ಬಿಡುಗಡೆಯಾದ ಚಲನ ಚಿತ್ರಗಳನ್ನು ಟಿಕೆಟ್ ಪಡೆದು ವೀಕ್ಷಿಸುವುದು ಎಷ್ಟು ಸುಲಭವೋ ಅಷ್ಟೆ ಕಷ್ಟವಾಗಿರುತ್ತದೆ ಆ ಚಿತ್ರಗಳನ್ನು ನಿರ್ಮಿಸುವುದು. ಅದೇಷ್ಟೊ ನೂರಾರು ತಾಣಗಳಲ್ಲಿ ಚಿತ್ರೀಕರಣಗೊಂಡಿರುತ್ತದೆ, ಹಲವು ಕಟ್ಟಡಗಳಲ್ಲಿ ಚಿತ್ರೀಕರಣಗೊಂಡಿರುತ್ತದೆ, ಹಲವು ರಸ್ತೆ ಬೀದಿಗಳಲ್ಲಿ ಚಿತ್ರೀಕರಣಗೊಂಡಿರುತ್ತದೆ, ವಿವಿಧ ನಿಲ್ದಾಣಗಳಲ್ಲಿ ಚಿತ್ರೀಕರಣಗೊಂಡಿರುತ್ತದೆ. ಅಲ್ಲದೆ ಚಿತ್ರೀಕರಣ ಮಾಡುವಾಗ ಆಯಾ ಸ್ಥಳಗಳಲ್ಲಿ ಉಂಟಾಗುವ ಜನಸಂದಣಿಯನ್ನು ನಿಭಾಯಿಸುವುದು ಕೂಡ ಒಂದು ದೊಡ್ಡ ಸವಾಲು. ಈ ರೀತಿಯಾಗಿ ಚಿತ್ರೀಕರಣ ಮಾಡುವ ತಂಡ ಪಡುವ ಪಾಡು ಹೇಳತೀರದು.
ಆದರೆ, ಒಂದೆ ಸ್ಥಳದಲ್ಲಿ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ ನಿರಾಯಾಸವಾಗಿ ಚಿತ್ರೀಕರಣ ಮಾಡುವುದೆಂದರೆ...ನಿರ್ಮಾಪಕರು ಮಾತ್ರವಲ್ಲ ಚಿತ್ರ ತಂಡದವರು ನಿಟ್ಟುಸಿರು ಬಿಟ್ಟ ಹಾಗಿರುತ್ತದೆ. ಇಂತಹ ಸೌಲಭ್ಯಗಳನ್ನು ಒದಗಿಸುವುದೆ ಫಿಲ್ಮ್ ಸಿಟಿಗಳು. ಇಲ್ಲಿ ಮನೆಗಳಿಂದ ಹಿಡಿದು ಭವನಗಳು, ರಸ್ತೆಗಳಿಂದ ಹಿಡಿದು ನಿಲ್ದಾಣಗಳವರೆಗೂ ಎಲ್ಲವನ್ನು ಅಚ್ಚುಅಕಟ್ಟಾಗಿ ನಿರ್ಮಿಸಲಾಗಿರುತ್ತದೆ. ನಮ್ಮ ದೇಶದಲ್ಲೂ ಇಂತಹ ಫಿಲ್ಮ್ ಸಿಟಿಗಳನ್ನು ಕಾಣಬಹುದು. ಆದರೆ ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಮಾತ್ರ ಅಗ್ರ ಗಣ್ಯ ಸ್ಥಾನದಲ್ಲಿ ನಿಂತಿದೆ. ಆಂಧ್ರದ ಹೈದರಾಬಾದ್ ನಲ್ಲಿರುವ ಹಯಾತ್ ನಗರದ ಬಳಿ ಈ ಭವ್ಯ ಚಿತ್ರ ನಗರವು ನೆಲೆಸಿದೆ.
2000 ಎಕರೆಯಷ್ಟು ವಿಶಾಲವಾದ ಭೂಮಿಯಲ್ಲಿ ಹರಡಿರುವ ಈ ಫಿಲ್ಮ್ ಸಿಟಿ ಜಗತ್ತಿನ ಅತಿ ದೊಡ್ಡ ಸಂಘಟಿತ ಫಿಲ್ಮ್ ಸಿಟಿಯಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳ ಸಾಕಷ್ಟು ಚಲನಚಿತ್ರಗಳು, ಜಾಹೀರಾತುಗಳು ಇಲ್ಲಿ ಚಿತ್ರೀಕರಣಗೊಂಡಿವೆ ಹಾಗು ಗೊಳ್ಳುತ್ತಲೂ ಇವೆ. ಇನ್ನೊಂದು ಸಂಗತಿಯೆಂದರೆ ಇದೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿಯೂ ಹೆಸರುವಾಸಿಯಾಗಿದೆ.
ರಾಮೋಜಿ ಫಿಲ್ಮ್ ಸಿಟಿ ಹೇಗೆಲ್ಲ ಇದೆ ಎಂಬುದನ್ನು ಇಲ್ಲಿ ನೋಡಿ.

