Search
  • Follow NativePlanet
Share
» »ಕಂಚಿಯ ಪ್ರಸಿದ್ಧವಾದ ಕೈಲಾಸನಾಥರ್ ದೇವಾಲಯದ ಮಹತ್ವ......

ಕಂಚಿಯ ಪ್ರಸಿದ್ಧವಾದ ಕೈಲಾಸನಾಥರ್ ದೇವಾಲಯದ ಮಹತ್ವ......

ತಮಿಳುನಾಡು "ದೇವಾಲಯಗಳ ಬೀಡು". ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಒಂದೊಂದು ದೇವಾಲಯಗಳು ಒಂದೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತನ್ನದೇ ಆದ ವಿಶೇಷತೆಯನ್ನು ಹೊಂದಿ ಪ್ರಸಿದ್ಧವಾಗಿದೆ. ಅವುಗಳಲ್ಲಿ ಬೃಹದೀಶ್ವರ ದೇವಾಲಯ, ಕಂಚಿ ಕಾಮಾಕ್ಷ

ತಮಿಳುನಾಡು "ದೇವಾಲಯಗಳ ಬೀಡು". ಇಲ್ಲಿ ಅದ್ಭುತವಾದ ದೇವಾಲಯಗಳು ಇವೆ. ಒಂದೊಂದು ದೇವಾಲಯಗಳು ಒಂದೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ತನ್ನದೇ ಆದ ವಿಶೇಷತೆಯನ್ನು ಹೊಂದಿ ಪ್ರಸಿದ್ಧವಾಗಿದೆ. ಅವುಗಳಲ್ಲಿ ಬೃಹದೀಶ್ವರ ದೇವಾಲಯ, ಕಂಚಿ ಕಾಮಾಕ್ಷಿ ದೇವಾಲಯ, ರಂಗನಾಥ ದೇವಾಲಯ, ಕಂಚಿ ಕೈಲಾಸನಾಥರ್ ದೇವಾಲಯ ಇನ್ನು ಹಲವಾರು.

ತಮಿಳುನಾಡಿನಲ್ಲಿ ದೇವಾಲಯಗಳೇ ಹೆಚ್ಚು ಪ್ರಸಿದ್ಧಿ. ತಮಿಳುನಾಡಿಗೆ ಪ್ರವಾಸಿಗರು ಹೆಚ್ಚು ಭೇಟಿ ನೀಡುವುದೇ ದೇವಾಲಯಗಳಿಗಾಗಿ. ಹಾಗಾದರೆ ಅದ್ಭುತವಾದ ದೇವಾಲಯಗಳಲ್ಲಿ ಇಂದು ಪ್ರಸಿದ್ಧವಾದ ಕಂಚಿ ಕೈಲಾಸನಾಥರ್ ದೇವಾಲಯದ ಬಗ್ಗೆ, ಅದರ ವಾಸ್ತು ಶಿಲ್ಪದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನದ ಮೂಲಕ ಪಡೆಯೋಣ ಬನ್ನಿ.

ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ದೇವಾಲಯ

ಕೈಲಾಸನಾಥ ದೇವಾಲಯವು ಕಾಂಚೀಪುರಂನ ಅತ್ಯಂತ ಹಳೆಯ ದೇವಾಲಯವಾಗಿದೆ. ತಮಿಳುನಾಡಿನಲ್ಲಿರುವ ದ್ರಾವಿಡ ವಾಸ್ತುಶಿಲ್ಪಶೈಲಿಯಲ್ಲಿ ನಿರ್ಮಾಣ ಮಾಡಲಾದ ಹಿಂದೂ ದೇವಾಲಯ ಇದಾಗಿದೆ. ಇಲ್ಲಿನ ಗರ್ಭಗುಡಿಯಲ್ಲಿ ಪರಮೇಶ್ವರನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಇದೊಂದು ಪ್ರಾಚೀನವಾದ ದೇವಾಲಯವೇ ಆಗಿರದೇ ಐತಿಹಾಸಿಕವಾಗಿ ಪ್ರಮುಖ್ಯತೆಯನ್ನು ಪಡೆದಿರುವ ದೇವಾಲಯ ಎಂದು ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

