ಜೀವಧಾನಿ ಮಾತಾ ದೇವಾಲಯವು ಮಹಾರಾಷ್ಟ್ರದಲ್ಲಿದೆ. ಈ ದೇವಾಲಯವು ಪವಿತ್ರವಾದ ಹಿಂದೂ ದೇವಾಲಯವಾಗಿದೆ. ಮಹಾರಾಷ್ಟ್ರದ ವಿರಾರ್‍ನ ಸುಮಾರು 2000 ಮಟ್ಟಿಲುಗಳುಳ್ಳ ಬೆಟ್ಟದ ಮೇಲೆ ನೆಲೆಸಿದ್ದಾಳೆ. ಮುಂಬೈನಿಂದ 60 ಕಿ,ಮೀ ಅಂತರದಲ್ಲಿರುವ ವಿರಾರ್ ಅತ್ಯಂತ ಪುಣ್ಯ ಕ್ಷೇತ್ರವಾಗಿದೆ. ಈ ದೇವಾಲಯವು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಈ ದೇವಾಲಯಕ್ಕೆ ದೇಶ, ವಿದೇಶಗಳಿಂದ ಜನರು ಭೇಟಿ ನೀಡಿ ಜೀವ ಧಾನಿ ತಾಯಿಯ ಆರ್ಶಿವಾದವನ್ನು ಪಡೆಯುತ್ತಾರೆ. ಪ್ರಸುತ್ತ ಲೇಖನದಲ್ಲಿ ಜೀವಧಾನಿ ಮಾತಾದ ಬಗ್ಗೆ ತಿಳಿಯೋಣ.
ಜೀವಧಾನಿ ದೇವಾಲಯ

ಜೀವಧಾನಿ ಮಾತಾ ಪಾರ್ವತಿ ಸ್ವರೂಪಿ ಶಕ್ತಿ ದೇವತೆ. ಈ ದೇವಾಲಯದ ಹಿಂದೆ ಅತ್ಯಂತ ರೋಚಕ ಕಥೆ ಇದೆ. ಈ ದೇವಾಲಯವು ಮುಂಬೈನಿಂದ 60 ಕಿ,ಮೀ ದೂರದಲ್ಲಿ ಈ ದೇವಾಲಯ ನೆಲೆಗೊಂಡಿದೆ. ಜೀವಧಾನಿ ದೇವಿಗೆ ನವರಾತ್ರಿಯಂದು ಅತ್ಯಂತ ವೈಭವವಾಗಿ ಉತ್ಸವವನ್ನು ನಡೆಸಲಾಗುತ್ತದೆ. ಮಂಗಳವಾರ ಹಾಗೂ ಭಾನುವಾರದಂದು ಹಲವಾರು ಭಕ್ತಾದಿಗಳು ಈ ದೇವಾಲಯಕ್ಕೆ ಬೇಟಿ ನೀಡುತ್ತಿರುತ್ತಾರೆ. ಈ ದೇವಾಲಯವು ಮಹಾರಾಷ್ಟ್ರದ ತೀರ್ಥಕ್ಷೇತ್ರವಾಗಿ ಪ್ರಸಿದ್ದಿ ಪಡೆದಿದೆ. ಪಾಂಡವರು ನಿರ್ಮಿಸಿರುವ ದೇವಾಲಯ ಇದಾಗಿದೆ.
ಪಾಂಡವರು

