ದೆಹಲಿಯಲ್ಲಿ ಕ್ರೀಡೆಗಳನ್ನು ನಡೆಸುವ ಅತ್ತ್ಯುತ್ತಮ ಸ್ಥಳಗಳ ಪಟ್ಟಿ
ದೆಹಲಿಯು ಕ್ರೀಡಾಕೂಟಗಳು ಮತ್ತು ಸೌಲಭ್ಯಗಳನ್ನು ಹೊಂದಿರುವಂತಹ ಸ್ಥಳವಾಗಿದೆ, ಇಲ್ಲಿ ಕ್ರೀಡೆಗಳಿಗಾಗಿ ಹಲವಾರು ಪ್ರದೇಶಗಳಿದ್ದರೂ ಸಹ ಬೊಟಾನಿಕಲ್ ಗಾರ್ಡನ್ಸ್, ನಿಜಾಮುದ್ದೀನ್ ಬಸ್ತಿ, ನೆಹರು ಪಾರ್ಕ್, ಸಫ್ದರ್‌ಜಂಗ್ ಎನ್‌ಕ್ಲೇವ್ ಮತ್ತು ಹೆಚ್ಚಿನ ಸ್ಥಳಗಳಲ್ಲಿ ನೀವು ವಿವಿಧ ಕ್ರೀಡೆಗಳು ಮತ್ತು ಚಟುವಟಿಕೆಗಳನ್ನು ಸಹ ಆನಂದಿಸಬಹುದಾಗಿದೆ.
ನಗರವು ಕ್ರೀಡೆಗೆಂದೇ ಹಲವಾರು ಸ್ಥಳಗಳನ್ನು ಹೊಂದಿದೆ. ಅಖಿಲ ಭಾರತ ಫುಟ್ ಬಾಲ್ ಫ಼ೆಡರೇಶನ್ ನ (ಎಐಎಫ್ ಎಫ್ ಆಲ್ ಇಂಡಿಯಾ ಪುಟ್ಬಾಲ್ ಫೆಡರೇಶನ್) ಪ್ರಧಾನ ಕಚೇರಿಯನ್ನು ರಾಷ್ಟ್ರದ ರಾಜಧಾನಿಯಲ್ಲಿ ಹೊಂದಿದೆ ಮತ್ತು ಹಲವಾರು ರಾಷ್ಟ್ರೀಯ ಮಟ್ಟದ ಪುಟ್ಬಾಲ್ ಕ್ರೀಡಾಂಗಣಗಳನ್ನು ನಿರ್ವಹಿಸುತ್ತದೆ. ಇದರ ಜೊತೆಗೆ ಈ ನಗರವು ಭಾರತೀಯ ಕ್ರಿಕೆಟ್ ತಂಡಕ್ಕೆ ಪಂದ್ಯವನ್ನು ಆಯೋಜಿಸುತ್ತದೆ ಇದನ್ನು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿ ಸಿಐ) ನಿರ್ವಹಿಸುತ್ತದೆ.
ಕ್ರೀಡಾ ಪ್ರೇಮಿಗಳಿಗಾಗಿ ದೆಹಲಿಯಲ್ಲಿರುವ ಕೆಲವು ಕ್ರೀಡಾ ಸ್ಥಳಗಳ ಪಟ್ಟಿ ಈ ಕೆಳಗಿವೆ

ಜವಾಹರ್ ಲಾಲ್ ನೆಹರು ಕ್ರೀಡಾಂಗಣ
ಭಾರತದ ರಾಜಧಾನಿ ದೆಹಲಿಯಲ್ಲಿರುವ ಜವಾಹರ್ ಲಾಲ್ ನೆಹರು ಕ್ರೀಡಾಂಗಣ(ಜೆ ಎಲ್ ಎನ್ ಕ್ರೀಡಾಂಗಣ) ಇದು ಒಂದು ಬಹುಪಯೋಗಿ ಕ್ರೀಡಾಂಗಣವಾಗಿದೆ. ಇದು ದೆಹಲಿಯ ಅತ್ಯಂತ ದೊಡ್ಡ ಕ್ರೀಡಾಂಗಣವಾಗಿದ್ದುಮತ್ತು 60,000 ಪ್ರೇಕ್ಷಕರಿಗೆ ಆಸನ ಸಾಮರ್ಥ್ಯ ವನ್ನು ಹೊಂದಿರುವಂತಹ ಭಾರತದ ಅತಿದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಮೆಟ್ರೋನಿಲ್ದಾಣ ಮತ್ತು ಹತ್ತಿರದ ಮಾರುಕಟ್ಟೆಗೆ ಈ ಕ್ರೀಡಾಂಗಣವು ಅತ್ಯಂತ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದೆ. ಈ ಸ್ಥಳವು ರಸ್ತೆ, ರೈಲು ಮತ್ತು ವಾಯುಮಾರ್ಗ ಗಳಿಗೆ ಉತ್ತಮವಾಗಿ ಸಂಪರ್ಕಿಸಲ್ಪಟ್ಟಿದ್ದು, ಭಾರತ ಮತ್ತು ವಿದೇಶದ ಜನರಿಗೆ ಇಲ್ಲಿಗೆ ತಲುಪಲು ಅನುಕೂಲವಾಗುತ್ತದೆ. ನೆಹರು ಸ್ಟೇಡಿಯಂ ಸಂಕೀರ್ಣವು 2010 ರ ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಪಂದ್ಯಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕ್ರೀಡಾಂಗಣದ ಸಂಕೀರ್ಣವು ಈಜುಕೊಳ, ಟೆನ್ನಿಸ್ ಕ್ರೀಡಾಂಗಣ, ಹಾಕಿ ಮೈದಾನ, ಕ್ರಿಕೆಟ್ ಮೈದಾನ ಮತ್ತು ಇನ್ನೂ ಹಲವಾರು ವಿಷಯಗಳನ್ನು ಹೊಂದಿದೆ.
ವಿಳಾಸ: ಜವಾಹರಲಾಲ್ ನೆಹರು ಸ್ಟೇಡಿಯಂ ಕಾಂಪ್ಲೆಕ್ಸ್, ಪ್ರಗತಿ ವಿಹಾರ್, ನವದೆಹಲಿ, ದೆಹಲಿ 110003.

ದೆಹಲಿ ಜಿಮ್ಖಾನಾ
1913 ನೇ ಇಸವಿಯಲ್ಲಿ ಸ್ಥಾಪಿಸಲ್ಪಟ್ಟ ದೆಹಲಿಯ ಜಿಮ್ಖಾನಾವು ದೆಹಲಿಯ ಸುಂದರವಾದ ಮತ್ತು ಅತ್ಯಂತ ಹಳೆಯ ಸ್ಥಳವಾಗಿದೆ. ಮೊದಲು ಜನರು ಈ ಸ್ಥಳವನ್ನು "ಇಂಪೀರಿಯಲ್ ಡೆಲ್ಲಿ ಜಿಮ್ಖಾನಾ ಕ್ಲಬ್" ಎಂದು ಕರೆಯುತ್ತಿದ್ದರು. ಜಿಮ್ಖಾನಾವು ಕ್ರಿಕೆಟ್ ಪಂದ್ಯಗಳು, ಫುಟ್ಬಾಲ್ ಪಂದ್ಯಗಳು, ಬಾಸ್ಕೆಟ್‌ಬಾಲ್ ಪಂದ್ಯಗಳು, ವಾಲಿಬಾಲ್ ಪಂದ್ಯಗಳು, ಇತ್ಯಾದಿಗಳಂತಹ ವ್ಯಾಪಕ ಶ್ರೇಣಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಅಲ್ಲದೆ ಜಿಮ್ ಖಾನಾವು ಕ್ರೀಡೆ ಮತ್ತು ಅದರ ಇತಿಹಾಸಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಹೊಂದಿರುವ ಸುಸಜ್ಜಿತ ಗ್ರಂಥಾಲಯವನ್ನು ಸಹ ಹೊಂದಿದೆ.
ವಿಳಾಸ: ಸಫ್ದರ್‌ಜಂಗ್ ರಸ್ತೆ, ತುಘಲಕ್ ರಸ್ತೆ ಪ್ರದೇಶ, ನವದೆಹಲಿ, ದೆಹಲಿ 110011.

ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣ
ಈ ಬೆರಗುಗೊಳಿಸುವಂತಹ ಕ್ರೀಡಾಂಗಣವು ಮೂಲತಃ 1982 ರ ಏಷ್ಯನ್ ಕ್ರೀಡೆಗಳಿಗಾಗಿ ನಿರ್ಮಿಸಲ್ಪಟ್ಟಿತು. ಇದು ಸುಮಾರು 14,000 ಜನರು ಆಸೀನರಾಗಿ ಪಂದ್ಯಗಳನ್ನು ವಿಕ್ಷಿಸಬಹುದಾದಂತಹ ಸಾಮರ್ಥ್ಯವನ್ನು ಹೊಂದಿದ್ದು, ದೆಹಲಿಯ 102 ಎಕರೆಗಳಲ್ಲಿ ನಿರ್ಮಿಸಲಾದ ಅತಿದೊಡ್ಡ ಒಳಾಂಗಣ ಕ್ರೀಡಾ ಸಂಕೀರ್ಣಗಳಲ್ಲಿ ಒಂದಾಗಿದೆ. ಈ ಕ್ರೀಡಾಂಗಣವು ಹಲವಾರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ಹಾಗೂ ದೇಶೀಯ ಹಾಕಿ ಮತ್ತು ಫುಟ್ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಿದೆ. ಈ ಸ್ಥಳವನ್ನು ಹಲವಾರು ಬಾರಿ ನವೀಕರಿಸಲಾಗಿದೆ ಮತ್ತು ಈಗ ಭಾರತದ ದೆಹಲಿಯಲ್ಲಿ ಅತ್ಯುತ್ತಮ ಕ್ರೀಡಾ ಸಂಕೀರ್ಣವನ್ನು ಹೊಂದಿದೆ.
ವಿಳಾಸ: ಇಂದ್ರಪ್ರಸ್ಥ ಎಸ್ಟೇಟ್, ಗ್ರ್ಯಾಂಡ್ ಟ್ರಂಕ್ ರಸ್ತೆ, ರಾಜ್ ಘಾಟ್ ಹತ್ತಿರ, ಐಜಿ ಒಳಾಂಗಣ ಕ್ರೀಡಾಂಗಣ, ಐಟಿಒ, ಐಪಿ ಎಸ್ಟೇಟ್, ನವದೆಹಲಿ, ದೆಹಲಿ 110002.

ಫಿರೋಜ್‌ಶಾ ಕೋಟ್ಲಾ ಕ್ರೀಡಾಂಗಣ
ಈಗ ಅರುಣ್ ಜೇಟ್ಲಿ ಕ್ರೀಡಾಂಗಣ ಎಂದು ಕರೆಯಲ್ಪಡುವ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣವು ಇನ್ನೊಂದು ಐತಿಹಾಸಿಕ ಸ್ಥಳವಾಗಿದ್ದು ಇಲ್ಲಿ ಹಲವಾರು ಕ್ರಿಕೆಟ್ ಪಂದ್ಯಗಳಂತಹ ಪ್ರಮುಖ ಕಾರ್ಯಕ್ರಮಗಳಿಗಾಗಿ ಇದನ್ನು ಉಪಯೋಗಿಸಲ್ಪಡುತ್ತದೆ. ಇದು ಟೆಸ್ಟ್ ಪಂದ್ಯಗಳು ಮತ್ತು ಏಕದಿನ ಅಂತರಾಷ್ಟ್ರೀಯ (ಒಡಿಐ) ನಂತಹ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದೆ. ಈ ಕ್ರೀಡಾ ಸ್ಥಳವನ್ನು ಪ್ರಮುಖವಾಗಿ ಕ್ರಿಕೆಟ್ ಪ್ರಿಯರಿಗಾಗಿ 1883 ರಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಂತರ ಇದು ಎರಡನೇ ಹಳೆಯ ಕ್ರಿಕೆಟ್ ಸ್ಟೇಡಿಯಂ ಎಂದು ಪರಿಗಣಿಸಲಾಗಿದೆ. ಈ ಕ್ರೀಡಾಂಗಣವು ಹಲವಾರು ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದೆ ಮತ್ತು ಸುಮಾರು 41,000 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ವಿಳಾಸ: ಜವಾಹರಲಾಲ್ ನೆಹರು ಮಾರ್ಗ್, ಫಿರೋಜ್ ಶಾ ಕೋಟ್ಲಾ, ರಾಜ್ ಘಾಟ್, ನ್ಯೂ ಡೆಲ್ಲಿ, ದೆಹಲಿ 110002

