Search
  • Follow NativePlanet
Share
» »ಈ ಊರಲ್ಲಿ ಮದುವೆಯಾಗದೇನೇ ಮಕ್ಳು ಪಡೆಯಬಹುದು..ಹೀಗೂ ಒಂದು ಆಫರ್

ಈ ಊರಲ್ಲಿ ಮದುವೆಯಾಗದೇನೇ ಮಕ್ಳು ಪಡೆಯಬಹುದು..ಹೀಗೂ ಒಂದು ಆಫರ್

ರಾಜಸ್ತಾನದಲ್ಲಿ ಗೆರಾಸಿಯಾ ಎನ್ನುವ ಜನಾಂಗವಿದೆ. ಈ ಜನಾಂಗದ ವಿಶೇಷತೆಯೆಂದರೆ ಪುರುಷರು ತಮಗಿಷ್ಟಬಂದ ಹುಡುಗಿಯ ಜೊತೆ ಲೀವಿಂಗ್ ರಿಲೇಶನ್‌ಶಿಪ್‌ನಲ್ಲಿರಬಹುದು. ಇದಕ್ಕೆ ಯಾರದ್ದೇ ಅಭ್ಯಂತರವಿಲ್ಲ. ಮಕ್ಕಳನ್ನೂ ಹಡೆಯಬಹುದು.

ವಿವಾಹವಾಗದೇ ಜೊತೆಯಾಗಿರಬಹುದು

ವಿವಾಹವಾಗದೇ ಜೊತೆಯಾಗಿರಬಹುದು

PC:McKay Savage
ಇಲ್ಲಿ ಹುಡುಗ ಹುಡುಗಿ ವಿವಾಹವಾಗದಿದ್ದರೂ ಸಂಸಾರ ಮಾಡಬಹುದು. ಮದುವೆಯೊಂದು ಆಗಿಲ್ಲ ಎನ್ನುವುದು ಬಿಟ್ಟರೆ ಉಳಿದಂತೆಲ್ಲಾ ಗಂಡ ಹೆಂಡತಿಯಂತೆ ಇರುತ್ಥಾರೆ. ಇದಕ್ಕೆ ಹಿರಿಯರ ಸಮ್ಮತಿಯೂ ಇದೆ. ಈ ಸಂದರ್ಭದಲ್ಲಿ ಮಕ್ಕಳನ್ನೂ ಪಡೆಯುವ ಸ್ವಾತಂತ್ರ್ಯ ಅವರಿಗೆ ಇದೆ. ಮದುವೆ ಬೇಕಾದರೆ ಆ ಮೇಲೆ ಮಾಡಿಕೊಳ್ಳಬಹುದು.

ವೇಷ ಭೂಷಣ

ವೇಷ ಭೂಷಣ

PC: Lepetitlord
ಗಾರಾಸಿಯಾ ಜನಾಂಗದ ಜನರ ಆಚಾರ, ವಿಚಾರದ ಜೊತೆಗೆ ವೇಷ ಭೂಷಣ ಕೂಡಾ ಇತರರಿಗಿಂತ ವಿಭಿನ್ನವಾಗಿದೆ. ಇಲ್ಲಿನ ಪುರುಷರು ಧೋತಿ ಧರಿಸ್ತಾರೆ, ತಲೆಗೆ ಟವಲ್ ಕಟ್ಟುತ್ತಾರೆ. ಇನ್ನು ಇಲ್ಲಿನ ಮಹಿಳೆಯರು ಗಾಢ ಬಣ್ಣದ ಬಟ್ಟೆ, ಲೆಹಂಗಾ ಧರಿಸುತ್ತಾರೆ.

ವಿವಾಹ ಪ್ರಕಾರಗಳು

ವಿವಾಹ ಪ್ರಕಾರಗಳು

PC:Koshy Koshy
ಗಾರಾಸಿಯಾ ಜನಾಂಗದಲ್ಲಿ ಮೂರು ಪ್ರಕಾರದ ವಿವಾಹ ಜಾಲ್ತಿಯಲ್ಲಿದೆ. ಮೌರ್ ಬಾಂದಿಯಾ, ಈ ಪ್ರಕಾರದ ವಿವಾಹದಲ್ಲಿ ಸಪ್ತಪದಿ ಎಲ್ಲಾ ಇರುತ್ತದೆ. ಪಹರಾವನ ವಿವಾಹ , ಇದರಲ್ಲಿ ನಾಮಮಾತ್ರಕ್ಕಷ್ಟೇ ವಿಧಿವಿಧಾನಗಳು ನಡೆಯುತ್ತದೆ. ತಾಣನಾ ವಿವಾಹ , ಇದರಲ್ಲಿ ವರನ ಕಡೆಯವರು ವಧುವಿನ ಕಡೆಯವರಿಗೆ ಕೇವಲ ಕನ್ಯೆಯ ಮೂಲ್ಯದ ರೂಪದಲ್ಲಿ ಉಡುಗೊರೆಯನ್ನು ನೀಡುತ್ತಾರೆ. ಇಲ್ಲಿ ವಿಧವಾ ವಿವಾಹ ಕೂಡಾ ಚಾಲ್ತಿಯಲ್ಲಿದೆ.

