Search
  • Follow NativePlanet
Share
» » ಬೆಂಗಳೂರಿಗೆ ಸಮೀಪದ ದಂಡಿಗನ ಹಳ್ಳಿ ಡ್ಯಾಮ್ ನೋಡಿದ್ದೀರಾ?

ಬೆಂಗಳೂರಿಗೆ ಸಮೀಪದ ದಂಡಿಗನ ಹಳ್ಳಿ ಡ್ಯಾಮ್ ನೋಡಿದ್ದೀರಾ?

ಬೆಂಗಳೂರಿನಲ್ಲಿರುವವ ಹೆಚ್ಚಿನವರ ಸಮಸ್ಯೆ ಎಂದರೆ ಬೆಂಗಳೂರಿನಲ್ಲಿ ಸುತ್ತಾಡಲು ಹೆಚ್ಚಿನ ತಾಣಗಳೇಇಲ್ಲ. ಇರುವ ತಾಣಗಳನ್ನೆಲ್ಲಾ ಸುತ್ತಾಡಿಯಾಗಿದೆ. ವಾರಾಂತ್ಯವನ್ನು ಕಳೆಯಲು ಒಂದು ಸ್ಥಳಗಳಿಲ್ಲ. ನೀವು ಕೂಡಾ ವಾರಂತ್ಯದಲ್ಲಿ ಎಲ್ಲಿಗೆ ಹೋಗುವುದು ಎಂದು ಯೋಚಿಸುತ್ತಿದ್ದೀರೆಂದಾದರೆ ಬೆಂಗಳೂರಿನಲ್ಲಿರುವ ದಂಡಿಗನ ಹಳ್ಳಿ ಡ್ಯಾಮ್‌ಗೆ ಭೇಟಿ ನೀಡಿ.

ಎಲ್ಲಿದೆ ಈ ಡ್ಯಾಮ್ ?

ಎಲ್ಲಿದೆ ಈ ಡ್ಯಾಮ್ ?

PC: Maurya Rohit

ಹೆಚ್ಚಿನ ಜನರಿಗೆ ಈ ಡ್ಯಾಮ್ ಬಗ್ಗೆ ಗೊತ್ತಿಲ್ಲ. ಬೆಂಗಳೂರಿನಲ್ಲಿ ಇದು ಎಲ್ಲಿದೆ ಎನ್ನುವುದೂ ಗೊತ್ತಿಲ್ಲ. ದಂಡಿಗನ ಹಳ್ಳಿ ಡ್ಯಾಮ್ ಬೆಂಗಳೂರಿನಿಂದ ೯೦ ನಿಮಿಷ ದೂರದಲ್ಲಿದೆ. ಬೆಂಗಳೂರು ಏರ್‌ಪೋರ್ಟ್‌ ರಸ್ತೆಯಲ್ಲಿ ಚಿಕ್ಕಬಳ್ಳಾಪುರಕ್ಕೆ ಸಮೀಪದಲ್ಲಿದೆ. 65 ಕಿ.ಮಿ ಹೈವೆಯಲ್ಲಿ ಪ್ರಯಾಣಿಸಿದರೆ ಉಳಿದವುಗಳು ಹಳ್ಳಿಯ ರಸ್ತೆಗಳಾಗಿವೆ.

ಗೂಗಲ್ ಮ್ಯಾಪ್ ಹಾಕಿ

ಗೂಗಲ್ ಮ್ಯಾಪ್ ಹಾಕಿ

PC: Maurya Rohit

ನೀವು ಹೈವೆಯಲ್ಲಿ ಪ್ರಯಾಣಿಸಿ ಅಲ್ಲಿನ ಹಳ್ಳಿಯ ಜನರಲ್ಲಿ ಡ್ಯಾಮ್‌ಗೆ ಹೋಗುವ ದಾರಿಯ ಬಗ್ಗೆ ಕೇಳಿರಿ. ಮಣ್ಣಿನ ರಸ್ತೆ, ಬೆಟ್ಟಗಳು ರಸ್ತೆಯಲ್ಲಿ ಸಂಚರಿಸಿ ಈ ಡ್ಯಾಮ್‌ನ್ನು ತಲುಪಬಹುದು. ಇಲ್ಲವಾದಲ್ಲಿ ಗೂಗಲ್ ಮ್ಯಾಪ್ ಹಾಕಿದ್ರೆ ನೀವು ಆ ಡ್ಯಾಮ್‌ನ್ನು ಸುಲಭವಾಗಿ ತಲುಪಬಹುದು.

ನೀರಿಗಿಳಿಯುವುದು ಅಪಾಯಕಾರಿ

ನೀರಿಗಿಳಿಯುವುದು ಅಪಾಯಕಾರಿ

ಈ ನೀರಿನ ಮಧ್ಯೆ ಒಂದು ಉದ್ದನೆಯ ಬ್ರಿಡ್ಜ್‌ ಇದೆ. ಈ ಸೇತುವೆ ಮೂಲಕ ನೀವು ಅದರ ತುದಿಯವರೆಗೆ ಹೋಗಬಹುದು. ಅಲ್ಲಿ ನೀವು ಫೋಟೋಗಳನ್ನು ಕ್ಲಿಕ್ಕಿಸಬಹುದು. ಇಲ್ಲಿ ನೀರಿಗಿಳಿಯುವುದು ಬಹಳ ಅಪಾಯಕಾರಿಯಾಗಿದೆ. ಬೋಟಿಂಗ್‌ಗೆ ಅವಕಾಶವಿಲ್ಲ. ಈಜುವುದನ್ನು ನಿಷೇಧಿಸಲಾಗಿದೆ.

ದಂಡಿಗನ ಹಳ್ಳಿ

ದಂಡಿಗನ ಹಳ್ಳಿ

ಔಟಿಂಗ್ ಹೋಗಲು ದಾಂಡೀಗನ ಹಳ್ಳಿ ಸೂಕ್ತ ತಾಣವಾಗಿದೆ. ಇಲ್ಲಿ ಅನೇಕ ಬಣ್ಣ ಬಣ್ಣದ ಪಕ್ಷಿಗಳನ್ನೂ ಕಾಣಬಹುದು. ಸುತ್ತಮುತ್ತಲಿನ ಬೆಟ್ಟಗಳಿಗೆ ಚಾರಣವನ್ನೂ ಕೈಗೊಳ್ಳಬಹುದು. ಇಲ್ಲಿ ಸುತ್ತಮುತ್ತಲು ಯಾವುದೇ ಅಂಗಡಿಗಳು ಇಲ್ಲದಿರುವುದರಿಂದ ಕುಡಿಯುವ ನೀರು ಹಾಗೂ ಆಹಾರವನ್ನು ನೀವೇ ತೆಗೆದುಕೊಂಡು ಬರಬೇಕು.

ಮಳೆಗಾಲದಲ್ಲಿ ಭೇಟಿಗೆ ಸೂಕ್ತ

ಮಳೆಗಾಲದಲ್ಲಿ ಭೇಟಿಗೆ ಸೂಕ್ತ

ಸೇತುವೆ ಮೇಲೆ ನಿಂತು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ನೋಡಲು ಸುಂದರವಾಗಿ ಕಾಣುತ್ತದೆ. ಈ ಬ್ರಿಡ್ಜ್‌ ಮೇಲೆ ಒಮ್ಮೆಗೆ 10 ರಿಂದ 12 ಜನರು ನಿಲ್ಲಬಹುದಾಗಿದೆ. ಏಕಾಂತವಾಗಿ ಕಾಲ ಕಳೆಯಬೇಕೆನ್ನುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+