Search
  • Follow NativePlanet
Share
» »ಹೆಚ್ಚಿನ ಪ್ರವಾಸಿಗರು “ಅಲೆಪ್ಪಿ”ಯನ್ನು ಇಷ್ಟಪಡಲು ಕಾರಣ ಇದೇ ನೋಡಿ

ಹೆಚ್ಚಿನ ಪ್ರವಾಸಿಗರು “ಅಲೆಪ್ಪಿ”ಯನ್ನು ಇಷ್ಟಪಡಲು ಕಾರಣ ಇದೇ ನೋಡಿ

ಕೇರಳ ರಾಜ್ಯದಲ್ಲಿ ಅಲೆಪ್ಪಿ ಎಂಬ ಸುಂದರವಾದ ಸ್ಥಳದ ಬಗ್ಗೆ ಖಂಡಿತ ಪ್ರವಾಸಿ ಪ್ರಿಯರಿಗೆ ತಿಳಿದಿರುತ್ತದೆ. ಇದನ್ನು ಆಲಪ್ಪುಳ ಎಂದೂ ಕರೆಯುತ್ತಾರೆ. ಸರಿಯಾದ ಪಟ್ಟಣ ಯೋಜನೆಯ ಪ್ರಕಾರ ನಿರ್ಮಿಸಲಾದ ಭಾರತದ ಅತ್ಯಂತ ಹಳೆಯ ನಗರಗಳಲ್ಲಿ ಅಲೆಪ್ಪಿ ಒಂದಾಗಿದೆ. ಇದು ಹಿನ್ನೀರಿನ ಕಾಲುವೆಗಳು, ಕಡಲತೀರಗಳು, ಭತ್ತದ ಗದ್ದೆಗಳು ಮತ್ತು ಲಗೂನ್‌ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ವಿಶೇಷವೆ ಹಿನ್ನೀರು. ಇದು ಬಹಳ ಸುಂದರವಾಗಿದೆ. ಆದ್ದರಿಂದಲೇ ಜನರು ಅಲೆಪ್ಪಿಯನ್ನು ಪೂರ್ವದ ವೆನಿಸ್ ಎಂದೂ ಕರೆಯುತ್ತಾರೆ. ಅಲೆಪ್ಪಿ ಪ್ರತಿ ವರ್ಷವೂ ಬಹಳಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೇರಳಕ್ಕೆ ಪ್ರವಾಸ ಆಯೋಜಿಸದರೆ ಬಹುತೇಕರ ಆಯ್ಕೆ ಈ ಅಲೆಪ್ಪಿ ಆಗಿರುತ್ತದೆ. ಹಾಗಾದರೆ ಪ್ರವಾಸಿಗರು ಅಲೆಪ್ಪಿ ಇಷ್ಟಪಡಲು ಕಾರಣಗಳನ್ನು ತಿಳಿದುಕೊಳ್ಳೋಣ ಬನ್ನಿ...

alleppy house boat

ಇವೇ ನೋಡಿ ಅಲೆಪ್ಪಿಯ ವಿಶೇಷತೆಗಳು

ಹೌಸ್‌ಬೋಟ್

ಅಲೆಪ್ಪಿಯಲ್ಲಿ ನೀವು ಹೌಸ್‌ಬೋಟ್ ಅನ್ನು ಕಾಣಬಹುದು. ಹೌಸ್‌ಬೋಟ್ ದೊಡ್ಡ ದೋಣಿಯಾಗಿದ್ದು, ಇದರಲ್ಲಿ ವಾಸಿಸಲು ಸಂಪೂರ್ಣ ವ್ಯವಸ್ಥೆ ಇದೆ. ಈ ಹೌಸ್‌ಬೋಟ್‌ಗಳಲ್ಲಿ ಕುಳಿತು ನೀವು ಸರೋವರದಲ್ಲಿ ಸುತ್ತಾಡಬಹುದು ಮತ್ತು ಸುತ್ತಲೂ ಸುಂದರವಾದ ನೀರಿನ ನೋಟವನ್ನು ಕಣ್ತುಂಬಿಕೊಳ್ಳಬಹುದು. ಈ ಅನುಭವವು ತುಂಬಾ ಆಹ್ಲಾದಕರವಾಗಿರುತ್ತದೆ. ಇಲ್ಲಿ ನೀವು ಪ್ರಕೃತಿಗೆ ಹತ್ತಿರವಾಗಬಹುದು.

