ಮೌಂಟ್ ಎವರೆಸ್ಟ್ ನಂತಹ ವಿಶ್ವದ ಅತ್ಯಂತ ಎತ್ತರದ ಶಿಖರಗಳಿಗೆ ನೆಲೆಯಾಗಿರುವ ಹಿಮಾಲಯವು ಒಂದು ವೀಕ್ಷಣೆಗೆ ಯೋಗ್ಯವಾದ ಸ್ಥಳವಾಗಿದೆ. ಭಾರತ, ನೇಪಾಳ, ಭೂತಾನ್ ಚೀನಾ ಮತ್ತು ಪಾಕಿಸ್ಥಾನಗಳಲ್ಲಿ ಹರಡಿರುವ ಹಿಮಾಲಯವು ವಿಶ್ವದ ಅತ್ಯಂತ ದೊಡ್ಡ ಜೀವವೈವಿಧ್ಯವನ್ನು ಹೊಂದಿರುವ ತಾಣಗಳಲ್ಲೊಂದಾಗಿದೆ. "ಹಿಮ" ಮತ್ತು "ಆಲಯ" ಎಂಬ ಪದಗಳ ಜೋಡಣೆಯಿಂದ "ಹಿಮಾಲಯ" ಎಂಬುದಾಗಿದ್ದು, ಈ ಪದವನ್ನು ಸಂಸ್ಕೃತದಿಂದ ಆರಿಸಲಾಗಿದೆ. ಈ ಭವ್ಯವಾದ ಪರ್ವತ ಶ್ರೇಣಿಯು ಬೆರಗುಗೊಳಿಸುವ ಭೂದೃಶ್ಯಗಳು, ಅತ್ಯಂತ ಎತ್ತರದ ಶ್ರೇಣಿಗಳು ಮತ್ತು ದಾರಿಗಳು, ಹಿಮನದಿಗಳು, ಎತ್ತರದ ಸರೋವರಗಳು, ಶ್ರೀಮಂತ ಮತ್ತು ವಿಭಿನ್ನವಾದ ಸಸ್ಯ ಮತ್ತು ಪ್ರಾಣಿ ಮುಂತಾದವುಗಳಿಗೆ ನೆಲೆಯಾಗಿದೆ.
ಹಿಮಾಲಯವು ಹಿಮ ಚಿರತೆ, ರೆಡ್ ಪಾಂಡಾ, ಹಿಮಾಲಯನ್ ತಾಹ್ರ್, ಕಸ್ತೂರಿ ಜಿಂಕೆ, ಹಿಮಾಲಯನ್ ನೀಲಿ ಕುರಿಗಳು ಮುಂತಾದ ಅಳಿವಂಚಿನಲ್ಲಿರುವ, ಅತ್ಯಂತ ಅಪರೂಪದ ಮತ್ತು ಸುಂದರವಾದ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಹಿಮಾಲಯ ಪ್ರದೇಶಗಳಲ್ಲಿ ನೋಡಬಹುದಾದ ಕೆಲವು ಸುಂದರವಾದ ಪಕ್ಷಿಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.

ಹಿಮಾಲಯನ್ ಮೋನಲ್
ವರ್ಣರಂಜಿತವಾಗಿ ಹಾಗೂ ಸುಂದರವಾಗಿ ಕಾಣುವ ಈ ಮೋನಲ್ ಪಕ್ಷಿಯು ನಾಚಿಕೆ ಸ್ವಭಾವವನ್ನು ಹೊಂದಿರುವ ಹಿಮಾಲಯ ಪ್ರಾಂತ್ಯದಲ್ಲಿ ಕಂಡು ಬರುವಂತಹ ಪಕ್ಷಿಯಾಗಿದ್ದು, ಉತ್ತರಾಖಂಡ್ ನ ರಾಜ್ಯ ಪಕ್ಷಿಯಾಗಿದ್ದು, ನೆರೆಯ ದೇಶವಾದ ನೇಪಾಳದ ರಾಷ್ಟ್ರ ಪಕ್ಷಿಯಾಗಿದೆ. ಪಕ್ಷಿ ಸಂಕುಲದ ಇನ್ನಿತರ ಪಕ್ಷಿಗಳಂತೆ ಗಂಡು ಮೋನಾಲ್ ಪಕ್ಷಿಗಳು ಮಂದ ಬಣ್ಣದ ಹೆಣ್ಣು ಹಕ್ಕಿಗಳಿಗಿಂತ ಬಹುವರ್ಣವನ್ನು ಹೊಂದಿರುತ್ತವೆ.
ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಾದ್ಯಂತ ಸುಲಭವಾಗಿ ಗುರುತಿಸಬಹುದಾದ ಹಿಮಾಲಯದ ಮೊನಲ್ಸ್ ಜಮ್ಮು ಮತ್ತು ಕಾಶ್ಮೀರ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಲ್ಲಿಯೂ ಕಂಡುಬರುತ್ತವೆ.

