Search
  • Follow NativePlanet
Share
» »ಪ್ರಸಿದ್ಧ ಶಿಲ್ಪಿಯೊಬ್ಬರು ನಿರ್ಮಿಸಿರುವ ಈ ಕಲ್ಲಿನ ಗಾರ್ಡನ್‌ನ ವಿಶೇಷತೆ ಏನು ಗೊತ್ತಾ?

ಪ್ರಸಿದ್ಧ ಶಿಲ್ಪಿಯೊಬ್ಬರು ನಿರ್ಮಿಸಿರುವ ಈ ಕಲ್ಲಿನ ಗಾರ್ಡನ್‌ನ ವಿಶೇಷತೆ ಏನು ಗೊತ್ತಾ?

ನೀವು ಸಾಕಷ್ಟು ಗಾರ್ಡನ್‌ಗಳನ್ನು ನೋಡಿರುವಿರಿ, ಆದರೆ ಕಲ್ಲಿನ ಗಾರ್ಡನ್‌ ನೋಡಿದ್ದೀರಾ? ಇಂತಹ ಒಂದು ವಿಶೇಷವಾದ ಕಲ್ಲಿನ ಗಾರ್ಡನ್ ಚಂಡೀಘಡ್‌ನಲ್ಲಿದೆ. ಇದನ್ನು ರಾಕ್‌ ಗಾರ್ಡನ್ ಎನ್ನುತ್ತಾರೆ. ಇದರ ವಿಶೇಷತೆ ಏನು ಅನ್ನೋದನ್ನು ತಿಳಿಯಬೇಕಾದರೆ ಮುಂದೆ ಓದಿ.

ನೇಕ್ ಚಂದ್

ನೇಕ್ ಚಂದ್

PC: Michael L. Kaufman

ಚಂಡೀಘಡ್‌ನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ರಾಕ್‌ ಗಾರ್ಡನ್ ಕೂಡಾ ಒಂದು. ಈ ಸುಂದರ ಕಲ್ಲಿನ ಉದ್ಯಾನವವನ್ನು ನೇಕ್ ಚಂದ್ ಎನ್ನುವ ವ್ಯಕ್ತಿ ವೇಸ್ಟ್‌ ಮೆಟಿರಿಯಲ್‌ಗಳಿಂದ ತಯಾರಿಸಿದ್ದಾರೆ.

40 ಸಾವಿರ ಎಕರೆ ಪ್ರದೇಶ

40 ಸಾವಿರ ಎಕರೆ ಪ್ರದೇಶ

PC:Michael L. Kaufman

ದೇಶದ ಪ್ರಸಿದ್ಧ ಶಿಲ್ಪಿಯು ಸುಮಾರು 40 ಸಾವಿರ ಎಕರೆ ಪ್ರದೇಶದಲ್ಲಿ ಈ ಉದ್ಯಾನವನವನ್ನು ನಿರ್ಮಿಸಿದ್ದಾರೆ. 1957ರಲ್ಲಿ ಈ ಕೆಲಸಕ್ಕೆ ಕೈ ಹಾಕಿದರು ನೇಕ್‌ಚಂದ್. ಸುಮಾರು 18 ವರ್ಷಗಳ ಕಠಿಣ ಪ್ರಯತ್ನಗಳ ನಂತರ ಈ ವಿಶ್ವಪ್ರಸಿದ್ಧ ರಾಕ್‌ ಗಾರ್ಡನ್‌ನ್ನು ತಯಾರಿಸಲಾಯಿತು.

ಅನುಪಯುಕ್ತ ವಸ್ತುಗಳ ಸಂಗ್ರಹ

ಅನುಪಯುಕ್ತ ವಸ್ತುಗಳ ಸಂಗ್ರಹ

PC: Vengolis

ನೇಕ್‌ಚಂದ್ ತನ್ನ ಬಿಡುವಿನ ಸಮಯದಲ್ಲಿ ಒಡೆದ ಟ್ಯೂಬ್‌ಲೈಟ್‌, ಬಳೆ, ಪಿಂಗಾಣಿ ಪಾತ್ರೆ, ಬಾಟಲಿಯ ಮುಚ್ಚಳ ಹೀಗೆ ಅನೇಕ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸುತ್ತಿದ್ದರು. ಅವರು ಈ ಕಸದಿಂದ ಒಂದು ಕಲಾಕೃತಿಯನ್ನು ತಯಾರಿಸುವ ಆಲೋಚನೆ ಹೊಂದಿದ್ದರು. ಅದರಂತೆಯೇ ತಮ್ಮ ಆಲೋಚನೆಗೆ ಒಂದು ಆಕಾರ ನೀಡಿದರು.

