» »ಈ ಭಯಾನಕ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಒಂದು ಜೀವಿಯು ಇರುವುದಿಲ್ಲ

ಈ ಭಯಾನಕ ಹಳ್ಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಒಂದು ಜೀವಿಯು ಇರುವುದಿಲ್ಲ

Written By:

ಒಂದು ಗ್ರಾಮದಲ್ಲಿ ಸುಮಾರು 1588 ಮಂದಿ ವಾಸಿಸುತ್ತಿದ್ದರು. ಒಂದು ದಿನ ಅದು ಏನಾಯಿತೂ ಏನೊ? ಊರೇ ಖಾಲಿ ಮಾಡಿ ಹೋಗಿಬಿಟ್ಟರು. ನಿತ್ಯವು ಸಂತೋಷದಾಯಕವಾಗಿದ್ದ ಕಾಣಿಸುತ್ತಿದ್ದ ಆ ಗ್ರಾಮದಲ್ಲಿ ಗಾಳಿ ಬಿಟ್ಟು ಇನ್ನೂ ಯಾವ ಶಬ್ಧಗಳು ಕೇಳಿಸುವುದಿಲ್ಲವಂತೆ.

ಇಂದಿಗೂ ಆ ಗ್ರಾಮದಲ್ಲಿ ಯಾರೂ ಕೂಡ ವಾಸಿಸಲು ಧೈರ್ಯ ಮಾಡುವುದಿಲ್ಲವಂತೆ. ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಕೂಡ ಪಾಳು ಬಿದ್ದ ಮನೆಗಳು ಅಸ್ತವ್ಯಸ್ತ ವಾತಾವಾರಣಗಳನ್ನು ಕಾಣಬಹುದಾಗಿದೆ. ಇಲ್ಲಿ ಒಂದು ಜೀವಿಯಾಗಲೀ ಮನುಷ್ಯರಾಗಲೀ ಕಾಣಲಾಗುವುದಿಲ್ಲ. ಪಾಳು ಬಿದ್ದಿರುವ ಈ ಪ್ರದೇಶವು ಸುಮಾರು 600 ವರ್ಷಗಳಿಂದ ಭಯಾನಕವನ್ನು ಒಳಗೊಂಡಿದ್ದ ಈ ಸ್ಥಳ ಈಗ ಪ್ರವಾಸಿ ತಾಣವಾಗಿದೆ.

ಪ್ರಸ್ತುತ ಆ ಗ್ರಾಮ ಎಲ್ಲಿದೆ ಎಂಬುದನ್ನು ಹಾಗೂ ಅದಕ್ಕೆ ಕಾರಣವನ್ನು ಲೇಖನದ ಮೂಲಕ ತಿಳಿಯೋಣ.

ಎಲ್ಲಿದೆ?

ಎಲ್ಲಿದೆ?

ಈ ಭಯಾನಕವಾದ ಪ್ರದೇಶವು ರಾಜಸ್ಥಾನ ರಾಜ್ಯದ ಜೈಸಲ್ಮಾರ್ ಜಿಲ್ಲೆಯ ಕುಲಧಾರ ಎಂಬ ಗ್ರಾಮ.

PC:YOUTUBE

ಸ್ಥಳೀಯರು

ಸ್ಥಳೀಯರು

13 ನೇ ಶತಮಾನದಿಂದ ಅತ್ಯಂತ ಸುಂದರವಾಗಿ ಪ್ರಜೆಗಳಿಂದ ಕೂಡಿದ್ದ ಈ ಪ್ರದೇಶ ಈಗ ಆತ್ಮಗಳ ವಾಸಸ್ಥಾನವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.


PC: Pradeep717

ಸೂರ್ಯಾಸ್ತ ಸಮಯ

ಸೂರ್ಯಾಸ್ತ ಸಮಯ

ಇಲ್ಲಿ ಹಲವಾರು ಪ್ರವಾಸಿಗರು ಪ್ರವಾಸಕ್ಕಾಗಿ ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆದರೆ ಸೂರ್ಯಾಸ್ತದ ಸಮಯದಲ್ಲಿ ಮಾತ್ರ ಇಲ್ಲಿ ಒಂದು ಜೀವಿಯು ಕೂಡ ಇರುವುದಿಲ್ಲ. ನಿಶ್ಯಬ್ಧವಾದ ವಾತಾವಾರಣ ಇಲ್ಲಿ ಮೂಡುತ್ತದೆ.


PC: Suryansh Singh

ಹಲವು ಕಾರಣಗಳು

ಹಲವು ಕಾರಣಗಳು

ಈ ಗ್ರಾಮದಲ್ಲಿನ ಪ್ರಜೆಗಳು ಎಲ್ಲಿ ಹೋದರು? ಯಾಕೆ ಇಲ್ಲಿ ಒಬ್ಬರೂ ಕೂಡ ವಾಸಿಸುವುದಿಲ್ಲ ಎಂಬ ಪ್ರೆಶ್ನೆಗೆ ಹಲವಾರು ವಿಧ ವಿಧವಾದ ಕಾರಣಗಳನ್ನು ಹಾಗೂ ಕಥೆಗಳನ್ನು ಹೇಳುತ್ತಾರೆ.


