Search
  • Follow NativePlanet
Share
» »ಸಂಗೀತವನ್ನು ಹಾಡುತ್ತಿರುವ ಕಲ್ಲಿನ ರಹಸ್ಯ

ಸಂಗೀತವನ್ನು ಹಾಡುತ್ತಿರುವ ಕಲ್ಲಿನ ರಹಸ್ಯ

ರಾಮನ ಕಾಲು ಸೋಕಿ ಕಲ್ಲಾದ ಅಹಲ್ಯೆ ಆದಳು ಎಂದೂ, ಹಲವಾರು ವರ್ಷಗಳ ಹಿಂದೆ ಮಾನವರು ಕಲ್ಲಿನಿಂದ ಅಗ್ನಿ ಉತ್ಪತ್ತಿ ಮಾಡಿದರು ಎಂದೂ, ಕಲ್ಲಿನಿಂದ ಸುಂದರವಾದ ಶಿಲ್ಪಗಳು, ವಿಗ್ರಹಗಳು ತಯಾರು ಮಾಡುತ್ತಾರೆ ಎಂದು ನಮಗೆ ಸಾಮಾನ್ಯವಾಗಿ ತಿಳಿದೇ ಇರುವ ಸಂಗತ

ನಮ್ಮ ಕರ್ನಾಟಕದ ಹಂಪಿಯಲ್ಲಿನ ಸಂಗೀತ ಸ್ತಂಭಗಳ ಹಾಗೆ ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯಲ್ಲಿಯೂ ಕೂಡ ಇರುವುದು ಕಾಣಬಹುದು. ನಲ್ಗೊಂಡ ಜಿಲ್ಲೆಯು ತೆಲಂಗಾಣ ರಾಜ್ಯದ 31 ಜಿಲ್ಲೆಗಳಲ್ಲಿ ಒಂದಾಗಿದೆ. ಒಂದು ಕಾಲದಲ್ಲಿ ನಲ್ಗೊಂಡಗೆ "ನೀಲಗಿರಿ" ಎಂದು ಹೆಸರು ಇತ್ತು.

ರಾಮನ ಕಾಲು ಸೋಕಿ ಕಲ್ಲಾದ ಅಹಲ್ಯೆ ಆದಳು ಎಂದೂ, ಹಲವಾರು ವರ್ಷಗಳ ಹಿಂದೆ ಮಾನವರು ಕಲ್ಲಿನಿಂದ ಅಗ್ನಿ ಉತ್ಪತ್ತಿ ಮಾಡಿದರು ಎಂದೂ, ಕಲ್ಲಿನಿಂದ ಸುಂದರವಾದ ಶಿಲ್ಪಗಳು, ವಿಗ್ರಹಗಳು ತಯಾರು ಮಾಡುತ್ತಾರೆ ಎಂದು ನಮಗೆ ಸಾಮಾನ್ಯವಾಗಿ ತಿಳಿದೇ ಇರುವ ಸಂಗತಿಯೇ. ಆದರೆ ಕರ್ನಾಟಕದ ಹಂಪಿಯ ಸಂಗೀತ ಸ್ತಂಭಗಳಂತೆ ನಲ್ಗೊಂಡದಲ್ಲಿನ ಕಲ್ಲನ್ನು ಒಡೆದರೆ ಸುಮಧುರವಾದ ರಾಗವನ್ನು ಹಾಡುತ್ತದೆ.

