ರಾವಣ ಎಷ್ಟೇ ಕೆಟ್ಟವನಾಗಿದ್ದರೂ ಆತ ಓರ್ವ ಮಹಾನ್ ಪಂಡಿತನಾಗಿದ್ದ ಎನ್ನುವುದು ಸುಳ್ಳಲ್ಲ. ಜೊತೆಗೆ ಆತ ದೊಡ್ಡ ಶಿವ ಭಕ್ತನೂ ಆಗಿದ್ದ. ರಾವಣನಿಗೆ ಸಂಬಂಧಿಸಿದ ಒಂದು ಸ್ಥಳದ ಬಗ್ಗೆ ನಾವು ಇಂದು ಹೇಳಲಿದ್ದೇವೆ. ರಾವಣ ಶಿವನ ಕುರಿತಾಗಿ ತಪಸ್ಸು ಮಾಡಿ ಅಮರನಾಗುವ ವರವನ್ನು ಕೇಳಿದ್ದು ಇಲ್ಲೇ ಎನ್ನಲಾಗುತ್ತದೆ.

ಪೋಡಿ ವಾಲಾ ಮಂದಿರ
ರಾವಣನು ಹಿಮಾಚಲ ಪ್ರದೇಶದ ಸಿರ್‌ಮೋರ್ ಜಿಲ್ಲೆಯ ಪೋಡಿ ವಾಲಾ ಮಂದಿರದಲ್ಲಿ ತಾನು ಅಮರನಾಗಬೇಕೆಂದು ಶಿವನ ಕುರಿತಾಗಿ ಘೋರ ತಪಸ್ಸನ್ನು ಮಾಡಿದನು. ರಾವಣನ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ವರವನ್ನು ಕೇಳುವಂತೆ ಹೇಳಿದನು. ಆಗ ರಾವಣನು ತನ್ನನ್ನು ಅಮರವಾಗಿರಿಸುವಂತೆ ವರ ಕೋರಿದನು. ಆದರೆ ಅದಕ್ಕೊಂದು ಶರತ್ತನ್ನು ವಿಧಿಸಿದನು.

ಅಮರನಾಗುವ ವರ
ಅದೇನೆಂದರೆ ರಾವಣನು ಒಂದೇ ರಾತ್ರಿಯಲ್ಲಿ ಸ್ವರ್ಗಕ್ಕೆ ಹೋಗುವ 5 ಮೆಟ್ಟಲಿಲುಗಳನ್ನು ನಿರ್ಮಾಣ ಮಾಡಲು ಹೇಳಿದನು. ಆಗ ಮಾತ್ರ ಆತ ಅಮರನಾಗುತ್ತಾನೆ ಎನ್ನುತ್ತಾನೆ. ರಾವಣನು ಶಿವನ ಆಜ್ಞೆಯಂತೆ ಸ್ವರ್ಗಕ್ಕೆ ಹೋಗುವ ಮೆಟ್ಟಿಲುಗಳನ್ನು ನಿರ್ಮಿಸಲು ಪ್ರಾರಂಭಿಸಿದನು.

ಸ್ವರ್ಗದ ಮೆಟ್ಟಿಲು
ಮೊದಲನೇ ಮೆಟ್ಟಲಿಲನ್ನು ಹರ್ ಕೀ ಪೌರಿ ಎನ್ನಲಾಗುತ್ತದೆ. ಇದನ್ನು ಹರಿದ್ವಾರದಲ್ಲಿ ನಿರ್ಮಿಸಿದನು. ಎರಡನೇ ಮೆಟ್ಟಿಲನ್ನು ಹಿಮಾಚಲಪ್ರದೇಶದ ಪೋಡಿ ವಾಲಾ ಮಂದಿರದಲ್ಲಿ ನಿರ್ಮಿಸಿದನು. ಚೂಡೇಶ್ವರ್ ಮಹಾದೇವ್ ಮಂದಿರದಲ್ಲಿ ಮೂರನೇ ಸ್ವರ್ಗದ ಮೆಟ್ಟಿಲನ್ನು ನಿರ್ಮಿಸಿದನು. ಕಿನ್ನರ್ ಕೈಲಾಶ್ ಮಂದಿರದಲ್ಲಿ ನಾಲ್ಕನೇ ಸ್ವರ್ಗದ ಮೆಟ್ಟಿಲನ್ನು ನಿರ್ಮಾಣ ಮಾಡಿದನು.

ನಿದ್ರಿಸಿದ ರಾವಣ
ಆದರೆ ಕೊನೆಯ ಮೆಟ್ಟಿಲನ್ನು ನಿರ್ಮಾಣ ಮಾಡುವಾಗ ದೇವತೆಗಳು ರಾವಣನಿಗೆ ಆಲಸ್ಯವನ್ನು ಉಂಟುಮಾಡುತ್ತಾರೆ. ಇದರಿಂದ ರಾವಣ ಸ್ವಲ್ಪ ನಿದ್ದೆ ಮಾಡುತ್ತಾನೆ. ಅಲ್ಲೇ ರಾವಣನಿಗೆ ನಿದ್ದೆ ಹತ್ತಿ ಬೆಳಗ್ಗೆ ಎಚ್ಚರವಾಗುತ್ತದೆ. ಆಗ ಸಮಯ ಮಿಂಚಿಹೋಗಿತ್ತು. ರಾವಣನಿಗೆ ಸಿಕ್ಕಿದ ವರದಾನವೂ ವ್ಯರ್ಥವಾಯಿತು. ರಾವಣ ಅಮರನಾಗಲು ಸಾಧ್ಯವಾಗಲಿಲ್ಲ.

ಸಾಕ್ಷ್ಯಗಳನ್ನು ಕಾಣಬಹುದು
ರಾವಣ ಸ್ವರ್ಗಕ್ಕೆ ಮೆಟ್ಟಿಲನ್ನು ಪ್ರಾರಂಭಿಸಿದ್ದು ಹಿಮಾಚಲಪ್ರದೇಶದ ಪೋಡಿ ವಾಲಾ ಮಂದಿರದಲ್ಲಿ ಎನ್ನಲಾಗುತ್ತದೆ. ಹಾಗಾಗಿ ಈ ಸ್ಥಳದಲ್ಲಿ ರಾಮಾಯಣಕ್ಕೆ ಸಂಬಂಧಿಸಿದ ಈ ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಕಾಣಬಹುದು.

ಮನೋಕಾಮನೆ ಈಡೇರುತ್ತದೆ
ಹಿಮಾಚಲಪ್ರದೇಶದ ಪೋಡಿ ವಾಲಾ ಮಂದಿರದಲ್ಲಿ ಶಿವಲಿಂಗವಿದೆ. ಯಾರು ಭಕ್ತಿಯಿಂದ ತಮ್ಮ ಮನೋಕಾಮನೆಯನ್ನು ಮುಂದಿಡುತ್ತಾರೋ ಅವರ ಬೇಡಿಕೆ ಬೇಗನೆ ಈಡೇರುತ್ತದೆ ಎನ್ನಲಾಗುತ್ತದೆ.


Click it and Unblock the Notifications
















