Search
  • Follow NativePlanet
Share
» »ಆಸ್ಟೇಲಿಯಾದಲ್ಲಿದೆ ಅತ್ಯಂತ ಪುಟ್ಟ ರಾಜ್ಯ ಟ್ಯಾಸ್ಮೇನಿಯಾ

ಆಸ್ಟೇಲಿಯಾದಲ್ಲಿದೆ ಅತ್ಯಂತ ಪುಟ್ಟ ರಾಜ್ಯ ಟ್ಯಾಸ್ಮೇನಿಯಾ

ಟ್ಯಾಸ್ಮೇನಿಯಾವು ಆಸ್ಟ್ರೇಲಿಯಾದ ದಕ್ಷಿಣ ಭಾಗದಲ್ಲಿರುವ ಏಕೈಕ ದ್ವೀಪ ರಾಜ್ಯವಾಗಿದೆ ಈ ರಾಜ್ಯವು ಆಸ್ಟ್ರೇಲಿಯಾದ ಮುಖ್ಯ ಭೂಮಿಯಿಂದ ಬೇರ್ಪಡಿಸಲ್ಪಟ್ಟಿದ್ದು ಇದು 240 ಕಿಮೀ ಉದ್ದದ ಜಲರಾಶಿಯಾದ "ಬಾಸ್ ಸ್ಟ್ರೈಟ್" ನಿಂದ ಆಸ್ಟ್ರೇಲಿಯಾದ ಮುಖ್ಯ ಭೂಭಾಗದಿಂದ ಬೇರ್ಪಟ್ಟಿದೆ. ಇದು ಸಹಜವಾಗಿ ದ್ವೀಪವಾಗಿದ್ದರೂ ಸಹ ತೈವಾನ್‌ಗಿಂತ ಎರಡು ಪಟ್ಟು ದೊಡ್ಡದಾಗಿದೆ ಮತ್ತು ಐರ್ಲೆಂಡ್ ಅಥವಾ ಶ್ರೀಲಂಕಾದಷ್ಟು ಗಾತ್ರವನ್ನು ಹೋಲುತ್ತದೆ.

ಟ್ಯಾಸ್ಮೇನಿಯಾವು ತನ್ನ ನೈಸರ್ಗಿಕ ಸೌಂದರ್ಯತೆಗೆ ಹೆಚ್ಚು ಹೆಸರುವಾಸಿಗಿದೆ. ಇದು ಮುಖ್ಯ ಭೂಮಿಯಿಂದ ಪ್ರತ್ಯೇಕವಾಗಿದ್ದು, ಹಲವಾರು ಭೂಮಿಯಲ್ಲಿರುವ ಹಲವಾರು ವಿಶಿಷ್ಟ ಜಾತಿಗಳಿಗೆ ನೆಲೆಯಾಗಿದೆ. ಮತ್ತು ರಾಜ್ಯದ 40% ಕ್ಕಿಂತ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಮತ್ತು ಮೀಸಲುಗಳಿಂದ ರಕ್ಷಿಸಲ್ಪಟ್ಟಿದೆ. ಈ ರಾಜ್ಯವು 334 ಇನ್ನಿತರ ಸಣ್ಣ ಪುಟ್ಟ ದ್ವೀಪಗಳನ್ನೊಳಗೊಂಡಿದ್ದರೂ ಕೂಡ ಇಲ್ಲಿರುವ ಮುಖ್ಯ ದ್ವೀಪವು ಅಂದಾಜು 225 ಮೈಲಿಗಳಷ್ಟು (362 ಕಿ.ಮೀ) ಉದ್ದಕ್ಕಿದೆ. ಟ್ಯಾಸ್ಮೇನಿಯಾವು ಆಸ್ಟ್ರೇಲಿಯಾದಾದ್ಯಂತ ಅತಿ ಹೆಚ್ಚು ಪರ್ವತಗಳನ್ನು ಹೊಂದಿರುವ ರಾಜ್ಯವಾಗಿದೆ ಮತ್ತು ಮೌಂಟ್ ಒಸ್ಸಾ (1615ಮೀ/5300ಅಡಿ) ಅದರಲ್ಲಿರುವ ಅತೀ ಎತ್ತರದ ಶಿಖರವಾಗಿದ್ದು ಇದನ್ನು "ಸ್ಫೂರ್ತಿಯ ದ್ವೀಪ" (ಐಲ್ಯಾಂಡ್ ಆಫ್ ಇನ್ಸ್ಪಿರೇಶನ್) ಎಂದು ಕರೆಯಲಾಗುತ್ತದೆ. ಈ ರಾಜ್ಯವು ಭೂಮಿಯಲ್ಲಿರುವ ಅತ್ಯಂತ ಸುಂದರವಾದ ಹಲವಾರು ಭೂದೃಶ್ಯಗಳಿಗೆ ಸಾಕ್ಷಿಯಾಗಿದೆ ಅವುಗಳಲ್ಲಿ ಪ್ರಾಚೀನ ಕಾಡುಗಳು, ಅದ್ಬುತವಾದ ಹಿಮಚ್ಚಾದಿತ ಪರ್ವತಗಳು, ಮತ್ತು ಕಿತ್ತಳೆ ಬಣ್ಣದ ಕಲ್ಲುಗಳಿಂದ ಆವೃತವಾದ ವಿಶಾಲವಾದ ನೀಲಿ ಕಡಲುಗಳು ಇತ್ಯಾದಿಗಳನ್ನು ಒಳಗೊಂಡಿದೆ.

