Search
  • Follow NativePlanet
Share
» »ಕಣ್ಣೆದುರೇ ಆಡ್ತಿರೋ ಮಕ್ಳು 6 ತಿಂಗಳ ಹಿಂದೆನೇ ಸತ್ತಿದ್ರಂತೆ...ಕುಂದನ್‌ಬಾಗ್ ಕಥೆ ನಿಮ್ಗೆ ಗೊತ್ತಾ?

ಕಣ್ಣೆದುರೇ ಆಡ್ತಿರೋ ಮಕ್ಳು 6 ತಿಂಗಳ ಹಿಂದೆನೇ ಸತ್ತಿದ್ರಂತೆ...ಕುಂದನ್‌ಬಾಗ್ ಕಥೆ ನಿಮ್ಗೆ ಗೊತ್ತಾ?

ನಮ್ಮಲ್ಲಿ ಯಾರೂ ಕೂಡಾ ದೇವರನ್ನು ನೋಡಿಲ್ಲ. ಆದರೆ ದೇವರ ಬಗೆಗೆ ನಮ್ಮಲ್ಲಿರುವ ಭಕ್ತಿ ಮಾತ್ರ ನಿಶ್ಚಲವಾದುದು. ದೇವರನ್ನು ನೋಡದೆಯೇ ದೇವರಿದ್ದಾನೆ ಎಂದು ನಂಬುವಾಗ, ಭೂತ, ಪ್ರೇತವನ್ನು ಯಾಕೆ ನಂಬಬಾರದು. ಸಾಮಾನ್ಯವಾಗಿ ನಾವೆಲ್ಲರೂ ಇಂತಹದ್ದೇ ವಿಚಿತ್ರ ಘಟನೆಗಳ ಬಗ್ಗೆ ಚರ್ಚೆ ಮಾಡುತ್ತಾ ಇರುತ್ತೇವೆ. ಈ ಚರ್ಚೆಗಳು ಹೊಸದೊಂದು ತರ್ಕವನ್ನು ಹುಟ್ಟುಹಾಕುತ್ತದೆ. ಕೆಲವರಿಗಂತೂ ಇಂತಹ ಚರ್ಚೆಗಳು ಬಹಳ ಇಂಟ್ರಸ್ಟಿಂಗ್ ಅನಿಸಿದರೆ ಇನ್ನೂ ಕೆಲವರಿಗೆ ಇದು ಕೆಲಸಕ್ಕೆ ಬಾರದ್ದು ಎಂದು ಅದರಿಂದ ದೂರವೇ ಉಳಿಯುತ್ತಾರೆ.

 ಕುಂದನ್‌ಬಾಗ್ ಎಸ್ಟೇಟ್

ಕುಂದನ್‌ಬಾಗ್ ಎಸ್ಟೇಟ್

ಭಾರತದಲ್ಲಿ ಅನೇಕ ಭಯಾನಕ ಸ್ಥಳಗಳಿವೆ. ಅವುಗಳಲ್ಲಿ ಒಂದು ನಿಜಾಮರು ಆಳಿದ ಹೈದರಾಬಾದ್ ಕೂಡ ಒಂದು. ಇಲ್ಲಿನ ಒಂದು ಸ್ಥಳದಲ್ಲಿ ಜನರು ಹಗಲಿನಲ್ಲಿ ಓಡಾಡುವುದನ್ನೂ ಇಷ್ಟಪಡುವುದಿಲ್ಲ. ನಾವೀಗ ಮಾತನಾಡುತ್ತಿರುವುದು ಹೈದರಾಬಾದ್‌ನ ಕುಂದನ್‌ಬಾಗ್ ಬಗ್ಗೆ.

2002ರಲ್ಲಿ ನಡೆದಿತ್ತು ಘಟನೆ

2002ರಲ್ಲಿ ನಡೆದಿತ್ತು ಘಟನೆ

PC: youtube

2002ರಿಂದ ಈ ಸ್ಥಳವು ಬಹಳ ಚರ್ಚೆಗೆ ಒಳಗಾಗಿದೆ. ನಂತರ ಈ ಸ್ಥಳ ಹೈದರಾಬಾದ್‌ನಲ್ಲಿರುವ ಭಯಾನಕ ಸ್ಥಳಗಳ ಪಟ್ಟಿಗೆ ಸೇರಿಕೊಂಡಿದೆ. ಈಗ ಜನರಿಗೆ ಪ್ರವೇಶ ನಿಷೇಧಿಸಲಾಗಿದೆ. ಈ ರಸ್ತೆಯು ಇತರ ರಸ್ತೆಗಳಂತೆ ಶುಚಿಯಾಗಿಲ್ಲ. ಕಸಕಡ್ಡಿಗಳೆಲ್ಲ ತುಂಬಿ ಕೊಳಚೆಯಾಗಿಬಿಟ್ಟಿದೆ. ಸಂಜೆಯಾಗುತ್ತಿದ್ದಂತೆ ಈ ಸ್ಥಳ ಶಾಂತ ಹಾಗೂ ಭಯಾನಕವಾಗಿ ಕಾಣಿಸುತ್ತದೆ.

