Search
  • Follow NativePlanet
Share
» »ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಾಗಿರುವ ಭಾರತದ ಮೌಂಟನ್ ರೈಲ್ವೆಗಳು

ಯುನೆಸ್ಕೊ ವಿಶ್ವ ಪರಂಪರೆಯ ತಾಣಗಳಾಗಿರುವ ಭಾರತದ ಮೌಂಟನ್ ರೈಲ್ವೆಗಳು

ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಯುನೆಸ್ಕೋ ಪ್ರಕಾರ, ಅತ್ಯುತ್ತಮ ಸಾರ್ವತ್ರಿಕ ಮೌಲ್ಯವೆಂದು ಪರಿಗಣಿಸಲ್ಪಟ್ಟಿರುವ ಸ್ಥಳಗಳಾಗಿವೆ. ಈ ತಾಣಗಳನ್ನು ಅವುಗಳ ಸಾಂಸ್ಕೃತಿಕ ನೈಸರ್ಗಿಕ ಮತ್ತು ಆಧ್ಯಾತ್ಮಿಕ ಮಹತ್ವಗಳ ಅನುಸಾರವಾಗಿ ರಕ್ಷಿಸಲಾಗಿದ್ದು ಒಟ್ಟಾರೆಯಾಗಿ ಇವುಗಳನ್ನು ಅಂತರಾಷ್ಟ್ರೀಯ ಸಮುದಾಯದ ಅಡಿಯಲ್ಲಿ ಎಲ್ಲವನ್ನೂ ನಿರ್ಧರಿಸಲಾಗುತ್ತದೆ. ತಾಣಗಳು ಧಾರ್ಮಿಕ ಕಟ್ಟಡಗಳು ಮತ್ತು ರಚನೆಗಳನ್ನು ಒಳಗೊಂಡಿದ್ದು, ಪುರಾತತ್ವದ ಅವಶೇಷಗಳು ಮತ್ತು ತಾಣಗಳು, ಕಲೆ ಮತ್ತು ವಾಸ್ತು ಶಿಲ್ಪದ ಕೆಲಸಗಳು, ಮತ್ತು ಹಳ್ಳಿಗಳು, ಪಟ್ಟಣಗಳು, ಜಿಲ್ಲೆಗಳು ಮತ್ತು ಪ್ರ್ಯಾಂತ್ಯಗಳಂತಹ ಜೀವಂತ ಸಮುದಾಯಗಳನ್ನೂ ವಿಶ್ವ ಪರಂಪರೆಯ ಪಟ್ಟಿಯು ಒಳಗೊಂಡಿದೆ.

ಇಂದು, ಮೌಂಟೇನ್ ರೈಲ್ವೇಸ್ ಆಫ್ ಇಂಡಿಯಾ' ಎಂಬ ಹೆಸರಿನಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೆಂದು ಘೋಷಿಸಲ್ಪಟ್ಟ ಭಾರತದ ಮೂರು ವಿಶ್ವ-ಪ್ರಸಿದ್ಧ ಮೌಂಟೇನ್ ರೈಲ್ವೇಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ

ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ

ಭಾರತದ ಒಂದು ರಾಜ್ಯವಾಗಿರುವ ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇಯು ಮೊದಲನೇ ಗುಡ್ಡಗಾಡು ಪ್ರಯಾಣಿಕ ರೈಲು ಮಾರ್ಗವಾಗಿದ್ದು, ಇದು 2 ಅಡಿ ಗೇಜ್ ರೈಲ್ವೇ ಮಾರ್ಗವು ನ್ಯು ಜಲ್ಪೈಗುರಿಯಿಂದ ವಯಾ ಸಿಲಿಗುರಿಪಟ್ಟಣ, ಸಿಲಿಗುರಿ ಜಂಕ್ಷನ್, ಸುಕ್ನಾ, ರಾಂಗ್ಟಾಂಗ್, ತಿಂದರಿಯಾ ಗಯಾಬರಿ, ಮಹಾನದಿ, ಕುರ್ಸೆಯೊಂಗ್, ತುಂಗ್, ಸೋನಾಡಾ, ಘಮ್ ಮೂಲಕ ಡಾರ್ಜಿಲಿಂಗ್ ಗೆ ತಲುಪುವ 88 ಕಿ.ಮೀ ಉದ್ದದ ಹಳಿಯನ್ನು ಹೊಂದಿದೆ. ಸಾಮಾನ್ಯವಾಗಿ "ಟಾಯ್ ಟ್ರೈನ್" ಎಂದು ಕರೆಯಲ್ಪಡುವ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ 1881 ರಲ್ಲಿ ಪ್ರಾರಂಭವಾಯಿತು ಮತ್ತು 1999 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಇದನ್ನು ಘೋಷಿಸಲಾಯಿತು.

