Search
  • Follow NativePlanet
Share
» »ಪರಶುರಾಮ ಕೊಡಲಿಯಿಂದ ಬಂಡೆಯನ್ನು ಕಡಿದು ನಿರ್ಮಿಸಿದ ದೇವಾಲಯ ಇದು

ಪರಶುರಾಮ ಕೊಡಲಿಯಿಂದ ಬಂಡೆಯನ್ನು ಕಡಿದು ನಿರ್ಮಿಸಿದ ದೇವಾಲಯ ಇದು

By Rajatha

ಪರಶುರಾಮನ್ನು ವಿಷ್ಣುವಿನ ಆರನೇ ಅವತಾರ ಎನ್ನಲಾಗುತ್ತದೆ. ಪುರಾಣದ ಪ್ರಕಾರ ಶಿವ ನೀಡಿದ ಪರಶುವಿನಿಂದಾಗಿ ಪರಶುರಾಮ ಎನ್ನುವ ಹೆಸರು ಬಂದಿದೆ. ಋಷಿ ಜಮದಗ್ನಿಯ ಮನೆಯಲ್ಲಿ ರೇಣುಕಾ ದೇವಿಯ ಹೊಟ್ಟೆಯಲ್ಲಿ ಜನಿಸಿದಾತನೇ ಪರಶುರಾಮ.

ಗೋವಾದಲ್ಲಿ ಪಾರ್ಟಿ ಮಾಡೋಕೆ ಎಲ್ಲಿಗೆ ಹೋಗ್ಬೇಕು ಗೊತ್ತಿಲ್ವಾ...

ಈತ ಶಸ್ತ್ರವಿದ್ಯೆಗಳಲ್ಲಿ ಬಲು ಪರಿಣಿತನು. ಪರಶುರಾಮ ಕರ್ಣ, ದ್ರೋಣ ಹಾಗೂ ಬೀಷ್ಮನಿಗೂ ಶಸ್ತ್ರವಿದ್ಯೆ ಕಲಿಸಿಕೊಟ್ಟಿದ್ದಾನೆ. ಪುರಾಣದಲ್ಲಿ ಪರಶುರಾಮನಿಗೆ ಸಂಬಂಧಿಸಿದ ಅನೇಕ ಕಥೆಗಳಿವೆ. ಇಂದು ನಾವು ಹೇಳ ಹೊರಟಿರುವ ಕಥೆ ಪರಶುರಾಮ ತನ್ನ ಕೊಡಲಿಯಿಂದ ದೊಡ್ಡ ಬಂಡೆಗಲ್ಲನ್ನು ಕಡಿದು ನಿರ್ಮಿಸಿದ ದೇವಾಲಯದ ಬಗ್ಗೆ...ಅಲ್ಲಿ ತಪಸ್ಸನ್ನು ಮಾಡಿದ್ದನು.

ಪರಶುರಾಮ ಗುಹಾ ಮಂದಿರ

ಪರಶುರಾಮ ಗುಹಾ ಮಂದಿರ

PC- Nkansara

ರಾಜಸ್ಥಾನ ಅರಾವಳಿ ಬೆಟ್ಟಗಳ ನಡುವೆ ಇರುವ ಈ ಪರಶುರಾಮ ಮಹಾದೇವ ಮಂದಿರವನ್ನು ಹಿಂದೂಗಳ ತೀರ್ಥ ಸ್ಥಳ ಎನ್ನಲಾಗುತ್ತದೆ. ಪರಶುರಾಮ ತನ್ನ ಕೊಡಲಿಯಿಂದ ದೊಡ್ಡ ಬಂಡೆಯನ್ನು ಕಡಿದು ಈ ಗುಹಾ ದೇವಾಲಯವನ್ನು ನಿರ್ಮಿಸಿದ್ದನು. ಶಿವನನ್ನು ಆಹ್ವಾನ ಮಾಡಲು ಕಠೋರ ತಪ್ಪಸ್ಸು ಮಾಡಿದ್ದು ಇಲ್ಲೇ ಎನ್ನಲಾಗುತ್ತದೆ.

500 ಮೆಟ್ಟಿಲು ಹತ್ತಬೇಕು

500 ಮೆಟ್ಟಿಲು ಹತ್ತಬೇಕು

PC- Nkansara

ಬೆಟ್ಟದ ಮೇಲಿರುವ ಈ ಗುಹಾ ಮಂದಿರವನ್ನು ತಲುಪಲು 500 ಮೆಟ್ಟಿಲುಗಳನ್ನು ಹತ್ತಬೇಕು. ಸಮುದ್ರಮಟ್ಟದಿಂದ ಸುಮಾರು 2600 ಫೀಟ್ ಎತ್ತರದಲ್ಲಿದೆ ಈ ಮಂದಿರ. ಈ ಮಂದಿರದ ಒಳಗೆ ಶಿವನು ಲಿಂಗದ ರೂಪದಲ್ಲಿ ಆಸೀನನಾಗಿದ್ದಾನೆ. ಶಿವಲಿಂಗದ ಮೇಲೆ ಗೋವಿನ ಮುಖವಿದೆ. ಅಲ್ಲಿಂದ ಪ್ರಾಕೃತಿಕ ರೂಪದಲ್ಲಿ ಶಿವಲಿಂಗದ ಮೇಲೆ ಜಲಾಭಿಷೇಕ ಆಗುತ್ತದೆ. ಇಲ್ಲಿಂದ ಕೆಲವೇ ಕಿ.ಮಿ ದೂರದಲ್ಲಿ ಮಾತೃಕುಂಡ ಹೆಸರಿನ ಒಂದು ಸ್ಥಳವಿದೆ. ಮಾತೃಹತ್ಯೆಯ ಪಾಪದಿಂದ ಪರಶುರಾಮನಿಗೆ ಮುಕ್ತಿ ಸಿಕ್ಕಿದ್ದು ಇಲ್ಲೇ ಎನ್ನಲಾಗುತ್ತದೆ.