ಏನಿದರ ಕಥೆ?

ಏನಿದರ ಕಥೆ?


ಕುಂದನ್‌ನಗರದ ಈ ಕಾಲೋನಿಯಲ್ಲಿ ತಂದೆ ತಾಯಿ ಹಾಗೂ ಇಬ್ಬರು ಮಕ್ಕಳು ವಾಸಿಸುತ್ತಿದ್ದರು. ಒಂದು ದಿನ ಈ ಮನೆಯ ಮುಖ್ಯಸ್ಥ, ಆ ಇಬ್ಬರು ಮಕ್ಕಳ ತಂದೆ ಕಾಣೆಯಾಗುತ್ತಾನೆ. ಮತ್ತೆ ಕಾಣಿಸಲೇ ಇಲ್ಲ. ಪಕ್ಕದ ಮನೆಯವರ ಪ್ರಕಾರ ಈ ಮನೆಯಲ್ಲಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ವಿಚಿತ್ರ ಸ್ವಭಾವವನ್ನು ಹೊಂದಿದ್ದರು. ಮಕ್ಕಳು ಯಾವಾಗಲೂ ರಕ್ತವನ್ನು ತುಂಬಿದ ಬಾಟಲ್‌ನಿಂದ ಆಡುತ್ತಿದ್ದರು. ಪ್ರತಿದಿನ ಮನೆಯೊಳಗಿನಿಂದ ವಿಚಿತ್ರ ಶಬ್ಧ ಕೂಡಾ ಬರುತ್ತಿತ್ತು. ಒಂದು ದಿನ ಕಳ್ಳನೊಬ್ಬ ಈ ಮನೆಯೊಳಗೆ ನುಗ್ಗಿದ ಮನೆಯೊಳಗಿನ ದೃಶ್ಯ ನೋಡಿ ಆತ ಗಾಬರಿಗೊಂಡ. ಮನೆಯೊಳಗೆ ಮೂರು ಮೃತದೇಹ ಬಿದ್ದಿದ್ದವು. ಪೊಲೀಸರು ಬಂದು ಆತನನ್ನು ಬಂಧಿಸಿದರು.ಆಗ ಆತ ಕಳ್ಳತನ ಮಾಡಲು ಬಂದಿದ್ದುದ್ದಾಗಿ ತಿಳಿಸಿದ್ದಾನೆ.

ಪೋಸ್ಟ್‌ಮಾರ್ಟಮ್‌ನಲ್ಲಿ ಬಹಿರಂಗವಾಯಿತು ಸತ್ಯ

ಪೋಸ್ಟ್‌ಮಾರ್ಟಮ್‌ನಲ್ಲಿ ಬಹಿರಂಗವಾಯಿತು ಸತ್ಯ


ಪೊಲೀಸರು ಮೂರು ಮೃತದೇಹವನ್ನು ವಶಕ್ಕೆ ಪಡೆದು ಪೋಸ್ಟ್‌ಮಾರ್ಟಮ್‌ ಮಾಡಿಸಿದಾಗ ತಿಳಿದುಬಂದಿದ್ದೇನೆಂದರೆ ಈ ಮೂವರು ಸಾವನ್ನಪ್ಪಿ ಸುಮಾರು ೬ ತಿಂಗಳುಗಳೇ ಕಳೆದಿದೆ. ನೆರೆಮನೆಯವರು ಈ ವಿಷಯ ಕೇಳಿ ಗಾಬರಿಗೊಳಗಾದರು. ಹಾಗಾದರೆ ಮನೆ ಹೊರಗೆ ಆಡುತ್ತಿದ್ದ ಮಕ್ಕಳು ಯಾರು?ಮನೆಯೊಳಗೆ ಹಾಡು ಹಾಡುತ್ತಿದ್ದುದು ಯಾರು?