tasmania

ಟ್ಯಾಸ್ಮೇನಿಯದ ಸೌಂದರ್ಯತೆ

500,000 ಕ್ಕಿಂತ ಸ್ವಲ್ಪ ಹೆಚ್ಚು ನಿವಾಸಿಗಳನ್ನು ಹೊಂದಿರುವ ಈ ರಾಜ್ಯವು ಪ್ರಪಂಚದಲ್ಲೇ ಅತ್ಯಂತ ಸ್ವಚ್ಛವಾದ ಗಾಳಿ ಮತ್ತು ಸ್ಪಷ್ಟವಾದ ಆಕಾಶವನ್ನು ಹೊಂದಿದೆ, ಅಲ್ಲದೆ ಅಧ್ಯಯನಕ್ಕಾಗಿ, ಹೊರಾಂಗಣ ಚಟುವಟಿಕೆಗಳು ಇತ್ಯಾದಿಗಳಿಗಾಗಿ ಆದರ್ಶಪ್ರಾಯವಾಗಿದೆ ಮತ್ತು ಭವ್ಯವಾದ ಅರೋರಾ ಆಸ್ಟ್ರೇಲಿಸ್ ಅನ್ನು ವೀಕ್ಷಿಸಲು ಸೂಕ್ತವಾಗಿರುವ ಇದನ್ನು ಸದರ್ನ್ ಲೈಟ್ಸ್ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ.

ಸುಮಾರು 35,000 ವರ್ಷಗಳ ಹಿಂದೆ ಈ ಭೂಮಿಯ ಮೇಲೆ ಒಂದು ಹಿಮದ ಅವಧಿ ದ್ದಿ ಈ ಸಮಯದಲ್ಲಿ ಟ್ಯಾಸ್ಮೆನಿಯಾ ಆಸ್ಟ್ರೇಲಿಯಾದ ಮುಖ್ಯ ಭೂಭಾಗದೊಂದಿಗೆ ಸಂಪರ್ಕ ಹೊಂದಿತ್ತು ಮತ್ತು ಸಮುದ್ರ ಮಟ್ಟವು ಈಗಿರುವುದಕ್ಕಿಂತ ಕಡಿಮೆ ಇತ್ತು. ಗತಕಾಲದ ಟ್ಯಾಸ್ಮೆನಿಯನ್ನರು ಕಾಲ್ನಡಿಗೆಯಲ್ಲಿ ದಾಟಬಹುದಾಗಿತ್ತು ತದನಂತರ. ಹಿಮಯುಗವು ಕೊನೆಗೊಂಡಿತು ಮತ್ತು ಸುಮಾರು 12,000 ವರ್ಷಗಳ ಹಿಂದೆ ನೀರಿನ ಮಟ್ಟವು ಗಣನೀಯ ಮಟ್ಟದಲ್ಲಿ ಏರಿದ ಕಾರಣದಿಂದಾಗಿ ಟ್ಯಾಸ್ಮೆನಿಯಾ ಒಂದು ದ್ವೀಪವಾಗಿ ಪರಿವರ್ತನೆಗೊಂಡಿತು.