ಸ್ವಾಗತ ದ್ವಾರ:
ರಾಮೋಜಿ ಚಿತ್ರ ನಗರಕ್ಕೆ ಸ್ವಾಗತವನ್ನು ಕೋರುವ ಸ್ವಾಗತ ಕಮಾನು.
ಚಿತ್ರಕೃಪೆ: Rameshng

ಇಂಗ್ಲೆಂಡ್:
ಇಂಗ್ಲೆಂಡ್ ದೇಶವನ್ನು ಹೋಲುವಂತಹ ಯು.ಕೆ ಸೆಟ್ಟಿಂಗ್.
ಚಿತ್ರಕೃಪೆ: Shillika

ಅರಮನೆ ಸೆಟ್:
ರಾಜರುಗಳ ಆಸ್ಥಾನವನ್ನು ನೆನಪಿಸುವಂತಹ ಅರಮನೆಯ ಸೆಟ್.
ಚಿತ್ರಕೃಪೆ: Rameshng

ರೈಲು ನಿಲ್ದಾಣ:
ರೈಲಿಗೆ ಸಂಬಂಧಿಸಿದ ಭಾಗಗಳನ್ನು ಚಿತ್ರೀಕರಿಸಲು ನಿರ್ಮಿಸಲಾಗಿರುವ ಸೆಟ್.
ಚಿತ್ರಕೃಪೆ: Rameshng

ಅಕರ್ಷಕ:
ಫಿಲ್ಮ್ ನಗರದಲ್ಲಿ ಕಂಡುಬರುವ ಸುಂದರವಾದ ಉದ್ಯಾನ.
ಚಿತ್ರಕೃಪೆ: Vinayaraj

ರಸ್ತೆ ಬೀದಿಗಳು:
ಸ್ವಚ್ಛ, ಸುಂದರ, ಸುಸ್ಸಜಿತವಾಗಿ ನಿರ್ಮಿಸಲಾಗಿರುವ ರಸ್ತೆ ಬೀದಿಗಳು.
ಚಿತ್ರಕೃಪೆ: Vinayaraj

ಅಗಾಧ, ವಿಶಾಲ:
ಕಣ್ಣು ಚಾಚಿದಷ್ಟು ವಿಶಾಲವಾಗಿ ಹರಡಿರುವ ಚಿತ್ರ ನಗರ.
ಚಿತ್ರಕೃಪೆ: McKay Savage

ಪ್ರದರ್ಶನ:
ರಾಮೋಜಿ ಚಿತ್ರ ನಗರದಲ್ಲಿ ನಡೆಯುತ್ತಿರುವ ಒಂದು ಪ್ರದರ್ಶನ.
ಚಿತ್ರಕೃಪೆ: McKay Savage

ಗುಹೆ:
ಕೃತಕವಾಗಿ ನಿರ್ಮಿಸಲಾದ ಬಂಡೆ ಗುಹೆ.
ಚಿತ್ರಕೃಪೆ: T.sujatha

ವೈಭವ:
ಪುರಾತನ ರಾಜಾರಮನೆಗಳ ವೈಭವವನ್ನು ಸಾರುವ ಸೆಟ್.
ಚಿತ್ರಕೃಪೆ: T.sujatha

ಶೂಟಿಂಗ್:
ಚಿತ್ರೀಕರಣಕ್ಕಿಂತ ಮುಂಚೆ ತಾಲೀಮಿನಲ್ಲಿ ನಿರತರಾಗಿರುವ ನೃತ್ಯಗಾರರು.
ಚಿತ್ರಕೃಪೆ: McKay Savage

ಉದ್ಯಾನ:
ರಾಮೋಜಿ ಚಿತ್ರ ನಗರದಲ್ಲಿರುವ ಸುಂದರ ಉದ್ಯಾನ.
ಚಿತ್ರಕೃಪೆ: Joydeep

ಮನಸೂರೆಗೊಳ್ಳುವ ಹಸಿರು:
ವಿವಿಧ ಪ್ರಾಣಿಗಳ ಆಕಾರದಲ್ಲಿ ನಿರ್ಮಿಸಲಾದ ಸುಂದರ ಉದ್ಯಾನ.
ಚಿತ್ರಕೃಪೆ: Joydeep

