Search
  • Follow NativePlanet
Share
» »ನಿಸರ್ಗ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ

ನಿಸರ್ಗ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ

By Vijay

ಪ್ರತಿಯೊಬ್ಬ ಪ್ರವಾಸಿಗನ ಪ್ರಮುಖ ಚಟುವಟಿಕೆಗಳ ಪೈಕಿ ಚಿತ್ರಗಳನ್ನು ಸೆರೆಹಿಡಿಯುವುದೂ ಸಹ ಒಂದು ಪ್ರಮುಖವಾದ ಚಟುವಟಿಕೆಯಾಗಿರುತ್ತದೆ. ಪ್ರವಾಸದ ಸಂತಸಮಯ ಕ್ಷಣಗಳೆಂದರೆನೆ ಪಟಗಳನ್ನು ಕ್ಲಿಕ್ಕಿಸುವುದು ಹಾಗೂ ತದನಂತರ ಅವುಗಳನ್ನು ನಮ್ಮ ಹತ್ತಿರದವರೊಂದಿಗೆ ಹಂಚಿಕೊಳ್ಳುತ್ತ ಆ ಸಮಯದ ಆನಂದಮಯ ನೆನಪುಗಳನ್ನು ಮೆಲುಕು ಹಾಕುವುದು. ನೇಟಿವ್ ಪ್ಲ್ಯಾನೆಟ್ ತಂಡ ತನ್ನ ಓದುಗರಿಗೆಂದು ಪ್ರಸ್ತುತಪಡಿಸುತ್ತಿದೆ ನಿಸರ್ಗ ಛಾಯಾಚಿತ್ರ ಸ್ಪರ್ಧೆ ಇದೆ ಜೂನ್ 15, 2016 ರಂದು.

ನಿಸರ್ಗ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ

ಚಿತ್ರಕೃಪೆ: Robert Cooke

ಬನ್ನಿ ಭಾಗವಹಿಸಿ, ನಿಮ್ಮೊಳಗೆ ಅಡಗಿ ಕುಳಿತಿರುವ ಪ್ರತಿಭೆಯನ್ನು ಅನಾವರಣಗೊಳಿಸಿ. ವಿಜೇತರಾಗಿ ಬಹುಮಾನ ಗೆಲ್ಲಲು ನಿಮಗೆಲ್ಲರಿಗೂ ಇದೊಂದು ಸುವರ್ಣಾವಕಾಶ. ವಿಜೇತರಿಗೆ ಉಚಿತ ಶಾಪಿಂಗ್ ವೋಚರ್ ಗಳು ಕಾಯುತ್ತಿವೆ. ನಿಮ್ಮ ನಿಮ್ಮ ಕ್ಯಾಮೆರಾಗಳನ್ನು ಹಿಡಿದುಕೊಂಡು ಸಜ್ಜಾಗಿ, ಉತ್ತಮ ಚಿತ್ರಗಳನ್ನು ಪಡೆಯಲು ಸ್ಥಳಗಳನ್ನು ಅನ್ವೇಷಿಸಿ. ಇನ್ನೇಕೆ ತಡ, ಇಂದೆ ಭಾಗವಹಿಸಿ.

ಸ್ಪರ್ಧೆಯ ನಿಯ್ಮಗಳು ಹಾಗೂ ಮಾರ್ಗಸೂಚಿಗಳು

1. ಥೀಮ್ : ಲ್ಯಾಂಡ್ ಸ್ಕೇಪ್/ ಸೀಸ್ಕೇಪ್/ವೈಲ್ಡ್ ಲೈಫ್

2. ಪ್ರತಿ ಥೀಮಿಗೆ ನೀವು ಎರಡು ಚಿತ್ರಗಳನ್ನು ಕಳುಹಿಸಬಹುದು

3. ಸ್ಪರ್ಧೆಯು ಜೂನ್ 13, 2016 ರಂದು ಪ್ರಾಂಭವಾಗಿ ಜೂನ್ 15, 2016 ರ ಮಧ್ಯರಾತ್ರಿಗೆ ಮುಕ್ತಾಯಗೊಳ್ಳುತ್ತದೆ

4. ನಿಮ್ಮ ಎಲ್ಲ ಚಿತ್ರಗಳನ್ನು [email protected] ಅಂಚೆಗೆ ಕಳುಹಿಸಬೇಕು. ವಿಷಯದಲ್ಲಿ (ಸಬ್ಜೆಕ್ಟ್) Native Planet - Photography Contest - ಎಂದು ಬರೆದಿರಬೇಕು ಅಥವಾ ನಿಮ್ಮ ಚಿತ್ರಗಳನ್ನು https://www.facebook.com/nativeplanet/ ಫೇಸ್ ಬುಕ್ ಪುಟದಲ್ಲಿ ಅಪ್ಲೋಡ್ ಮಾಡಬಹುದು ಇಲ್ಲವೆ ನಮ್ಮ ಟ್ವಿಟರ್ ಹ್ಯಾಂಡಲ್ ಆದ @NativePlanetIN ಗೆ ಪ್ರತಿಕ್ರಿಯಿಸಬಹುದು.

