Search
  • Follow NativePlanet
Share
» »ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

ಶ್ರೀರಾಮನು ಪಿತೃ ವಾಕ್ಯ ಪರಿಪಾಲಕನು, ರಾಮ ಲಕ್ಷ್ಮಣರು ಆದರ್ಶ ಸಹೋದರರು, ಶ್ರೀರಾಮನ ಆಳ್ವಿಕೆಯ ಕಾಲ ಶ್ರೀ ರಾಮ ರಾಜ್ಯವಾಗಿ ವಿಶ್ವವ್ಯಾಪ್ತಿಯಾಗಿ ಹೆಸರುವಾಸಿಯಾದುದು. ತನ್ನ 14 ವರ್ಷ ವನವಾಸದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದವನು. ತನ್ನ ತಂ

ಶ್ರೀರಾಮನು ಪಿತೃ ವಾಕ್ಯ ಪರಿಪಾಲಕನು, ರಾಮ ಲಕ್ಷ್ಮಣರು ಆದರ್ಶ ಸಹೋದರರು, ಶ್ರೀರಾಮನ ಆಳ್ವಿಕೆಯ ಕಾಲ ಶ್ರೀ ರಾಮ ರಾಜ್ಯವಾಗಿ ವಿಶ್ವವ್ಯಾಪ್ತಿಯಾಗಿ ಹೆಸರುವಾಸಿಯಾದುದು. ತನ್ನ 14 ವರ್ಷ ವನವಾಸದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದವನು. ತನ್ನ ತಂದೆಯಾದ ದಶರಥ ಮಹಾರಾಜನ ಮರಣದ ನಂತರ ಪಿತೃಪಿಂಡವನ್ನು ಎಲ್ಲಿ ಆಚರಿಸಿದನು ಎಂಬುದು ನಿಮಗೆ ಗೊತ್ತ?

ಶ್ರೀರಾಮನು ಆ ದೇವಾಲಯದಲ್ಲಿಯೇ ಪಿತೃಕಾರ್ಯವನ್ನು ಏಕೆ ಮಾಡಿದನು? ದೇಶದಲ್ಲಿನ ಅನೇಕ ಪುಣ್ಯ ಸ್ಥಳಗಳಲ್ಲಿ ಪಿತೃಕಾರ್ಯ ಮಾಡಿದರು ಕೂಡ ಮೋಕ್ಷ ದೊರೆಯದ ಕಾರಣ ಪರಮೇಶ್ವರನನ್ನು ಬೇಡಿಕೊಂಡದ್ದರಿಂದ ಅತನು ಈ ಪ್ರದೇಶದ ಬಗ್ಗೆ ಸೂಚಿಸಿದನು. ಹಾಗಾದರೆ ಆ ಪವಿತ್ರವಾದ ಸ್ಥಳ ಯಾವುದು? ಎಂಬುದನ್ನು ಸಂಕ್ಷೀಪ್ತವಾಗಿ ಲೇಖನದ ಮೂಲಕ ತಿಳಿದುಕೊಳ್ಳಿ.

1.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

1.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

PC:YOUTUBE

ತಮಿಳುನಾಡು ರಾಜ್ಯದಲ್ಲಿ ತಿಲತರ್ಪಣಪುರಿ ಎಂಬ ಗ್ರಾಮದಲ್ಲಿ ಸ್ವರ್ಣವಲ್ಲಿ ಸಮೇತ ಮುಕ್ತೀಶ್ವರ ದೇವಾಲಯವಿದೆ. ಈ ದೇವಾಲಯವು ಕೂತನೂರು ಸರಸ್ವತಿ ದೇವಾಲಯಕ್ಕೆ ಕೇವಲ 3 ಕಿ.ಮೀಟರ್ ದೂರದಲ್ಲಿ ಹಾಗು ತಮಿಳುನಾಡಿನ ತಿರುನೆಲ್ಲಾರ್ ಶನಿಶ್ವೇರ ದೇವಾಲಯದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ.