ಕಲ್ಲುಗಳು ರಾಗವಾಡುತ್ತದೆ ಎಂದು ಕೆಲವರು ಹೇಳುತ್ತಾರೆ. ಹಾಗಾದರೆ ಆ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆಯಿರಿ. ಈ ಲೇಖನದಲ್ಲಿ ನಲ್ಗೊಂಡದಲ್ಲಿನ ಕಲ್ಲಿನ ಶಬ್ಧದ ವಿಡಿಯೋ ಕೂಡ ಇದೆ. ಒಮ್ಮೆ ವೀಕ್ಷಿಸಿ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯಲ್ಲಿನ ಅಯಿಟಿಪಾಮುಲ ಎಂಬ ಗ್ರಾಮವಿದೆ. ಆ ಗ್ರಾಮದ ಒಂದು ಸ್ಥಳದಲ್ಲಿ ಕೆಲವು ಕಲ್ಲಿನ ಬಂಡೆಗಳು ಇವೆ. ಆ ಬಂಡೆಗಳಲ್ಲಿ ಕೆಲವು ಸಂಗೀತದ ನಾದವನ್ನು ನುಡಿಸುತ್ತದೆ. ಆ ಶಬ್ಧ ಕೂಡ ದೇವಾಲಯದ ಗಂಟೆ ಮೊಳಗಿದಂತೆಯೇ ಕೇಳಿಸುತ್ತದೆ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಇಲ್ಲಿ ಯಾವ ಕಲ್ಲನ್ನು ನೋಡಿದರೂ ಕೂಡ ಸಂಗೀತ ಪ್ರತಿಧ್ವನಿಯನ್ನು ಮೊಳಗಿಸುತ್ತದೆ. ಇಲ್ಲಿನ ಮತ್ತೊಂದು ಆಶ್ಚರ್ಯವೆನೆಂದರೆ ಒಂದೊಂದು ಕಲ್ಲು ಒಂದೊಂದು ರೀತಿಯ ಶಬ್ಧವನ್ನು ಮಾಡುವುದೇ ಆಗಿದೆ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಇದನ್ನು ಸರ್ಕಾರ ಒಂದು ಪ್ರವಾಸ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಅಲ್ಲಿನ ಸ್ಥಳೀಯರು ಕೇಳಿಕೊಳ್ಳುತ್ತಿದ್ದಾರೆ. ನಗರ ಪ್ರದೇಶದಿಂದ ಬೆಸತ್ತ ಜನರು ಕೂಡ ಈ ಸುಂದರವಾದ ಸ್ಥಳಕ್ಕೆ ಭೇಟಿ ನೀಡಿ ಸುಮಧುರವಾದ ರಾಗಗಳನ್ನು ನುಡಿಸಿ ಆನಂದ ಪಡುತ್ತಾರೆ. ಆ ಕಲ್ಲುಗಳನ್ನು ತಮ್ಮ ಸಂಗೀತ ಪೆಟ್ಟಿಗೆಯಾಗಿ ಮಾಡಿಕೊಂಡು ತಮ್ಮದೇ ಆದ ನಾದವನ್ನು ಪ್ರಾರಂಭಿಸುತ್ತಾರೆ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತಕ್ಕೆ ಕಲ್ಲುಗಳು ಕೂಡ ಕರಗುತ್ತವೆ. ಪೂರ್ವದಲ್ಲಿ ಈ ಬಂಡೆಗಳನ್ನು ಗ್ರಾಮದ ರಕ್ಷಣಾ ಕವಚವಾಗಿ ಉಪಯೋಗಿಸುತ್ತಿದ್ದರು. ಶತ್ರು ಸೈನ್ಯ ಒಳ ಪ್ರವೇಶ ಮಾಡುತ್ತಿದೆ ಎಂದು ತಿಳಿಸಲು ಈ ಬಂಡೆಯಿಂದ ಶಬ್ಧ ಮಾಡಿ ತಿಳಿಸುತ್ತಿದ್ದರಂತೆ. ಅಂದಿನಿಂದ ಈ ಬೆಟ್ಟವಿರುವ ಬಂಡೆಗಳನ್ನು "ನಗಾರಾ" ಎಂದು ಕರೆಯುತ್ತಿದ್ದರಂತೆ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಪ್ರಶಾಂತವಾದ ವಾತಾವರಣದಲ್ಲಿ ಸುಂದರವಾದ ನಾದಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ಸಂಗೀತದ ಸ್ವರಗಳಾದ ಸ.ರಿ.ಗ.ಮ.ಪ ಎಂಬ ನಾದ ಬಂಡೆಗಳ ಮೂಖಾಂತರ ಶಬ್ಧವನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು. ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ನುಡಿಯುವ ನಾದವು ಕೆಲವು ಕಿ.ಮೀ ದೂರದವರೆವಿಗೂ ಕೇಳಿಸುತ್ತದೆ ಎಂತೆ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ದೇವಾಲಯದಲ್ಲಿನ ಗಂಟೆಯ ಶಬ್ಧದ ರೀತಿಯಲ್ಲಿ ಇಲ್ಲಿ ಕಲ್ಲುಗಳು ವಿಭಿನ್ನವಾದ ಶಬ್ಧಗಳನ್ನು ನುಡಿಸುತ್ತವೆ. ಈ ಆಶ್ಚರ್ಯವನ್ನು ಕಾಣಲು ಭಾರಿ ಜನಸಾಗರೇ ಈ ಸ್ಥಳಕ್ಕೆ ಭೇಟಿ ನೀಡುತ್ತಿದೆ. ಈ ವಿಡಿಯೋ ಒಮ್ಮೆ ಕೇಳಿ. ನೀವೆ ಆಶ್ಚರ್ಯ ಪಡುತ್ತಿರಾ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ವಿಡಿಯೋ ಕೇಳಿದಿರಾ? ಹೇಗೆ ಇದೆ? ಚೆನ್ನಾಗಿದೆ ಅಲ್ಲವೆ? ನೀವು ಒಮ್ಮೆ ಭೇಟಿ ನೀಡಿ. ನಿಮ್ಮ ಕೈಯಾರೆ ರಾಗವನ್ನು ನುಡಿಸಿ ಬನ್ನಿ. ಈ ಮ್ಯೂಸಿಕಲ್ ಸ್ಟೋನ್ ಕೇವಲ ಆಕರ್ಷಣೆ ಅಲ್ಲ. ಇದರಲ್ಲಿ ಕೆಲವು ರಹಸ್ಯ ಕೂಡ ಅಡಗಿದೆ. ಬೆಟ್ಟದ ಮೇಲೆ ಹಲವಾರು ಕಲ್ಲುಗಳು ಇರುವಾಗ ಈ 2- 3 ಕಲ್ಲಿನಲ್ಲಿ ಮಾತ್ರ ಏಕೆ ಸ್ವರಗಳು ನುಡಿಸುತ್ತವೆ? ಎಂಬುದು ಆಶ್ಚರ್ಯವೇ ಸರಿ.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಇಲ್ಲಿನ ಸಂಗೀತ ನಾದಗಳು ಮಕ್ಕಳಿಗೆ ಮತ್ತಷ್ಟು ಆನಂದವನ್ನು ಉಂಟು ಮಾಡುತ್ತದೆ. ಇದನ್ನು ಸ್ಥಳೀಯರು ಹಲವಾರು ವರ್ಷಗಳಿಂದ ಸಂಪತ್ತಿನ ರೀತಿಯಲ್ಲಿ ಕಾಪಾಡುತ್ತಾ ಇದ್ದಾರೆ ಎಂದು ಹೇಳಲಾಗುತ್ತಿದೆ. ಕಲ್ಲಿನಿಂದ ಬರುವ ಶಬ್ಧವು ಹೊಸದೇನು ಅಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ಸಂಗೀತ ಪ್ರಿಯರಿಗೆ ಅದ್ಭುತವಾದ ಅನುಭವ