ಹಿಮಾಲಯನ್ ಸ್ನೋಕಾಕ್
ಬೇಟೆ ಜಾತಿಯ ಹಕ್ಕಿಯ ಜಾತಿಗೆ ಸೇರಿದ ಹಿಮಾಲಯನ್ ಸ್ನೋಕಾಕ್ ಇದು ಹಿಮಾಲಯ ಪರ್ವತಗಳ ಆಲ್ಪೈನ್ ಹುಲ್ಲುಗಾವಲುಗಳು ಮತ್ತು ಕಡಿದಾದ ರೇಖೆಗಳಲ್ಲಿ ಕಂಡುಬರುವ ದೊಡ್ಡ ಪಕ್ಷಿಯಾಗಿದೆ. ಇವುಗಳು ಹೆಚ್ಚಾಗಿ ಮರಗಳ ಸಾಲಿನ ಮೇಲೆ ಮತ್ತು ಹಿಮಗಳಮೇಲೆ, ಕಾಣಸಿಗುತ್ತವೆ. ಇವು ಬೇಸಿಗೆಯಲ್ಲಿ 4000-5000 ಎತ್ತರದಲ್ಲಿ ಕಂಡುಬರುತ್ತದೆ. ಕೌಜುಗ ಜಾತಿಯಂತಹ ಈ ಹಕ್ಕಿಗಳು ಬೇರೆಡೆ ವಲಸೆ ಹೋಗುವುದಿಲ್ಲವಾದ್ದರಿಂದ ಇವು ಚಳಿಗಾಲದಲ್ಲಿ ಕಡಿಮೆ ಎತ್ತರಕ್ಕೆ ಇಳಿಯುತ್ತವೆ.
ಹಿಮಾಲಯನ್ ಸ್ನೊಕಾಕ್ ಹಾರುವುದಿಲ್ಲವಾದರೂ ಇವು ನಡೆಯುವುದು ಮತ್ತು ಓಡುವುದನ್ನು ಮಾಡುತ್ತವೆ. ಆದರೆ ಅದು ಹಾರಬೇಕಾದರೆ ಅದು ಬಂಡೆ ಅಥವಾ ಪರ್ವತದಿಂದ ಧುಮುಕುತ್ತದೆ ಮತ್ತು ನೆಲಕ್ಕೆ ಹತ್ತಿರವಾಗಿ ಹಾರುತ್ತದೆ. ಈ ಪಕ್ಷಿಗಳು ಲಡಾಖ್ ನ ರುಂಬಕ್, ಚಾಂಗ್ ಲಾ ಮತ್ತು ಹೆಮಿಸ್, ಉತ್ತರಾಖಂಡ್ ನ ಮುನ್ಸಿಯಾರಿ, ಹಿಮಾಚಲ ಪ್ರದೇಶದ ಇಂದ್ರಾಹಾರ್ ಪಾಸ್, ಇತ್ಯಾದಿ ಸ್ಥಳಗಳಲ್ಲಿ ಕಂಡುಬರುತ್ತವೆ.

ಹಿಮಾಲಯನ್ ಗ್ರಿಫ಼ಾನ್ ರಣಹದ್ದು
ಹಿಮಾಲಯನ್ ಗ್ರಿಫಾನ್ ರಣಹದ್ದು ಇದನ್ನು ಹಿಮಾಲಯನ್ ರಣಹದ್ದು ಎಂದೂ ಕರೆಯಲಾಗುತ್ತದೆ ಇದು ಅತ್ಯಂತ ದೊಡ್ಡದಾಗಿದ್ದು ಹಿಮಾಲಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅವರು 4000 - 6000 ಅಡಿಗಳಷ್ಟು ಎತ್ತರದ ಬಂಡೆಗಳ ಮೇಲೆ ಯಾರಿಗೂ ಪ್ರವೇಶಿಸಲು ಸಾಧ್ಯವಾಗದ ಗೋಡೆಯ ಅಂಚುಗಳ ಮೇಲೆ ತಮ್ಮ ಗೂಡುಗಳನ್ನು ನಿರ್ಮಿಸುತ್ತವೆ. ಹಿಮಾಲಯನ್ ಗ್ರಿಫನ್ ರಣಹದ್ದುಗಳು 14000 ಅಡಿಗಳಷ್ಟು ಗೂಡುಗಳನ್ನು ನಿರ್ಮಿಸಿದ್ದು ಅತ್ಯಂತ ಎತ್ತರದ ಪ್ರದೇಶವಾಗಿದೆ.
ಹಿಮಾಲಯನ್ ಗ್ರಿಫನ್ ರಣಹದ್ದುಗಳನ್ನು ಧೌಲಾಧರ್ ಪರ್ವತ ಶ್ರೇಣಿಗಳು ಮತ್ತು ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆ, ಜಮ್ಮುವಿನ ಉಧಂಪುರ ಮತ್ತು ಕಿಶ್ತ್ವಾರ್ ಜಿಲ್ಲೆಗಳು, ಚೋಪ್ಟಾ ಮತ್ತು ಉತ್ತರಾಖಂಡದ ಕೇದಾರನಾಥ ವನ್ಯಜೀವಿ ಅಭಯಾರಣ್ಯ, ಡಾರ್ಜಿಲಿಂಗ್, ಅಸ್ಸಾಂ, ಇತ್ಯಾದಿ ಪ್ರದೇಶಗಳಲ್ಲಿ ಕಾಣಬಹುದು.