ಇಪ್ಪತ್ತು ವರ್ಷಗಳ ಕಾಲ

ಇಪ್ಪತ್ತು ವರ್ಷಗಳ ಕಾಲ

PC:Giridhar Appaji Nag Y

ಪ್ರತಿದಿನ ರಾತ್ರಿ ಸೈಕಲ್ ಏರಿ ಕಾಡಿನ ಕಡೆಗೆ ಹೋಗುತ್ತಿದ್ದರು. ಹೀಗೆ ಇಪ್ಪತ್ತು ವರ್ಷಗಳ ಕಾಲ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ಕೊನೆಗೆ ಸುಂದರವಾದ ಒಂದು ರಾಕ್‌ಗಾರ್ಡನ್‌ನ್ನು ನಿರ್ಮಿಸಿದರು.

ಎಲೆಕ್ಟ್ರಿಕಲ್ ವೇಸ್ಟ್‌ ಗೋಡೆ

ಎಲೆಕ್ಟ್ರಿಕಲ್ ವೇಸ್ಟ್‌ ಗೋಡೆ

PC:Nagesh Kamath

ರಾಕ್‌ಗಾರ್ಡನ್‌ನಲ್ಲಿ ನೀವು ಸಾಕಷ್ಟು ವಸ್ತುಗಳನ್ನು ನೋಡುತ್ತೀರಿ ಅವುಗಳನ್ನು ಎಷ್ಟೋ ಬಾರೀ ನೀವು ಬಿಸಾಡಿರಬಹುದು. ಅಂತಹ ವೇಸ್ಟ್‌ ಮೆಟಿರಿಯಲ್‌ಗಳಿಂದ ಈ ಗಾರ್ಡನ್‌ನ್ನು ತಯಾರಿಸಲಾಗಿದೆ. ಇಲ್ಲಿ ಒಂದು ಎತ್ತರದ ಗೋಡೆಯನ್ನು ಕಾಣಬಹುದು. ಇದನ್ನು ಸಂಪೂರ್ಣವಾಗಿ ಎಲೆಕ್ಟ್ರಿಕಲ್ ವೇಸ್ಟ್‌ನಿಂದ ತಯಾರಿಸಲಾಗಿದೆ.

ವಿದೇಶದಲ್ಲೂ ಪ್ರದರ್ಶನ

ವಿದೇಶದಲ್ಲೂ ಪ್ರದರ್ಶನ

PC:Giridhar Appaji Nag Y

ನೇಕ್‌ ಚಂದ್‌ರ ಈ ಕಲ್ಪನೆಯು ವಾಷಿಂಗ್‌ಟನ್‌ನ ಚಿಲ್ಡ್ರನ್ಸ್‌ ಮ್ಯೂಸಿಯಂ ಸೇರಿದಂತೆ ವಿದೇಶದ ಹಲವಾರು ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶಿಸಲಾಗಿದೆ. ಇಲ್ಲಿ ನಿಮಗೆ ಚೀನಾದ ಟೆರಾಕೋರ್ಟ್ ಆರ್ಮಿಯನ್ನು ಕಾಣಬಹುದು. ಜೊತೆಗೆ ಆದಿಕಾಲದ ಕೆಲವು ಸಂಗತಿಗಳನ್ನೂ ಕಾಣಬಹುದು.

ಎಲ್ಲಿದೆ ಈ ರಾಕ್‌ಗಾರ್ಡನ್

ಎಲ್ಲಿದೆ ಈ ರಾಕ್‌ಗಾರ್ಡನ್

PC:Ijon

ರಾಕ್‌ಗಾರ್ಡನ್‌ ಚಂಡೀಘಡ್‌ನಲ್ಲಿ ಸುಕ್‌ನಾ ನದಿಯ ಪಕ್ಕದಲ್ಲಿದೆ. ಪ್ರತಿದಿನ ಸುಮಾರು 5 ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ರಾಕ್‌ಗಾರ್ಡನ್‌ನಲ್ಲಿ ಮಹಿಳೆಯರು ತೀಜ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC:Ijon

ರಾಕ್‌ ಗಾರ್ಡನ್‌ನ್ನು ತಲುಪಲು ನೀವು ಚಂಡೀಘಡ್‌ ವರೆಗೆ ರೈಲು, ವಿಮಾನ ಮಾರ್ಗವಾಗಿ ಅಥವಾ ಬಸ್‌ ಮೂಲಕ ತಲುಪಬಹುದು. ಆ ನಂತರ ಟ್ಯಾಕ್ಸಿ ಅಥವಾ ಖಾಸಗಿ ವಾಹನವನ್ನು ಹಿಡಿದು ರಾಕ್‌ಗಾರ್ಡನ್ ತಲುಪಬಹುದು.

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

PC: Vengolis

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

PC: Vengolis

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

PC:Michael L. Kaufman

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

PC: Rod Waddington

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

ರಾಕ್‌ ಗಾರ್ಡನ್ ಚಿತ್ರಗಳು

PC:Ijon

ರಾಕ್‌ ಗಾರ್ಡನ್ ಚಿತ್ರಗಳು

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+