Search
  • Follow NativePlanet
Share
» »ಮಿಜೋರಾಂಗೆ ಹೋದ್ರೆ ಎಲ್ಲೆಲ್ಲಾ ಸುತ್ತಾಡಬೇಕು ಗೊತ್ತಾ?

ಮಿಜೋರಾಂಗೆ ಹೋದ್ರೆ ಎಲ್ಲೆಲ್ಲಾ ಸುತ್ತಾಡಬೇಕು ಗೊತ್ತಾ?

By Manjula Balaraj Tantry

ಕೆಲವರಿಗೆ ಅಪರಿಚಿತವಾಗಿರುವ ಚಾಂಫೈ ನೈಸರ್ಗಿಕ ಸೌಂದರ್ಯತೆ ಮತ್ತು ಐತಿಹಾಸಿಕ ಅದ್ಬುತಗಳನ್ನು ಪ್ರತೀ ಹೆಜ್ಜೆಯಲ್ಲೂ ಹೊಂದಿದೆ. ಬೆಟ್ಟಗಳು ಕಣಿವೆಗಳಿಂದ ಮತ್ತು ಗೋರಿಗಳವರೆಗೆ , ಚಾಂಫೈ ಈಶಾನ್ಯ ಭಾರತದ ಅತ್ಯಂತ ಸುಂದರ ಸ್ಥಳಗಳಲ್ಲಿ ಒಂದಾಗಿದೆ. ಚಾಂಫೈನಲ್ಲಿ ಭೇಟಿ ನೀಡುವ ಪ್ರಮುಖ ಸ್ಥಳಗಳಲ್ಲಿ ಹನಾಹ್ಲಾನ್, ಮುರಾಪುಕ್, ಇತ್ಯಾದಿಗಳು ಒಳಗೊಂಡಿವೆ. ನೀವು ಗುಪ್ತ ಸೌಂದರ್ಯಗಳನ್ನು ಅನ್ವೇಷಿಸಲು ಬಯಸಿದರೆ, ಈ ಋತುವಿನಲ್ಲಿ ಚಾಂಫೈ ಗೆ ಭೇಟಿ ನೀಡಿ.

1 ಹನಾಹ್ಲಾನ್

1 ಹನಾಹ್ಲಾನ್

ಹನಾಹ್ಲಾನ್ ಚಾಂಫೈ ಸುಂದರವಾದ ಜಿಲ್ಲೆಯು ಹಲವಾರು ಕಿಲೋಮೀಟರ್ ಗಳಷ್ಟು ಉದ್ದದವರೆಗೆ ಹರಡಿದ್ದು ಅದರ ವಾತಾವರಣದಿಂದಾಗಿ, ದ್ರಾಕ್ಷಿ ಬೆಳೆಯುವ ಪ್ರದೇಶವಾಗಿದೆ. ಇದು ಸ್ಥಳೀಯ ಪ್ರವಾಸಿಗರು ಮತ್ತು ಆಫ್ಬೀಟ್ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ದ್ರಾಕ್ಷಿತೋಟಗಳು ಮತ್ತು ಅತಿವಾಸ್ತವಿಕವಾದ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ, ಹನಾಹ್ಲಾನ್ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ನೈಸರ್ಗಿಕ ಅಚ್ಚರಿಗಳಿಂದ ತುಂಬಿದೆ. ಮುಂಜಾನೆ ಮತ್ತು ಮುಸ್ಸಂಜೆಯ ಸಮಯದಲ್ಲಿ, ಈ ಮಲಿನವಾಗದ ಪ್ರದೇಶದ ವೈಭವವನ್ನು ಅನ್ವೇಷಿಸುವ ಹಲವಾರು ಸ್ಥಳೀಯ ಪ್ರವಾಸಿಗರನ್ನು ನೀವು ಕಾಣಬಹುದು. ಹನಾಹ್ಲಾನ್ ನ ಈ ದ್ರಾಕ್ಷಿ ತೋಟಕ್ಕೆ ಪ್ರವಾಸ ಮಾಡಿದರೆ ಹೇಗಿರಬಹುದು? ಇಲ್ಲಿಯ ಆಹ್ಲಾದಕರ ವಾತಾವರಣವು ಇಲ್ಲಿಯ ಸೌಂದರ್ಯತೆಗೆ ಇನ್ನಷ್ಟು ಮೆರುಗನ್ನು ನೀಡುತ್ತದೆ.