ದಿವ್ಯ ಶಾಸ್ತ್ರದ ಪ್ರಾಪ್ತಿಯಾಗಿತ್ತು

ದಿವ್ಯ ಶಾಸ್ತ್ರದ ಪ್ರಾಪ್ತಿಯಾಗಿತ್ತು

PC- Nkansara

ಪುರಾಣಗಳ ಪ್ರಕಾರ ಶಿವನು ಕಠೋರ ತಪಸ್ಸು ಮಾಡಿ ದಿವ್ಯ ಶಾಸ್ತ್ರ ಪ್ರಾಪ್ತಿ ಮಾಡಿದ್ದನು. ಈ ಗುಹೆಯ ಗೋಡೆಯಲ್ಲಿ ಒಂದು ರಾಕ್ಷಸನ ಚಿತ್ರ ಕೂಡಾ ಇದೆ. ಪರಶುರಾಮ ತನ್ನ ಕೊಡಲಿಯಿಂದ ಆ ರಾಕ್ಷಸನನ್ನು ಸಂಹರಿಸಿದ್ದನು ಎನ್ನಲಾಗುತ್ತದೆ. ಕಠಿಣ ರಸ್ತೆಯ ಈ ಶಿವಲಿಂಗವಿರುವ ದೇವಸ್ಥಾನಕ್ಕೆ ಬರುವ ಭಕ್ತರ ಮನೋಕಾಮನೆಗಳು ಈಡೇರುತ್ತವೆ ಎನ್ನಲಾಗುತ್ತದೆ. ಮಹಾಶಿವರಾತ್ರಿ ಹಾಗೂ ಪರಶುರಾಮ ಜಯಂತಿ ದಿನ ಅನೇಕ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಗುಹಾ ಮಂದಿರಕ್ಕೆ ಸಂಬಂಧಿಸಿದ್ದು

ಗುಹಾ ಮಂದಿರಕ್ಕೆ ಸಂಬಂಧಿಸಿದ್ದು

PC- Raja Ravi Varma

ಪರಶುರಾಮನ ಈ ಗುಹಾ ಮಂದಿರಕ್ಕೆ ಸಂಬಂಧಿಸಿದಂತೆ ಹಲವು ಧಾರ್ಮೀಕ ಮಾನ್ಯತೆಗಳಿವೆ. ಈ ಶಿವಲಿಂಗದ ಕೆಳಗೆ ಒಂದು ರಂಧ್ರವಿದೆ ಅದರೊಳಗೆ ಎಷ್ಟು ಕೊಡ ನೀರು ಹಾಕಿದರೂ ಅದು ತುಂಬೊದಿಲ್ಲ. ಹಾಗೆಯೇ ಹಾಲಿನ ಅಭಿಷೇಕ ಮಾಡಿದ್ರೆ ಹಾಲು ರಂಧ್ರದ ಒಳಗೆ ಹೋಗೋದೇ ಇಲ್ಲ. ಇದೇ ಸ್ಥಳದಲ್ಲಿ ಪರಶುರಾಮ ಕರ್ಣನಿಗೆ ಶಸ್ತ್ರಾಭ್ಯಾಸ ನಡೆಸಿದ್ದ ಎನ್ನಲಾಗುತ್ತದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

PC- Shuklamayank330

ಪರಶುರಾಮನ ಈ ಗುಹಾ ಮಂದಿರವು ಕುಂಬಲ್‌ಗಡ್ ಕೋಟೆಯ ಸುಮಾರು ೯ ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಸಮೀಪದ ಏರ್‌ಪೋರ್ಟ್ ಎಂದರೆ ಉದಯ್‌ಪುರ್ ಏರ್‌ಪೋರ್ಟ್. ರಾಣಿ ರೈಲ್ವೆ ಸ್ಟೇಶನ್‌ ಇಂದಲೂ ಇಲ್ಲಿಗೆ ತಲುಪಬಹುದು. ರಾಜಸಂಮದ ಜಿಲ್ಲೆಯಲ್ಲಿ ಈ ಮಂದಿರವಿದೆ. ಉದಯ್‌ಪುರದಿಂದ ಇಲ್ಲಿಗೆ ಬಸ್ ಅಥವಾ ಟ್ಯಾಕ್ಸಿಯಿಂದಲೂ ತಲುಪಬಹುದು.

Read more about: india travel temple rajasthan

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more