Search
  • Follow NativePlanet
Share
» »ಇಂದು ನೋಡುವ ಚೆನ್ನೈ ಅಂದು ಹಾಗಿತ್ತು

ಇಂದು ನೋಡುವ ಚೆನ್ನೈ ಅಂದು ಹಾಗಿತ್ತು

By Vijay

ಕಳೆದ ಕೆಲ ಲೇಖನಗಳಲ್ಲಿ, ಹಳೆಯ ಬೆಂಗಳೂರಿನ ವೈಭವ ತೋರ್ಪಡಿಸುವ ಒಂದು ಲೇಖನವನ್ನು ಈಗಾಗಲೇ ನಿಮ್ಮ ಕಣ್ಣುಗಳಲ್ಲಿ ತುಂಬಿಕೊಂಡಿರಬಹುದು. ಅದೆ ಸರಣಿಯನ್ನು ಮುಂದುವರೆಸುತ್ತ ಇಂದಿನ ಈ ಲೇಖನವು ಪ್ರಸ್ತುತ ಚೆನ್ನೈ ನಗರದ ಕೆಲ ಪ್ರಮುಖ ಪ್ರವಾಸಿ ಆಕರ್ಷಣೆಗಳು ಅಥವಾ ಸ್ಥಳಗಳು ಹಿಂದೆ 18,19 ರ ಶತಮಾನಗಳಲ್ಲಿ ಯಾವ ರೀತಿ ಇತ್ತು ಎಂಬುದರ ಕುರಿತು ತಿಳಿಸುತ್ತದೆ.

ಬೇಸಿಗೆ ಕೊಡುಗೆ : ಮೇಕ್ ಮೈ ಟ್ರಿಪ್ ನಿಂದ ಸ್ಥಳೀಯ ಫ್ಲೈಟ್ ಬುಕ್ಕಿಂಗ್ ಮೇಲೆ 15% ರಷ್ಟು ಕಡಿತ

ನೆನಪುಗಳು ಮನದಲ್ಲಿ ಯಾವಾಗಲೂ ಹಸಿರಾಗಿರುತ್ತವೆ. ಇನ್ನೂ ಆ ನೆನಪುಗಳು ಚಿತ್ರಗಳ ರೂಪದಲ್ಲಿ ಮುಂದೆ ಬಂದರಂತೂ ಒಂದು ರೀತಿಯ ಸೊಗಸಾದ ಅನುಭವ ನಮ್ಮನ್ನು ಕಾಡುತ್ತದೆ. ಕೆಲವರಿಗೆ ಮರಳಿ ಅದೆ ಕಾಲಕ್ಕೆ ಹೋಗ ಬೇಕೆನಿಸಿದರೆ, ಇನ್ನೂ ಕೆಲವರಿಗೆ ಆ ನೆನಪುಗಳು ಉತ್ಸಾಹ ತುಂಬಿ ಚೈತನ್ಯಗೊಳಿಸುತ್ತವೆ.

ವಿಶೇಷ ಲೇಖನ : ಎಂದಿಗೂ ಕಳೆ ಮಾಸದ ಹಳೆ ಬೆಂಗಳೂರು

ಯಾವ ವ್ಯಕ್ತಿಯೆ ಆಗಲಿ ಒಂದು ಸ್ಥಳದಲ್ಲಿ ಸಾಕಷ್ಟು ಕಾಲದಿಂದ ವಾಸಿಸುತ್ತಿದ್ದು, ಒಂದೊಮ್ಮೆ ಆ ಸ್ಥಳದ ಕುರಿತು ಹಳೆಯದಾದ ಮಾಹಿತಿಗಳೊ ಅಥವಾ ಚಿತ್ರಗಳೊ ಲಭಿಸಿದರೆ ಆಗುವ ಕುತೂಹಲಕ್ಕೆ ಪಾರವಿಲ್ಲ. ತಾನೂ ಇನ್ನುವರೆಗೂ ಎಂದು ಭೇಟಿ ನೀಡದ ಕೆಲ ಆಕರ್ಷಣೆಗಳಿಗೆ ಹಳೆಯ ಚಿತ್ರಗಳನ್ನು ನೋಡಿದಾಗ ಭೇಟಿ ನೀಡುವ ಸಾಧ್ಯತೆಯೂ ಇರುತ್ತದೆ. ಯಾವುದೆ ಸ್ಥಳದ ಕುರಿತಿರುವ ಹಳೆಯ ನೆನಪುಗಳು, ಚಿತ್ರಗಳು ಚುಂಬಕ ಶಕ್ತಿಯಿದ್ದಂತೆ.

