ಹಿಂದೂಗಳ ಪವಿತ್ರಸ್ಥಳಗಳಲ್ಲಿ ಜಮ್ಮುಹಾಗೂ ಕಾಶ್ಮೀರದಲ್ಲಿರುವ ವೈಷ್ಣೋದೇವಿ ಮಂದಿರವೂ ಒಂದು. ದೇವಿಯ ತೀರ್ಥ ಸ್ಥಳಗಳಲ್ಲಿ ಒಂದಾದ ವೈಷ್ಣೋ ದೇವಿ ಮಂದಿರವು ಜಮ್ಮು-ಕಾಶ್ಮೀರದ ತ್ರಿಕುಟ ಬೆಟ್ಟದ ಮೇಲೆ ಇದೆ. ಪ್ರತಿವರ್ಷ ಲಕ್ಷಾಂತರ ಮಂದಿರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ವೈಷ್ಣೋದೇವಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಅಲ್ಲಿರುವ ಗುಹೆಗೂ ಇದೆ. ಈ ಗುಹೆಯು ಚಮತ್ಕಾರಿ ಗುಹೆಯಾಗಿದ್ದು ರಹಸ್ಯದಿಂದ ಕೂಡಿದೆ.

ವೈಷ್ಣೋದೇವಿಯ ಗುಹೆಗೆ ಸಂಬಂಧಿಸಿದ ರಹಸ್ಯ
ವೈಷ್ಣೋದೇವಿಯ ದರ್ಶನಕ್ಕೆ ಈಗ ಯಾವ ರಸ್ತೆಯ ಮೂಲಕ ಹೋಗಲಾಗುತ್ತದೆಯೋ ಅದು ದೇವಿಯ ದರ್ಶನಕ್ಕೆ ಹೋಗುವ ಮೂಲ ರಸ್ತೆಯಲ್ಲ. ಅದರ ಮೂಲ ರಸ್ತೆಯು ಗುಹಾ ಮಾರ್ಗವಾಗಿದೆ. ಇಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಯನ್ನು ಗಮನಿಸಿ 1977ರಲ್ಲಿ ಈ ಪರ್ಯಾಯ ಮಾರ್ಗವನ್ನು ನಿರ್ಮಿಸಲಾಯಿತು.

ಗುಹಾ ಮಾರ್ಗ
ಅದೃಷ್ಟವಂತ ಭಕ್ತರಿಗೆ ಈಗಲೂ ಆ ಗುಹಾ ಮಾರ್ಗದಿಂದ ದೇವಿಯ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿ 10 ಸಾವಿರಕ್ಕಿಂತ ಕಡಿಮೆ ಭಕ್ತರಿದ್ದಂದು ಈ ಹಳೆಯ ಮಾರ್ಗವನ್ನು ತೆರೆಯಲಾಗುತ್ತದೆ.

ಬೈರವನ ಶರೀರವಿದೆ
ವೈಷ್ಣೋದೇವಿಯ ಸನ್ನಿಧಿಯಲ್ಲಿ ಈ ಗುಹೆಗೆ ಬಹಳ ಮಹತ್ವವಿದೆ. ಈ ಪ್ರಾಚೀನ ಗುಹೆಯ ಒಳಗೆ ಬೈರವನ ಶರೀರವಿದೆ ಎನ್ನಲಾಗುತ್ತದೆ. ಇಲ್ಲಿ ದೇವಿಯು ತನ್ನ ತ್ರಿಶೂಲದಿಂದ ಬೈರವನನ್ನು ಸಂಹರಿಸಿದ್ದಳು. ಆಗ ಬೈರವನ ತಲೆ ಹಾರಿ ಬೈರವ ಘಾಟಿ ಬಳಿ ಬಿತ್ತು. ಹಾಗೂ ಶರೀರ ಇಲ್ಲೇ ಉಳಿದಿದೆ ಎನ್ನಲಾಗುತ್ತದೆ.

ಗಂಗಾ ನದಿ
ಈ ಪ್ರಾಚೀನ ಗುಹೆಯಲ್ಲಿ ಗಂಗಾ ನದಿಯು ಹರಿಯುತ್ತದೆ. ಈ ನದಿಯಲ್ಲಿ ಪ್ರವಿತ್ರರಾಗಿ ವೈಷ್ಣೋದೇವಿಯ ದರ್ಶನ ಪಡೆಯುವುದರಲ್ಲಿ ಬಹಳ ವಿಶೇಷತೆ ಇದೆ. ಹಾಗಾಗಿ ಈ ಗುಹೆಯು ಮಹತ್ವದ್ದಾಗಿದೆ.

ಗರ್ಭ ಜೂನ್
ವೈಷ್ಣೋದೇವಿ ಮಂದಿರ ತಲುಪುವ ಘಾಟಿಯಲ್ಲಿ ಹಲವು ಸಭಾಂಗಣಗಳಿವೆ. ಅವುಗಳಲ್ಲಿ ಅಂದಕುವಾರಿ ಸಭಾಂಗಣ ಕೂಡಾ ಒಂದು. ಇಲ್ಲಿ ಒಂದು ಗುಹೆ ಕೂಡಾ ಇದೆ. ಅದನ್ನು ಗರ್ಭಜೂನ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. 9 ತಿಂಗಳು ಮಗು ತಾಯಿಯ ಗರ್ಭದಲ್ಲಿ ಯಾವ ರೀತಿ ಇರುತ್ತದೋ ಹಾಗೆಯೇ ದೇವಿಯು ಇಲ್ಲಿ 9 ತಿಂಗಳು ಇದ್ದಳು ಎನ್ನಲಾಗುತ್ತದೆ.

ಮತ್ತೆ ಗರ್ಭದೊಳಗೆ ಹೋಗುವ ಅಗತ್ಯವಿಲ್ಲ
ಈ ಗರ್ಭಗುಹೆಯೊಳಗೆ ಹೋದ ಮನುಷ್ಯರಿಗೆ ಮತ್ತೆ ಗರ್ಭದೊಳಗೆ ಹೋಗುವ ಅಗತ್ಯವಿರುವುದಿಲ್ಲ. ಒಂದು ವೇಳೆ ಮತ್ತೆ ಗರ್ಭದೊಳಗೆ ಹೋದರೂ ಕಷ್ಟಪಡುವ ಸಂದರ್ಭ ಎದುರಾಗುವುದಿಲ್ಲ. ಜನನವು ಬಹಳ ವೈಭವಯುತವಾಗಿ ನಡೆಯುತ್ತದೆ ಎನ್ನಲಾಗುತ್ತದೆ.


Click it and Unblock the Notifications

