ವೆಂಬನಾಡ್ ಸರೋವರ

ವೆಂಬನಾಡ್ ಸರೋವರವು ಭಾರತದ ಅತಿದೊಡ್ಡ ಸರೋವರಗಳಲ್ಲಿ ಒಂದಾಗಿದೆ. ಈ ಸರೋವರ ಇರುವುದು ಸಹ ಅಲೆಪ್ಪಿಯಲ್ಲಿ. ಇಲ್ಲಿನ ಪ್ರಾಕೃತಿಕ ದೃಶ್ಯ ತುಂಬಾ ಸುಂದರವಾಗಿದೆ. ಈ ಸರೋವರದಲ್ಲಿ ನೀವು ಬೋಟಿಂಗ್ ಮತ್ತು ಮೀನುಗಾರಿಕೆಯಂತಹ ಜಲ ಕ್ರೀಡೆಗಳಲ್ಲಿ ಭಾಗಿಯಾಗಬಹುದು. ಜೊತೆಗೆ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆರಾಮದಾಯಕ ಸಮಯವನ್ನು ಕಳೆಯಬಹುದು ಮತ್ತು ನೈಸರ್ಗಿಕ ಸೌಂದರ್ಯವನ್ನು ಆನಂದಿಸಬಹುದು.

ಬೋಟ್ ರೇಸ್

ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಅಲೆಪ್ಪಿಯಲ್ಲಿ ದೊಡ್ಡ ದೋಣಿ ಸ್ಪರ್ಧೆ ನಡೆಯುತ್ತದೆ. ಇದನ್ನು ಸ್ನೇಕ್ ಬೋಟ್ ರೇಸ್ ಎಂದು ಕರೆಯಲಾಗುತ್ತದೆ. ದೊಡ್ಡ ದೋಣಿಗಳು ನೀರಿನಲ್ಲಿ ವೇಗವಾಗಿ ಚಲಿಸುವ ಕಾರಣ ಈ ರೇಸ್ ವೀಕ್ಷಿಸಲು ಬಹಳ ರೋಮಾಂಚನಕಾರಿಯಾಗಿರುತ್ತದೆ. ಈ ಓಟವನ್ನು ವೀಕ್ಷಿಸಲು ಅನೇಕರು ಆಗಮಿಸಿ ಉತ್ಸಾಹ ತುಂಬುತ್ತಾರೆ. ನಾವಿಕರು ತಮ್ಮ ಎಲ್ಲಾ ಶಕ್ತಿ ಮತ್ತು ಕಠಿಣ ಪರಿಶ್ರಮದಿಂದ ದೋಣಿಯನ್ನು ಓಡಿಸುತ್ತಾರೆ, ಇದರಿಂದ ಅವರು ಗೆಲ್ಲಲು ಸಾಧ್ಯ. ಈ ಹಬ್ಬವು ಅಲೆಪ್ಪಿಯ ಸಂಸ್ಕೃತಿಯ ಒಂದು ದೊಡ್ಡ ಭಾಗವಾಗಿದೆ.

alleppybeach

ಬೀಚ್‌ಗಳು

ಆಲಪ್ಪುಳ ಬೀಚ್ ಅನ್ನು ಅಲೆಪ್ಪಿ ಬೀಚ್ ಎಂದೂ ಕರೆಯುತ್ತಾರೆ. ದಟ್ಟವಾದ ತಾಳೆ ಮರಗಳು, ಪುರಾತನ ದೀಪಸ್ತಂಭ, ಸಮುದ್ರ, ಕಾಲುವೆಗಳು ಮತ್ತು ಸಿಹಿನೀರಿನ ನದಿಗಳ ಆಕರ್ಷಕ ಮಿಶ್ರಣ ಬೀಚ್ ಸೌಂದರ್ಯವನ್ನು ಹೆಚ್ಚಿಸಿದೆ. ಈ ಸುಂದರವಾದ ಕಡಲತೀರದಲ್ಲಿ ನೀವು ವಿಶ್ರಾಂತಿ ಕ್ಷಣಗಳನ್ನು ಕಳೆಯಬಹುದು. ಇದಲ್ಲದೆ, ಈ ಬೀಚ್ ಪ್ಯಾರಾಸೈಲಿಂಗ್, ಬೀಚ್ ವಾಲಿಬಾಲ್ ಮತ್ತು ಸರ್ಫಿಂಗ್‌ನಂತಹ ಚಟುವಟಿಕೆಗಳಿಗೆ ಪರಿಪೂರ್ಣವೆಂದು ಪರಿಗಣಿಸಲಾಗಿದೆ.

ಅಲೆಪ್ಪಿಯಿಂದ ಕೇವಲ 11 ಕಿ.ಮೀ. ದೂರದಲ್ಲಿರುವ ಮರಾರಿಕುಲಂ ಪಟ್ಟಣದಲ್ಲಿರುವ ಮರಾರಿ ಬೀಚ್ ಅತ್ಯುತ್ತಮ ರಜೆಯ ತಾಣವಾಗಿದೆ. ಸಮುದ್ರದ ನೀರು ಸ್ಪಷ್ಟವಾಗಿದೆ ಮತ್ತು ಈಜಲು ಸೂಕ್ತವಾಗಿದೆ. ಈ ಪ್ರದೇಶದಲ್ಲಿ ಇರುವ ಹಲವಾರು ರೆಸಾರ್ಟ್‌ಗಳು ಮತ್ತು ಹೋಮ್‌ಸ್ಟೇ ನಂತಹ ವಸತಿ ಆಯ್ಕೆಗಳು ಈ ಬೀಚ್ ಅನ್ನು ಅಲೆಪ್ಪಿಯಲ್ಲಿರುವ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿಸಿದೆ.

ತಂಪೋಲಿ ಬೀಚ್ ನಿಮ್ಮ ಸಂಗಾತಿಯೊಂದಿಗೆ ಸೂರ್ಯಾಸ್ತವನ್ನು ಆನಂದಿಸಲು ಸೂಕ್ತ ಸ್ಥಳವಾಗಿದೆ. ನೀವು ಇಲ್ಲಿ ಚಿನ್ನದ ಮರಳಿನ ಮೇಲೆ ವಿಶ್ರಾಂತಿ ಪಡೆಯಬಹುದು. ಸಮುದ್ರ ಮತ್ತು ಹಸಿರನ್ನು ಒಟ್ಟೊಟ್ಟಿಗೆ ಆನಂದಿಸಬಹುದು. ನಿಮ್ಮ ಅಲೆಪ್ಪಿ ಪ್ರವಾಸವನ್ನು ಕೊನೆಗೊಳಿಸಲು ಇದು ಸೂಕ್ತವಾದ ಸ್ಥಳವಾಗಿರುವುದರಿಂದ ನಿಮ್ಮ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಈ ಸ್ಥಳವನ್ನು ಸೇರಿಸಿರುವುದನ್ನು ಮರೆಯಬೇಡಿ.

birdsanctuary1

ಪಕ್ಷಿಧಾಮ

ಅಲೆಪ್ಪಿ ಸಮೀಪದ ಕುಮಾರಕೊಮ್ ಸುಂದರವಾದ ಪಕ್ಷಿಧಾಮವನ್ನು ಹೊಂದಿದೆ, ಇಲ್ಲಿ ನೀವು ವಿವಿಧ ಪಕ್ಷಿಗಳನ್ನು ನೋಡಬಹುದು. ಈ ಸ್ಥಳವು ಪಕ್ಷಿ ಪ್ರಿಯರಿಗೆ ಬಹಳ ವಿಶೇಷವಾಗಿದೆ. ವಿವಿಧ ಋತುಗಳಲ್ಲಿ ಹಲವು ಬಗೆಯ ವಲಸೆ ಹಕ್ಕಿಗಳೂ ಇಲ್ಲಿಗೆ ಬರುತ್ತವೆ. ನೀವು ಪ್ರಕೃತಿ ಮತ್ತು ಪಕ್ಷಿಗಳನ್ನು ಇಷ್ಟಪಡುವವರಾಗಿದ್ದರೆ, ಈ ಸ್ಥಳವು ನಿಮಗೆ ತುಂಬಾ ಒಳ್ಳೆಯದು. ಇಲ್ಲಿಗೆ ಬರುವ ಮೂಲಕ ನೀವು ಶಾಂತಿಯುತವಾಗಿ ಪಕ್ಷಿಗಳ ಚಿಲಿಪಿಲಿಯನ್ನು ಆಲಿಸಬಹುದು ಮತ್ತು ಅವುಗಳ ವರ್ಣರಂಜಿತ ನೋಟವನ್ನು ಆನಂದಿಸಬಹುದು.

