ನೇಟಿವ್ ಪ್ಲ್ಯಾನೆಟ್, ಮತ್ತೊಂದು ಅದ್ಭುತವಾದ ಸ್ಪರ್ಧೆಯೊಂದನ್ನು ತನ್ನ ಓದುಗರಿಗಾಗಿ ಸಾದರಪಡಿಸುತ್ತಿದೆ. ಎಲ್ಲೆಡೆ "ಪ್ರಿಸ್ಮಾ" ದ ಹವಾ ಜಾಸ್ತಿಯಾಗಿದ್ದು ಈ ಸಂದರ್ಭದಲ್ಲಿ ಸ್ಪರ್ಧೆಯೂ ಸಹ ಪ್ರಿಸ್ಮಾದ ಸುತ್ತಲೆ ಹೆಣೆದುಕೊಂಡಿದೆ. ಪ್ರಿಸ್ಮಾ ಒಂದು ಆಧುನಿಕ ತಾಂತ್ರಿಕ ಆಪ್ ಆಗಿದ್ದು ಇದರ ಮೂಲಕ ನೀವು ತೆಗೆದ ಚಿತ್ರಪಟಗಳನ್ನು ಕಲಾತ್ಮಕವಾಗಿ ರೂಪಾಂತರಿಸಬಹುದು.
ಉದಾಹರಣೆಗೆ, ನಿಮ್ಮದೆ ಆದ ಒಂದು ನೈಜ ಸೆಲ್ಫಿ ಚಿತ್ರವನ್ನು ಪ್ರಿಸ್ಮಾ ಬಳಸುವುದರ ಮೂಲಕ ಆ ನಿಮ್ಮ ಸೆಲ್ಫಿಗೆ ಕಲಾತ್ಮಕತೆಯ "ಟಚ್" ನೀಡಬಹುದು. ಒಬ್ಬ ಚಿತ್ರಕಲಾವಿದನ ಕೈಯಲ್ಲಿ ನಿಮ್ಮದೆ ಚಿತ್ರ ಹೇಗೆ ಮೂಡಿಬರಬಹುದೆಂಬುದನ್ನು ಪ್ರಿಸ್ಮಾ ಬಳಸಿ ನೀವೆ ಸೃಷ್ಟಿಸಬಹುದು. ಹೀಗಾಗಿ ಈ ಸ್ಪರ್ಧೆಯು ನಿಮಗೆ ಮತ್ತಷ್ಟು ರೋಮಾಂಚನ ನೀಡುವುದರಲ್ಲಿ ಸಂದೇಹವಿಲ್ಲ.

ಮೂಲ ಚಿತ್ರ, ಚಿತ್ರಕೃಪೆ: Akshatha Vinayak
ಇಲ್ಲಿ ನೀವು ಮಾಡ ಬೇಕಾಗಿರುವುದಿಷ್ಟೆ: ಯಾವದಾದರೂ ಸ್ಥಳದ ಚಿತ್ರ ನೀವು ಕ್ಲಿಕ್ಕಿಸಿದ್ದಲ್ಲಿ ಅದನ್ನು ಪ್ರಿಸ್ಮಾ ಬಳಸಿ ನಿಮ್ಮದೆ ಆದ ಕಲಾತ್ಮಕ ರೀತಿಯಲ್ಲಿ ಅದನ್ನು ಮರುಸೃಷ್ಟಿಸಿ ಆ ಸ್ಥಳದ ಹೆಸರು ಹಾಗೂ ಪ್ರಿಸ್ಮಾ ಮಾಡಿದ ಆ ಚಿತ್ರವನ್ನು ಫೇಸ್ ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿ.

