Search
  • Follow NativePlanet
Share
» »ಪೋಷಕರ ಜೊತೆ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದ್ದರೆ ಈ 8 ಸ್ಥಳಗಳನ್ನು ತಪ್ಪದೇ ನೋಡಿ…  

ಪೋಷಕರ ಜೊತೆ ಪ್ರವಾಸಕ್ಕೆ ಪ್ಲ್ಯಾನ್ ಮಾಡಿದ್ದರೆ ಈ 8 ಸ್ಥಳಗಳನ್ನು ತಪ್ಪದೇ ನೋಡಿ…  

By Ashwini Hr

ನಮ್ಮ ಆತ್ಮೀಯ ಸ್ನೇಹಿತರು, ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟರೆ ಏನೋ ಒಂಥರಾ ಖುಷಿ, ಮಜಾ ಇರುತ್ತದೆ. ನಮ್ಮವರೊಟ್ಟಿಗೆ ಹಳೆಯದನ್ನೆಲ್ಲಾ ಮೆಲುಕು ಹಾಕುತ್ತಾ ಹೊಸ ಹೊಸ ಸ್ಥಳಗಳನ್ನು ಅನ್ವೇಷಣೆ ಮಾಡುವುದು, ಅಲ್ಲಿನ ವಿಷಯಗಳನ್ನು ತಿಳಿದುಕೊಳ್ಳುವುದು, ಬಗೆ ಬಗೆಯ ರುಚಿಕರವಾದ ತಿನಿಸುಗಳನ್ನು ಸವಿಯುವುದು, ಶಾಪಿಂಗ್ ಮಾಡುವುದು ಅತೀವ ನೆಮ್ಮದಿ ಕೊಡುತ್ತದೆ ಅಲ್ಲವೇ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಆಸೆ, ಕನಸುಗಳನ್ನು ಪೋಷಿಸುವ ನಮ್ಮ ಪೋಷಕರನ್ನು ಹೀಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದರಿಂದ ಅವರ ಮನಸ್ಸಿಗೆ ಏನೋ ಒಂದು ತರಹ ಆನಂದ, ನಮಗೂ ಸಂತೋಷ.

ಹೆತ್ತವರೊಂದಿಗೆ ಪ್ರಯಾಣಿಸುವುದು ನಾವು ನಿರೀಕ್ಷಿಸುವುದಕ್ಕಿಂತ ಹೆಚ್ಚು ಮುದ ನೀಡಬಲ್ಲದು. ಹಾಗಾಗಿ ನಮ್ಮ ಪೋಷಕರ ಜೊತೆ ಪ್ರವಾಸ ಹೊರಡುವಾಗ ಯಾವ ಸ್ಥಳಗಳಿಗೆ ತೆರಳಿದರೆ ಸೂಕ್ತ ಎಂದು ನೀವು ಆಲೋಚಿಸುತ್ತಿದ್ದರೆ, ಆ ಬಗ್ಗೆ ನಿಮಗೆ ಚಿಂತೆ ಬೇಡ. ಇಲ್ಲಿ ನಿಮ್ಮ ಪೋಷಕರೊಟ್ಟಿಗೆ ಆನಂದಿಸಲು ಭಾರತದಲ್ಲಿರುವ 4 ಕುಟುಂಬ ಸ್ನೇಹಿ ಸ್ಥಳಗಳ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ಇಷ್ಟವಾದರೆ ಒಮ್ಮೆ ನೀವೂ ಬಿಡುವು ಮಾಡಿಕೊಂಡು ಅಲ್ಲಿಗೆ ಹೋಗಿ ನೋಡಿ ಬರುವುದು ಒಳ್ಳೆಯದು.

