IRCTC Bali Tour Package: ಸುಂದರವಾದ ದೇವಾಲಯಗಳು, ಪ್ರಕೃತಿ, ಸಂಸ್ಕೃತಿ ಮತ್ತು ಕಡಲತೀರಗಳ ಬಗ್ಗೆ ಮಾತನಾಡುವಾಗ ಜನರು ಬಾಲಿಯನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ. ಏಕೆಂದರೆ ಈ ಸಣ್ಣ ದ್ವೀಪವು ತನ್ನ ಸೌಂದರ್ಯದಿಂದಲೇ ಹೆಸರುವಾಸಿಯಾಗಿದೆ. ಇಂಡೋನೇಷ್ಯಾದ ಈ ಸಣ್ಣ ದ್ವೀಪವು ತನ್ನ ಸೌಂದರ್ಯಕ್ಕಾಗಿ ಎಷ್ಟು ಪ್ರಸಿದ್ಧವಾಗಿದೆ ಎಂದರೆ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಹೋಗಲು ಬಯಸುತ್ತಾನೆ.
ನೀವು ಸಹ ಬಾಲಿಗೆ ಹೋಗಲು ಬಯಸಿದರೆ, IRCTC ಬಾಲಿಗೆ ವಿಶೇಷ ಪ್ಯಾಕೇಜ್ ಅನ್ನು ಪ್ರಾರಂಭಿಸಿದೆ. ಲಕ್ನೋ ಮಾತ್ರವಲ್ಲದೆ, ದೇಶದ ಇತರ ಭಾಗಗಳಲ್ಲಿ ವಾಸಿಸುವ ಜನರು ಸಹ ಈ ಪ್ಯಾಕೇಜ್‌ನ ಲಾಭವನ್ನು ಪಡೆಯಬಹುದು, ಆದರೆ ಅವರು ಟೂರ್ ಕೈಗೊಳ್ಳುವ ಮುನ್ನ ಲಕ್ನೋ ಅಥವಾ ಬೆಂಗಳೂರಿಗೆ ಬರಬೇಕಾಗುತ್ತದೆ. ಬನ್ನಿ ಹಾಗಾದರೆ ಈ ಪ್ಯಾಕೇಜ್‌ನ ವಿವರಗಳನ್ನು ತಿಳಿಯೋಣ...

ಬಾಲಿ ಟೂರ್ ಪ್ಯಾಕೇಜ್ ವಿವರಗಳು
IRCTC ಥ್ರಿಲ್ಲಿಂಗ್ ಬಾಲಿ ಎಂಬ ಹೆಸರಿನ ಪ್ರವಾಸ ಪ್ಯಾಕೇಜ್ ಅನ್ನು ಸಿದ್ಧಪಡಿಸಿದೆ. ಈ ಪ್ಯಾಕೇಜ್ 6 ರಾತ್ರಿಗಳು ಮತ್ತು 7 ದಿನಗಳಿರಲಿದೆ. ಇದರ ಅಡಿಯಲ್ಲಿ, ಪ್ರವಾಸವು ಅಗಸ್ಟ್ 27 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 2 ರಂದು ಕೊನೆಗೊಳ್ಳಲಿದೆ.
ಏನೆಲ್ಲಾ ಸೌಲಭ್ಯ ಸಿಗಲಿದೆ?
ಪ್ರಯಾಣ, ವಸತಿ, ಆಹಾರ, ಪಾನೀಯಗಳು ಮತ್ತು ದೃಶ್ಯವೀಕ್ಷಣೆ ಎಲ್ಲವನ್ನೂ ಈ ಪ್ಯಾಕೇಜ್‌ನಲ್ಲಿ ನೇರಿಸಲಾಗಿದೆ. ಈ ಪ್ಯಾಕೇಜ್‌ನಲ್ಲಿ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು IRCTC ಒದಗಿಸುತ್ತದೆ. ಒಂದು ವೇಳೆ ಪ್ರವಾಸಿಗರು ಲಕ್ನೋ ಸಮೀಪದಲ್ಲಿದ್ದರೆ ಆಗಸ್ಟ್ 27 ರಂದು ಸಂಜೆ 7.50 ಕ್ಕೆ ವಿಮಾನವನ್ನು ತೆಗೆದುಕೊಳ್ಳಬೇಕು. ಈ ವಿಮಾನವು 10:10 ಕ್ಕೆ ಬೆಂಗಳೂರು ತಲುಪಲಿದೆ.

ಇಲ್ಲಿಂದ ಬಾಲಿಗೆ ವಿಮಾನವು ಆಗಸ್ಟ್ 28 ರಂದು 12:50 ಕ್ಕೆ ಲಭ್ಯವಿರುತ್ತದೆ. ಇದು ಬಾಲಿಯನ್ನು ಬೆಳಗ್ಗೆ 10:20 ಕ್ಕೆ ತಲುಪಲಿದೆ ಮತ್ತು ವಿಮಾನವು ಸೆಪ್ಟೆಂಬರ್ 2 ರಂದು ಬಾಲಿಯಿಂದ ಬೆಳಗ್ಗೆ 11:20 ಕ್ಕೆ ಹೊರಟು ಮಧ್ಯಾಹ್ನ 3:15 ಕ್ಕೆ ಬೆಂಗಳೂರು ತಲುಪಲಿದೆ. ಇದರ ನಂತರ ನಿಮ್ಮನ್ನು 6:15ಕ್ಕೆ ವಿಮಾನದ ಮೂಲಕ ಲಕ್ನೋಗೆ ಹಿಂತಿರುಗಿಸಲಾಗುತ್ತದೆ. ಎಲ್ಲಾ ವಿಮಾನಗಳು ಇಂಡಿಗೋದವು ಎನ್ನಲಾಗಿದೆ.
ಬಾಡಿಗೆ ಎಷ್ಟು?
ನೀವು ಈ ಪ್ರವಾಸವನ್ನು ಮಾಡಲು ಬಯಸಿದರೆ 114900ರೂ ಪಾವತಿಸಬೇಕಾಗುತ್ತದೆ. ಇಬ್ಬರು ಪ್ರಯಾಣಿಸಿದರೆ ಒಬ್ಬರಿಗೆ 106400 ರೂ. ಮೂರು ಜನ ಪ್ರಯಾಣಿಸಿದರೆ ಒಬ್ಬರಿಗೆ 105700 ರೂ. ಮಕ್ಕಳು ಹೋಗುತ್ತಿದ್ದರೆ, ಬೆಡ್ ಬೇಕಾದರೆ ಇದಕ್ಕೆಲ್ಲಾ ಬೇರೆ ಬೇರೆ ದರಗಳಿವೆ.

ವಿವರಗಳನ್ನು ಇಲ್ಲಿ ನೋಡಿ
ನೀವು ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿಯನ್ನು ಬಯಸಿದರೆ, ಅದನ್ನು IRCTC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು. ಅತ್ಯಂತ ಮುಖ್ಯವಾದ ವಿಷಯವೆಂದರೆ ಈ ಪ್ಯಾಕೇಜ್ ಅನ್ನು ಪಡೆಯಲು ನಿಮ್ಮ ಪಾಸ್‌ಪೋರ್ಟ್ ಕನಿಷ್ಠ ಆರು ತಿಂಗಳವರೆಗೆ ಮಾನ್ಯವಾಗಿರಬೇಕು.


Click it and Unblock the Notifications