ಅಂಬಲಪ್ಪುಳ ಶ್ರೀ ಕೃಷ್ಣ ದೇವಸ್ಥಾನ

ಅಂಬಲಪ್ಪುಳ ಶ್ರೀ ಕೃಷ್ಣ ದೇವಸ್ಥಾನವು ಅಲಪ್ಪುಳ ಜಿಲ್ಲೆಯಲ್ಲಿರುವ ಶ್ರೀಕೃಷ್ಣನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಸಾಂಪ್ರದಾಯಿಕ ಕೇರಳ ಶೈಲಿಯ ವಾಸ್ತುಶಿಲ್ಪದ ಮಾದರಿಯಲ್ಲಿ ನಿರ್ಮಿಸಲಾದ ಈ ದೇವಾಲಯವು ಪಾಲಾ ಪಾಯಸಂ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಿಹಿ ಹಾಲಿನಲ್ಲಿ ತಯಾರಿಸಲಾದ ರುಚಿಕರವಾದ ಅಕ್ಕಿ ಪಾಯಸಕ್ಕೆ ಹೆಸರುವಾಸಿಯಾಗಿದೆ. ಇದನ್ನು 'ದಕ್ಷಿಣದ ದ್ವಾರಕಾ' ಎಂದೂ ಕರೆಯುತ್ತಾರೆ. ಈ ದೇವಾಲಯವನ್ನು ಕ್ರಿ.ಶ 15 ರಿಂದ 17 ರ ನಡುವೆ ಸ್ಥಳೀಯ ರಾಜ ಚೆಂಬಕಸ್ಸೆರಿ ಪೂರ್ದಮ್ ತಿರುನಾಳ್ ದೇವನಾರಾಯಣನ್ ಥಂಪುರನ್ ನಿರ್ಮಿಸಿದ ಎಂದು ನಂಬಲಾಗಿದೆ.

champakulamchurch

ಚಂಪಕುಲಂ ಸೇಂಟ್ ಮೇರಿಸ್ ಫೊರೇನ್ ಚರ್ಚ್

ಕ್ರಿ.ಶ. 427 ರಲ್ಲಿ ನಿರ್ಮಿಸಲಾದ ಈ ಚರ್ಚ್ ಇಡೀ ಭಾರತದಲ್ಲಿನ ಅತ್ಯಂತ ಹಳೆಯ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ಗಳಲ್ಲಿ ಒಂದಾಗಿದೆ. ಇದರ ವಾಸ್ತುಶೈಲಿಯು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಮುತ್ತಿನಂಥ ಬಿಳಿ ಕಟ್ಟಡವು ಸಿರಿಯನ್ ಮತ್ತು ಪೋರ್ಚುಗೀಸ್ ವಿನ್ಯಾಸಗಳ ಅದ್ಭುತ ಸಂಯೋಜನೆಯಾಗಿದೆ. ಈ ಚರ್ಚ್ ಶತಮಾನಗಳ ಹಿಂದೆ ಕ್ಯಾಥೋಲಿಕ್ ಮತ್ತು ಜಾಕೋಬಿಯನ್ ಸಿರಿಯನ್ನರ ನಡುವಿನ ಸಮನ್ವಯಕ್ಕೆ ಕಾರಣವಾಗಿದೆ ಎಂದು ನಂಬಲಾಗಿದೆ.

More News

Read more about: alleppey alappuzha kerala
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+