ಹೂತೋಟ:
ರಂಗು ರಂಗಾಗಿ ಕಾಣುವ ಹೂ ತೋಟ.
ಚಿತ್ರಕೃಪೆ: Bhargavinf

ಕೊಳ:
ಚಿತ್ರೀಕರಣಕ್ಕನುಕೂಲವಾಗುವಂತಹ ಸುಂದರವಾದ ಅಲಂಕೃತ ಕೊಳ.
ಚಿತ್ರಕೃಪೆ: T.sujatha

ವಿಹಂಗಮ ನೋಟ:
ರಾಮೋಜಿ ಚಿತ್ರ ನಗರದ ಒಂದು ವಿಹಂಗಮ ನೋಟ.
ಚಿತ್ರಕೃಪೆ: Vinayaraj

ರಾಮೋಜಿ ಉದ್ಯಾನ:
ಚಿತ್ರನಗರಿಯಲ್ಲಿರುವ ಉದ್ಯಾನದ ಮತ್ತೊಂದು ಭವ್ಯ ನೋಟ.
ಚಿತ್ರಕೃಪೆ: Vinayaraj

ದೇವಿಯಾನಿ ಉದ್ಯಾನ:
ರಾಮೋಜಿ ಚಿತ್ರ ನಗರದಲ್ಲಿರುವ ದೇವಿಯಾನಿ ಉದ್ಯಾನ.
ಚಿತ್ರಕೃಪೆ: Vinayaraj

ದೇವಿಯಾನಿ:
ದೇವಿಯಾನಿ ಉದ್ಯಾನದ ಮತ್ತೊಂದು ನೋಟ.
ಚಿತ್ರಕೃಪೆ: Vinayaraj

ಕಲಾಕೃತಿಗಳು:
ದೇವಿಯಾನಿ ಉದ್ಯಾನದಲ್ಲಿರುವ ಶೃಂಗಾರಮಯ ಕಲಾಕೃತಿಗಳು.
ಚಿತ್ರಕೃಪೆ: Vinayaraj

ಆಧುನಿಕ ಕಲಾಕೃತಿ:
ಉದ್ಯಾನದಲ್ಲಿ ಕಂಡುಬರುವ ವಿನೂತನ ರೀತಿಯ ಕಲಾಕೃತಿ.
ಚಿತ್ರಕೃಪೆ: Vincelaconte

ಹಾಲಿವುಡ್:
ಹಾಲಿವುಡ್ ತಾಣವನ್ನು ನೆನಪಿಸುವ ಸೆಟ್.
ಚಿತ್ರಕೃಪೆ: Vinayaraj

ಸುತ್ತಾಟ:
ಪ್ರವಾಸಿಗರನ್ನು ಹೊತ್ತು ಚಿತ್ರ ನಗರವನ್ನು ಪ್ರದಕ್ಷಿಣೆ ಹಾಕುವ ವಾಹನ.
ಚಿತ್ರಕೃಪೆ: Rameshng

ವಿನೂತನ ಪ್ರತಿಮೆ:
ರಾಮೋಜಿ ನಗರದಲ್ಲಿ ಕಂಡುಬರುವ ಒಂದು ಪ್ರತಿಮೆ.
ಚಿತ್ರಕೃಪೆ: Joydeep

ರಿಫ್ರೆಶ್ಮೆಂಟ್ ಸ್ಟಾಲ್:
ಚಿತ್ರ ನಗರದಲ್ಲಿ ಚಹಾ ಕಾಫಿ ದೊರೆಯುವ ಸ್ಥಳ.
ಚಿತ್ರಕೃಪೆ: Joydeep

ಸುಂದರ ಕಲೆ:
ಆಧುನಿಕ ಯುಗದ ಸುಂದರವಾದ ಕಲಾ ಕೃತಿಗಳಿಂದ ತುಂಬಿ ಹೋಗಿದೆ ಈ ಚಿತ್ರ ನಗರ.
ಚಿತ್ರಕೃಪೆ: Vinayaraj

ಚಾರ್ಲಿ:
"ಇನ್ನೇನಪ್ಪಾ ಮಾಡುವುದು" ಎನ್ನುವ ಭಂಗಿಯಲ್ಲಿ ಕುಳಿತಿರುವ ಸುಪ್ರಸಿದ್ಧ ಹಾಸ್ಯ ನಟನಾಗಿದ್ದ ಚಾರ್ಲಿ ಚಾಪ್ಲೀನ್ ಅವರ ಪುತ್ಥಳಿ.
ಚಿತ್ರಕೃಪೆ: Vinayaraj

ಮನರಂಜನಾ ಉದ್ಯಾನ:
ರಾಮೋಜಿ ಚಿತ್ರ ನಗರದಲ್ಲಿರುವ ಮನರಂಜನಾ ಉದ್ಯಾನ.
ಚಿತ್ರಕೃಪೆ: T.sujatha

ವಿವಿಧ ಸೆಟ್ಟುಗಳು:
ಹಾಲಿವುಡ್ ಚಿತ್ರಗಳನ್ನು ನೆನಪಿಸುವಂತಹ ಸೆಟ್ಟುಗಳು.
ಚಿತ್ರಕೃಪೆ: Shillika

ಮೂವಿ ಮ್ಯಾಜಿಕ್:
ರಾಮೋಜಿ ಚಿತ್ರ ನಗರದಲ್ಲಿರುವ ಮೂವಿ ಮ್ಯಾಜಿಕ್ ಕಟ್ಟಡ.
ಚಿತ್ರಕೃಪೆ: Rameshng


Click it and Unblock the Notifications
