ಅಲೆಪ್ಪಿ ಅಥವಾ ಆಲಪ್ಪುಳ

ಅಲೆಪ್ಪಿ ಅಥವಾ ಆಲಪ್ಪುಳ

ಅಲೆಪ್ಪಿ ಎಂದೂ ಕರೆಯಲ್ಪಡುವ ಆಲಪ್ಪುಳವು ಕೇರಳದ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಇದು ಕೇರಳದ 6 ನೇ ದೊಡ್ಡ ನಗರವಾಗಿದೆ. ಹಚ್ಚಹಸಿರಿನ ಭತ್ತದ ಗದ್ದೆಗಳು, ಎತ್ತರದ ತೆಂಗಿನ ಮರಗಳು, ಮಿನುಗುವ ನೀರು ಮತ್ತು ಅಲಪ್ಪುಳದ ಸುತ್ತಲಿನ ಉದ್ದದ ಕಾಲುವೆಗಳು ನೋಡುತ್ತಿದ್ದರೆ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. 'ಪೂರ್ವದ ವೆನಿಸ್' ಎಂದೂ ಕರೆಯಲ್ಪಡುವ ಅಲೆಪ್ಪಿಯಲ್ಲಿ ದೋಣಿ ರೇಸ್‌ ಅತ್ಯಂತ ಜನಪ್ರಿಯವಾಗಿದೆ. ಆಲಪ್ಪುಳ ಬೀಚ್, ಅಂಬಲಪ್ಪುಳ ಶ್ರೀ ಕೃಷ್ಣ ದೇವಸ್ಥಾನ, ಅರ್ಥುಂಕಲ್ ಚರ್ಚ್, ಮನ್ನರಸಲ ದೇವಸ್ಥಾನ, ಚೆಟ್ಟಿಕುಲಂಗರ ದೇವಿ ದೇವಸ್ಥಾನ, ತಕಝಿ ಶ್ರೀ ಧರ್ಮಶಾಸ್ತಾ ದೇವಸ್ಥಾನ, ಮುಲ್ಲಕ್ಕಲ್ ದೇವಸ್ಥಾನ, ಚಂಪಕುಲಂ ಮತ್ತು ಕೃಷ್ಣಪುರಂ ಅರಮನೆಗಳು ಅಲೆಪ್ಪಿಯಲ್ಲಿ ಭೇಟಿ ನೀಡಲೇಬೇಕಾದ ಪ್ರಮುಖ ಸ್ಥಳಗಳಾಗಿವೆ. ಅಲೆಪ್ಪಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ನವೆಂಬರ್ ನಿಂದ ಫೆಬ್ರವರಿ. ಮಳೆಗಾಲದ ಸಮಯದಲ್ಲಿ ಭೇಟಿ ನೀಡುವುದು ಸೂಕ್ತವಲ್ಲ. ಏಕೆಂದರೆ ಆ ಸಮಯದಲ್ಲಿ ಈ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತದೆ.

ಹಿಮಾಚಲ ಪ್ರದೇಶ

ಹಿಮಾಚಲ ಪ್ರದೇಶ

ಉತ್ತರ ಭಾರತದಲ್ಲಿ ನೆಲೆಗೊಂಡಿರುವ ಹಿಮಾಚಲ ಪ್ರದೇಶವು ಹಚ್ಚ ಹಸಿರಿನ ಪರ್ವತಗಳು, ಕಣಿವೆಗಳು, ಶ್ರೀಮಂತ ಸಂಸ್ಕೃತಿ, ರುಚಿಕರವಾದ ಆಹಾರ, ಸಾಹಸ ಕ್ರೀಡೆಗಳು ಸೇರಿದಂತೆ ಅನೇಕ ವಿಷಯಗಳಿಗೆ ಜನಪ್ರಿಯವಾಗಿದೆ. ಸಾಹಸ ಪ್ರಿಯರು, ಫ್ಯಾಮಿಲಿ, ಹನಿಮೂನ್‌ ಮತ್ತು ಸೋಲೋ ಟ್ರಿಪ್ ತೆರಳುವವರಿಗೆ ಹೀಗೆ ಪ್ರತಿಯೊಬ್ಬ ಪ್ರವಾಸಿಗರಿಗೆ ಇಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ. ಹಿಮಾಚಲ ಪ್ರದೇಶವು ಕಲೆ, ಆಹಾರ, ಹಬ್ಬಗಳ ವಿಷಯದಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಶ್ರೀಮಂತ ರಾಜ್ಯವಾಗಿದೆ. ಹಿಮಾಚಲ ಪ್ರದೇಶಕ್ಕೆ ಬಂದವರು ಸಾಮಾನ್ಯವಾಗಿ ಭೇಟಿ ನೀಡುವ ಮತ್ತೊಂದು ನಗರವೆಂದರೆ ಮನಾಲಿ.

