Search
  • Follow NativePlanet
Share
» »ಬೆಂಗಳೂರಿನಿಂದ ಕೇವಲ 3 ಗಂಟೆಗಳಲ್ಲಿ ನೀವು ಈ ಸುಂದರವಾದ ಗಿರಿಧಾಮವನ್ನು ತಲುಪಬಹುದು…ಎಷ್ಟು ಅದ್ಭುತವಾಗಿದೆ ಗೊತ್ತಾ?

ಬೆಂಗಳೂರಿನಿಂದ ಕೇವಲ 3 ಗಂಟೆಗಳಲ್ಲಿ ನೀವು ಈ ಸುಂದರವಾದ ಗಿರಿಧಾಮವನ್ನು ತಲುಪಬಹುದು…ಎಷ್ಟು ಅದ್ಭುತವಾಗಿದೆ ಗೊತ್ತಾ?

ಯಳಗಿರಿ ತಮಿಳುನಾಡಿನ ವೆಲ್ಲೂರಿನಲ್ಲಿರುವ ಅತ್ಯಂತ ಸುಂದರವಾದ ಚಿಕ್ಕ ಗಿರಿಧಾಮವಾಗಿದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿರುವ ಯಳಗಿರಿಗೆ ಬೆಂಗಳೂರಿನಿಂದ ಕೇವಲ 3 ಗಂಟೆಗಳಲ್ಲಿ ಪ್ರಯಾಣಿಸಬಹುದು. ಗಿರಿಧಾಮವು ಸುತ್ತಮುತ್ತಲಿನ ಜನರಿಗೆ, ವಾರಾಂತ್ಯದಲ್ಲಿ ಪ್ರವಾಸ ತೆರಳುವವರಿಗೆ ಜನಪ್ರಿಯ ತಾಣವಾಗಿದೆ. ಈ ಸುಂದರವಾದ ಸ್ಥಳವು ಸುಮಾರು 30 ಚದರ ಕಿಲೋಮೀಟರ್‌ಗಳಷ್ಟು ಹರಡಿದೆಯಾದರೂ, ಒಂದು ದೊಡ್ಡ ಗಿರಿಧಾಮದಲ್ಲಿ ಇರಬಹುದಾದ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ.

ಅದು ಸೂರ್ಯಾಸ್ತದ ಸ್ಥಳವಾಗಿರಬಹುದು, ಸರೋವರಗಳು ಅಥವಾ ಉದ್ಯಾನವನಗಳು...ಹೀಗೆ ಗಿರಿಧಾಮವು ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸ ಪ್ರಿಯರಿಗೆ ಬಹಳ ಫೇವರಿಟ್‌ ಆಗಿದೆ. ರಾಕ್ ಕ್ಲೈಂಬಿಂಗ್, ಪ್ಯಾರಾಗ್ಲೈಡಿಂಗ್, ಟ್ರೆಕ್ಕಿಂಗ್ ಮುಂತಾದ ಅನೇಕ ಸಾಹಸ ಚಟುವಟಿಕೆಗಳಿಗೂ ಇಲ್ಲಿ ಅವಕಾಶವಿದೆ. ಈ ಗಿರಿಧಾಮದ ಸೌಂದರ್ಯದ ಬಗ್ಗೆ ಕೇಳಿದ ಮೇಲೆ ಇಲ್ಲಿಗೆ ಭೇಟಿ ನೀಡಲು ನೀವು ಉತ್ಸುಕರಾಗಿದ್ದಲ್ಲಿ ಈ ಸಂಪೂರ್ಣ ಲೇಖನವನ್ನು ಓದಲೇಬೇಕು.