tasmania

ಮೂಲ ನಿವಾಸಿಗಳು

ಮೂಲನಿವಾಸಿಗಳು ಟ್ಯಾಸ್ಮೇನಿಯಾದಲ್ಲಿ ಮೊದಲ ವಸಾಹತುಗಳಾಗಿದ್ದು, ಈ ಜನರು ಮುಖ್ಯ ಭೂಭಾಗದ ಮೂಲನಿವಾಸಿಗಳೊಂದಿಗೆ ಬಹಳಷ್ಟು ಸಾಮ್ಯತೆ ಹೊಂದಿದ್ದರು, ಆದರೆ ಅವರು ಸ್ಪಷ್ಟವಾದ ಭೌತಿಕ ಮತ್ತು ಸಾಂಸ್ಕೃತಿಕವಾಗಿ ವ್ಯತ್ಯಾಸಗಳನ್ನು ಸಹ ಬೆಳೆಸಿಕೊಂಡಿದ್ದರು. ಮೂಲನಿವಾಸಿಗಳು ಬೇಟೆಗಾರರು ಮತ್ತು ಸಂಗ್ರಹಿಸುವವರಾಗಿದ್ದರು, ಅವರು ತಮ್ಮ ಉಪಕರಣಗಳನ್ನು ತಯಾರಿಸಲು ಮರ, ಕಲ್ಲು, ಕಡಲಕಳೆ ಮತ್ತು ತೊಗಟೆಯಂತಹ ಕೈಗೆ ಹತ್ತಿರವಿರುವ ಸಂಪನ್ಮೂಲಗಳನ್ನು ಮಾತ್ರ ಬಳಸುತ್ತಿದ್ದರು. ಹಾಗೂ ಪರಿಸರದಲ್ಲಿ ಸಿಗುವ ಕಾಲೋಚಿತ ಆಹಾರ ಸಂಪನ್ಮೂಲಗಳನ್ನು ಸಂಗ್ರಹಿಸಲು ತೆರಳುತ್ತಿದ್ದರು. ಅಲ್ಲದೆ ಕರಾವಳಿಯ ಸಮೀಪ ವಾಸಿಸುವವರ ಆಹಾರದ ಪ್ರಮುಖ ಅಂಶವೆಂದರೆ ಮೀನು ಆಗಿದ್ದು, ಬೆಚ್ಚಗಿನ ತಿಂಗಳುಗಳಲ್ಲಿ ಸೀಲುಗಳು ಮತ್ತು ಮಟನ್ ಪಕ್ಷಿಗಳನ್ನು ಹಿಡಿಯಲು ಪುರುಷರು ತೊಗಟೆ ದೋಣಿಗಳನ್ನು ನಿರ್ಮಿಸಿದರೆ, ಮಹಿಳೆಯರು ಸಿಂಪಿ, ಮಸ್ಸೆಲ್ಸ್, ಅಬಲೋನ್ ಮತ್ತು ಇತರ ಚಿಪ್ಪುಮೀನುಗಳನ್ನು ಹಿಡಿದು ಆಹಾರಕ್ಕಾಗಿ ಸಂಗ್ರಹಿಸುತ್ತಿದ್ದರು

