Search
  • Follow NativePlanet
Share
» »ತುಮಕೂರಿನಲ್ಲಿರುವ ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ನೀಡಿ

ತುಮಕೂರಿನಲ್ಲಿರುವ ಪ್ರಸಿದ್ಧವಾದ ಸ್ಥಳಗಳಿಗೆ ಭೇಟಿ ನೀಡಿ

ತುಮಕೂರು ಬೆಂಗಳೂರಿಗೆ ಸಮೀಪದಲ್ಲಿರುವ ಸ್ಥಳವಾಗಿದ್ದು, ಹಲವಾರು ಮಂದಿ ಈ ಸ್ಥಳದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಬೆಂಗಳೂರಿನಿಂದ ತುಮಕೂರಿಗೆ ಸುಮಾರು 70 ಕಿ.ಮೀ ದೂರದಲ್ಲಿದೆ.

ತುಮಕೂರು ಬೆಂಗಳೂರಿಗೆ ಸಮೀಪದಲ್ಲಿರುವ ಸ್ಥಳವಾಗಿದ್ದು, ಹಲವಾರು ಮಂದಿ ಈ ಸ್ಥಳದಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಬಯಸುತ್ತಾರೆ. ಬೆಂಗಳೂರಿನಿಂದ ತುಮಕೂರಿಗೆ ಸುಮಾರು 70 ಕಿ.ಮೀ ದೂರದಲ್ಲಿದೆ. ತುಮಕೂರಿನ ಅಸು-ಪಾಸಿನಲ್ಲಿ ಹಲವಾರು ತಾಣಗಳಿದ್ದು, ಕುಟುಂಬ ಸಮೇತರೊಂದಿಗೆ, ಮಕ್ಕಳೊಂದಿಗೆ, ದಂಪತಿಗಳು ಇಲ್ಲಿನ ಎಲ್ಲಾ ತಾಣಗಳಿಗೆ ತೆರಳಬಹುದಾಗಿದೆ. ತುಮಕೂರಿನ ತಾಣಗಳಿಗೆ ಭೇಟಿ ನೀಡಲು ಅತ್ಯುತ್ತಮವಾದ ಕಾಲಾವಧಿ ಎಂದರೆ ಅದು ಜನವರಿ, ಫೆಬ್ರವರಿ, ಮಾರ್ಚ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಹಾಗು ಡಿಸೆಂಬರ್ ತಿಂಗಳುಗಳು.

ತುಮಕೂರಿನಲ್ಲಿ ಮುಖ್ಯವಾಗಿ 30 ಪ್ರವಾಸಿ ತಾಣಗಳಿವೆ. ಆ ಎಲ್ಲಾ ಸ್ಥಳಗಳಿಗೆ ಯಾವುದೇ ಕಾಲದಲ್ಲಿಯಾದರೂ ಭೇಟಿ ನೀಡಬಹುದು. ಪ್ರಸ್ತುತ ಲೇಖನದಲ್ಲಿ ತುಮಕೂರಿನಲ್ಲಿರುವ ಅದ್ಭುತವಾದ ತಾಣಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

1.ದೇವರಾಯನದುರ್ಗ

1.ದೇವರಾಯನದುರ್ಗ

PC: Srinivasa83

ದೇವರಾಯದುರ್ಗವು ಒಂದು ಅತ್ಯುತ್ತಮವಾದ ತಾಣವಾಗಿದೆ. ಇದು 3940 ಅಡಿ ಎತ್ತರದಲ್ಲಿದೆ. ಒಂದು ನೈಸರ್ಗಿಕ ವಸಂತದ ಸಮೀಪದಲ್ಲಿ ಒಂದು ಜನಪ್ರಿಯವಾದ ಗಿರಿಧಾಮವಾಗಿದೆ. ಬೆಟ್ಟದ ಮೇಲೆ ಯೋಗ ನರಸಿಂಹ ದೇವಾಲಯವಿದೆ. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಪ್ರಸಿದ್ಧವಾದ ಉತ್ಸವ ನಡೆಸಲಾಗುತ್ತದೆ. ದೇವರಾಯನದುರ್ಗಕ್ಕೆ ಒಂದು ದಿನದ ಮಟ್ಟಿಗೆ ತೆರಳಬಹುದು. ಇದೊಂದು ಪುಣ್ಯಸ್ಥಳವಾಗಿದ್ದು, ಹಲವಾರು ಪ್ರವಾಸಿಗರು ವಾರಾಂತ್ಯದ ಸಮಯದಲ್ಲಿ ಭೇಟಿ ನೀಡುತ್ತಾರೆ.