yelagiri festival
hill

ಯಳಗಿರಿ ಬೇಸಿಗೆ ಉತ್ಸವ

"ಯಳಗಿರಿ ಬೇಸಿಗೆ ಉತ್ಸವ" ಯಳಗಿರಿ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿದೆ. ಎರಡು ದಿನಗಳ ಕಾಲ ಯಳಗಿರಿ ಬೇಸಿಗೆ ಉತ್ಸವವನ್ನು ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಆಯೋಜಿಸುತ್ತದೆ. ತಮಿಳುನಾಡಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ಈ ಉತ್ಸವದ ಮುಖ್ಯ ಉದ್ದೇಶವಾಗಿದೆ. ಈ ಉತ್ಸವದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಕಾರ್ಯಕ್ರಮಕ್ಕೆ ವಿವಿಧ ಕಲಾವಿದರು ಬಂದು ಪ್ರದರ್ಶನ ನೀಡುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಈ ಉತ್ಸವವು ಹೂವುಗಳು, ಸ್ಥಳೀಯ ವಸ್ತುಗಳು ಮತ್ತು ಇತರ ಉತ್ಪನ್ನಗಳನ್ನು ಪ್ರದರ್ಶಿಸುವ ಅನೇಕ ಮಳಿಗೆಗಳನ್ನು ಸಹ ಒಳಗೊಂಡಿರುತ್ತದೆ. ಉತ್ಸವದಲ್ಲಿ ಪಾಲ್ಗೊಳ್ಳಲು ಸ್ಥಳೀಯ ಜನರು ಹಾಗೂ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಯಳಗಿರಿಗೆ ಆಗಮಿಸುತ್ತಾರೆ.

ಯಳಗಿರಿ ಸಮೀಪದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು

ಉದ್ಯಾನಗಳು, ಗುಲಾಬಿ ತೋಟಗಳು, ಸುತ್ತಲಿನ ಬೆಟ್ಟಗಳು, ಸರೋವರಗಳು ಯಳಗಿರಿಯಲ್ಲಿ ನೋಡಲು ಏನುಂಟು ಏನಿಲ್ಲ. ಯಳಗಿರಿ ಪ್ರಕೃತಿ ಪ್ರಿಯರಿಗೆ ಸ್ವರ್ಗ. ಯಳಗಿರಿಯ ನೈಸರ್ಗಿಕ ಸೌಂದರ್ಯವನ್ನು ನೋಡಿಯೇ ಅನುಭವಿಸಬೇಕು. ಪುಂಗನೂರು ಲೇಕ್‌, ನೇಚರ್‌ ಪಾರ್ಕ್‌, ಜಲಗಂಪರೈ ಜಲಪಾತ, ದೂರದರ್ಶಕ ವೀಕ್ಷಣಾಲಯ, ಸ್ವಾಮಿ ಮಲೈ ಬೆಟ್ಟಗಳು, ವೆಲವನ್ ದೇವಾಲಯ ಯಳಗಿರಿಗೆ ಸಮೀಪದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಾಗಿವೆ.

paraglider

ಭೇಟಿ ನೀಡಲು ಉತ್ತಮ ಸಮಯ

ಯಳಗಿರಿ ಹಿಲ್ಸ್ ಸ್ಟೇಷನ್ ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿದೆ. ಈ ಕಾರಣದಿಂದಾಗಿ ಈ ಗಿರಿಧಾಮದ ಹವಾಮಾನವು ವರ್ಷವಿಡೀ ಆಹ್ಲಾದಕರ ಮತ್ತು ಪ್ರಶಾಂತವಾಗಿರುತ್ತದೆ. ಯಳಗಿರಿಯ ಸರಾಸರಿ ತಾಪಮಾನವು 18 ° C - 30 ° C ವರೆಗೆ ಇರುತ್ತದೆ, ಆದ್ದರಿಂದ ಪ್ರವಾಸಿಗರು ವರ್ಷದ ಯಾವುದೇ ಸಮಯದಲ್ಲಿ ಯಳಗಿರಿಯ ಅತ್ಯುತ್ತಮ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು. ಆದರೆ ಗಿರಿಧಾಮದ ಸೌಂದರ್ಯವನ್ನು ಆನಂದಿಸಲು, ಚಳಿಗಾಲದ ತಿಂಗಳುಗಳಿಗೆ ಆದ್ಯತೆ ನೀಡಲಾಗುತ್ತದೆ.

