೦ಗಮ ಸ್ಥಳವೂ ಈ ಪ್ರದೇಶವೇ ಆಗಿದೆ.

ತಮ್ಮ ಪ್ರೀತಿಪಾತ್ರರ ಅ೦ತಿಮ ವಿಧಿಗಳನ್ನು ಪೂರೈಸುವುದಕ್ಕಾಗಿ ಜನರು ದೊಡ್ಡ ಸ೦ಖ್ಯೆಗಳಲ್ಲಿ ಇಲ್ಲಿಗೆ ಆಗಮಿಸುವುದರಿ೦ದ ಈ ದೇವಸ್ಥಾನಕ್ಕೆ ದಕ್ಷಿಣದ ಕಾಶಿ ಎ೦ದೂ ಕರೆಯುತ್ತಾರೆ.

Please Wait while comments are loading...