2.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

2.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

PC:YOUTUBE

ಈ ದೇವಾಲಯದ ಸ್ಥಳ ಪುರಾಣವೆನೆಂದರೆ, ಶ್ರೀರಾಮನು ಪರಮೇಶ್ವರನನ್ನು ಈ ಸ್ಥಳದಲ್ಲಿಯೇ ತಪಸ್ಸು ಮಾಡಿ ತನ್ನ ತಂದೆಗೆ ಪಿತೃಕಾರ್ಯವಾದ ಪಿಂಡವನ್ನು ಇಟ್ಟನು ಎಂದು ಸ್ಥಳ ಪುರಾಣವು ತಿಳಿಸುತ್ತದೆ. ರಾಮಚಂದ್ರನು ಇಲ್ಲಿನ ಕೊಳದಲ್ಲಿ ಸ್ನಾನವನ್ನು ಆಚರಿಸಿ ತನ್ನ ತಂದೆಗೆ ಪಿತೃ ತರ್ಪಣದ ಸ್ಥಳ ಇದೇಯಾದ್ದರಿಂದ ಈ ಗ್ರಾಮವನ್ನು ತಿಲತರ್ಪಣಪುರಿ ಎಂದು ಕರೆಯುತ್ತಾರೆ.

3.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

3.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

PC:YOUTUBE

ತಿಲ ಎಂದರೆ ಎಳ್ಳು ಹಾಗು ತರ್ಪಣ ಎಂದರೆ ಬಿಡುವುದು, ಪುರಿ ಎಂದರೆ ಸ್ಥಳ. ಅಂದರೆ ರಾಮನು ಎಳ್ಳನ್ನು ಬಿಟ್ಟ ಸ್ಥಳವಾದ್ದರಿಂದ ಈ ಗ್ರಾಮಕ್ಕೆ "ತಿಲತರ್ಪಣ ಪುರಿ" ಎಂಬ ಹೆಸರಿನಿಂದ ಅಂದಿನ ಕಾಲದಿಂದಲೂ ಕರೆಯಲಾಗುತ್ತಿದೆ. ರಾಮಚಂದ್ರನು ತನ್ನ ವಂಶದಲ್ಲಿನವರ 4 ಪಿಂಡಗಳನ್ನು ಇಲ್ಲಿ ಇಟ್ಟದ್ದರಿಂದ ಅವುಗಳು ಲಿಂಗಗಳಾಗಿ ಮಾರ್ಪಾಟಾದವು ಎಂದು ಹೇಳುತ್ತಾರೆ.

4.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

4.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

PC:YOUTUBE

ಭಾರತ ಸ್ಥಳದಲ್ಲಿ ಪವಿತ್ರವಾದ 7 ಸ್ಥಳಗಳು ಎಂದು ಹೇಳಲಾಗುವ ಕಾಶಿ, ರಾಮೇಶ್ವರಂ, ಶ್ರೀವಾಣ್ಯಂ, ತಿರುವೆನ್‍ಕಾಡು, ಗಯ, ತ್ರಿವೇಣಿ ಸಂಗಮ ಸರಿಸಮಾನವಾದ ಪ್ರದೇಶವಾಗಿ ಈ ಸ್ಥಳವು ಪ್ರಸಿದ್ಧಿ ಹೊಂದಿದೆ. ಪಿಂಡ ಪ್ರಧಾನ ಮಾಡಬೇಕು ಎಂದು ಅನೇಕ ಮಂದಿ ಜನರು ಈ ಸ್ಥಳಕ್ಕೆ ಬಂದು ಕಾರ್ಯ ನಿರ್ವಹಿಸುತ್ತಿರುತ್ತಾರೆ.

5.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

5.ಶ್ರೀರಾಮನು ತನ್ನ ತಂದೆಗೆ ಪಿತೃಕಾರ್ಯ ನಿರ್ವಹಿಸಿದ ದೇವಾಲಯದ ರಹಸ್ಯ....

PC:YOUTUBE

ಯಾವುದೇ ದೋಷವಿದ್ದರು ಕೂಡ ಇಲ್ಲಿ ತೊಲಗಿ ಹೋಗುತ್ತದೆ ಎಂದು ಕೂಡ ನಂಬಲಾಗಿದೆ. ಅದೇ ರೀತಿ ಎಲ್ಲೂ ಇಲ್ಲದ ವಿಧವಾಗಿ ಮತ್ತೊಂದು ವಿಷೇಶವಿದೆ. ಅದೆನೆಂದರೆ ಇಲ್ಲಿ ನೆಲೆಸಿರುವ ವಿನಾಯಕನು ಮಾನವ ರೂಪದಲ್ಲಿ ದರ್ಶನವನ್ನು ನೀಡುತ್ತಾರೆ. ಈ ರೀತಿ ನೆಲೆಸಿರುವ ಗಣಪತಿಯನ್ನು "ನರಮುಖ ಗಣಪತಿ" ಅಥವಾ "ಆದಿ ವಿನಾಯಕರ್" ಎಂದು ಕರೆಯುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+