2.ಸಿದ್ಧರ ಬೆಟ್ಟ

2.ಸಿದ್ಧರ ಬೆಟ್ಟ

PC:Brunda Nagaraj

ಸಿದ್ಧರ ಬೆಟ್ಟ ಒಂದು ಕಲ್ಲಿನ ಬೆಟ್ಟವಾಗಿದೆ. ಒಂದು ದೇವಾಲಯ ಮತ್ತು ಕೆಲವು ಗುಹೆಗಳಿಗೆ ಪ್ರಸಿದ್ಧವಾಗಿದೆ. ಟ್ರೆಕ್ಕಿಂಗ್ ಮತ್ತು ಗುಹೆ ಪರಿಶೋಧನೆಯಂತಹ ಚಟುವಟಿಕೆಗಳಿಗೆ ಸೂಕ್ತವಾದ ಸ್ಥಳ ಇದಾಗಿದೆ. ಇದು ದಟ್ಟವಾದ ಅರಣ್ಯವನ್ನು ಹೊಂದಿದೆ. ಈ ಸುಂದರವಾದ ಬೆಟ್ಟ ಆನೇಕ ವಲಸೆ ಪಕ್ಷಿಗಳಿಗೆ ನೆಲೆಯಾಗಿದೆ. ಈ ಬೆಟ್ಟವು ತುಮಕೂರು ಪಟ್ಟಣದಿಂದ ಸುಮಾರು 35 ಕಿ.ಮೀ ಮತ್ತು ಕೊರಟಗೆರೆಯಿಂದ 12 ಕಿ.ಮೀ ದೂರದಲ್ಲಿದೆ.

3.ಶಿವಗಂಗ

3.ಶಿವಗಂಗ

PC: PlaneMad

ಶಿವಗಂಗ ಅಥವಾ ಶಿವಗಂಗೆ ತುಮಕೂರಿನ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಇದು ತುಮಕೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿದೆ. ಶಿವಗಂಗಾ ಬೆಟ್ಟವು ಗಂಗಾಧಾರೇಶ್ವರ ಮತ್ತು ಸ್ವರ್ಣಂಭರಿಗೆ ಮೀಸಲಾಗಿರುವ 2 ಶಿವನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಮಹಾಶಿವರಾತ್ರಿಯ ಉತ್ಸವದಂದು ಈ 2 ದೇವಾಲಯಗಳು ವಿಜೃಂಬಣೆಯಿಂದ ಆಚರಿಸಲಾಗುತ್ತದೆ. ಈ ದೇವಾಲಯಕ್ಕೆ ಹಲವಾರು ಪ್ರವಾಸಿಗರು ವಾತಾಂತ್ಯದಲ್ಲಿ ಹೆಚ್ಚಾಗಿ ಭೇಟಿ ನೀಡುತ್ತಾರೆ.

4.ಗುಲೂರು ಗಣೇಶ ದೇವಾಲಯ

4.ಗುಲೂರು ಗಣೇಶ ದೇವಾಲಯ

ತುಮಕೂರಿನ ಕುಣಿಕಲ್ ರಸ್ತೆಯಲ್ಲಿ 5 ಕಿ,ಮೀ ದೂರದಲ್ಲಿ ಗುಲೂರ್ ಗಣೇಶ ದೇವಾಲಯವಿದೆ. 50 ವರ್ಷಗಳ ಹಿಂದೆ ತೊಪ್ಪೆಗೌಡರಿಂದ ನಿರ್ಮಾಣ ಮಾಡಲ್ಪಟ್ಟ ಈ ದೇವಾಲಯವು ಯಾವುದೇ ಶಾಶ್ವತ ದೇವತೆಯನ್ನು ಹೊಂದಿಲ್ಲ. ವಿನಾಯಕ ಚತುರ್ಥಿಯ ದಿನದಲ್ಲಿ ಗಣಪತಿ ವಿಗ್ರಹವನ್ನು ನಿರ್ಮಿಸುವುದು ಪ್ರಾರಂಭವಾಗುತ್ತದೆ. ಇಲ್ಲಿ ಸ್ಥಾಪಿಸಲಾಗುವ ವಿಗ್ರಹವನ್ನು ಗುಲೂರ್ ಕೊಳದಲ್ಲಿ ಮುಳುಗಿಸಿ ಸಂಭ್ರಮ ಆಚರಿಸಲಾಗುತ್ತದೆ.

5.ಗೋರವನ ಹಳ್ಳಿ ಮಹಾಲಕ್ಷ್ಮೀ ದೇವಾಲಯ

5.ಗೋರವನ ಹಳ್ಳಿ ಮಹಾಲಕ್ಷ್ಮೀ ದೇವಾಲಯ

ಗೋರವನ ಹಳ್ಳಿ ಮಹಾಲಕ್ಷ್ಮೀ ದೇವಾಲಯವು ತುಮಕೂರು ಜಿಲ್ಲೆಯ ಕೊರಟುಗೆರೆ ತಾಲ್ಲೂಕಿನಲ್ಲಿದೆ. ಈ ದೇವಾಲಯವು ತುಮಕೂರು ಪಟ್ಟಣದಿಂದ ಸುಮಾರು 30 ಕಿ.ಮೀ ಮತ್ತು ಬೆಂಗಳೂರಿನಿಂದ 80 ಕಿ.ಮೀ ದೂರದಲ್ಲಿದೆ. ಇದು ಶ್ರೀ ಮಹಾಲಕ್ಷ್ಮೀಯು ಸ್ವಯಂ ಭೂವಾಗಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಪ್ರತಿ ಶುಕ್ರವಾರ ವಿಶೇಷವಾದ ಪೂಜೆಗಳನ್ನು ಇಲ್ಲಿ ಮಾಡಲಾಗುತ್ತದೆ. ಇದೊಂದು ಪುಣ್ಯಕ್ಷೇತ್ರವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+