Search
  • Follow NativePlanet
Share
» »ಮಧ್ಯ ರಾತ್ರಿಯಲ್ಲಿ ಗೋಚರಿಸುವ ಸೂರ್ಯ, ರೈಲುಗಳ ಓಡಾಟವಿಲ್ಲ ಹಿಮಕರಡಿಗಳಿರುವ ತಾಣ…ಈ ಸ್ಥಳದ ವಿಶೇಷಗಳಿವು

ಮಧ್ಯ ರಾತ್ರಿಯಲ್ಲಿ ಗೋಚರಿಸುವ ಸೂರ್ಯ, ರೈಲುಗಳ ಓಡಾಟವಿಲ್ಲ ಹಿಮಕರಡಿಗಳಿರುವ ತಾಣ…ಈ ಸ್ಥಳದ ವಿಶೇಷಗಳಿವು

ಗ್ರೀನ್‌ಲ್ಯಾಂಡ್ ವಿಶ್ವದ ಅತಿದೊಡ್ಡ ಸ್ಥಳಗಳಲ್ಲಿ ಒಂದಾಗಿದೆ. ಆದರೆ ಹೊರಗಿನ ಪ್ರಪಂಚಕ್ಕೆ ಮಾತ್ರ ಅದರ ಬಗ್ಗೆ ಏನೇನು ತಿಳಿದಿಲ್ಲ. ನಿಜ ಹೇಳಬೇಕೆಂದರೆ ಈ ಸುಂದರವಾದ ಆರ್ಕ್ಟಿಕ್ ರಾಷ್ಟ್ರದ ಬಗ್ಗೆ ಅನೇಕ ಜನರು ಇನ್ನೂ ತಪ್ಪು ಕಲ್ಪನೆಗಳನ್ನು ಹೊಂದಿದ್ದಾರೆ. ಗ್ರೀನ್‌ಲ್ಯಾಂಡ್‌ ನಲ್ಲಿ ಕೇವಲ ಹಿಮನದಿಗಳು ಮತ್ತು ಮಂಜುಗಡ್ಡೆ ಮಾತ್ರ ನೋಡಬಹುದು ಅಂದುಕೊಂಡಿದ್ದೀರಿ.

ಆದರೆ ದೇಶದಲ್ಲಿರುವ ಕೆಲವು ಸಂಸ್ಕೃತಿ ಮತ್ತು ಇತಿಹಾಸದ ಪದರಗಳು ನೀವಲ್ಲಿಗೆ ಭೇಟಿ ನೀಡಿದಾಗಲೇ ಬಹಿರಂಗವಾಗುವುದು. ಹೌದು, ಈ ಲೇಖನ ಗ್ರೀನ್‌ಲ್ಯಾಂಡ್‌ನ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ, ಗ್ರೀನ್‌ಲ್ಯಾಂಡ್‌ ಮತ್ತು ಅಲ್ಲಿನ ಜನರು ಏನೆಂದು ಅರ್ಥಮಾಡಿಕೊಳ್ಳಲು ನಿಮಗೆ ಖಂಡಿತ ಸಹಾಯ ಮಾಡಬಲ್ಲದು.

greenland iceberg

ಈ ದೇಶ ಎಷ್ಟು ದೊಡ್ಡದು?

ವಿಸ್ತೀರ್ಣದಲ್ಲಿ ಗ್ರೀನ್‌ಲ್ಯಾಂಡ್‌ ವಿಶ್ವದ 12 ನೇ ಅತಿದೊಡ್ಡ ದೇಶವಾಗಿದೆ. ಆದರೆ ಅದರ ಜನಸಂಖ್ಯೆ ಮಾತ್ರ ಸಣ್ಣ ನಗರಕ್ಕಿಂತಲೂ ಕಡಿಮೆಯಿದೆ. ಇಲ್ಲಿ ಕೇವಲ 58 ಸಾವಿರ ಜನರು ವಾಸಿಸುತ್ತಿದ್ದಾರೆ. ಅದರ 20 ಲಕ್ಷ ಚದರ ಕಿಲೋಮೀಟರ್ ಪ್ರದೇಶದಲ್ಲಿ ಹಿಮ ಮಾತ್ರ ಗೋಚರಿಸುತ್ತದೆ. ಇಲ್ಲಿ ಜನರು ಹಿಮದ ಮೇಲೆ ಮಾತ್ರ ನಡೆಯುತ್ತಾರೆ. ರಸ್ತೆಗಳು ಬಹುತೇಕ ಅಸ್ತಿತ್ವದಲ್ಲಿಲ್ಲ. ಬನ್ನಿ ಹಾಗಾದರೆ ಈಗ ಈ ದೇಶದ ಬಗ್ಗೆ ಹೆಚ್ಚು ವಿವರವಾಗಿ ತಿಳಿಯೋಣ.