ದೆಹಲಿ ಯುನಿವರ್ಸಿಟಿ ಕ್ರೀಡಾಂಗಣ
ಭಾರತದ ದೆಹಲಿಯ ದೊಡ್ಡ ದೊಡ್ಡ ಕ್ರೀಡಾಂಗಣಗಳ ಬಗ್ಗೆ ಮಾತಾಡುವಾಗ, ದೆಹಲಿಯ ಯುನಿವರ್ಸಿಟಿ ಕ್ರೀಡಾಂಗಣವನ್ನು ಆ ಪಟ್ಟಿಯಲ್ಲಿ ಸೇರಿಸದೇ ಇರಲು ಸಾಧ್ಯವೇ? ಕ್ಯಾಂಪಸ್‌ನ ಯುವಕರ ಸ್ಥಳ ಯಾವುದು ಎಂದರೆ ಈ ಕ್ರೀಡಾಂಗಣವಾಗಿದ್ದು ಅದು ಭಾರತದ ಅತ್ಯುತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿದೆ. ಇಲ್ಲಿ ಕ್ರಿಕೆಟ್ ಪಂದ್ಯಗಳು, ಫುಟ್ಬಾಲ್ ಪಂದ್ಯಗಳು ಮತ್ತು ಕಬಡ್ಡಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಇದು ಸಂಗೀತ ಕಚೇರಿಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿ ಬಳಸಬಹುದಾದ ಆಂಫಿಥಿಯೇಟರ್ ಅನ್ನು ಸಹ ಹೊಂದಿದೆ. ಇದು 7,500 ತಾತ್ಕಾಲಿಕ ಮತ್ತು 2,500 ಶಾಶ್ವತ ಆಸನಗಳ ಆಸನ ಸಾಮರ್ಥ್ಯವನ್ನು ಹೊಂದಿದೆ. ವಿಶ್ವವಿದ್ಯಾನಿಲಯದ ವಾರ್ಷಿಕ ಆಟಗಳು ಮತ್ತು ಸ್ಪರ್ಧೆಗಳು ಇಲ್ಲಿ ನಡೆಯುತ್ತವೆ ಮತ್ತು ಇದು ಅನ್ವೇಷಿಸಲು ಬಹಳ ಉತ್ಸಾಹಭರಿತ ಸ್ಥಳವಾಗಿದೆ. ನೀವು ಡಿ ಯು ವಿದ್ಯಾರ್ಥಿಯಾಗಿದ್ದರೆ ನೀವು ವಾರ್ಷಿಕ ಆಟಗಳಿಗೆ ಸ್ವಯಂಸೇವಕರಾಗಬಹುದು.
ವಿಳಾಸ: ದೆಹಲಿ ವಿಶ್ವವಿದ್ಯಾಲಯ ಉತ್ತರ ಕ್ಯಾಂಪಸ್, ನವದೆಹಲಿ, ದೆಹಲಿ 110007.
ಮೇಲೆ ಪಟ್ಟಿ ಮಾಡಿದ ಸ್ಥಳಗಳು ಮಾತ್ರವಲ್ಲದೆ ದೆಹಲಿಯಲ್ಲಿ ಇನ್ನಿತರ ಕ್ರೀಡಾಸ್ಥಳಗಳಲ್ಲಿ ಭಾರತದ ಮೊದಲ ನಾಗರಿಕ ಗಾಲ್ಫ್ ಕೋರ್ಸ್, ಪೆಸಿಫಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಇತ್ಯಾದಿ ಕುತುಬ್ ಗಾಲ್ಫ್ ಕೋರ್ಸ್‌ನಂತಹ ಸ್ಥಳಗಳು ಸೇರಿದ್ದು, ಕ್ರೀಡಾ ಪ್ರೇಮಿಗಳಿಗಾಗಿ ಇನ್ನೂ ಅನೇಕ ಆಸಕ್ತಿದಾಯಕ ಕ್ರೀಡಾ ಸ್ಥಳಗಳಿವೆ. ಯಾವುದೇ ರೀತಿಯ ಕ್ರೀಡೆಯನ್ನು ಆಡುವುದು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಉತ್ತಮ ಪ್ರತಿಫಲವನ್ನು ನೀಡಬಹುದು ಆದುದರಿಂದ ಈ ಕ್ರೀಡಾ ಸ್ಥಳಗಳಿಂದ ಸ್ಫೂರ್ತಿ ಪಡೆಯಿರಿ ಹಾಗೂ ಇಂದು ನಿಮಗಾಗಿ ಒಂದು ಕ್ರೀಡೆಯನ್ನು ಆಯ್ಕೆಮಾಡಿ!


Click it and Unblock the Notifications
