ವಿದೇಶಗಳಲ್ಲಿ ಇಂದಿಗೂ ಇಂತಹ ಕಲ್ಲುಗಳ ಮೇಲೆ ಅಧ್ಯಯನವನ್ನು ನಡೆಸುತ್ತಿದ್ದಾರೆ. ಇದನ್ನು ರಿಂಗಿಂಗ್ ರಾಕ್ಸ್ ಎಂದು ಕರೆಯುತ್ತಾರೆ. ಅದೇನೆ ಇರಲಿ, ಇಲ್ಲಿನ ಸುಂದರವಾದ ಸ್ಥಳಕ್ಕೆ ಒಮ್ಮೆ ಭೇಟಿ ನೀಡಲೇಬೇಕು ಅಲ್ಲವೇ?

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಈ ಪ್ರದೇಶಕ್ಕೆ ಮೊದಲು ತೆಲಂಗಾಣಕ್ಕೆ ತಲುಪಿ ತದನಂತರ ಯಾವುದೇ ರಹದಾರಿಯಿಂದಾದರೂ ನೇರವಾಗಿ ನಲ್ಗೊಂಡಗೆ ರೈಲು, ರಸ್ತೆ ಮಾರ್ಗದ ಮೂಲಕ ಸೇರಿಕೊಳ್ಳಬಹುದಾಗಿದೆ. ನಲ್ಗೊಂಡ ರೈಲ್ವೆ ನಿಲ್ದಾಣವೆಂದರೆ ಅದು ಗಂಟೂರು-ಸಿಕಿಂದ್ರಾಬಾದ್ ರೈಲ್ವೆ ನಿಲ್ದಾಣ ಮುಖ್ಯವಾದುದು. ಈ ನಗರದಲ್ಲಿ ಆನೇಕ ರೈಲ್ವೆಗಳು ಇವೆ. ರಸ್ತೆ ಸಾರಿಗೆ ಕೂಡ ಉತ್ತಮ ಸೌಲಭ್ಯವನ್ನು ಹೊಂದಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+