ಗುಜರಾತಿ ಮಾರ್ವಾಡಿ ಭಾಷಾ ಮಿಶ್ರಣ

ಗುಜರಾತಿ ಮಾರ್ವಾಡಿ ಭಾಷಾ ಮಿಶ್ರಣ

ತಮ್ಮ ವಿಶಿಷ್ಟ ಸಂಪ್ರದಾಯದಿಂದಲೇ ಭಾರತದ ಸಂಸ್ಕೃತಿಯ ವೈವಿಧ್ಯದಲ್ಲಿ ಸ್ಥಾನ ಪಡೆದಿರುವ ಈ ಜನಾಂಗದವು ಎಲ್ಲಾ ಜನಾಂಗಕ್ಕಿಂತ ವಿಭಿನ್ನವಾಗಿಯೇ ಇದೆ. ಇವರು ಮನೆಯನ್ನು ಘೇರ್ ಎನ್ನಲಾಗುತ್ತದೆ, ಇವರ ಹಳ್ಳಿಯಲ್ಲಿ ಸಾಮಾನ್ಯವಾಗಿ ಒಂದೇ ಗೋತ್ರದ ಜನರು ವಾಸಿಸುತ್ತಾರೆ, ಗುಜರಾತಿ, ಬೀಲಿ, ಮಾರ್ವಾಡಿ ಭಾಷೆಯ ಮಿಶ್ರಣವನ್ನು ಇವರ ಭಾಷೆಯಲ್ಲಿ ಕಾಣಬಹುದು.

ಮದುವೆ ಖರ್ಚು ಜಮಾ ಆದ ಮೇಲೇನೇ ಮದುವೆ

ಮದುವೆ ಖರ್ಚು ಜಮಾ ಆದ ಮೇಲೇನೇ ಮದುವೆ

ಗಾರಾಸಿಯಾ ಜನಾಂಗದಲ್ಲಿ ಮಹಿಳೆಯರಿಗೆ ಹೆಚ್ಚು ಗೌರವ ನೀಡಲಾಗುತ್ತದೆ. ಇಲ್ಲಿ ಅತ್ಯಾಚಾರ , ವರದಕ್ಷಿಣೆಯಂತಹ ಪ್ರಕರಣಗಳು ಕಾಣಲು ಸಿಗುವುದಿಲ್ಲ. ಇಲ್ಲಿ ಯಾವುದೇ ವ್ಯಕ್ತಿ ವಿವಾಹವಾಗಬೇಕಾದರೆ ಆತನ ಕುಟುಂಬ ನಿರ್ವಹಣೆಗೆ ಸಾಕಷ್ಟು ಆದಾಯ ಜಮೆ ಮಾಡಬೇಕು. ಆ ನಂತರವೇ ಮದುವೆಯಾಗಬಹುದು

ಇಷ್ಟ ಬಂದವರನ್ನು ಆಯ್ಕೆ ಮಾಡಬಹುದು

ಇಷ್ಟ ಬಂದವರನ್ನು ಆಯ್ಕೆ ಮಾಡಬಹುದು

ಇಲ್ಲಿ ತಮಗಿಷ್ಟಬಂದ ವರ, ವಧುವನ್ನು ಆಯ್ಕೆ ಮಾಡಲು ಮೇಳವನ್ನೂ ನಡೆಸುತ್ತಾರೆ. ಆ ಮೇಳದಲ್ಲಿ ಕುಟುಂಬಸ್ಥರು ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಮೇಳದಲ್ಲಿ ಬಿಟ್ಟು ಹೋಗುತ್ತಾರೆ. ಪುರುಷರು ತಮಗಿಷ್ಟವಾದ ಹೆಣ್ಮಗಳನ್ನು ಆಯ್ಕೆ ಮಾಡಿ ಅವರೊಂದಿಗೆ ಮನೆಗೆ ತೆರಳುತ್ತಾರೆ. ಎರಡು ದಿನಗಳ ಕಾಲ ಈ ಮೇಳ ನಡೆಯುತ್ತದೆ. ರಾಜಸ್ಥಾನ ಮತ್ತು ಗುಜರಾತ್ ರಾಜ್ಯದ ಕೆಲವು ಆಯ್ದ ಸ್ಥಳಗಳಲ್ಲಿ ಈ ಮೇಳ ನಡೆಯುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+