greenland

ವಿಮಾನದಲ್ಲಿ ಪ್ರಯಾಣ

ಗ್ರೀನ್‌ಲ್ಯಾಂಡ್ ಎಂಬ ಹೆಸರನ್ನು ಕೇಳಿದರೆ ಬಹುತೇಕರು ಸುತ್ತಲೂ ಹಸಿರಿನಿಂದ ತುಂಬಿರುವ ದೇಶವಿರಬಹುದು ಅಂದುಕೊಳ್ಳುತ್ತಾರೆ. ಆದರೆ ಅದು ಹಾಗಲ್ಲ. ಈ ದೇಶದ ಸುಮಾರು 85 ಪ್ರತಿಶತದಷ್ಟು ಪ್ರದೇಶವು ಹಿಮದಿಂದ ಆವೃತವಾಗಿದೆ. ಈ ದೇಶದಲ್ಲಿ ರೈಲು ಜಾಲವಿಲ್ಲ. ಇಲ್ಲಿ ಹೆಚ್ಚಿನ ಜನರು ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಜನರ ಬಳಿ ಕಾರುಗಳಿಲ್ಲ. ಆದರೆ ದೋಣಿಗಳು ಅಥವಾ ಹೆಲಿಕಾಪ್ಟರ್‌ಗಳಿವೆ. ಈ ದೇಶದಲ್ಲಿ ನೀವು ಬೇಸಿಗೆಯಲ್ಲಿ ಸೂರ್ಯಾಸ್ತವನ್ನು ನೋಡುವುದಿಲ್ಲ. ಮಧ್ಯರಾತ್ರಿಯಲ್ಲೂ ಸೂರ್ಯನು ಆಕಾಶದಲ್ಲಿ ಗೋಚರಿಸುತ್ತಾನೆ. ಆ ಸಮಯದಲ್ಲಿ ಸಹ ತಾಪಮಾನವು 0 ರಿಂದ 4 ಡಿಗ್ರಿಗಳ ನಡುವೆ ಇರುತ್ತದೆ.

ಹಿಮಕರಡಿಗಳಿರುವ ಏಕೈಕ ದೇಶ

ಇಲ್ಲಿ ಶೀತದ ತಿಂಗಳುಗಳಲ್ಲಿ ವಿವಿಧ ರೀತಿಯ ದೀಪಗಳು ಆಕಾಶದಲ್ಲಿ ಗೋಚರಿಸುತ್ತವೆ. ಈ ದೇಶಕ್ಕೆ ತನ್ನದೇ ಆದ ಕರೆನ್ಸಿ ಇಲ್ಲ. ಇಲ್ಲಿ ಡೆನ್ಮಾರ್ಕ್‌ನ ಕರೆನ್ಸಿ ಡೆನಿಸ್ಕ್ರೋನಾದೊಂದಿಗೆ ಕೆಲಸ ಮಾಡಲಾಗುತ್ತದೆ. ಇಲ್ಲಿ ಒಂದು ಡಾಲರ್ 10 ಭಾರತೀಯ ರೂಪಾಯಿಗೆ ಸಮ. ಇಡೀ ಜಗತ್ತಿನಲ್ಲಿ ನೀವು ಹಿಮಕರಡಿಗಳನ್ನು ನೋಡಬಹುದಾದ ಏಕೈಕ ದೇಶ ಇದು. ಅವು ಹಿಮದಲ್ಲಿ ವಾಸಿಸಲು ಇಷ್ಟಪಡುತ್ತವೆ.

greenland tour

ಮೀನುಗಾರಿಕೆ ಪ್ರಮುಖ ಉದ್ಯಮ

ಗ್ರೀನ್‌ಲ್ಯಾಂಡ್‌ನಲ್ಲಿ ಹೆಚ್ಚಿನ ಜನರಿಗೆ ಮೀನುಗಳನ್ನು ಹಿಡಿದು ಮಾರಾಟ ಮಾಡುವುದೇ ಕೆಲಸ. ಮೀನುಗಾರಿಕೆ ಪ್ರಮುಖ ಉದ್ಯಮವಾಗಿದೆ. ಗ್ರೀನ್‌ಲ್ಯಾಂಡ್‌ನಲ್ಲಿ ಬೇಟೆಯಾಡುವ ತಿಮಿಂಗಿಲಗಳು, ಸೀಲ್‌, ಮೀನು, ಸಮುದ್ರಾಹಾರ ಹೊರತುಪಡಿಸಿ ಬಹುತೇಕ ಎಲ್ಲವನ್ನೂ ಆಮದು ಮಾಡಿಕೊಳ್ಳಲಾಗುತ್ತದೆ. ಪ್ರತಿ ಆಡಳಿತ ಪ್ರದೇಶವು ತಿಮಿಂಗಿಲಗಳು, ಸೀಲುಗಳು ಮತ್ತು ಮೀನುಗಳ ನಿಗದಿತ ಕೋಟಾವನ್ನು ಹೊಂದಿದೆ. ನೀಲಿ ತಿಮಿಂಗಿಲದಂತಹ ಕೆಲವು ಜಾತಿಗಳನ್ನು ರಕ್ಷಿಸಲಾಗಿದೆ.

