Search
  • Follow NativePlanet
Share
» »ಬಿಜಾಪುರದಲ್ಲಿರುವ ಇಷ್ಟೊಂದು ದೊಡ್ಡ ನೀರಿನ ಟ್ಯಾಂಕ್ ಈಗ ಏನಾಗಿದೆ ನೋಡಿ

ಬಿಜಾಪುರದಲ್ಲಿರುವ ಇಷ್ಟೊಂದು ದೊಡ್ಡ ನೀರಿನ ಟ್ಯಾಂಕ್ ಈಗ ಏನಾಗಿದೆ ನೋಡಿ

ನಮ್ಮ ಕರ್ನಾಟಕದಲ್ಲಿ ಎಷ್ಟೇಲ್ಲಾ ಐತಿಹಾಸಿಕ ಸ್ಥಳಗಳಿವೆ. ಬಿಜಾಪುರದಲ್ಲಿಯೂ ಅನೇಕ ಐತಿಹಾಸಿಕ ತಾಣಗಳಿವೆ. ಅವುಗಳಲ್ಲಿ ತಾಜ್ ಬಾವಡಿ ಕೂಡಾ ಸೇರಿದೆ. ತಾಜ್‌ ಬಾವಡಿ ಎಂದರೇನು ಅದರ ಮಹತ್ವ ಏನು ಅನ್ನೋದನ್ನು ನಾವು ಇಲ್ಲಿ ನೋಡೋಣ .

ತಾಜ್ ಬಾವಡಿ ಎಂದರೇನು?

ತಾಜ್ ಬಾವಡಿ ಎಂದರೇನು?

ತಾಜ್ ಬಾವಡಿ ಎಂದರೆ ಇದೊಂದು ದೊಡ್ಡ ನೀರಿನ ಟ್ಯಾಂಕಿ. ಇದರಲ್ಲಿ ಸಾಕಷ್ಟು ನೀರನ್ನು ಶೇಖರಿಸಿಡಲಾಗುತ್ತದೆ.

ಇಬ್ರಾಹಿಂ ಆದಿಲ್ ಷಾ ನಿರ್ಮಿಸಿದನು

ಇಬ್ರಾಹಿಂ ಆದಿಲ್ ಷಾ ನಿರ್ಮಿಸಿದನು

ಈ ಸ್ಮಾರಕವನ್ನು ಇಬ್ರಾಹಿಂ ಆದಿಲ್ ಷಾ 1620 ರಲ್ಲಿ ತಮ್ಮ ಹೆಂಡತಿ ರಾಣಿ ತಾಜ್ ಸುಲ್ತಾನ ಅವರ ಗೌರವಾರ್ಥವಾಗಿ ನಿರ್ಮಿಸಿದನು. ಇದು 35 ಚದರ ಅಡಿ ಮತ್ತು 52 ಅಡಿ ಎತ್ತರದ ಹೊರಗಿನ ಪ್ರದೇಶದೊಂದಿಗೆ 224 ಚದರ ಅಡಿ ಪ್ರದೇಶದಲ್ಲಿದೆ. ಪ್ರವೇಶ ದ್ವಾರವು ಎರಡು ಅಷ್ಟಭುಜಾಕೃತಿಯ ಗೋಪುರಗಳು ಗೋಥಿಕ್ ಶೈಲಿಯ ಒಂದು ಕಮಾನಿನ ಪ್ರವೇಶದ್ವಾರವಾಗಿದೆ.

ತಾಜ್ ಸುಲ್ತಾನ ನೆನಪಿಗಾಗಿ

ತಾಜ್ ಸುಲ್ತಾನ ನೆನಪಿಗಾಗಿ

PC:Akshatha

ಇದನ್ನು ಇಬ್ರಾಹಿಂ II ರ ಮೊದಲ ಪತ್ನಿ ತಾಜ್ ಸುಲ್ತಾನ ನೆನಪಿಗಾಗಿ ಕಟ್ಟಲಾಗಿರುವ ಜಲಾಶಯ ಎಂದು ಕರೆಯಲಾಗುತ್ತದೆ, ಪೂರ್ವ ಮತ್ತು ಪಶ್ಚಿಮ ಬದಿಯ ಗೋಪುರಗಳನ್ನು ವಿಶ್ರಾಂತಿ ಗೃಹವಾಗಿ ಬಳಸಲಾಗುತ್ತದೆ, ಇದು ವಾಯುವಿಹಾರಿಗಳಿಗೆ ವಸತಿ ಸೌಕರ್ಯ ಒದಗಿಸಿದೆ. ಈ ಹಂತಗಳು ನೀರಿನ ಅಂಚುಗಳಿಗೆ ಹತ್ತಿರವಿರುವ ಎತ್ತರದ ಗೋಡೆಗಳಿಂದ ಕೂಡಿದೆ.

