Search
  • Follow NativePlanet
Share
» »ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ಹೆಳವನಕಟ್ಟೆ ರಂಗನಾಥನ ದರ್ಶನ ಪಡೆದಿದ್ದೀರಾ?

ದಾವಣಗರೆ ಸಮೀಪದಲ್ಲಿರುವ ಹೆಳವನಕಟ್ಟೆ ರಂಗನಾಥ ಸ್ವಾಮಿ, ಅಥವಾ ಹೆಳವನಕಟ್ಟೆ ಗಿರಿಯಮ್ಮನ ಬಗ್ಗೆ ಕೇಳಿದ್ದೀರಾ? ಗಿರಿಯಮ್ಮ ರಂಗನಾಥ ಸ್ವಾಮಿಯ ಮಹಾನ್ ಭಕ್ತೆ. ಈಕೆಯಿಂದಾಗಿಯೇ ಈ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಹೊಂದಿತು.ಈ ಹೆಳವನಕಟ್ಟೆ ಗ್ರಾಮವನ್ನು ಕೋಮಾರನಹಳ್ಳಿ ಎಂದೂ ಕರೆಯುತ್ತಾರೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: facebook
ಬೆಂಗಳೂರಿನಿಂದ ಸುಮಾರು 5-6ಗಂಟೆಯಲ್ಲಿ ದಾವಣಗೆರೆಯನ್ನು ತಲುಪಬಹುದು. ಹೊನ್ನಾವಳಿ ಮಾರ್ಗದಲ್ಲಿ ಸಾಗಿದರೆ ಮಲೆಬೆನ್ನೂರು ಎನ್ನುವ ಊರು ಸಿಗುತ್ತದೆ. ಅಲ್ಲಿಗೆ ಸಮೀಪದಲ್ಲಿದೆ ರಂಗನಾಥನ ಸನ್ನಿಧಿ. ದಾವಣಗೆರೆಯಿಂದ ಸುಮಾರು 20 ಕಿ.ಮೀ ದೂರದಲ್ಲಿದೆ.

ಹೆಸರು ಬಂದಿದ್ದು ಹೇಗೆ?

ಹೆಸರು ಬಂದಿದ್ದು ಹೇಗೆ?

PC: facebook
ಸೂರ್ಯನ ಸಾರಥಿ ಅರುಣ ಶಾಪಗ್ರಸ್ಥನಾಗಿ ಹೆಳವನಾಗಿದ್ದನಂತೆ. ಹಸುವಿನ ಮೈ ತೊಳೆಯಲು ಹೆಳವನು ಒಂದು ಕಟ್ಟೆಯನ್ನು ನಿರ್ಮಿಸಿದ್ದನಂತೆ. ಹಾಗಾಗಿ ಇಲ್ಲಿಗೆ ಹೆಳವನ ಕಟ್ಟೆ ಎನ್ನಲಾಗುತ್ತದೆ. ಇಲ್ಲಿ ರಂಗನಾಥ ಸ್ವಾಮಿ ನೆಲೆಸಿರುವುದು ತಿಳಿದುಬಂದಿದ್ದು ಹಸುವಿನಿಂದ ಎನ್ನಲಾಗುತ್ತದೆ.

ರಂಗನಾಥನಿಗೆ ಹಾಲೆರೆಯುತ್ತಿದ್ದ ಹಸು

ರಂಗನಾಥನಿಗೆ ಹಾಲೆರೆಯುತ್ತಿದ್ದ ಹಸು

PC: facebook
ಹೆಳವ ತಾನು ಮೇಯಿಸುತ್ತಿದ್ದ ದನಗಳನ್ನು ಯಜಮಾನದ ಮನೆಗೆ ಹೋಗಿ ಬಿಡುತ್ತಿದ್ದ ಆಗ ಎಲ್ಲಾ ಹಸುಗಳು ಹಾಲನ್ನು ನೀಡುತ್ತಿದ್ದವು ಆದರೆ ಒಂದು ಹಸು ಮಾತ್ರ ಹಾಲು ನೀಡುತ್ತಿರಲಿಲ್ಲವಂತೆ. ಈ ಬಗ್ಗೆ ಪರೀಕ್ಷಿಸಿದಾಗ ಹಸು ರಂಗನಾಥ ಸ್ವಾಮಿಗೆ ಹಾಲು ಅರ್ಪಿಸುತ್ತಿದ್ದದು ಬೆಳಕಿಗೆ ಬರುತ್ತದೆ.

ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ

PC: facebook

ಒಂದು ದಿನ ಸಾದ್ವಿ ಒಬ್ಬರು ಇಲ್ಲಿಗೆ ಭೇಟಿ ನೀಡಿ ರಂಗನಾಥನ ಸೇವೆ ಮಾಡುತ್ತಾಳೆ. ಆಕೆ ಇಲ್ಲಿಗೆ ಬಂದ ನಂತರ ಈ ಸ್ಥಳ ಪ್ರಖ್ಯಾತವಾಗಿದದ್ದು. ಆ ಸಾದ್ವಿಯ ಹೆಸರು ಹೆಳವನಕಟ್ಟೆ ಗಿರಿಯಮ್ಮ.

ರಂಗಸ್ಪರಣೆಯಲ್ಲೇ ಜೀವನ ಕಳೆದ ಗಿರಿಯಮ್ಮ

ರಂಗಸ್ಪರಣೆಯಲ್ಲೇ ಜೀವನ ಕಳೆದ ಗಿರಿಯಮ್ಮ

PC: facebook
ಗಿರಿಯಮ್ಮ ವಾಸಮಾಡುತ್ತಿದ್ದ ಮಲೆಬೆನ್ನೂರಿನ ಮನೆಯಲ್ಲಿ ಇಂದಿಗೂ ಬೃಂದಾವನವನ್ನು ಕಾಣಬಹುದು. ಇಲ್ಲಿ ಸಾಕಷ್ಟು ಗೀತೆಗಳನ್ನು ರಚಿಸಿದ್ದಾರಂತೆ. ರಂಗಸ್ಪರಣೆಯಲ್ಲೇ ಬದುಕನ್ನು ಕಳೆಯುತ್ತಿದ್ದರಂತೆ.

ದೇಹತ್ಯಾಗ ಮಾಡಿದ್ದ ಸ್ಥಳ

ದೇಹತ್ಯಾಗ ಮಾಡಿದ್ದ ಸ್ಥಳ

PC: facebook

ಕಮ್ಮಾರಗಟ್ಟೆ ಎನ್ನುವ ಸ್ಥಳದಲ್ಲಿ ಬುಡಮೇಲಾದ ಹುಣಸೆ ಮರದ ಕೆಳಗೆ ದೇಹತ್ಯಾಗ ಮಾಡಿದರು ಎನ್ನಲಾಗುತ್ತದೆ. ಈಗಲೂ ಆ ಬುಡಮೇಲಾದ ಹುಣಸೆಮರವನ್ನು ಕಾಣಬಹುದು.

ರಂಗನಾಥ ಆಶ್ರಮ

ರಂಗನಾಥ ಆಶ್ರಮ

PC: facebook

ಇಲ್ಲಿ ಶಿವ, ಮಹಾಲಕ್ಷ್ಮೀಯನ್ನೂ ಪೂಜಿಸಲಾಗುತ್ತದೆ. ಇನ್ನೂ ಇಲ್ಲಿಗೆ ಬರುವ ಭಕ್ತರಿಗೆ ಉಳಿಯಲು ರಂಗನಾಥ ಆಶ್ರಮದಲ್ಲಿ ಉಚಿತ ವ್ಯವಸ್ಥೆಯೂ ಇದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+