ಮಹಾಭಾರತದ ಪ್ರಕಾರ ಪಾಂಡವರು ವನವಾಸದ ಸಮಯದಲ್ಲಿ ಈ ಸುರ್‍ಪರಕ ಎಂಬ ಸ್ಥಳದಿಂದ ಹಾದು ಹೋಗುವಾಗ ಪರಶುರಾಮ ನಿರ್ಮಿಸಿರುವ ವಿಮಲೇಶ್ವರ ದೇವಾಲಯವನ್ನು ಕಂಡು ನಮಸ್ಕರಿಸಿ ಮುನ್ನಡೆದರು. ನಂತರ ವ್ಯತಾರಣಿ ನದಿಯ ಸಮೀಪದಲ್ಲಿ ಕೆಲವು ದಿನಗಳಕಾಲ ನೆಲೆಸಿದರು. ಭಗವತಿ ಏಕವೀರ ತೀರದ ಬಳಿ ಅತ್ಯಂತ ಸುಂದರವಾದ ಪ್ರಕೃತಿ ಸೌಂದರ್ಯವನ್ನು ಕಂಡು ಪರ್ವತದ ಮೇಲೆ ಗುಹೆ ಕಟ್ಟಲು ಪ್ರಾರಂಭಿಸಿದರು. ಗುಹೆಯಲ್ಲಿ ಏಕಲಿಂಗದ ಯೋಗಲಿಂಗವನ್ನು ಸ್ಥಾಪಿಸಿ ಭಗವತಿ ಜೀವಧಾನಿ ಮಾತಾ ಎಂದು ಕರೆದರು. ನಂತರದ ದಿನಗಳಲ್ಲಿ ಈ ಗುಹೆಯಲ್ಲಿ ಹಲವಾರು ಋಷಿಗಳು ನೆಲೆಸಿದರು. ಈ ಗುಹೆಯನ್ನು ಮರಾಠಿಯ ಭಕ್ತರು "ಪಾಂಡವ ಚಿ ಡುಂಗರಿ" ಎಂದು ಕರೆದರು. ಬಿಳಿ ಮಾರ್ಬಲ್‍ನಲ್ಲಿರುವ ಜೀವಧಾನಿ ತಾಯಿಯು ಅತ್ಯಂತ ರೂಪವತಿಯಾಗಿದ್ದಾಳೆ.
ಜೀವಧಾನಿಯ ಮಹಿಮೆ

ಒಬ್ಬ ಮಾದಿಗನು ವಿರಾರ್‍ನ ನಿವಾಸಿಯಾಗಿದ್ದು ತನ್ನ ದನಕರುಗಳನ್ನು ಮೇಯಲು ಬಿಟ್ಟಿದ್ದನು. ಆದಿ ಗುರು ಶಂಕರಾಚಾರ್ಯರ ದರ್ಶನ ಭಾಗ್ಯ ಪಡೆಯಲು ನಿರ್ಮಲ ಮಂದಿರಕ್ಕೆ ಮಾದಿಗನು ಬಂದನು. ತನ್ನ ಕುಲದೇವತೆಯ ದರ್ಶನ ಭಾಗ್ಯವನ್ನು ನೀಡಬೇಕಾಗಿ ಕೇಳಿಕೊಂಡಾಗ ಶಂಕರರು ಕೃಪೆ ತೋರಿ ಬೆಟ್ಟದ ಮೇಲೆ ಇರುವ ಜೀವ ಧಾನಿ ಮಾತಾದ ಸೇವೆಯ ದರ್ಶನ ಭಾಗ್ಯ ದೊರೆಯುತ್ತದೆ ಎಂದು ಆರ್ಶಿವದಿಸಿದರು.

ಒಮ್ಮೆ ತನ್ನ ದನ ಕರುಗಳ ಜೊತೆಗೆ ಮತ್ತೋಂದು ಹಸು ಕೂಡ ಸೇರಿ ಇತರ ಹಸುಗಳ ಜೊತೆಗೆ ಮೇಯುತ್ತಿತ್ತು. ಇದನ್ನು ನೋಡಿದ ಮಾದಿಗನು, ಈ ಹಸುವಿನ ಯಜಮಾನರು ಯಾರು ಎಂದು ಹುಡುಕಲಾರಂಭಿಸಿದನು. ಜೀವಧಾನಿ ಬೆಟ್ಟದ ಮೇಲೆ ಒಂದು ಸುಂದರವಾದ ಮಹಿಳೆಯು ತನ್ನ ಹಸುವನ್ನು ಹುಡುಕಿಸಿಕೊಡು ತಾಯಿ ಎಂದು ಜೀವಧಾನಿ ಮಾತಾಗೆ ಕೇಳಲಾರಾಂಭಿಸಿದಳು. ಇದನ್ನು ಕಂಡ ಮಾದಿಗನಿಗೆ ಅಲ್ಲಿ ನಿಂತಿರುವ ಹೆಣ್ಣು ಬರೀ ಹೆಣ್ಣಲ್ಲಾ ಬದಲಾಗಿ ಜೀವಧಾನಿ ಮಾತಾ ಎಂದು ಅರಿತನು.

