Search
  • Follow NativePlanet
Share
» »ಕಾಸರಗೋಡಿನ ಪ್ರಸಿದ್ಧ ದೇವಾಲಯಗಳು

ಕಾಸರಗೋಡಿನ ಪ್ರಸಿದ್ಧ ದೇವಾಲಯಗಳು

ಕಾಸರಗೋಡು ಕೇರಳದ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ತನ್ನಲ್ಲಿರುವ ಕೆಲವು ವಿಶಿಷ್ಟ ದೇವಾಲಯಗಳಿಂದಾಗಿ ಸಾಕಷ್ಟು ಹೆಸರುವಾಸಿಯಾಗಿದೆ

By Mahesh Pallaki

ಕಾಸರಗೋಡು ಕೇರಳದ ಒಂದು ಪ್ರಸಿದ್ಧ ಪ್ರವಾಸೀ ತಾಣ. ಅದು ತನ್ನ ಸಾಂಸ್ಕೃತಿಕ ವೈವಿಧ್ಯತೆ ಹಾಗೂ ಐತಿಹಾಸಿಕ ಪ್ರಸ್ತುತತೆಗೆ ಹೆಸರುವಾಸಿಯಾದ ಜಾಗ. ಇಲ್ಲಿನ ಪ್ರಾಚೀನ ಸ್ಮಾರಕಗಳು ಹಾಗೂ ದೇವಾಲಯಗಳಿಂದಾಗಿಯೇ ಕಾಸರಗೋಡು ಕೇರಳದಲ್ಲಿಯೇ ಅತ್ಯಂತ ಬೇಡಿಕೆಯಲ್ಲಿರುವ ಪ್ರವಾಸಿ ತಾಣಗಳಲ್ಲೊಂದಾಗಿದೆ.

ತನ್ನ ಸಾಂಸ್ಕೃತಿಕ ಆಚರಣೆಗಳಿಂದಾಗಿಯೇ ಕಾಸರಗೋಡು ವಿಶಿಷ್ಟ ಸ್ಥಾನವನ್ನು ಗಳಿಸಿಕೊಂಡಿದೆ, ಅದರಲ್ಲೂ ಮುಖ್ಯವಾಗಿ ಅಲ್ಲಿನ ದೇವಾಲಯಗಳು ಹಾಗೂ ದೇವಾಲಯದ ಆಚರಣೆಗಳು. ಹಾಗದಾರೆ ಬನ್ನಿ ಕಾಸರಗೋಡಿನಲ್ಲಿ ನೀವು ನೋಡಲೇಬೇಕಾದ ಕೆಲವು ಪ್ರಮುಖ ದೇವಾಲಯಗಳ ಬಗ್ಗೆ ತಿಳಿದುಕೊಂಡು ಬರೋಣ.

ಕಾಸರಗೋಡಿನ ಪ್ರಸಿದ್ಧ ದೇವಾಲಯಗಳು

ಅನಂತಪುರ ಕೆರೆ ದೇವಾಲಯ, ಚಿತ್ರಕೃಪೆ: RohithKumarPatali

ಅನಂತಪುರ ದೇವಸ್ಥಾನ

ಅನಂತಪುರ ದೇವಾಲಯವು ಕೆರೆಯಿಂದ ಆವೃತ್ತವಾದ ಕೇರಳದ ಏಕೈಕ ದೇವಸ್ಥಾನ. ಈ ದೇವಾಲಯವನ್ನು ಅನಂತಪದ್ಮನಾಭ ಸ್ವಾಮಿಯ ಮೂಲಸ್ಥಾನವೆಂದು ನಂಬಲಾಗುತ್ತದೆ. ಇಲ್ಲಿನ ಒಂದು ಕುತೂಹಲಕಾರಿ ವಿಷಯವೆಂದರೆ, ಈ ದೇವಾಲಯದ ಆವರಣದಲ್ಲಿನ ಕೊಳದಲ್ಲಿರುವ ಮೊಸಳೆ. ಅಷ್ಟೇ ಅಲ್ಲ, ಆ ಮೊಸಳೆಯು ಶುದ್ಧ ಸಸ್ಯಾಹಾರಿಯೆಂದರೆ ನೀವು ನಂಬಲೇ ಬೇಕು. ಇಲ್ಲಿನ ಮತ್ತೊಂದು ಪವಾಡವೆಂದರೆ ಇಲ್ಲಿರುವ ಮೊಸಳೆಯು ಸತ್ತ ನಂತರ, ಮತ್ತೊಂದು ಮೊಸಳೆಯು ಇಲ್ಲಿ ಜನ್ಮತಾಳಿರುತ್ತದೆ ಮತ್ತು ಇದು ಎಲ್ಲಿಂದ ಬರುತ್ತದೆಂಬ ಊಹೆ ಕೂಡ ಯಾರಿಗೂ ಇರುವುದಿಲ್ಲ.

ಮಲ್ಲಿಕಾರ್ಜುನ ದೇವಾಲಯ

ಕಾಸರಗೋಡು ಜಿಲ್ಲೆಯ ಅತ್ಯಂತ ಪುರಾತನ ಹಾಗೂ ಪ್ರಮುಖ ದೇವಾಲಯಗಳಲ್ಲಿ ಮಲ್ಲಿಕಾರ್ಜುನ ದೇವಾಲಯ ಒಂದು. ಶಿವ ದೇವರು ಇಲ್ಲಿಯ ಮಲ್ಲಿಕಾರ್ಜುನನಾಗಿ ಪೂಜಿಸಲ್ಪಡಲಾಗುತ್ತದೆ. ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಇಲ್ಲಿ ನಡೆಯುವ ಸಂಗೀತ ರಂಗಭೂಮಿ ಉತ್ಸವ ಹಾಗೂ ದೇವಾಲಯದ ಉತ್ಸವವು ಅತ್ಯಂತ ಹೆಸರುವಾಸಿಯಾಗಿದೆ. ಇಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನವು ಎಲ್ಲರೂ ಕಾತುರದಿಂದ ನೋಡಬಯಸುವ ಕಾರ್ಯಕ್ರಮವಾಗಿದೆ.

ಕಾಸರಗೋಡಿನ ಪ್ರಸಿದ್ಧ ದೇವಾಲಯಗಳು

ಮಧುರ ದೇವಾಲಯ, ಚಿತ್ರಕೃಪೆ: Sureshan Karichery

ಮಧುರ್ ಶ್ರೀಮದ್ ಅನಂತೇಶ್ವರ ವಿನಾಯಕ ದೇವಾಲಯ

ಈ ದೇವಾಲಯದಲ್ಲಿ ಗಣೇಶ ದೇವರನ್ನು ಆರಾಧಿಸುತ್ತಾರೆ. ಈ ದೇವಾಲಯದ ಗಣೇಶ ವಿಗ್ರಹವು ಮದರು ಎಂಬ ಹೆಸರಿನ ದಲಿತ ಮಹಿಳೆಯಿಂದ ಕಂಡುಹಿಡಿಯಲಾಯಿತೆಂದು ಹೇಳಲಾಗುತ್ತದೆ ಹಾಗಾಗಿ ಈ ದೇವಾಲಯಕ್ಕೆ ಮಧುರ್ ಎಂಬ ಹೆಸರು ಸೇರಿಕೊಂಡಿದೆ. ಕಾಸರಗೋಡು ಪಟ್ಟಣದಿಂದ ಸುಮಾರು 7 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+