ನಮ್ಮ ಕಲ್ಪನೆಗೂ ಸಿಗದ ವಿಶಿಷ್ಟ ಪೂಜಾ ಪದ್ಧತಿ ಹಾಗೂ ದೇವರುಗಳಿರುವುದು ಗಮನಾರ್ಹ. ಅಂತಹ ಅದ್ಭುತ ಭಾವನೆಯನ್ನು ಮೂಡಿಸಬಲ್ಲ ಸುಮಾರು 15 ದೇವಾಲಯಗಳು ಭಾರತದಲ್ಲಿದೆ. ಅದರಲ್ಲೂ ಬದುಕಿರುವ ಮನುಷ್ಯರಿಗೂ ದೇವಾಲಯವಿದೆ ಎಂದರೆ ಆಶ್ಚರ್ಯವಾಗುವುದು ಸಹಜ. ವ್ಯಕ್ತಿಗಳಿಗೂ ದೇವಸ್ಥಾನ ನಿರ್ಮಿಸಿದ್ದಾರೆಂದರೆ ಅವರು ಸಾಮಾನ್ಯರಾಗಿರಲು ಸಾಧ್ಯವೇ ಇಲ್ಲ. ದೊಡ್ಡ ಸಾಧನೆ ಮಾಡಿದವರೇ ಆಗಿರಬಹುದು.
ಅಂತಹ ವ್ಯಕ್ತಿಗಳಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಕೂಡಾ ಸೇರಿಕೊಂಡಿದ್ದಾರೆ. ಹಾಗಾದ್ರೆ ಬನ್ನಿ ಇವರಿಬ್ಬರ ದೇವಸ್ಥಾನಗಳು ಎಲ್ಲಿವೆ? ಯಾರು ಕಟ್ಟಿಸಿದರು ? ಯಾಕಾಗಿ ಕಟ್ಟಿಸಿದರು ಅನ್ನೋದನ್ನು ತಿಳೀಯೋಣ.

ಮೋದಿ ದೇವಸ್ಥಾನ
PC: youtube
ಪ್ರಧಾನಿ ಮೋದಿಯನ್ನು ಬಹಳಷ್ಟು ಯುವಜನತೆ ತಮ್ಮ ಆದರ್ಶ ವ್ಯಕ್ತಿಯನ್ನಾಗಿ ನಂಬಿದ್ದಾರೆ. ಮೋದಿ ಆಳ್ವಿಕೆಯ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಮೋದಿಯ ಅಭಿಮಾನಿಗಳು ಸೇರಿ ಗುಜರಾತ್‍ನಲ್ಲಿ ಮೋದಿ ದೇವಸ್ಥಾನ ನಿರ್ಮಿಸಿದ್ದಾರೆ.

ಎಲ್ಲಿದೆ ಈ ಮೋದಿ ಮಂದಿರ?
PC: youtube
ಬದುಕಿರುವ ವ್ಯಕ್ತಿಗಾಗಿ ಗುಜರಾತ್‍ನಲ್ಲಿ ದೇವಸ್ಥಾನ ನಿರ್ಮಿಸಿರುವುದು ಇದೇ ಮೊದಲಬಾರಿಗೆ ಎನ್ನಲಾಗುತ್ತದೆ. ಸುಮಾರು 350 ಜನರ ಗುಂಪೊಂದು ಈ ಕಾರ್ಯದಲ್ಲಿ ಕೈ ಜೋಡಿಸಿದ್ದು, ಡೋನೇಶನ್ ಸಂಗ್ರಹಿಸಿ ಈ ದೇವಾಲಯವನ್ನು ನಿರ್ಮಿಸಿದ್ದಾರೆ. ಇದು ಅಹಮದಾಬಾದ್‍ನಿಂದ ಸುಮಾರು 130 ಮೈಲು ದೂರದಲ್ಲಿದೆ. ಮೋದಿಯ ವಿಗ್ರಹಕ್ಕೆ 2 ಲಕ್ಷ ಖರ್ಚು ಆಗಿದೆಯಂತೆ.

ಸೋನಿಯಾ ಗಾಂಧಿ ದೇವಾಲಯ
PC: youtube
ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ದೇವಾಲಯವನ್ನು ನಿರ್ಮಿಸಿದ್ದಾರೆ. ದೇವಾಲಯದೊಳಗೆ ಸೋನಿಯಾ ಗಾಂಧಿಯ ಬಿಳಿ ಮಾರ್ಬಲ್ ಪ್ರತಿಮೆ ಇದೆ. ದೇವಾಲಯದ ಗೋಡೆಗಳ ಮೇಲೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಭಾವಚಿತ್ರಗಳಿವೆ. ನಾಯಕರು ಮತ್ತು ಸ್ಥಳೀಯರು ಈ ದೇವಾಲಯವನ್ನು ನಿರ್ಮಿಸಲು ಭೂಮಿ, ಹಣ ಮತ್ತು ಇತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಸೋನಿಯಾ ಗಾಂಧಿ ಇರಲಿಲ್ಲವೆಂದಾಗಿದ್ದರೆ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದು ಸ್ಥಳೀಯರು ನಂಬಿದ್ದಾರೆ.

ಎಲ್ಲಿದೆ ಈ ಸೋನಿಯಾ ಗಾಂಧಿ ದೇವಾಲಯ?
ಸೋನಿಯಾ ಗಾಂಧಿ ದೇವಾಲಯ ಭಾರತದ ರಾಜ್ಯ ತೆಲಂಗಾಣದಲ್ಲಿ ಮಲ್ಲಿಯಾಲ್ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಸಕ್ತ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮೀಸಲಾಗಿ ದೇವಾಲ ನಿರ್ಮಿಸಲಾಗಿದೆ. ತೆಲಂಗಾಣ ರಾಜ್ಯ ರಚನೆ ವಿಚಾರವಾಗಿ ಸೋನಿಯಾ ಗಾಂಧಿಯವರಿಗೆ ಧನ್ಯವಾದ ಸಲ್ಲಿಸಲು ಸ್ಥಳೀಯ ಕಾಂಗ್ರೆಸ್ ನಾಯಕರು ಈ ದೇವಾಲಯವನ್ನು ನಿರ್ಮಿಸಿದ್ದಾರೆ.


Click it and Unblock the Notifications

