ಇಲ್ಲಿ ಚಳಿಗಾಲದಲ್ಲಿನ ಹಿಮಪಾತ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಟ್ರೆಕ್ಕಿಂಗ್, ಪ್ಯಾರಾಗ್ಲೈಡಿಂಗ್, ಸ್ಕೀಯಿಂಗ್, ಕುದುರೆ ಸವಾರಿ ಮತ್ತು ಇತರ ಸಾಹಸ ಕ್ರೀಡೆಗಳಿಗೂ ಇದು ಹೆಸರುವಾಸಿಯಾಗಿದೆ. ಶಾಪಿಂಗ್ ಪ್ರಿಯರು ಪಶ್ಮಿನಾ ಶಾಲುಗಳು, ಹಿಮಾಚಲಿ ಕ್ಯಾಪ್‌ಗಳು, ಚಂಬಾ ರುಮಾಲ್‌'ಗಳು, ಆಭರಣಗಳು ಇತ್ಯಾದಿಗಳನ್ನು ಇಲ್ಲಿ ಕೊಳ್ಳಬಹುದು. ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ಫೆಬ್ರವರಿಯಿಂದ ಜೂನ್ (ವಸಂತ ಮತ್ತು ಬೇಸಿಗೆ) ಉತ್ತಮ ಸಮಯ.

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

"ಭೂಮಿಯ ಮೇಲಿನ ಸ್ವರ್ಗ" ಎಂದು ಕರೆಯಲ್ಪಡುವ ಜಮ್ಮು ಮತ್ತು ಕಾಶ್ಮೀರವು ಹಿಮದಿಂದ ಆವೃತವಾದ ಪರ್ವತಗಳು, ವನ್ಯಜೀವಿಗಳು, ಸೊಗಸಾದ ಸ್ಮಾರಕಗಳು, ಮತ್ತು ಸ್ಥಳೀಯ ಕರಕುಶಲ ವಸ್ತುಗಳಿಗೆ ವಿಶ್ವಪ್ರಸಿದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುವುದರಿಂದ ನಿಮ್ಮ ಪ್ರವಾಸವು ಸ್ಮರಣೀಯವಾಗಿರುತ್ತದೆ. ಏಕೆಂದರೆ ರಾಜ್ಯವು ತನ್ನ ರಮಣೀಯ ಸೌಂದರ್ಯ ಮತ್ತು ಹಿಮದಿಂದ ಆವೃತವಾದ ಪರ್ವತ ಶ್ರೇಣಿಗಳಿಂದ ನಿಮ್ಮನ್ನು ಆಕರ್ಷಿಸುತ್ತದೆ. ಅಷ್ಟೇ ಅಲ್ಲ, ಇಲ್ಲಿನ ಸಾಹಸ ಕ್ರೀಡೆಗಳು ನಿಮ್ಮನ್ನು ಬೇರೆಯ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ.