ಚೆನ್ನೈ ಬೆಂಗಳೂರಿಗೆ ಇತರೆ ಮಹಾನಗರಗಳಿಗೆ ಹೋಲಿಸಿದಾಗ ಅತಿ ಹತ್ತಿರದಲ್ಲಿರುವ ದಕ್ಷಿಣ ಭಾರತದ ಪ್ರಮುಖ ನಗರ. ಈ ಎರಡೂ ಮಹಾ ನಗರಗಳ ಮಧ್ಯೆ ದಿನ ನಿತ್ಯ ಸಂಚರಿಸುವ ಜನರ ಅಥವಾ ಪ್ರವಾಸಿಗರ ಸಂಖ್ಯೆಗೇನೂ ಕಮ್ಮಿ ಇಲ್ಲ. ಪ್ರಸ್ತುತ ಲೇಖನದ ಮೂಲಕ ಹಿಂದೆ ಚೆನ್ನೈ ಯಾವ ರೀತಿ ಇತ್ತು ಎಂಬುದನ್ನು ನೋಡಿ, ಮುಂದೆ ಭೇಟಿ ನೀಡಿದರೆ ಅದನ್ನು ಒಮ್ಮೆ ಅವಲೋಕಿಸಿ.

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಅಂದು ಮದ್ರಾಸ್ ಎಂದು ಕರೆಯಲಾಗುತ್ತಿದ್ದ ಚೆನ್ನೈ ನಗರದ ಸಮುದ್ರ ತೀರದಲ್ಲಿ ಎದೆಯುಬ್ಬಿಸಿ ಪ್ರಶಾಂತವಾಗಿ ನಿಂತಿರುವ ಚೇಪಾಕ್ ಅರಮನೆ, 1890 ರಲ್ಲಿ.

ಚಿತ್ರಕೃಪೆ: Co9man

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1890 ರ ಸಮಯದಲ್ಲಿ ಚೆನ್ನೈ ನಗರದ ಹೊರವಲಯದಲ್ಲಿರುವ ಗಿಂಡಿ ಪ್ರದೇಶದಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಬಹು ಪ್ರಖ್ಯಾತ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣ 1880 ರ ಸಮಯದಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1913 ರಲ್ಲಿನ ಚೆನ್ನೈ ಬಂದರು ಪ್ರದೇಶ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ನಗರದಲ್ಲಿರುವ ಪ್ರಸಿದ್ಧ ಸ್ಯಾಂಥೋಮ್ ಕ್ರೈಸ್ತ ದೇವಾಲಯ, 1905 ರಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ನಗರದಲ್ಲಿರುವ ಪ್ರಸಿದ್ಧ ಪ್ರಧಾನ ಅಂಚೆ ಕಚೇರಿ, 1905 ರಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ನಗರದಲ್ಲಷ್ಟೆ ಅಲ್ಲದೆ ಭಾರತದಲ್ಲೆ ಪ್ರಪ್ರಥಮವಾಗಿ ಆಧುನಿಕ ಶೈಲಿ ಹಾಗೂ ವ್ಯವಸ್ಥೆಗಳೊಂದಿಗೆ ಪ್ರಾರಂಭವಾದ ಮೌಂಟ್ ರಸ್ತೆಯಲ್ಲಿರುವ ಹೋಟೆಲ್ ಡಿ ಎಂಜಲೊ ಹೋಟೆಲ್. ಪ್ರಥಮ ಬಾರಿಗೆ ಈ ಹೋಟೆಲ್ ನಲ್ಲಿ ವಿದ್ಯುತ್ ಚಾಲಿತ ಲಿಫ್ಟ್, ಫ್ಯಾನ್, ತಂಪಾದ ವಸ್ತುಗಳ ಸಂಗ್ರಹ ವ್ಯವಸ್ಥೆ ಹಾಗೂ ನಳಗಳಲ್ಲಿ ಬಿಸಿ ನೀರುಗಳ ವ್ಯವಸ್ಥೆ ಪರಿಚಯಿಸಲಾಯಿತು. 1890 ರಲ್ಲಿ.

