Search
  • Follow NativePlanet
Share
» »ಈ ಮಸೀದಿಗೆ ಭೇಟಿ ನೀಡಿದರೆ ಮೆಕ್ಕಾ ಮದೀನಕ್ಕೆ ಭೇಟಿ ನೀಡಿದಷ್ಟೇ ಪುಣ್ಯ ಸಿಗುತ್ತಂತೆ

ಈ ಮಸೀದಿಗೆ ಭೇಟಿ ನೀಡಿದರೆ ಮೆಕ್ಕಾ ಮದೀನಕ್ಕೆ ಭೇಟಿ ನೀಡಿದಷ್ಟೇ ಪುಣ್ಯ ಸಿಗುತ್ತಂತೆ

ಭಾರತೀಯರಿಗೆ ಭಾರತೀಯ ಇತಿಹಾಸ ಬಹಳ ಮುಖ್ಯವಾದುದು. ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿದೆ ಈ ನಿಜಾಮರ ಇಮಾಂಬರವಿದೆ. ಭಾರತದಲ್ಲಿಯೇ ಅತ್ಯಂತ ದೊಡ್ಡ ಶಿಯಾ ಮುಸ್ಲಿಂ ಮಂಡಲಿ ಹಾಲ್ ಇದಾಗಿದೆ. ಸಮಯದ ಜೊತೆಗೆ ಇಂದಿಗೂ ಸುಂದರ ವಾಸ್ತುಕಲೆಯ ರೂಪದಲ್ಲಿದೆ. ಇಮಾಂಬರ ಐತಿಹಾಸಿಕ ಹಾಗೂ ಧಾರ್ಮಿಕತೆಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ.

ಯಾವಾಗ ಇಲ್ಲಿಗೆ ಹೋಗಬೇಕು ?

ಯಾವಾಗ ಇಲ್ಲಿಗೆ ಹೋಗಬೇಕು ?

PC- Nupur Dasgupta
ಬೇಸಿಗೆಯಲ್ಲಿ ಮುರ್ಶಿದಾಬಾದ್ ಬಹಳ ಧಗೆಯಿಂದ ಕೂಡಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಇಲ್ಲಿಯ ಯಾತ್ರೆ ಮಾಡೋದು ಉತ್ತಮವಾಗಿದೆ. ಚಳಿಗಾಲದಲ್ಲಿ ಇಲ್ಲಿಯ ವಾತಾವರಣ ಬಹಳ ಕೂಲ್ ಆಗಿದ್ದು, ಇಲ್ಲಿಯ ಸೌಂದರ್ಯವನ್ನು ,ವಾಸ್ತುಕಲೆಯನ್ನು ಚೆನ್ನಾಗಿ ಆಸ್ವಾದಿಸಬಹುದು.

 ಇಮಾಂಬರದ ಇತಿಹಾಸ

ಇಮಾಂಬರದ ಇತಿಹಾಸ

PC- Debashis Mitra
ಈ ಇಮಾಂಬರವನ್ನು ಮೊತ್ತಮೊದಲಿಗೆ ನವಾಬ ಸಿರಾಜುದೌಲ ತನ್ನ ಕೈಯಾರೇ ನಿರ್ಮಿಸಿದ್ದನು. ಇದರ ನಿರ್ಮಾಣ ಸಂದರ್ಭದಲ್ಲಿ ಸುಮಾರು ೬ ಫೀಟ್‌ನ ಗುಂಡಿ ತೋಡಿ ಅದರಲ್ಲಿ ಮೆಕ್ಕಾದಿಂದ ತಂದಂತಹ ಮಣ್ಣನ್ನು ತುಂಬಲಾಗಿತ್ತು. ಇಲ್ಲಿಯ ಬಡ ಮುಸ್ಲಿಂರು ಮಕ್ಕಾದ ಆನಂದವನ್ನು ಇಲ್ಲಿ ಪಡೆಯಲಿ ಎನ್ನುವ ಉದ್ದೇಶಕ್ಕಾಗಿ ಮೆಕ್ಕಾದಿಂದ ಮಣ್ಣನ್ನು ತರಲಾಗಿತ್ತು. ಇದು ಪೂರ್ಣ ರೀತಿಯಲ್ಲಿ ಮರದಿಂದ ನಿರ್ಮಿಸಲಾಗಿತ್ತು. ೧೮೪೨ರಲ್ಲಿ ಬೆಂಕಿಗೆ ಆಹುತಿಯಾಯಿತು. ನಂತರ ಇರದ ನಿರ್ಮಾಣವನ್ನು ನವಾಬ ಮನ್ಸೂರ ಆಲಿ ಖಾನ್ ಹಜಾರ್‌ದ್ವಾರಿ ಮಹಲ್‌ನ ಮುಂದುಗಡೆ ನಿರ್ಮಿಸಿದನು.

ನಿಜಾಮರ ಇಮಾಂಬರದ ಯಾತ್ರೆ ಯಾಕೆ ಮಾಡಬೇಕು?

ನಿಜಾಮರ ಇಮಾಂಬರದ ಯಾತ್ರೆ ಯಾಕೆ ಮಾಡಬೇಕು?

PC:Soumyabrata Roy
ಭಾರತದಲ್ಲಿರುವ ಸುಂದರ ವಾಸ್ತುಕಲೆಗಳಲ್ಲಿ ಇಮಾಮಾಬಾಡ ಕೂಡಾ ಒಂದು. ಹಾಗಾಗಿ ಇದು ಯಾತ್ರಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದು 19 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು.

ಮೆಕ್ಕಾದ ಮಣ್ಣು

ಮೆಕ್ಕಾದ ಮಣ್ಣು


PC- William Prinsep

ಮೆಕ್ಕಾದಿಂದ ತರಲಾದ ಮಣ್ಣಿನಿಂದ ನಿರ್ಮಿಸಲಾದ ಈ ಇಮಾಂಬರ ಮುಸ್ಲಿಂರ ಪವಿತ್ರ ಸ್ಥಳವಾಗಿದೆ. ಹಾಗಾಗಿ ಇದನ್ನು ನೋಡಲು, ದರ್ಶನ ಪಡೆಯಲು ಸಾವಿರಾರು ಜನರು ಇಲ್ಲಿಗೆ ಆಗಮಿಸುತ್ತಾರೆ.

ಹೋಗುವುದು ಹೇಗೆ ?

ಹೋಗುವುದು ಹೇಗೆ ?

ವಿಮಾನ ಮೂಲಕ ಹೋಗುವುದಾದರೆ ನಿಜಾಮ ಇಮಾಂಬರದ ಸಮೀಪದ ಏರ್‌ಪೋರ್ಟ್ ಅಂದರೆ ಕೊಲ್ಕತ್ತಾ ಏರ್‌ಪೋರ್ಟ್. ಇದು ಮುರ್ಶಿದಾಬಾದ್‌ನಿಂದ ಸುಮಾರು ೨೨೦ ಕಿ.ಮೀ ದೂರದಲ್ಲಿದೆ. ರೈಲು ಮುಖಾಂತರ ಹೋಗುವುದಾದರೆ ಮುರ್ಶಿದಾಬಾದ್ ರೈಲ್ವೆ ಸ್ಟೇಶನ್ ಇದೆ. ಯಾತ್ರಿಗಳು ಇಲ್ಲಿಗೆ ಡೈರೆಕ್ಟ್ ಟ್ರೈನ್‌ನಲ್ಲಿ ಕೂಡಾ ಹೋಗಬಹುದು.

More News

Read more about: west bengal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+