2 ಮರ್ಲೇನ್ ರಾಷ್ಟ್ರೀಯ ಉದ್ಯಾನವನ

2 ಮರ್ಲೇನ್ ರಾಷ್ಟ್ರೀಯ ಉದ್ಯಾನವನ

ಚಾಂಫೈ ಜಿಲ್ಲೆಯ ಮಾಯನ್ಮಾರ್ ಗಡಿಯಲ್ಲಿರುವ ಮರ್ಲೇನ್ ರಾಷ್ಟ್ರೀಯ ಉದ್ಯಾನವನವು ಮಿಜೋರಾಂ ನ ಒಂದು ಶ್ರೀಮಂತ ಭಾಗವಾಗಿದೆ. ಉಷ್ಣವಲಯದ ದಟ್ಟವಾದ ಅರಣ್ಯದಿಂದ ಆವೃತವಾದ ಇದು 1991ರಲ್ಲಿ ಸ್ಥಾಪನೆಯಾಯಿತು ಮತ್ತು ಇದು 200 ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಈ ಉದ್ಯಾನವನವು ಅಳಿವಂಚಿನಲ್ಲಿರುವ ಅನೇಕ ಜಾತಿಯ ಸಸ್ಯ ಹಾಗೂ ಪ್ರಾಣಿಗಳಿಗೆ ನೆಲೆಯಾಗಿದೆ. 150 ಜಾತಿಯ ಪಕ್ಷಿಗಳು, 35 ಜಾತಿಯ ಸಸ್ಯಗಳು, 15 ಜಾತಿಯ ಸಸ್ಥನಿಗಳು ಮತ್ತು 4 ಜಾತಿಯ ಆರ್ಕಿಡ್ ಗಳ ಇವೆಲ್ಲವನ್ನು ಹೊಂದಿರುವ ಈ ಸುಂದರವಾದ ರಾಷ್ಟ್ರೀಯ ಉದ್ಯಾನವನವು ಚಾಂಫೈ ಜಿಲ್ಲೆಯ ಶ್ರೀಮಂತವಾದ ಭಾಗವಾಗಿದೆ. ಇಲ್ಲಿ ಗುರುತಿಸಬಹುದಾದ ಪ್ರಮುಖ ಪ್ರಾಣಿಗಳೆಂದರೆ ಹುಲಿ, ಚಿರತೆ, ಹೂಲಾಕ್ ಗಿಬ್ಬನ್, ಬೆಟ್ಟದ ಮೈನಾ ಇತ್ಯಾದಿ.

3 ಚಾವಂಗ್ಲೈ

3 ಚಾವಂಗ್ಲೈ

PC- Bogman

ಚಾವಂಗ್ಲೈ ಒಂದು ಸಣ್ಣ ಹಳ್ಳಿಯಾಗಿದ್ದು ಇದು ಇಲ್ಲಿಯ ಐತಿಹಾಸಿಕ ತಾಣಗಳಿಗಾಗಿ ಪ್ರಸಿದ್ದಿಯನ್ನು ಒಳಗೊಂಡಿದೆ. ನರಭಕ್ಷಕ ಗುಹೆಗಳಿಂದ ಹಿಡಿದು ಯೋಧರ ಸಮಾಧಿಯವರೆಗೆ ಮತ್ತು ಮಿಜೋರಾಮ್ ನ ಅತಿದೊಡ್ಡ ಏಕಶಿಲೆಯ ಸ್ಮಾರಕಗಳವರೆಗೆ ಚಾವಂಗ್ಲೈಹೊಂದಿದೆ. ಚಾವಂಗ್ಲೈ ಅನೇಕ ಐತಿಹಾಸಿಕ ಸ್ಥಳಗಳಿಗೆ ನೆಲೆಯಾಗಿದ್ದು ಇವು ಮಿಜೋರಾಂನ ಹಿಂದಿನ ಮತ್ತು ಚಾಂಫೈನಲ್ಲಿ ಪ್ರಜಾಪ್ರಭುತ್ವದ ವಿಕಸನವನ್ನು ಪ್ರತಿಬಿಂಬಿಸುತ್ತದೆ. ಇಲ್ಲಿ ಕೆಲವು ಗುರುತಿಸುವಂತಹ ಸ್ಥಳಗಳಿದ್ದು ಅವುಗಳಲ್ಲಿ ಮಿಥಾ ಕಾನ್, ಹಮರ್ ಲುಂಗ್ಟಟ್, ಲಂಗ್ಫುನ್ ಸ್ಯಾಂಗ್ ಬರ್ ಮತ್ತು ಥಿಂಗ್ಟ್ಲಾಂಗ್ ಥ್ಲಾನ್ಮುಯೆಲ್ ಹಮ್ಸಾಬೇರ್ ನೀವು ಈಶಾನ್ಯ ಭಾರತಕ್ಕೆ ಎಂದಿಗೂ ಹೋಗಿಲ್ಲದಿದ್ದಲ್ಲಿ ಮತ್ತು ಅದರ ಸೌಂದರ್ಯವನ್ನು ಎಂದಿಗೂ ಪರಿಶೋಧಿಸದಿದ್ದರೆ, ಈ ಪ್ರಸಿದ್ಧ ಸ್ಥಳವನ್ನು ಭೇಟಿ ಮಾಡಿ.

4 ಮುರಾಪುಕ್

4 ಮುರಾಪುಕ್

ಚಾಂಫೈ ಜಿಲ್ಲೆಯ ಝೊಟೆ ಗ್ರಾಮದಲ್ಲಿ ಮುರಾ ಪಾಕ್ ಒಂದು ಪ್ರಾಚೀನ ತಾಣವಾಗಿದೆ. ಇದು 6 ಗುಹೆಗಳನ್ನು ಒಳಗೊಂಡಿದೆ, ಇದನ್ನು ಸ್ಥಳೀಯ ಗ್ರಾಮಸ್ಥರು ಆಶ್ರಯವಾಗಿ ಮತ್ತು ಅಡಗಿಸಿಕೊಳ್ಳುವ ಸ್ಥಳವಾಗಿ ಉಪಯೋಗಿಸುತ್ತಿದ್ದರು. ದಂತಕಥೆಗಳ ಪ್ರಕಾರ ಮುರಾ ಒಂದು ಉಗ್ರ ಮತ್ತು ಕ್ರೂರ ಹದ್ದಾಗಿದ್ದು ಸ್ಥಳೀಯ ಗ್ರಾಮಸ್ಥರ ಮೇಲೆ ಬೇಟೆಯಾಡುತ್ತಿತ್ತು. ಆದುದರಿಂದ ಸ್ಥಳೀಯ ಗ್ರಾಮಸ್ಥರು ಉಪಾಯ ಹೂಡಿ ಈ ಹದ್ದಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಗುಹೆಗಳನ್ನು ವಾಸಿಸಲು ಉಪಯೋಗಿಸಿದರು ಎಂದು ಹೇಳಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+