5. ಫೇಸ್ ಬುಕ್ ಅಥವಾ ಟ್ವಿಟರ್ ಬಳಸಿದ್ದಲ್ಲಿ ಈ ಕೆಳಗಿನ ಮಾಹಿತಿಗಳನ್ನು ತಪ್ಪದೆ ಒದಗಿಸಬೇಕು

ನಿಮ್ಮ ಹೆಸರು

ನೀವು ಆಯ್ದುಕೊಂಡ ಥೀಮ್

6. ಭಾಗವಹಿಸಲಿಚ್ಛಿಸುವವರು ತಪ್ಪದೆ ನಮ್ಮ ಫೇಸ್ ಬುಕ್ ಪುಟ ಲೈಕ್ ಮಾಡಬೇಕು ನಮ್ಮ ಟ್ವಿಟರ್ ಖಾತೆಯಾದ @NativePlanetIN ಅನ್ನು ಅನುಸರಿಸಬೇಕು

7. ಸ್ಪರ್ಧೆಯಲ್ಲಿ ಪಾಲ್ಗೊಂಡವರು ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ 7. #NPPhotoContest ಎಂಬ ಹ್ಯಾಶ್ ಟ್ಯಾಗ್ ಬಳಸಬೇಕು

8. ನಿಮ್ಮ ನೆರೆ ಹೊರೆಯವರ, ಸಂಬಂಧಿಕರ ಅಥವಾ ಸ್ನೇಹಿತರ ಚಿತ್ರಗಳನ್ನು ಬಳಸುವಂತಿಲ್ಲ. ಯಾವುದೆ ವೆಬ್ ತಾಣಗಳ ಚಿತ್ರಗಳನ್ನು ಬಳಸಕೂಡದು. ಚಿತ್ರಗಳು ನಿಮ್ಮದೆ ಆಗಿರಬೇಕು

9. ಚಿತ್ರಗಳು ಪ್ರಕೃತಿಯ ವೈಭವ ತೋರಿಸುವ ಸ್ಪಷ್ಟ ಚಿತ್ರಗಳಾಗಿರಬೇಕು. ಯಾವುದೆ ವ್ಯಕ್ತಿಯಗಳ ಉಪಸ್ಥಿತಿ ಚಿತ್ರಗಳಲ್ಲಿರಬಾರದು

10. ತಂತ್ರಾಂಶ (ಸಾಫ್ಟ್ ವೇರ್) ಉಪಕರಣಗಳನ್ನು ಬಳಸಿ ತಿದ್ದಲಾದ ಚಿತ್ರಗಳನ್ನು ಸ್ವೀಕರಿಸಲಾಗುವುದಿಲ್ಲ

11. ಚಿತ್ರಗಳು ಭಾರತದಲ್ಲೆ ಸೆರೆಹಿಡಿದ ಪ್ರಾಕೃತಿಕ ಚಿತ್ರಗಳಾಗಿರಬೇಕು

ನಿಯಮಗಳು ಮತ್ತು ಷರತ್ತುಗಳು

ಒಟ್ಟು ಮೂರು ವಿಜೇತರನ್ನು ಶುಕ್ರವಾರ ಜೂನ್ 17, 2016 ರಂದು ಘೋಷಿಸಲಾಗುವುದು.

ನೇಟಿವ್ ಪ್ಲ್ಯಾನೆಟ್ ಪ್ಯಾನಲ್ ಸದಸ್ಯರಿಂದ ವಿಜೇತರನ್ನು ಆಯ್ಕೆ ಮಾಡಲಾಗುವುದು

ವಿಜೇತರಿಗೆ ಉಚಿತ ಶಾಪಿಂಗ್ ವೋಚರ್ ಬಹುಮಾನವಾಗಿ ದೊರೆಯುತ್ತದೆ

ಎಲ್ಲ ವಿಜೇತರಿಗೆ ಬಹುಮಾನವು 15 ಕೆಲಸದ ದಿನಗಳಲ್ಲಿ ದೊರೆಯುತ್ತದೆ

ಸ್ಪರ್ಧೆಯ ಅಂಗವಾಗಿ ಕಳುಹಿಸಲಾದ ಚಿತ್ರಗಳನ್ನು www.nativeplanet.com ತಾಣವು ಆಯಾ ಚಿತ್ರಗಳ ಮಾಲೀಕರ ಹೆಸರನ್ನು ಸೂಚಿಸಿ ಬಳಸಿಕೊಳ್ಳುತ್ತದೆ

ಶುಭವಾಗಲಿ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+