PC:YOUTUBE

ಸಲೀಂ ಸಿಂಗ್

ಸಲೀಂ ಸಿಂಗ್

ಸಲೀಂ ಸಿಂಗ್ ಎಂಬ ಮಂತ್ರಿಯೇ ಇದಕ್ಕೆಲ್ಲಾ ಕಾರಣ ಹಾಗೂ ಅತನಿಂದಲೇ ಊರೆಲ್ಲಾ ಖಾಲಿಯಾಯಿತು ಎಂದು ಹೇಳುತ್ತಾರೆ.


PC:YOUTUBE

ಅಧೀನ

ಅಧೀನ

ಸಲೀಂ ಸಿಂಗ್ ಎಂಬುವವನು ಅತ್ಯಂತ ಕ್ರೂರವಾದ ಮಂತ್ರಿಯಾಗಿದ್ದನು. ಈ ಜೈಸಲ್ಮಾರ್ ಪ್ರದೇಶವನ್ನು ಮಂತ್ರಿಯ ಕೈಯಲ್ಲಿಯೇ ಇತ್ತು.


PC:YOUTUBE

ಕುಲ್ದಾರ್

ಕುಲ್ದಾರ್

ಸಲೀಂ ಸಿಂಗ್ ಕುಲ್ದಾರ್ ಗ್ರಾಮದಲ್ಲಿನ ಒಂದು ಕನ್ಯೆಯನ್ನು ಕಂಡು ಮರುಳಾದನು.

ಸ್ಮಶಾನ

ಸ್ಮಶಾನ

ಏನಾದರೂ ಆಗಲೀ ಆ ಸುಂದರವಾದ ಕನ್ಯೆಯನ್ನು ವರಿಸಬೇಕು ಎಂದೂ ಇಲ್ಲವಾದರೆ ಆ ಗ್ರಾಮವನ್ನೇ ಸ್ಮಶಾನ ಮಾಡಿಬಿಡಬೇಕು ಎಂದು ಪಣ ತೊಟ್ಟನು.


PC:YOUTUBE

ರಾತ್ರಿಯೇ ಖಾಲಿ

ರಾತ್ರಿಯೇ ಖಾಲಿ

ಇದರಿಂದಾಗಿ ಗ್ರಾಮಸ್ಥರು ಉದಯವೇ ಅವಳನ್ನು ನಿನ್ನ ಬಳಿ(ಮಂತ್ರಿ) ಕರೆತಂದು ಬಿಡುತ್ತೇವೆ ಎಂದು ನಂಬಿಸಿ ಅವನನ್ನು ಕಳುಹಿಸಿದರು. ರಾತ್ರಿಗೆ ರಾತ್ರಿಗೆ ಆ ಕನ್ಯೆಯನ್ನು ಕರೆದುಕೊಂಡು ಊರು ಖಾಲಿ ಮಾಡಿದರು ಎಂದು ಪ್ರಚಾರವಿದೆ.


PC:YOUTUBE

ಬರಗಾಲ

ಬರಗಾಲ

ಆದರೆ ಬ್ರಟೀಷ್‍ರ ಕಾಲದಲ್ಲಿ ಇಲ್ಲಿ ಬರಗಾಲ ಬಂದಿತು. ವ್ಯವಸಾಯಕ್ಕೆ ನೀರು ಇಲ್ಲದೇ ಜನರು ಊರು ಬಿಟ್ಟು ಹೋಗಿರಬಹುದು ಎಂದು ಊಹಿಸಲಾಗಿದೆ.


PC:YOUTUBE

ಕೋಳ

ಕೋಳ

ಆದರೆ ಈ ಗ್ರಾಮಕ್ಕೆ ಸಮೀಪದಲ್ಲಿರುವ ಕೋಳವು ಎಂದಿಗೂ ನೀರಿನಿಂದ ತುಂಬಿ ತುಳುಕುತ್ತಿರುತ್ತದೆ.

PC:YOUTUBE

600 ಮನೆಗಳು

600 ಮನೆಗಳು

ಇಲ್ಲಿ ಪೂರ್ವದಲ್ಲಿ 600 ಮನೆಗಳಿದ್ದು ಈಗ ಆ ಮನೆಗಳ ಸ್ಥಿತಿಯು ದೀನಾವಸ್ಥೆಯಾಗಿದೆ. ಪಾಳುಬಿದ್ದು ಭಯಾಂಕರವಾಗಿದೆ.