 ಅತ್ಯದ್ಭುತ ವಿನ್ಯಾಸ

ಅತ್ಯದ್ಭುತ ವಿನ್ಯಾಸ

PC:Akshatha

ಷಾಹಿಯ ಆಳ್ವಿಕೆಯ ಅವಧಿಯಲ್ಲಿ ತಾಜ್ ಬಾವಡಿ ನೀರಿನ ಮುಖ್ಯ ಮೂಲವಾಗಿತ್ತು. ತಾಜ್ ಬವಾಡಿ ಅತ್ಯದ್ಭುತವಾಗಿ ನಿರ್ಮಿಸಲಾಗಿದೆ ಮತ್ತು ಚೆನ್ನಾಗಿ ವಿನ್ಯಾಸದ ಅಂಶಗಳು ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬಿಜಾಪುರದಲ್ಲಿ ಹಲವು ಬವಾಡಿಗಳು ಇವೆ ಮತ್ತು ತಾಜ್ ಬವಾಡಿ ಪ್ರಮುಖವಾದದ್ದು.

ಕಾಲುವೆಯ ಮೂಲಕ ನೀರು

ಕಾಲುವೆಯ ಮೂಲಕ ನೀರು

PC:Akshatha

ಈ ಬಾವಡಿಯ ನೀರನ್ನು ಬಿಜಾಪುರ ಸಿಟಿಯ ಒಳಗೆ ಕಾಲುವೆಯ ಮೂಲಕ ಬಿಡಲಾಗುತ್ತಿತ್ತು. ಇದು ಬಿಜಾಪುರದಲ್ಲಿರುವ ಇತರ ಬವಾಡಿಗಳಿಗಿಂತ ದೊಡ್ಡದಾಗಿದೆ. ಇಬ್ರಾಹಿಂ ಅದಿಲ್ ಶಾ ಹಾಗೂ ಮಹಮ್ಮದ್ ಅದಿಲ್ ಶಾ ಸಂದರ್ಭದಲ್ಲಿ ಇಲ್ಲಿ ಜನಸಂಖ್ಯೆ ಅಧಿಕ ಇತ್ತು. ಹಾಗಾಗಿ ಹೆಚ್ಚಿನ ನೀರಿನ ಅಗತ್ಯ ಇತ್ತು ಎನ್ನುತ್ತದೆ ಇತಿಹಾಸ.

 ನಿರ್ಲಕ್ಷ್ಯಕ್ಕೊಳಗಾಗಿದೆ

ನಿರ್ಲಕ್ಷ್ಯಕ್ಕೊಳಗಾಗಿದೆ

PC: Akshatha Inamdar

ಪ್ರಸ್ತುತ ಈ ಬಾವಿಯು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಬಾವಿಯಲ್ಲಿ ನೀರಿನ ನಿರ್ವಹಣೆ ನಿರ್ವಹಿಸುವುದಿಲ್ಲ ಮತ್ತು ಅಷ್ಟೊಂದು ಶುಚಿಯಾಗಿಲ್ಲ. ಡ್ರೈನೇಜ್ ನೀರು ಈ ಬಾವಿ ನೀರಿನೊಂದಿಗೆ ಮಿಶ್ರವಾಗಿ ಜಲಚರಗಳು ಸಾವನ್ನಪ್ಪಿದೆ. ಹಾಗಾಗಿ ಈಗ ಇದೊಂದು ಪಾಳು ಬಿದ್ದಿರುವ ಸ್ಮಾರಕವಾಗಿ ಉಳಿದಿದೆಯಷ್ಟೇ. .

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+