ಈ ರೈಲ್ವೇ ಮಾರ್ಗವನ್ನು ಭಾರತೀಯ ರೈಲ್ವೇಯು ಹೆರಿಟೇಜ್ ಲೈನ್ (ಪರಂಪರೆಯ ಮಾರ್ಗ) ವೆಂದು ವಿಭಜನೆ ಮಾಡಿದೆ ಮತ್ತು ಇದು ಅತ್ಯಂತ ರಮಣೀಯ ಮಾರ್ಗಗಳಲ್ಲಿ ಒಂದಾಗಿದೆ ಮಾತ್ರವಲ್ಲದೆ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿದೆ. ಈ ರೈಲು ಮಾರ್ಗವು ಪರ್ವತ ಶ್ರೇಣಿಗಳಲ್ಲಿ ಅಥವಾ ಪರ್ವತದ ಇನ್ನೊಂದು ಬದಿಯಲ್ಲಿ ನೆಲೆಸಿರುವ ಸುಂದರವಾದ ಕಣಿವೆಗಳು ಮತ್ತು ಘೂಮ್ ನಂತಹ ಕೆಲವು ಸುಂದರ ಪಟ್ಟಣಗಳ ಮೂಲಕ ಹಾದು ಹೋಗುತ್ತದೆ ಹಾಗೂ ಮಾರ್ಗದಲ್ಲಿಯ ಪ್ರಯಾಣವು ಅತ್ಯಂತ ರಮಣೀಯ ದೃಶ್ಯಗಳ ನೋಟವನ್ನು ಒದಗಿಸಿ ಕೊಡುತ್ತಾ ಯಾವುದೋ ಪ್ರಪಂಚದಲ್ಲಿರುವ ಅನುಭವವನ್ನು ಕೊಡುತ್ತದೆ. ಈ ಪ್ರಯಾಣದ ಇನ್ನಷ್ಟು ರಮಣೀಯ ಸೌಂದರ್ಯವನ್ನು ಅನುಭವಿಸ ಬೇಕೆಂದರೆ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಹವಾಮಾನವು ತಿಳಿಯಾಗಿದ್ದು ಸ್ವಲ್ಪ ಬಿಸಿಲಿರುವ ಸಮಯದಲ್ಲಿ ಈ ರೈಲು ಮಾರ್ಗದಲ್ಲಿ ಪ್ರಯಾಣಿಸಿದಲ್ಲಿ ಮಾರ್ಗದಲ್ಲಿ ಬರುವ ಸೌಂದರ್ಯತೆಯ ಸಂಪೂರ್ಣ ವೈಭವವನ್ನು ಅನುಭವಿಸಬಹುದು.