ಇಲ್ಲಿಗೆ ತಲುಪುವುದು ಹೇಗೆ?

ನೀವು ಯಳಗಿರಿಗೆ ಪ್ರವಾಸ ಆಯೋಜಿಸಿದರೆ ವಿಮಾನ, ರೈಲು ಅಥವಾ ರಸ್ತೆಯ ಮೂಲಕ ಪ್ರಯಾಣಿಸಬಹುದು.

ವಿಮಾನ: ಯಳಗಿರಿಗೆ ನೇರ ವಿಮಾನ ಸಂಪರ್ಕವಿಲ್ಲ. ಆದರೆ ಹತ್ತಿರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಯಳಗಿರಿಯಿಂದ 123 ಕಿಮೀ ದೂರದಲ್ಲಿರುವ ಬೆಂಗಳೂರಿನಲ್ಲಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ನೀವು ಯಳಗಿರಿ ತಲುಪಲು ಬಸ್ ಅಥವಾ ಟ್ಯಾಕ್ಸಿ ಬುಕ್ ಮಾಡಬಹುದು.

ರೈಲು: ಯಳಗಿರಿಗೆ ನೇರ ರೈಲು ಮಾರ್ಗವಿಲ್ಲ. ಹತ್ತಿರದ ರೈಲು ನಿಲ್ದಾಣವೆಂದರೆ ಜೋಲಾರ್‌ಪೆಟ್ಟೈ ರೈಲು ನಿಲ್ದಾಣ. ಇದು ಯಳಗಿರಿ ಹಿಲ್ಸ್ ನಿಲ್ದಾಣದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಈ ರೈಲು ನಿಲ್ದಾಣವು ತಮಿಳುನಾಡಿನ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿದೆ. ಜೋಲಾರ್ಪೆಟ್ಟೈ ರೈಲು ನಿಲ್ದಾಣದಲ್ಲಿ ಇಳಿದ ನಂತರ ನೀವು ಟ್ಯಾಕ್ಸಿ ಬುಕ್ ಮಾಡಿ ಆರಾಮಾಗಿ ಯಳಗಿರಿಗೆ ಹೋಗಬಹುದು.

ರಸ್ತೆ: ಯಳಗಿರಿಯು ರಾಜ್ಯದ ವಿವಿಧ ನಗರಗಳಿಗೆ ರಸ್ತೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಆದ್ದರಿಂದ ದೇಶದ ಯಾವುದೇ ಭಾಗದಿಂದ ಯಳಗಿರಿಗೆ ಪ್ರಯಾಣಿಸಲು ಸುಲಭವಾಗಿದೆ. ಹತ್ತಿರದ ಎಲ್ಲಾ ಪ್ರಮುಖ ನಗರಗಳಿಂದ ಯಳಗಿರಿಗೆ ಬಸ್‌ಗಳು ಸಹ ಕಾರ್ಯನಿರ್ವಹಿಸುತ್ತವೆ. ವೆಲ್ಲೂರು ಬಸ್ ನಿಲ್ದಾಣವು ಗಿರಿಧಾಮದೊಂದಿಗೆ ನಿಯಮಿತವಾಗಿ ಸಂಪರ್ಕ ಹೊಂದಿದೆ. ಬಸ್‌ನ ಹೊರತಾಗಿ, ನೀವು ಹತ್ತಿರದ ನಗರಗಳಿಂದ ಯಳಗಿರಿಗೆ ನಿಮ್ಮ ಕಾರನ್ನು ತೆಗೆದುಕೊಂಡು ಹೋಗಬಹುದು.

More News

Read more about: yelagiri tamil nadu karnataka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+