ವಿಭಿನ್ನ ದೃಷ್ಠಿಕೋನ

ವಿಭಿನ್ನ ದೃಷ್ಠಿಕೋನ


ಕುಂದನ್‌ಬಾಗ್‌ನ ಈ ಕಥೆಯ ಬಗ್ಗೆ ಅನೇಕರ ವಿಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಈ ಮನೆಯನ್ನು ಬೇರೆ ಯಾರು ಕೊಳ್ಳಬಾರದೆಂದು ಈ ರೀತಿ ಕಥೆಕಟ್ಟಿ ಹೇಳಲಾಗುತ್ತಿದೆ ಎಂದರೆ, ಇನ್ನೂ ಕೆಲವರು ಇಲ್ಲಿ ಭೂತ, ಪ್ರೇತಗಳಿವೆ. ಅನೇಕ ಚಿತ್ರ ವಿಚಿತ್ರ ಘಟನೆಗಳು ಇಲ್ಲಿ ನಡೆದಿವೆ ಎನ್ನುತ್ತಾರೆ.

ಬೈಕ್‌ನ ಹೆಡ್‌ಲೈಟ್ ಆಫ್ ಆಗುತ್ತೆ

ಬೈಕ್‌ನ ಹೆಡ್‌ಲೈಟ್ ಆಫ್ ಆಗುತ್ತೆ


ಕುಂದನ್‌ಬಾಗ್ ಸಮೀಪ ವಾಸಿಸುವ ವ್ಯಕ್ತಿಯೊಬ್ಬರ ಪ್ರಕಾರ ಕುಂದನ್‌ಬಾಗ್‌ನ ಆ ರಸ್ತೆಯಲ್ಲಿ ಬೈಕ್‌ನಲ್ಲಿ ಬರುತ್ತಿದ್ದಾಗ ಆ ಸ್ಥಳ ಬರುತ್ತಿದ್ದಂತೆ ಬೈಕ್‌ನ ಹೆಡ್‌ಲೈಟ್ ಆಫ್ ಆಗುತ್ತಿತ್ತು. ಆತನ ಸ್ನೇಹಿತಕೂಡಾ ಅದೇ ರಸ್ತೆಯಲ್ಲಿ ಬರುವ ಆಗ ಆತನ ಬೈಕ್‌ನ ಹೆಡ್‌ಲೈಟ್ ಕೂಡಾ ಆಫ್‌ ಆಗಿದೆ. ಹೀಗೆ ಆ ರಸ್ತೆಯಲ್ಲಿ ಚಲಿಸುವವರು ಪ್ರತಿನಿತ್ಯ ಏನಾದರೊಂದು ಘಟನೆ ನಡೆಯುತ್ತಾನೇ ಇರುತ್ತದೆ ಎನ್ನುತ್ತಾರೆ.

ಏನಿದರ ರಹಸ್ಯ ಯಾರಿಗೂ ಗೊತ್ತಿಲ್ಲ

ಏನಿದರ ರಹಸ್ಯ ಯಾರಿಗೂ ಗೊತ್ತಿಲ್ಲ


ಇದರ ರಹಸ್ಯ ಏನು ಎನ್ನುವುದು ಯಾರಿಗೂ ತಿಳಿದಿಲ್ಲ. ಇದೊಂದು ವಿವಾದಿತ ಸಂಪತ್ತಾ ಅಥವಾ ಪ್ರೇತಾತ್ಮದ ಬಂಗ್ಲೆಯ ಅನ್ನೋದು ಇನ್ನೂ ನಿಗೂಢ. ಆದರೆ ಈ ಮನೆಯ ಮುಂದೆ ಏನಾದರೊಂದು ಸಮಸ್ಯೆಯನ್ನು ಎದುರಿಸುತ್ತಿರುವುದಂತೂ ನಿಜ. ಕುಂದನ್‌ಬಾಗ್ ಎಸ್ಟೇಟ್ ಇಂದಿಗೂ ಬೇಧಿಸಲಾಗದ ರಹಸ್ಯವಾಗಿಯೇ ಉಳಿದಿದೆ.

ಕುಂದನ್ ಬಾಗ್ ಎಸ್ಟೇಟ್

ಕುಂದನ್ ಬಾಗ್ ಎಸ್ಟೇಟ್

ಯಾರೂ ಈ ಸ್ಥಳದತ್ತ ಸುಳಿಯುತ್ತಿಲ್ಲ ಹಾಗಾಗಿ ಪಾಳು ಬಂಗಲೆಯಾಗಿ ಬಿದ್ದಿದೆ ಕುಂದನ್ ಬಾಗ್ ಎಸ್ಟೇಟ್.

More News

Read more about: hyderabad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+