ನೀಲಗಿರಿ ಮೌಂಟನ್ ರೈಲ್ವೇ

ನೀಲಗಿರಿ ಮೌಂಟನ್ ರೈಲ್ವೇ

ನೀಲಗಿರಿ ಮೌಂಟೇನ್ ರೈಲ್ವೇ ಒಂದು ನ್ಯಾರೋ ಗೇಜ್ ಸಿಂಗಲ್-ಟ್ರ್ಯಾಕ್ ರೈಲುಮಾರ್ಗವಾಗಿದ್ದು, ಭಾರತದ ತಮಿಳುನಾಡಿನ ಮೆಟ್ಟುಪಾಳ್ಯಂ ಮತ್ತು ಊಟಿಯನ್ನು ಸಂಪರ್ಕಿಸುತ್ತದೆ ಈ ಮಾರ್ಗವು ತಮಿಳುನಾಡು ವಯಾ ಕೆಲರ್, ಕೂನೂರು, ವೆಲ್ಲಿಂಗ್‌ಟನ್ ಮತ್ತು ಲವ್‌ಡೇಲ್ ಮಾರ್ಗಗಳ ಮೂಲಕ ಚಲಿಸುತ್ತದೆ ಹಾಗೂ ಈ ಮಾರ್ಗವು 46 ಕಿಮೀ ಉದ್ದದ ಹಳಿಯನ್ನು ಹೊಂದಿದೆ. ಈ ರೈಲು ಮಾರ್ಗವು 1908 ರಲ್ಲಿ ಪ್ರಾರಂಭವಾಯಿತು ಹಾಗೂ 2005 ನೇ ಇಸವಿಯಲ್ಲಿ ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು. ಈ ರೈಲು ಮಾರ್ಗವು 16 ಸುರಂಗಗಳು, 208 ವಕ್ರ ಮಾರ್ಗಗಳು (ಕರ್ವ್ಸ್) ಮತ್ತು 250 ಸೇತುವೆಗಳ ಮೂಲಕ ಚಲಿಸುತ್ತದೆ. ಇದು ಸಾಮಾನ್ಯವಾಗಿ " ರಾಕ್ ಮತ್ತು ಪಿನಿಯನ್" ರೈಲು ವ್ಯವಸ್ಥೆ ಎಂದು ಕರೆಯಲ್ಪಡುವ ಪರ್ಯಾಯ ಬೈಟಿಂಗ್ ಸಿಸ್ಟಮ್ (ಎಬಿಟಿ) ನೊಂದಿಗೆ ಉಪಯೋಗಿಸಲಾಗುತ್ತಿದ್ದು ಇದನ್ನು ಸ್ಟೀಮ್ ಲೊಕೊಮೊಟಿವ್‌ಗಳೊಂದಿಗೆ ನಿರ್ವಹಿಸಲಾಗುತ್ತದೆ.

ಈ ಸಾಲು ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ಬೆಟ್ಟಗಳು ಮತ್ತು ಕಣಿವೆಗಳ ಭವ್ಯವಾದ ನೋಟಗಳಿಗೆ ಹೆಸರುವಾಸಿಯಾಗಿದೆ. ರೈಲು ಸವಾರಿಯು ಕಣಿವೆಗಳು, ಚಹಾ ತೋಟಗಳು, ಜಲಪಾತಗಳು ಮತ್ತು ಇನ್ನೂ ಹಲವಾರು ಸುಂದರವಾದ ದೃಶ್ಯಗಳನ್ನು ಒಳಗೊಂಡಿದೆ. ಇದು ಭಾರತದ ಅತ್ಯಂತ ಸುಂದರವಾದ ರೈಲು ಪ್ರಯಾಣಗಳಲ್ಲಿ ಒಂದಾಗಿದ್ದು ಪ್ರಕೃತಿಯ ಸೌಂದರ್ಯದ ಅದ್ಭುತ ನೋಟವನ್ನು ಪ್ರಯಾಣಿಕರಿಗೆ ಒದಗಿಸಿಕೊಡುತ್ತದೆ.