ಹಿಮಾಲಯದಲ್ಲಿ ನೆಲೆಸಿರುವ ಪಿರ್ ಪಂಜಾಲ್ ಮತ್ತು ಕಾರಕೋರಂ ಪರ್ವತ ಶ್ರೇಣಿಗಳು ತಮ್ಮ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಜಮ್ಮು ಮತ್ತು ಕಾಶ್ಮೀರವು ಅತ್ಯಂತ ಸುಂದರವಾದ ಪರ್ವತ ಶಿಖರಗಳು, ಬೃಹತ್ ಹಿಮನದಿಗಳು, ಭವ್ಯವಾದ ಮಠಗಳು, ನೀಲಿ ಸರೋವರಗಳು, ನದಿಗಳು, ಕಾಡುಗಳು, ಹಸಿರು ಹುಲ್ಲುಗಾವಲುಗಳು ಮತ್ತು ಎತ್ತರದ ಪೈನ್ ಮರಗಳಿಂದ ಕೂಡಿದೆ. ಸ್ಕೀಯಿಂಗ್, ಗಾಲ್ಫ್, ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್, ಪ್ಯಾರಾಗ್ಲೈಡಿಂಗ್, ಕ್ಯಾಂಪಿಂಗ್ ಮುಂತಾದ ಕ್ರೀಡೆಗಳು ಜಮ್ಮು ಮತ್ತು ಕಾಶ್ಮೀರದ ಪ್ರವಾಸಕ್ಕೆ ರಂಗು ತಂದುಕೊಟ್ಟಿವೆ. ಅಮರನಾಥ ಮತ್ತು ವೈಷ್ಣೋ ದೇವಿ ಪ್ರತಿವರ್ಷ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತವೆ. ದಾಲ್ ಸರೋವರ, ಕಾಶ್ಮೀರ ಕಣಿವೆ, ಖರ್ದುಂಗ್ ಲಾ ಪಾಸ್, ಗುಲ್ಮಾರ್ಗ್, ಶಾಲಿಮಾರ್ ಬಾಗ್ ರಾಜ್ಯದ ಪ್ರಮುಖ ಆಕರ್ಷಣೆಗಳಾಗಿವೆ. ಅಕ್ಟೋಬರ್-ಮಾರ್ಚ್ ಇಲ್ಲಿಗೆ ಭೇಟಿ ಕೊಡಲು ಸೂಕ್ತ ಸಮಯವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಹವಾಮಾನವು ದೃಶ್ಯವೀಕ್ಷಣೆಗೆ ಅತ್ಯಂತ ಸೂಕ್ತವಾಗಿದೆ.

ರಾನ್ ಆಫ್ ಕಚ್

ರಾನ್ ಆಫ್ ಕಚ್

ಇದು ಭಾರತದ ಪಶ್ಚಿಮ ರಾಜ್ಯವಾದ ಗುಜರಾತ್‌'ನಲ್ಲಿರುವ ಕಚ್ ಜಿಲ್ಲೆಯಲ್ಲಿದೆ. ಈ ಪ್ರದೇಶವನ್ನು ಗ್ರೇಟ್ ರಾನ್ ಆಫ್ ಕಚ್ ಮತ್ತು ಲಿಟಲ್ ರಾನ್ ಆಫ್ ಕಚ್ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಎಷ್ಟು ಪ್ರಸಿದ್ಧವಾಗಿದೆಯೆಂದರೆ, ಇಲ್ಲಿ ಭಾರತದ ಹಲವಾರು ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಉದಾಹರಣೆಗೆ ರೆಫ್ಯೂಜಿ, ಮಗಧೀರ, ಗೊಲಿಯೋನ್ ಕಿ ರಾಸಲೀಲಾ ರಾಮ್-ಲೀಲಾ, ಸರೈನೋಡು ಇತ್ಯಾದಿ.

ಇದು ಇಡೀ ವಿಶ್ವದ ಅತಿದೊಡ್ಡ ಉಪ್ಪು ಮರುಭೂಮಿಗಳಲ್ಲಿ ಒಂದಾಗಿದೆ. ಗ್ರೇಟ್ ರಾನ್ ಆಫ್ ಕಚ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಮಾರ್ಚ್. ಈ ಸಮಯದಲ್ಲಿ ಹವಾಮಾನವು ಹೊರಾಂಗಣವನ್ನು ಅನ್ವೇಷಿಸಲು ಆಹ್ಲಾದಕರವಾಗಿರುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+