overland

ಟ್ಯಾಸ್ಮೇನಿಯಾ

1642 ರಲ್ಲಿ ಟ್ಯಾಸ್ಮೆನಿಯಾಗೆ ಆಗಮಿಸಿದ ಅಬೆಲ್ ಟ್ಯಾಸ್ಮನ್, ಮೊದಲ ಯುರೋಪಿಯನ್. ಆಗಿದ್ದು, 1777 ರಲ್ಲಿ, ಕ್ಯಾಪ್ಟನ್ ಕುಕ್ ಟ್ಯಾಸ್ಮೆನಿಯಾಗೆ ಬಂದರು. ಹಾಗೂ 1798 ರಲ್ಲಿ ಈ ಸಾಧನೆಯನ್ನು ಮಾಡಿದ ಮ್ಯಾಥ್ಯೂ ಫ್ಲಿಂಡರ್ಸ್ ಟ್ಯಾಸ್ಮೆನಿಯಾವನ್ನು ಪ್ರದಕ್ಷಿಣೆ ಹಾಕಿದ ಮೊದಲ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಡೆರ್ವೆಂಟ್ ನದಿಯ ಪೂರ್ವ ದಂಡೆಯ ಮೇಲೆ, ಟ್ಯಾಸ್ಮೆನಿಯಾದಲ್ಲಿ ಮೊದಲ ಬಾರಿಗೆ ಯುರೋಪಿಯನ್ ವಸಾಹತುವನ್ನು ಸ್ಥಾಪಿಸಲಾಯಿತು. (ವಸಾಹತುವನ್ನು 1804 ರಲ್ಲಿ ಪಶ್ಚಿಮ ದಂಡೆಗೆ ಸ್ಥಳಾಂತರಿಸಲಾಯಿತು).

ಯುರೋಪಿಯನ್ ವಸಾಹತುವಿನ ಸಮಯದಲ್ಲಿ ಒಂಬತ್ತು ಪ್ರಮುಖ ಆದಿವಾಸಿ ಜನಾಂಗೀಯ ಗುಂಪುಗಳು ಅಸ್ತಿತ್ವದಲ್ಲಿದ್ದವು. 1803 ರಲ್ಲಿ ಬ್ರಿಟಿಷರು ಆಗಮಿಸಿದಾಗ, ದ್ವೀಪದ ಜನಸಂಖ್ಯೆಯು 5 ರಿಂದ 10,000 ರ ನಡುವೆ ಇತ್ತು. ದುರದೃಷ್ಟವಶಾತ್, ನಂತರದ 30 ವರ್ಷಗಳಲ್ಲಿ ಸಾಂಕ್ರಾಮಿಕ ರೋಗ ಮತ್ತು ಯುದ್ಧದಿಂದಾಗಿ ಇವರ ಜನಸಂಖ್ಯೆಯನ್ನು ಕೇವಲ 300 ಕ್ಕೆ ಇಳಿಸಿತು.

tasmania

ಟ್ಯಾಸ್ಮೆನಿಯಾವು 20 ನೇ ಶತಮಾನದ ಕೊನೆಯಲ್ಲಿ ಪ್ರವಾಸೋದ್ಯಮದ ಗರಿಷ್ಟ ಮಟ್ಟವನ್ನು ತಲುಪಿತು ಇದರ ಜೊತೆಗೆ ಪರಿಸರವಾದವೂ ವಿಸ್ತರಿಸಿತು. ಪ್ರವಾಸೋದ್ಯಮ ಮತ್ತು ಖನಿಜಗಳ ಗಣಿಗಾರಿಕೆಯು ಪ್ರಸ್ತುತ ಟ್ಯಾಸ್ಮೆನಿಯಾದಲ್ಲಿ ಗಮನಾರ್ಹ ಕೈಗಾರಿಕೆಗಳಾಗಿವೆ. ಮತ್ತೊಂದು ಮಹತ್ವದ ವ್ಯವಹಾರವೆಂದರೆ ಅರಣ್ಯೀಕರಣವಾಗಿದೆ. ಇಂದು ಟ್ಯಾಸ್ಮೆನಿಯಾ ಪ್ರಸ್ತುತ ಆಸ್ಟ್ರೇಲಿಯಾದ ಸಮೃದ್ಧ ರಾಜ್ಯವಾಗಿದೆ.

ಟ್ಯಾಸ್ಮೆನಿಯಾಗೆ ಭೇಟಿ ನೀಡಲು ಉತ್ತಮ ಸಮಯ: ಡಿಸೆಂಬರ್ ನಿಂದ ಫೆಬ್ರವರಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+