ಕಲ್ಕಾ ಶಿಮ್ಲಾ ರೈಲ್ವೇ

ಕಲ್ಕಾ ಶಿಮ್ಲಾ ರೈಲ್ವೇ

ಕಲ್ಕಾ ಶಿಮ್ಲಾ ರೈಲ್ವೇ ಯು ಒಂದು ನ್ಯಾರೋ ಗೇಜ್ ರೈಲ್ವೇ ಮಾರ್ಗವಾಗಿದ್ದ್ಉ, ಇದು ಇದು ಹರಿಯಾಣದ ಕಲ್ಕಾದಿಂದ ಭಾರತದ ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಚಲಿಸುತ್ತದೆ. ಕಲ್ಕಾವು ಹಿಮಾಲಯದ ತಪ್ಪಲಿನಲ್ಲಿ ನೆಲೆಸಿದ್ದು ಹಿಮಾಚಲ ಪ್ರದೇಶದ ಸುಂದರ ನೋಟವನ್ನು ಕೊಡುವ ಹೆಬ್ಬಾಗಿಲಾಗಿದೆ. ರೈಲು ಹಳಿಯು ಕಲ್ಕಾದಿಂದ ಶಿಮ್ಲಾಕ್ಕೆ 96.54 ಕಿಮೀ ದೂರವನ್ನು ಹೊಂದಿದ್ದು, ಇದು ಕಲ್ಕಾ ದಿಂದ ಶಿಮ್ಲಾಗೆ ವಯಾ ಧರ್ಮಪುರ ಹೆಚ್‌ಎಂಸಿಎಲ್, ಕುಮಾರಹಟ್ಟಿ, ಬರೋಗ್, ಸೋಲನ್, ಸಲೋಗ್ರಾ, ಕಂದಘಾಟ್, ಶೋಘಿ, ತಾರಾದೇವಿ, ಜುಟೋಗ್ ಮತ್ತು ಸಮ್ಮರ್ ಹಿಲ್ ಮೂಲಕ ಚಲಿಸುತ್ತದೆ. ಈ ರೈಲು ಮಾರ್ಗವು 1903 ರಲ್ಲಿ ಪ್ರಾರಂಭವಾಯಿತು ಹಾಗೂ 2008 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಸ್ಥಾನಮಾನವನ್ನು ಪಡೆಯಿತು.

ಕಲ್ಕಾ ಶಿಮ್ಲಾ ರೈಲು ಮಾರ್ಗವು ಭಾರತದ ಅತ್ಯಂತ ಸುಂದರ ರೈಲ್ವೇ ಮಾರ್ಗಗಳಲ್ಲಿ ಒಂದಾಗಿದ್ದು, ಅದ್ಬುತ ಹಿಮಾಲಯದ ಅತ್ಯಂತ ಸುಂದರವಾದ ನೋಟವನ್ನು ಒದಗಿಸಿಕೊಡುತ್ತದೆ. ಈ ರೈಲು ಹಿಮಾಚಲ ಪ್ರದೇಶದ ಪರ್ವತಗಳು ಮತ್ತು ಕಣಿವೆಗಳ ಮೂಲಕ ಹಾದು ಹೋಗುತ್ತಾ ಪ್ರಯಾಣಿಕರಿಗೆ ಭಾರತದಲ್ಲಿರುವ ಅತ್ಯಂತ ಸುಂದರ ದೃಶ್ಯಗಳ ಅನುಭವ ಮಾಡಿಸುತ್ತದೆ.

ಅಂತಿಮವಾಗಿ ಹೇಳುವುದಾದರೆ, ಭಾರತದ ಪರ್ವತ ರೈಲುಮಾರ್ಗಗಳ ಸೌಂದರ್ಯವೆಂದರೆ ಅವುಗಳನ್ನು ಪರಿಸರದ ಒಂದು ಅಂಗವೆನ್ನುವಂತೆ ನಿರ್ಮಿಸಲಾಗಿದೆ. ಈ ರೈಲ್ವೇ ಮಾರ್ಗಗಳು ಕೇವಲ ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ತಲುಪುವ ಹಳಿಯಾಗಿರದೆ ಇವುಗಳ ಜೊತೆಗೆ ಹುಲ್ಲುಗಾವಲುಗಳು ಪೈನ್ ಕಾಡುಗಳು, ಪರ್ವತಗಳು ಮತ್ತು ನೀರಿನ ತೊರೆಗಳಂತಹ ಅಂಶಗಳನ್ನು ಹೊಂದಿರುವ ಪರಿಸರದ ಸುಂದರ ವ್ಯವಸ್ಥೆಗಳಾಗಿವೆ. ಇದು ರೈಲ್ವೆಯ ಇತರ ರೂಪಗಳ ಬಗ್ಗೆ ಹೇಳಲಾಗದ ಸಂಗತಿಯಾಗಿದೆ. ಈ ವ್ಯವಸ್ಥೆಯ ಸೌಂದರ್ಯವು ಅದನ್ನು ಬಳಸುವ ಪ್ರಯಾಣಿಕರಲ್ಲೂ ಪ್ರತಿ ಫಲಿಸುತ್ತದೆ. ದೇಶದ ವಿವಿಧ ಭಾಗಗಳಿಂದ ಜನರು ಇಲ್ಲಿಗೆ ಬಂದು ಸೌಂದರ್ಯ ಮತ್ತು ಮನಮುಟ್ಟುವ ನೋಟಗಳನ್ನು ಆನಂದಿಸುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+