PC:YOUTUBE

ಕಿರುಚಾಟ

ಕಿರುಚಾಟ

ಈ ಗ್ರಾಮದಲ್ಲಿ ಆಗೋಚರವಾದ ಶಕ್ತಿಗಳು ಹಾಗೂ ಭಯಂಕರವಾದ ಶಬ್ಧಗಳು ಕೇಳಿಸುತ್ತಿರುತ್ತವೆ ಎಂದು ಹೇಳುತ್ತಾರೆ.

PC:YOUTUBE

ಇಂಡಿಯನ್ ಪಾರಾನಾರ್ಮಲ್ ಸೊಸೈಟಿ ಸಭ್ಯನು

ಇಂಡಿಯನ್ ಪಾರಾನಾರ್ಮಲ್ ಸೊಸೈಟಿ ಸಭ್ಯನು

ಈ ಗ್ರಾಮದಲ್ಲಿ ನಿಜವಾಗಿಯೂ ದೆವ್ವಗಳ ವಾಸಸ್ಥಳವೇ ಎಂದು ತಿಳಿದುಕೊಳ್ಳಲು ಇಂಡಿಯನ್ ಪಾರಾನಾರ್ಮಲ್ ಸೊಸೈಟಿ ಸಭ್ಯ ಗೌರವ್ ಥಿವರ್ ತನ್ನ ಗುಂಪಿನ ಜೊತೆ ಈ ಗ್ರಾಮದಲ್ಲಿ ಒಂದು ದಿನ ರಾತ್ರಿ ಇದ್ದು ದೆವ್ವಗಳು ಈ ಗ್ರಾಮದಲ್ಲಿ ಇವೆ ಎಂದು ವರದಿ ನೀಡಿದನು.


PC:YOUTUBE

ದೆವ್ವದ ಗ್ರಾಮ

ದೆವ್ವದ ಗ್ರಾಮ

ಅಂದಿನಿಂದ ದೆವ್ವಗಳ ಗ್ರಾಮ ಎಂದೇ ಈ ಪ್ರದೇಶವನ್ನು ಇನ್ನಷ್ಟು ಪ್ರಚಾರಗೊಳಿಸಿದರು.

PC:YOUTUBE

ಪ್ರವಾಸಿ ತಾಣ

ಪ್ರವಾಸಿ ತಾಣ

ದೆವ್ವಗಳನ್ನು ಪಕ್ಕಕ್ಕೆ ಇಟ್ಟರೆ ಈ ಗ್ರಾಮ ಅತ್ಯಂತ ಸುಂದರವಾಗಿದೆಯಂತೆ. ಈ ಸುಂದರವಾದ ಗ್ರಾಮಕ್ಕೆ ಭೇಟಿ ನೀಡಲು ದೇಶ ವಿದೇಶಗಳಿಂದ ಭೇಟಿ ನೀಡುತ್ತಾರಂತೆ.

PC: Mohd. Ghanim Khan

ನಿರ್ಮಾಣ ಶೈಲಿ

ನಿರ್ಮಾಣ ಶೈಲಿ

ಅಂದಿನ ಮನೆಗಳ ನಿರ್ಮಾಣ ಶೈಲಿಯು ಅತ್ಯಂತ ಸುಂದರವಾದ ಹಾಗೂ ಭಧ್ರವಾಗಿದೆ ಎಂತೆ. ಹಾಗೆಯೇ ಅಂದಿನ ದೇವಾಲಯಗಳು ಕೂಡ ಬರುವ ಪ್ರವಾಸಿಗರಿಗೆ ಆರ್ಕಷಿಸುತ್ತವೆ ಎಂತೆ.

PC: Suman Wadhwa

ರಾಜಸ್ಥಾನ

ರಾಜಸ್ಥಾನ

ನಿಮಗೂ ಕೂಡ ಈ ಪ್ರದೇಶವನ್ನು ನೋಡಬೇಕು ಎಂದು ಬಯಸಿದರೆ ರಾಜಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ.


PC:Suryansh Singh

587 ಕಿ,ಮೀ

587 ಕಿ,ಮೀ

ರಾಜಸ್ಥಾನದ ಜೈಪುರದಿಂದ ಸುಮಾರು 587 ಕಿ,ಮೀ ದೂರದಲ್ಲಿ ಈ ಗ್ರಾಮವಿದೆ.

PC: Pradeep717

ರಹಸ್ಯ

ರಹಸ್ಯ

ಆದರೆ ಈ ಗ್ರಾಮದಲ್ಲಿನ ಪ್ರಜೆಗಳು ರಾತ್ರೋ ರಾತ್ರಿ ಏಕೆ ಊರನ್ನು ಖಾಲಿ ಮಾಡಿದರು ಹಾಗೆಯೇ ಏಕೆ ಇಲ್ಲಿ ದೆವ್ವಗಳು ಬಂದವು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.


PC: Pradeep717

Please Wait while comments are loading...