ಪ್ರಿಸ್ಮಾ ಮಾಡಲಾದ ಮೂಲ ಚಿತ್ರ, ಚಿತ್ರಕೃಪೆ: Akshatha Vinayak
ಶರತ್ತುಗಳು ಹಾಗು ನಿಬಂಧನೆಗಳು
*ಭಾರತದಲ್ಲಿರುವ ಸ್ಥಳಗಳ ಚಿತ್ರಗಳನ್ನು ಮಾತ್ರವೆ ಸ್ವೀಕರಿಸಲಾಗುತ್ತದೆ ಹಾಗೂ ನೀವು ಅಪ್ಲೋಡ್ ಮಾಡುವಾಗ ಆ ಸ್ಥಳದ ಹೆಸರನ್ನು ಬರೆದಿರಬೇಕು
*ಅಪ್ಲೋಡ್ ಮಾಡುವಾಗ ಈ ರೀತಿ ಬರೆದು ಅಪ್ಲೋಡ್ ಮಾಡಬೇಕು #NPPrismaPhotoContest - ಸ್ಥಳದ ಹೆಸರು
*2016 ರ ಅಗಸ್ಟ್ 4 ಮತ್ತು 5 ರಂದು ಸ್ಪರ್ಧೆಯನ್ನು ನಡೆಸಲಾಗುತ್ತದೆ
*ನಿಮಗೆ ಸಾಧ್ಯವಾದಷ್ಟು ಸ್ನೇಹಿತರನ್ನು ಟ್ಯಾಗ್ ಮಾಡಿ ಹಾಗೂ ಅವರೂ ಭಾಗವಹಿಸಲು ಇಷ್ಟಪಟ್ಟಲ್ಲಿ ನಮ್ಮ ಫೇಸ್ ಬುಕ್ ಪುಟವನ್ನು ಲೈಕ್ ಮಾಡಲು ಹೇಳಿ
*ನಿಮ್ಮ ಚಿತ್ರಗಳು ಎಷ್ಟು ಹಂಚಿಕೆಯಾಗಲ್ಪಡುತ್ತವೊ ನೀವು ಗೆಲ್ಲುವ ಅವಕಾಶವು ಅಷ್ಟೆ ಹೆಚ್ಚಾಗುತ್ತದೆ
*ಒಬ್ಬರು ಕೇವಲ ಒಂದು ಚಿತ್ರವನ್ನು ಮಾತ್ರ ಅಪ್ಲೋಡ್ ಮಾಡಬೇಕು ಹಾಗೂ ಅದನ್ನು ನಮ್ಮ ಫೇಸ್ ಬುಕ್ ಪುಟದಲ್ಲಿ ಮಾತ್ರವೆ ಅಪ್ಲೋಡ್ ಮಾಡಬೇಕು
*ಪ್ರಿಸ್ಮಾ ಮಾಡಿದ ಚಿತ್ರದೊಂದಿಗೆ ನೈಜ ಅಥವಾ ಅದರ ಮೂಲ ಚಿತ್ರವನ್ನೂ ಸಹ ಅಪ್ಲೋಡ್ ಮಾಡಬೇಕು
*ನೇಟಿವ್ ಪ್ಲ್ಯಾನೆಟ್ ತೀರ್ಪುಗಾರರ ಸಮೀತಿಯಿಂದ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ
*ಈ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಅಗಸ್ಟ್ 9, 2016 ರಂದು ಘೋಷಿಸಲಾಗುತ್ತದೆ
*ಸ್ಪರ್ಧೆಯಾದ 15 ದಿನಗಳ ನಂತರ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುತ್ತದೆ
*ಸಲ್ಲಿಸಲಾದ ಚಿತ್ರಗಳನ್ನು www.nativeplanet.com ಬಳಸಿಕೊಳ್ಳಬಹುದಾಗಿದ್ದು ಆಯಾ ಚಿತ್ರಗಳ ಮಾಲೀಕರಿಗೆ ಹೆಸರಿನ ಮೂಲಕ ಚಿತ್ರಕೃಪೆ ನೀಡಲಾಗುವುದು
*ಇನ್ನೇಕೆ ತಡ! ಕ್ಲಿಕ್ ಮಾಡಿ, ಪ್ರಿಸ್ಮಾ ಮಾಡಿ ಹಾಗೂ ನಮಗೆ ಸಲ್ಲಿಸಿ ಬಹುಮಾನ ಗೆಲ್ಲಿ!


Click it and Unblock the Notifications