ಚಿತ್ರಕೃಪೆ: Giacomo D'Angelis

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನ ಅಡ್ಯಾರ್ ಪ್ರದೇಶದಲ್ಲಿರುವ ಥಿಯೊಸಾಫಿಕಲ್ ಸೊಸೈಟಿ (ಬ್ರಹ್ಮವಿದ್ಯಾ ಸಮಾಜ), 1890 ರಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1890 ರಲ್ಲಿ ಚೆನ್ನೈ ನಗರದ ಒಂದು ಬೀದಿಯ ಚಿತ್ರಣ. ಲವಲವಿಕೆಯಿಂದ ಕೂಡಿರುವ ಜೀವನ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನ ಪ್ರತಿಷ್ಠಿತ ಹೈಕೋರ್ಟ್ ಕಟ್ಟಡ, 1913 ರಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಮದ್ರಾಸಿನ ಪ್ರತಿಷ್ಠಿತ ಉಚ್ಛ ನ್ಯಾಯಾಲಯ ಹಾಗೂ ಕಾನೂನು ಕಾಲೇಗು ಕಟ್ಟಡಗಳು, 1899 ರಲ್ಲಿ.

ಚಿತ್ರಕೃಪೆ: Henry Irwin

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು, 1870 ರ ಸಂದರ್ಭದಲ್ಲಿ. ಚಿತ್ರಿಸಲಾದ ಕಟ್ಟಡದ ಚಿತ್ರ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1870 ರ ಸಂದರ್ಭದಲ್ಲಿ ಚೆನ್ನೈನ ಬಂದರು ಪ್ರದೇಶದಲ್ಲಿ ಅಪಾರವಾಗಿ ದವಸ ಧಾನ್ಯಗಳ ಮೂಟೆಗಳು ಬರುತ್ತಿದ್ದವು ಹಾಗೂ ರಫ್ತು ಮಾಡಲ್ಪಡುತ್ತಿದ್ದವು. ಈ ಒಂದು ಸನ್ನಿವೇಶವನ್ನು ಕಲ್ಪಿಸಿಕೊಂಡು ಡಿಗ್ಬಿ, ವಿಲೀಯಮ್ ಎಂಬ ಕಲಾವಿದನಿಂದ ಚಿತ್ರಿಸಲಾದ ದಾಸ್ತಾನುಗಳ ಗೋದಾಮಿನ ಚೆನ್ನೈ ಬಂದರು ಪ್ರದೇಶ, ಅದು ಕೂಡ 1878 ರಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1880 ರಲ್ಲಿ ಟೈಮ್ಸ್ ಆಫ್ ಇಂಡಿಯಾ ಕಟ್ಟಡ. ಇಂದು ಹಾರ್ನಿಮನ್ ವೃತ್ತ ಎಂದು ಈ ಪ್ರದೇಶ ಕರೆಸಿಕೊಳ್ಳುತ್ತದೆ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಅಂದು ಬ್ಲ್ಯಾಕ್ ಟೌನ್ ಎಂದು ಕರೆಸಿಕೊಳ್ಳುತ್ತಿದ್ದ ಚೆನ್ನೈನ ಪಶ್ಚಿಮ ಭಾಗದ ಒಂದು ಪ್ರದೇಶ. 1851 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1905 ರಲ್ಲಿ ಸೆರೆ ಹಿಡಿಯಲಾದ ಸರ್ಕಾರಿ ವಸ್ತು ಸಂಗ್ರಹಾಲಯದ ಒಂದು ನೋಟ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1910 ರ ಸಂದರ್ಭದಲ್ಲಿ ಚೆನ್ನೈ ನಗರ ಹಾಗೂ ಬಂದರು ಪ್ರದೇಶದ ಸ್ಥಿತಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಹೋಟೆಲ್ ಡಿ ಎಂಜೆಲೊದ ಸ್ವಾಗತ ಕೋಣೆ, 1910 ರಲ್ಲಿ.