ಶಂಕರಾಚಾರ್ಯರು ಹೇಳಿದ ನೋಡಿಗಳನ್ನು ಜ್ಞಾಪಿಸಿಕೊಂಡ. ಆಗ ಅಮ್ಮಾ ಜೀವಧಾನಿ ಮಾತಾ ನಿನ್ನ ದರ್ಶನ ಪಡೆದು ಧನ್ಯನಾದೆ ಎಂದು ವಿನಯದಿಂದ ಪಾರ್ಥಿಸಿದ ಇದಕ್ಕೆ ತಾಯಿ ಜೀವಧಾನಿ ಮುಗುಳ್ ನಕ್ಕಳು. ನಿನ್ನ ಹಸುವನ್ನು ನಾನು ಮೇಯಿಸಿರುವೆ ನನಗೆ ಏನು ನೀಡುವುದಿಲ್ಲವೆ ಎಂದು ಮಾದಿಗನು ಜೀವಧಾನಿಗೆ ಕೇಳಿದನು. ಆಗ ತಾಯಿ ಕೈಯನ್ನು ಮುಂದೆ ಚಾಚುವಂತೆ ಸ್ಪರ್ಶಿಸಲು ಮುಂದದಾಗ ಮಾದಿಗನ್ನು ನಾನು ಅಸ್ಪøಷ್ಯ ನನ್ನನ್ನು ಮುಟ್ಟದೇಯೇ ಆರ್ಶಿವಾದ ಮಾಡಿದರೆ ಸಾಕು ಎಂದು ತಿಳಿಸಿದ.

ಆಶ್ಚರ್ಯಗೊಂಡ ಜೀವಧಾನಿ ಮಾತಾ ಮಾದಿಗನಿಗೆ ಒಂದು ಪ್ರೆಶ್ನೆಯನ್ನು ಕೇಳಿದಳು ನೀನ್ನ ಜ್ಞಾನವನ್ನು ವರ್ಣಶ್ರಮದಲ್ಲಿ ಕಲಿತೇಯೋ ಅಥವಾ ಮೋಕ್ಷಾಶ್ರಮದಲ್ಲಿ ಕಲಿತೇಯೋ ಎಂದು ಕೇಳಿದಳು. ಅದಕ್ಕೆ ಮಾದಿಗನು ಗುರು ಶಂಕರಚಾರ್ಯ ಹಾಗೂ ಹುಲ್ಲಿನಿಂದ ಪಡೆದ ಜ್ಞಾನ ಎಂದು ಉತ್ತರಿಸಿದ. ಜೀವಧಾನಿಯು ಮೋಕ್ಷವನ್ನು ಆತನಿಗೆ ಪ್ರಸಾಧಿಸಿ ಅದೃಶ್ಯಳಾದಳು. ಹೀಗೆ ಈ ದೇವಿಯು ಜೀವಧಾನಿ ಮಾತೆಯಾಗಿ ಪ್ರಸಿದ್ದಿ ಪಡೆದಳು ಎನ್ನಲಾಗಿದೆ. ಈ ದೇವಿಯ ದರ್ಶನ ಪಡೆಯಲು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ದರ್ಶನವನ್ನು ಪಡೆಯಬಹುದಾಗಿದೆ.


Click it and Unblock the Notifications
