ಸ್ವಾಯತ್ತ ದೇಶ

ಗ್ರೀನ್‌ಲ್ಯಾಂಡ್‌ ಡೆನ್ಮಾರ್ಕ್ ಸಾಮ್ರಾಜ್ಯದೊಳಗೆ ಸ್ವಾಯತ್ತ ದೇಶವಾಗಿದೆ. ಗ್ರೀನ್‌ಲ್ಯಾಂಡ್‌ ಭೌಗೋಳಿಕವಾಗಿ ಉತ್ತರ ಅಮೆರಿಕಾದ ಖಂಡದ ಭಾಗವಾಗಿದ್ದರೂ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಇದು ಯುರೋಪ್ ನೊಂದಿಗೆ ಸುಮಾರು ಒಂದು ಸಹಸ್ರಮಾನದವರೆಗೆ ಸಂಬಂಧ ಹೊಂದಿದೆ. 1721 ರಿಂದ ಡೆನ್ಮಾರ್ಕ್ ಗ್ರೀನ್‌ಲ್ಯಾಂಡ್‌ನಲ್ಲಿ ವಸಾಹತುಗಳನ್ನು ನಿರ್ವಹಿಸುತ್ತಿದೆ. ಆದರೆ 1953 ರಲ್ಲಿ ದೇಶವು ಡೆನ್ಮಾರ್ಕ್‌ನ ಭಾಗವಾಯಿತು.

greenland nature

1979 ರಲ್ಲಿ ಡೆನ್ಮಾರ್ಕ್ ಗ್ರೀನ್‌ಲ್ಯಾಂಡ್‌ಗೆ ಹೋಮ್ ರೂಲ್ ಅನ್ನು ನೀಡಿತು ಮತ್ತು 2009 ರಲ್ಲಿ ವಿಸ್ತೃತ ಸ್ವ-ಆಡಳಿತವನ್ನು ಉದ್ಘಾಟಿಸಲಾಯಿತು, ಹೆಚ್ಚು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಮತ್ತು ಹೆಚ್ಚಿನ ಜವಾಬ್ದಾರಿಗಳನ್ನು ಗ್ರೀನ್‌ಲ್ಯಾಂಡ್ ಸರ್ಕಾರಕ್ಕೆ ವರ್ಗಾಯಿಸಲಾಯಿತು. ಹೊಸ ರಚನೆಯ ಅಡಿಯಲ್ಲಿ, ಗ್ರೀನ್‌ಲ್ಯಾಂಡ್ ಸಿದ್ಧವಾದಾಗ ಡೆನ್ಮಾರ್ಕ್‌ನಿಂದ ಕ್ರಮೇಣ ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ತೆಗೆದುಕೊಳ್ಳಲಾಯಿತು.

ಮಧ್ಯ ರಾತ್ರಿಯಲ್ಲಿ ಗೋಚರಿಸುವ ಸೂರ್ಯ

ಪ್ರತಿ ವರ್ಷ ಮೇ 25 ರಿಂದ ಜುಲೈ 25 ರವರೆಗೆ, ಸೂರ್ಯನು ಅಸ್ತಮಿಸುವುದಿಲ್ಲ. ಹಗಲು ರಾತ್ರಿಯ ಉದ್ದಕ್ಕೂ ಗೋಚರಿಸುತ್ತಾನೆ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಅನುಭವಿಸಬೇಕಾದ ಅದ್ಭುತ ನೈಸರ್ಗಿಕ ವಿದ್ಯಮಾನವಿದು. ಜೂನ್ 21, ವರ್ಷದ ಸುದೀರ್ಘ ದಿನ ಮತ್ತು ಗ್ರೀನ್‌ಲ್ಯಾಂಡ್‌ನಲ್ಲಿ ರಾಷ್ಟ್ರೀಯ ರಜಾದಿನವಾಗಿದೆ. ಸ್ಥಳೀಯರು ಸೂರ್ಯನ ಸ್ನಾನ ಮಾಡುವುದನ್ನು ಅಥವಾ ಪ್ರಕೃತಿಯಲ್ಲಿ ಬಾರ್ಬೆಕ್ಯೂಗಳನ್ನು ಆನಂದಿಸುವುದನ್ನು ನೀವಿಲ್ಲಿ ಕಾಣುತ್ತೀರಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+