ಚೌಸ್
ಕೆಂಪು ಕೊಕ್ಕಿನ ಚೌಸ್ ಮತ್ತು ಹಳದಿ ಕೊಕ್ಕಿನ (ಅಥವಾ ಆಲ್ಪೈನ್ ಚೌಸ್) ಚೌಸ್ ಇವು ಹಿಮಾಲಯಗಳಲ್ಲಿ ಕಂಡುಬರುವ ಎರಡು ಜಾತಿಯ ಹಕ್ಕಿಗಳಾಗಿವೆ. ಇವು ಕಾಗೆಗಳ ಜಾತಿಗೆ ಸೇರಿದವುಗಳಾಗಿದ್ದು, ಅವುಗಳ ಹೊಳಪು ಕಪ್ಪು ಗರಿಗಳಿಂದ ಕೂಡಿದ ಇವುಗಳು ತಮ್ಮ ಬಣ್ಣದ ಕೊಕ್ಕು ಮತ್ತು ಕಾಲುಗಳನ್ನು ಹೊರತುಪಡಿಸಿ ಕಾಗೆಯಂತೆಯೇ ಕಾಣುತ್ತವೆ.
ರೆಡ್-ಬಿಲ್ಡ್ ಚೌಸ್ ಕೆಂಪು ಕೊಕ್ಕು ಮತ್ತು ಕೆಂಪು ಕಾಲುಗಳನ್ನು ಹೊಂದಿದೆ, ಮತ್ತು ಆಲ್ಪೈನ್ ಚೌಸ್ ಹಳದಿ ಕೊಕ್ಕು ಮತ್ತು ಕೆಂಪು ಕಾಲುಗಳನ್ನು ಹೊಂದಿರುತ್ತದೆ. ಇವುಗಳ ಮುಖ್ಯ ಆವಾಸಸ್ಥಾನವು ಪರ್ವತಗಳಲ್ಲಿ ಎತ್ತರದಲ್ಲಿದೆ ಮತ್ತು ಹಿಮಾಲಯದಲ್ಲಿ, ಇವು 8000-16000 ಅಡಿ ಎತ್ತರದಲ್ಲಿ ಕಂಡುಬರುತ್ತವೆ ಮತ್ತು ಬೇಸಿಗೆಯಲ್ಲಿ ಮತ್ತಷ್ಟು ಎತ್ತರದಲ್ಲಿ ಕಂಡುಬರುತ್ತವೆ.
ಸಿಕ್ಕಿಂ, ಲಡಾಖ್ ಮತ್ತು ಉತ್ತರಾಖಂಡದ ಹಲವು ಪ್ರದೇಶಗಳಲ್ಲಿ ಚೌಸ್ ಗಳನ್ನು ಕಾಣಬಹುದು. ಹಿಮಾಚಲ ಪ್ರದೇಶದ ಕಾಝಾ ಮತ್ತು ಸ್ಪಿತಿ ಕಣಿವೆಯ ಕಾಮಿಕ್ ಹಳ್ಳಿಯಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ.

ಹಿಮಾಲಯದ ಗೋಲ್ಡನ್ ಈಗಲ್
ಅದರ ಚುರುಕುತನ, ತೀಕ್ಷ್ಣವಾದ ಮತ್ತು ಬೃಹತ್ ಟ್ಯಾಲೋನ್ ಗಳೊಂದಿಗೆ, ಹಿಮಾಲಯನ್ ಗೋಲ್ಡನ್ ಈಗಲ್ ಅತ್ಯಂತ ಪ್ರಸಿದ್ಧ ರಾಪ್ಟರ್ ಗಳಲ್ಲಿ ಒಂದಾಗಿದೆ. ಇದು ನಿಸ್ಸಂದೇಹವಾಗಿ, ಎಲ್ಲಾ ಹಿಮಾಲಯದ ಪಕ್ಷಿಗಳಲ್ಲಿ ಅತ್ಯಂತ ದೊಡ್ಡದು. ಗಂಡು ಮತ್ತು ಹೆಣ್ಣು ಹಕ್ಕಿಗಳು ತಮ್ಮ ಕಂದು-ಕಪ್ಪು ದೇಹಗಳು, ಶಕ್ತಿಯುತ ರೆಕ್ಕೆಗಳೊಂದಿಗೆ ಒಂದೇ ರೀತಿ ಕಾಣುತ್ತವೆಯಾದರೂ, ಹೆಣ್ಣು ಹಕ್ಕಿಗಳು ಸಾಮಾನ್ಯವಾಗಿ ಗಂಡು ಹದ್ದುಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ.
ಲಡಾಖ್, ಸಿಕ್ಕಿಂ ಮತ್ತು ಭಾರತದ ಇತರ ಹಿಮಾಲಯ ಪ್ರದೇಶಗಳಲ್ಲಿ ಹಿಮಾಲಯನ್ ಗೋಲ್ಡನ್ ಈಗಲ್ ಗಳನ್ನು ಗುರುತಿಸಬಹುದು.


Click it and Unblock the Notifications
