PC:Satz007

ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ದೇವಾಲಯ

ಈ ಅದ್ಭುತವಾದ ವಾಸ್ತುಶಿಲ್ಪವನ್ನು ಹೊಂದಿರುವ ಕೈಲಾಸನಾಥರ್ ದೇವಾಲಯವನ್ನು ಪಲ್ಲವ ರಾಜವಂಶದ ರಾಜಸಿಂಹ ರಾಜರಿಂದ 685 ರಿಂದ 705 ರ ಮಧ್ಯೆ ಭಾಗದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಗುರುತಿಸಲಾಗಿದೆ. ಇಲ್ಲಿ ಪ್ರಾಣಿಗಳು ಹಾಗು ದೇವತೆಗಳನ್ನು ಒಳಗೊಂಡ ಬಹು ದೊಡ್ಡ ಸಂಖ್ಯೆಯಲ್ಲಿ ಕೆತ್ತನೆಗಳನ್ನು ಒಳಗೊಂಡಿದೆ. ಈ ಕಟ್ಟಡವು 58 ಸಣ್ಣ ದೇವಾಲಯಗಳನ್ನು ಹೊಂದಿದೆ.

PC:Sivakumar1248

ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ದೇವಾಲಯ

ಈ ದೇವಾಲಯದಲ್ಲಿ ಶಿವನ ವಿವಿಧ ರೂಪಗಳಿಗೆ ಮೀಸಲಾಗಿದ್ದು, ನಗರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ದೇವಾಲಯವು ವೇಗಾವತಿ ನದಿಯ ದಡದಲ್ಲಿದೆ. ಧಾರ್ಮಿಕ ನಂಬಿಕೆಗಳ ಪ್ರಾಕರ 3 ಕಂಚಿಗಳಿವೆ. ಅವುಗಳೆಂದರೆ ಶಿವ ಕಾಂಚಿ, ವಿಷ್ಣು ಕಂಚಿ, ಜೈನ್ ಕಂಚಿ. ಈ ಸುಂದರವಾದ ದೇವಾಲಯವು ತಮಿಳುನಾಡಿನ ರಾಜಧಾನಿಯಾದ ಚೆನ್ನೈನಿಂದ ಸುಮಾರು 68 ಕಿ.ಮೀ ದೂರದಲ್ಲಿದೆ.

PC:Kannan Muthuraman

ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ಕಾಂಚೀಪುರಂನಲ್ಲಿರುವ ಹಲವಾರು ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇಲ್ಲಿ ಇನ್ನು ಅನೇಕ ದೇವಾಲಯಗಳಿವೆ. ಅವುಗಳೆಂದರೆ ಏಕಾಂಬರನಾಥ ದೇವಾಲಯ, ಕಚೇಪೇಶ್ವರರ್ ದೇವಾಲಯ, ಕಾಮಾಕ್ಷಿ ಅಮ್ಮನ್ ದೇವಾಲಯ, ಕುಮಾರಕೋಟಂ ದೇವಾಲಯ ಮತ್ತು ವರದರಾಜ ಪೆರುಮಾಳ್ ದೇವಾಲಯ ಇನ್ನು ಹಲವಾರು.

PC:Kannan Muthuraman

ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ದೇವಾಲಯ

ಇಲ್ಲಿ ಮುಖ್ಯವಾಗಿ ಶಿವ, ವಿಷ್ಣು, ಪಾರ್ವತಿ, ಸೂರ್ಯ, ಗಣೇಶ, ಕಾರ್ತಿಕೇಯರ ವಿಗ್ರಹಗಳಿದ್ದು, ಸಂಪ್ರದಾಯ ಬದ್ಧವಾಗಿ ಪೂಜೆಗಳನ್ನು ಮಾಡಲಾಗುತ್ತದೆ. ಇಲ್ಲಿ ಗರ್ಭಗುಡಿ, ಆಂತರಿಕ ಆವರಣ, ಮಂಟಪ, ಪ್ರವೇಶ ದ್ವಾರ, ಗೋಪುರಗಳನ್ನು ಕಾಣಬಹುದು. ಈ ಗೋಪುರದ ಮೇಲ್ಭಾಗದಲ್ಲಿ ಒಂದು ಗುಮ್ಮಟದ ಆಕಾರದಲ್ಲಿ ಸಣ್ಣ ಛಾವಣಿಯಿದೆ.