ಚಿತ್ರಕೃಪೆ: Giacomo D'Angelis

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನಲ್ಲಿರುವ ಎಗ್ಮೋರ್ ರೈಲು ನಿಲ್ದಾಣ, 1913 ರಲ್ಲಿ. (ಬಿಡಿಸಿದ ಚಿತ್ರ)

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1913 ರಲ್ಲಿ ಚೆನ್ನೈನ ಮರೀನಾ ಕಡಲ ತೀರದ ಒಂದು ನೋಟ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಬಳಿಯಿರುವ ಪ್ರಖ್ಯಾತ ಪ್ರವಾಸಿ ತಾಣ ಮಹಾಬಲಿಪುರಂನ ಸಮುದ್ರಕ್ಕೆ ಎದುರಾಭಿಮುಖ ಮಾಡಿ ನಿಂತಿರುವ ದೇವಾಲಯ. 20 ನೆಯ ಶತಮಾನದ ಆರಂಭದ ಸಮಯದಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

1937 ರಲ್ಲಿ ನಡೆದಿದ್ದ ಚೆನ್ನೈನ ವಿಧಾನ ಸಭೆಯ ಒಂದು ಕಲಾಪದ ದೃಶ್ಯ. ಇದು ಚೆಪಾಕ್ ಆವರಣ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನ ಮರೀನಾ ಕಡಲ ತೀರದ ಒಂದು ನೋಟ. ಕಾರ್ಯನಿರತರಾಗಿರುವ ಮೀನುಗಾರರು.

ಚಿತ್ರಕೃಪೆ: Cropbot

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನ ಪ್ರಖ್ಯಾತ ಕಾಪಾಲೀಶ್ವರ ದೇವಸ್ಥಾನ ಉತ್ಸವದ ಒಂದು ಸಂದರ್ಭ, 1940 ರ ಸಮಯದಲ್ಲಿ.

ಚಿತ್ರಕೃಪೆ: Vadakkan

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಮದ್ರಾಸ್ ವೀಕ್ಷಣಾಲಯ, 1880 ರಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನಲ್ಲಿರುವ ಅಮೇರಕ ದೂತಾವಾಸ ಕಚೇರಿ ಕಟ್ಟಡ, 1969 ರಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈನ ಟ್ರಿಪ್ಲಿಕೇನ್ ಪ್ರದೇಶದ ಪ್ಲೈಕ್ರಾಫ್ಟ್ ರಸ್ತೆಯ ಒಂದು ನೋಟ. 1906 ರ ಸಮಯದಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಬಂಗಾಳ ಕೊಲ್ಲಿಗೆ ಅಭಿಮುಖ ಮಾಡಿ ನಿಂತಿರುವ ಚೆನ್ನೈನ ಸೇಂಟ್ ಜಾರ್ಜ್ ಕೋಟೆಯ ಬಿಡಿಸಿದ ಚಿತ್ರ. 1833 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಸ್ವಾಮಿ ವಿವೇಕಾನಂದರು 1897 ರಲ್ಲಿ ಚೆನ್ನೈ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ.

ಚಿತ್ರಕೃಪೆ: wikimedia

ಚೆನ್ನೈ ಮದ್ರಾಸ್ ಆಗಿದ್ದಾಗ:

ಚೆನ್ನೈ ಮದ್ರಾಸ್ ಆಗಿದ್ದಾಗ:

ಮದ್ರಾಸ್ ಬಂದರು ಪ್ರದೇಶದ ಸಮುದ್ರದಂಗಳದಲ್ಲಿ ನೆಲೆ ನಿಂತಿರುವ ದೋಣಿಗಳು. 1895 ರ ಸಂದರ್ಭದಲ್ಲಿ.

ಚಿತ್ರಕೃಪೆ: wikimedia.org

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+