Search
  • Follow NativePlanet
Share
» »ಕರ್ನಾಟಕದ ಈ ಊರಲ್ಲಿ ಬೆಕ್ಕು ದಾರಿಗಡ್ಡ ಬಂದ್ರೆ ಶುಭಶಕುನವಂತೆ ...ಬೆಕ್ಕಿಗೆ ದೇವಸ್ಥಾನನೂ ಇದೆಯಂತೆ!

ಕರ್ನಾಟಕದ ಈ ಊರಲ್ಲಿ ಬೆಕ್ಕು ದಾರಿಗಡ್ಡ ಬಂದ್ರೆ ಶುಭಶಕುನವಂತೆ ...ಬೆಕ್ಕಿಗೆ ದೇವಸ್ಥಾನನೂ ಇದೆಯಂತೆ!

ನಮ್ಮ ದೇಶದಲ್ಲಿ ಪ್ರಾಣಿಗಳನ್ನು, ಪಕ್ಷಿಗಳನ್ನು ದೇವರ ರೂಪದಲ್ಲಿ ಪೂಜಿಸುವುದು ನಿಮಗೆ ಗೊತ್ತೇ ಇದೆ. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಾಯಿಯ ದೇವಾಲಯದ ಬಗ್ಗೆ ನೀವು ಕೇಳಿರಬಹುದು. ಆದರೆ ನೀವು ಬೆಕ್ಕಿನ ದೇವಾಲಯದ ಬಗ್ಗೆ ಕೇಳಿದ್ದೀರಾ? ಸಾಮಾನ್ಯವಾಗಿ ಎಲ್ಲಾದರೂ ಹೋಗುವಾಗ ಬೆಕ್ಕು ದಾರಿಗಡ್ಡವಾಗಿ ಬಂದರೆ ಅದನ್ನು ಕೆಟ್ಟದು ಎನ್ನಲಾಗುತ್ತದೆ. ಆದರೆ ಇಲ್ಲಿ ಬೆಕ್ಕು ದಾರಿಗಡ್ಡವಾಗಿ ಬಂದರೆ ಶುಭಸೂಚಕವಂತೆ. ಇಲ್ಲಿದೆ ಬೆಕ್ಕಿನ ದೇವಾಲಯದ ಸ್ಟೋರಿ.

ಬೆಕ್ಕಾಲಲೆಯ ಬೆಕ್ಕಿನ ದೇವಾಲಯ

ಬೆಕ್ಕಾಲಲೆಯ ಬೆಕ್ಕಿನ ದೇವಾಲಯ

ಈ ಬೆಕ್ಕಿನ ದೇವಾಲಯ ಇರೋದು ಮಂಡ್ಯ ಜಿಲ್ಲೆಯಲ್ಲಿ. ಮಂಡ್ಯದಿಂದ 35 ಕಿ.ಮೀ ದೂರದಲ್ಲಿ ಬೆಕ್ಕಾಲಲೆ ಎನ್ನುವ ಹಳ್ಳಿಯಲ್ಲಿ ಬೆಕ್ಕಿನ ದೇವಾಲಯವಿದೆ. ಇಲ್ಲಿ ಬೆಕ್ಕನ್ನು ಮಂಗಮ್ಮ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಸುಮಾರು 1000 ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದೆ. ಬೆಕ್ಕಿನ ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತಿದೆ. ದೇವಿಯು ಅವರ ಊರನ್ನು ಕಾಯುತ್ತಾರೆ. ದುಷ್ಟಶಕ್ತಿಗಳಿಂದ ಕಾಪಾಡುತ್ತಾರೆ ಎನ್ನುವ ನಂಬಿಕೆ ಜನರದ್ದು.

 ಬೆಕ್ಕಿನ ರೂಪದಲ್ಲಿ ಬಂದ ಮಂಗಮ್ಮ ದೇವಿ

ಬೆಕ್ಕಿನ ರೂಪದಲ್ಲಿ ಬಂದ ಮಂಗಮ್ಮ ದೇವಿ

ನಮ್ಮ ಪೂರ್ವಜರ ಕಾಲದಲ್ಲಿ ಮಂಗಮ್ಮ ದೇವಿಯು ಬೆಕ್ಕಿನ ರೂಪದಲ್ಲಿ ನಮ್ಮ ಊರಿಗೆ ಬಂದಳು. ತನ್ನ ಶಕ್ತಿಯನ್ನು ತೋರಿಸಿ ಮಾಯವಾದಳು ಆಗಿನಿಂದ ನಮ್ಮ ಪೂರ್ವಜನರು ಹಾಗೂ ಈ ಊರಿನ ಜನತೆ ದೇವಿಯನ್ನು ಬೆಕ್ಕಿನ ರೂಪದಲ್ಲಿ ಪೂಜಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.

ಮಂಗಮ್ಮ ಉತ್ಸವವನ್ನೂ ಆಚರಿಸಲಾಗುತ್ತದೆ

ಮಂಗಮ್ಮ ಉತ್ಸವವನ್ನೂ ಆಚರಿಸಲಾಗುತ್ತದೆ

ಈ ಊರಿನಲ್ಲಿ ಮಂಗಮ್ಮ ಉತ್ಸವವನ್ನು ಆಚರಿಸಲಾಗುತ್ತದೆ. ಜೋತ್ಯೀಷಿಗಳು ಹೇಳಿದಾಗ ಈ ಉತ್ಸವ ಆಚರಿಸಲಾಗುತ್ತದೆ. ಮೂರು ನಾಲ್ಕು ದಿನಗಳ ಕಾಲ ಈ ಉತ್ಸವ ನಡೆಯುತ್ತದೆ. ಕಳೆದ ಉತ್ಸವ ಮೂರು ವರ್ಷಗಳ ಹಿಂದೆ ನಡೆದಿದೆ. ಈ ಉತ್ಸವವನ್ನು ಊರಿನವರು ತಮ್ಮ ಮನೆಯವರು ಹಾಗೂ ಸ್ನೇಹಿತರ ಜೊತೆ ಸೇರಿ ಆಚರಿಸುತ್ತಾರೆ.

ಈ ಊರಿನಲ್ಲಿ ಬೆಕ್ಕಿಗೆ ಹಿಂಸಿಸಲಾಗುವುದಿಲ್ಲ

ಈ ಊರಿನಲ್ಲಿ ಬೆಕ್ಕಿಗೆ ಹಿಂಸಿಸಲಾಗುವುದಿಲ್ಲ

ದೇವರೆಂದು ಪೂಜಿಸಲಾಗುವ ಬೆಕ್ಕನ್ನು ಈ ಊರಿನಲ್ಲಿ ಯಾರು ಹಿಂಸೆ ಮಾಡುವಂತಿಲ್ಲ. ಹಾಗೊಂದು ಬಾರಿ ಹಿಂಸಿಸುವುದು ಕಂಡುಬಂದಲ್ಲಿ ಅವರನ್ನು ಸುಮ್ಮನೆ ಬಿಡೋದಿಲ್ಲ. ಅವರನ್ನು ಹಳ್ಳಿಯಿಂದ ಹೊರಹಾಕಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+