PC:Simply CVR


ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ದೇವಾಲಯ

ಗರ್ಭಗುಡಿಯನ್ನು ಕಪ್ಪು ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಲ್ಪಟ್ಟಿದ್ದು, 16 ಬದಿಯಲ್ಲಿಯೂ ಶಿವಲಿಂಗಗಳು ಇರುವುದನ್ನು ಕಾಣಬಹುದು. ದೇವಾಲಯದ ಪ್ರಾಂಗಣದಲ್ಲಿ ಒಂದು ನದಿ ಕೂಡ ಇದೆ. ದೇವಾಲಯದ ಹೊರಾಂಗಣದಲ್ಲಿ ಅನೇಕ ದೇವತೆಗಳ ಕೆತ್ತನೆಗಳನ್ನು ಕಾಣಬಹುದು. ಇಲ್ಲಿನ ಕೆತ್ತನೆಗಳು ಅತ್ಯಂತ ಸುಂದರವಾಗಿದ್ದು, ಮನೋಹರವಾಗಿದೆ.

PC:mckaysavage

ಕೈಲಾಸನಾಥರ್ ದೇವಾಲಯ

ಕೈಲಾಸನಾಥರ್ ದೇವಾಲಯ

ಇಲ್ಲಿನ ಶಿಲ್ಪಗಳು ವಿಭಿನ್ನವಾದ ಕೆತ್ತನೆಗಳನ್ನು ಹೊಂದಿದ್ದು, ಶಿವನ 2 ಶಿಲ್ಪಗಳು ಇಲ್ಲಿ ವೀಣಾ ವಾದ್ಯವನ್ನು ಹಿಡಿದುಕೊಂಡಿವೆ. ಹಾಗೆಯೇ ಇಲ್ಲಿನ 28 ಶೈವಗ್ರಹಗಳ ಆರಂಭಿಕ ಕಲ್ಲಿನ ಶಾಸನಗಳು ಕೂಡ ಇವೆ. ಮಹಾಶಿವರಾತ್ರಿಯ ಸಮಯದಲ್ಲಿ ವಿಜೃಂಬಣೆಯಿಂದ ಇಲ್ಲಿ ಪೂಜೆಗಳನ್ನು ಮಾಡುತ್ತಾರೆ. ಈ ದೇವಾಲಯಕ್ಕೆ ತೆರಳಲು ಅಕ್ಟೋಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಹಾಗು ಸೆಪ್ಟೆಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳವರೆಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯವಾಗಿದೆ.

PC:Kannan Muthuraman

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಕಾಂಚೀಪುರಂನಿಂದ ಚೆನ್ನೈಗೆ ಸುಮಾರು 68 ಕಿ.ಮೀ ದೂರದಲ್ಲಿದೆ.

ಅನೇಕ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಚೆನ್ನೈನಿಂದ ಕಾಂಚೀಪುರಂಗೆ ತೆರಳುತ್ತವೆ.

ಕಾಂಚೀಪುರಂ ರೈಲ್ವೆ ನಿಲ್ದಾಣವು ಅತ್ಯಂತ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಸುಲಭವಾಗಿ ದೇವಾಲಯಕ್ಕೆ ತೆರಳಬಹುದಾಗಿದೆ.

ಚೆನ್ನೈ ಇಂಟರ್ ನ್ಯಾಷನಲ್ ಏರ್‍ಪೋರ್ಟ್ ಕಾಂಚೀಪುರಂಗೆ ಸಮೀಪದ ವಿಮಾನ ನಿಲ್ದಾಣವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X